• Home
  • »
  • News
  • »
  • state
  • »
  • Prof KS Bhagawan: ಕೊಲೆ ಮಾಡಿದ ರಾಮ ಹೇಗೆ ದೇವರಾಗುತ್ತಾನೆ? ನಾಲಿಗೆ ಹರಿ ಬಿಟ್ಟ ಪ್ರೊ ಕೆಎಸ್ ಭಗವಾನ್

Prof KS Bhagawan: ಕೊಲೆ ಮಾಡಿದ ರಾಮ ಹೇಗೆ ದೇವರಾಗುತ್ತಾನೆ? ನಾಲಿಗೆ ಹರಿ ಬಿಟ್ಟ ಪ್ರೊ ಕೆಎಸ್ ಭಗವಾನ್

ಪ್ರೊ ಕೆಎಸ್ ಭಗವಾನ್

ಪ್ರೊ ಕೆಎಸ್ ಭಗವಾನ್

ತನ್ನ ಸೇವಕ ಶಂಭೂಕನನ್ನು ಘೋರವಾಗಿ ಹತ್ಯೆ ಮಾಡಿಸಿದ್ದು ಕೂಡ ಇದೇ ಶ್ರೀರಾಮ. ಕೊಲೆ ಮಾಡಿದ ರಾಮ ಹೇಗೆ ದೇವರಾಗುತ್ತಾನೆ? ಅಂತ ಪ್ರೊ ಕೆಎಸ್ ಭಗವಾನ್ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ.

  • Share this:

ಮಂಡ್ಯ: ಸದಾ ಒಂದಲ್ಲ ಒಂದು ಹೇಳಿಕೆ ಮೂಲಕ ಸುದ್ದಿಯಾಗುತ್ತಿರುವ ಪ್ರೊ ಕೆ.ಎಸ್ ಭಗವಾನ್ (Prof K. S. Bhagawan) ಅವರು ಆದರ್ಶ ಪುರುಷ ಶ್ರೀರಾಮನ (Shree Ram) ಕುರಿತಂತೆ ಮತ್ತೊಮ್ಮೆ ನಾಲಿಗೆ ಹರಿ ಬಿಟ್ಟಿದ್ದಾರೆ. ಮಂಡ್ಯದ (Mandya) ಖಾಸಗಿ ಕಾರ್ಯಕ್ರಮದಲ್ಲಿ ಮಾತನಾಡಿರುವ ಭಗವಾನ್​ ಅವರು, ಶ್ರೀರಾಮ ದೇವರಂತು ಅಲ್ವೇ ಅಲ್ಲಾ ಆತನೊಬ್ಬ ನಿರ್ಧಯಿ. ತನ್ನ ತುಂಬು ಗರ್ಭಿಣಿ ಪತ್ನಿಯನ್ನು ಕಾಡಿಗೆ ಕಳುಹಿಸಿದ ನಿರ್ಧಯಿ ರಾಮ. ತನ್ನ ಸೇವಕ ಶಂಭೂಕನನ್ನು ಘೋರವಾಗಿ ಹತ್ಯೆ ಮಾಡಿಸಿದ್ದು ಕೂಡ ಇದೇ ಶ್ರೀರಾಮ. ಕೊಲೆ ಮಾಡಿದ ರಾಮ ಹೇಗೆ ದೇವರಾಗುತ್ತಾನೆ? (God) ನಮಗೆ ರಾಮ ರಾಜ್ಯ (Rama Rajya) ಬೇಕಾಗಿಲ್ಲ, ಎಲ್ಲರೂ ಒಂದೇ ಎಂಬ ಸಂದೇಶ ಬೇಕಿದೆ ಎಂದು ಹೇಳಿದ್ದಾರೆ.


ಮಂಡ್ಯ ಜಿಲ್ಲೆ ಕೆ.ಆರ್ ಪೇಟೆ ತಾಲೂಕಿನಲ್ಲಿ ನಡೆದ ನಿವೃತ್ತ ಶಿಕ್ಷಕ ತಿಮ್ಮೆಗೌಡ ರಚಿಸಿದ್ದ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಆಗಮಿಸಿ ಮಾತನಾಡಿದ ಭಗವಾನ್ ಅವರು, ಶ್ರೀರಾಮನ ಕುರಿತಂತೆ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.


ಇದನ್ನೂ ಓದಿ: Ayodhya Ram Mandir: ಅಯೋಧ್ಯೆ ಶ್ರೀರಾಮನಿಗೆ ನೇಪಾಳದಿಂದಲೂ ಉಡುಗೊರೆ, ನೆರೆರಾಷ್ಟ್ರದಿಂದಲೇ ಬರಲಿದೆ ವಿಗ್ರಹದ ಕೆತ್ತನೆಗೆ ಕಲ್ಲು!


ವೈಚಾರಿಕತೆ ಎಂದರೆ ಭೇದ ಭಾವ ಇಲ್ಲದೆ ಎಲ್ಲರನ್ನು ನೋಡುವುದು ಅಷ್ಟೇ, ಆದರೆ ಅದು ಯಾರ ವಿರುದ್ಧವೂ ಅಲ್ಲ. ನಮ್ಮ ಸಂವಿಧಾನದಲ್ಲಿ ಹೇಳಿರುವ ಸ್ವಾತಂತ್ರ್ಯ, ಸಮಾನತೆ, ಸಹೋದರತ್ವ ಅಂಶಗಳನ್ನು ಫ್ರೆಂಚ್​ ಮಹಾಕ್ರಾಂತಿಯಿಂದ ತೆಗೆದುಕೊಂಡಿದ್ದೀರಾ ಎಂದು ಬಾಬಾ ಸಾಹೇಬರಿಗೆ ಪತ್ರಕರ್ತರು ಪ್ರಶ್ನೆ ಮಾಡಿದ್ದರು. ಆಗ ಅವರು ಇಲ್ಲ, ಈ ಅಂಶಗಳನ್ನು ನನ್ನ ಆಧ್ಯಾತ್ಮಕ ಗುರುಗಳಾದ ಬುದ್ಧರಿಂದ ತೆಗೆದುಕೊಂಡಿದ್ದೀನಿ ಎಂದು ಹೇಳಿದ್ದರು. ಇದನ್ನು ಅರ್ಥ ಮಾಡಿಕೊಂಡರೆ ಇಷ್ಟೊಂದು ಮತೀತ ದ್ವೇಷ , ಕೋಮು ಭಾವನೆ ಹೆಚ್ಚಾಗುತ್ತಿರಲಿಲ್ಲ ಎಂದು ಭಗವಾನ್ ಹೇಳಿದ್ದಾರೆ.
ದೇವಸ್ಥಾನದಿಂದಲೇ ಭ್ರಷ್ಟಾಚಾರದ ಶುರು


ನಮ್ಮ ರಾಷ್ಟ್ರ, ರಾಜ್ಯದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿದ್ದಾರೆ. ಅವನು ಯಾವುದೇ ಪಕ್ಷದವ ಆದರೂ ಭಷ್ಟಾಚಾರದಿಂದ ಹೊರತಾಗಿಲ್ಲ. ಭ್ರಷ್ಟಾಚಾರ ಇಲ್ಲದ ವ್ಯಕ್ತಿಯೇ ಇಲ್ಲ. ಬಹುಶಃ ಭ್ರಷ್ಟಾಚಾರ ಮಾಡಲು ಬಾರದೆ ಇರೋ ವ್ಯಕ್ತಿಗೆ ರಾಜಕೀಯ ಮಾಡೋಕೆ ಆಗೋದಿಲ್ಲ. ಅಂತಹ ವಾತಾವರಣ ನಿರ್ಮಾಣವಾಗಿದೆ. ದೇವರ ಪೂಜೆಗೆ ಹೋಗುತ್ತೀರಿ, ಅಲ್ಲಿ ಏನಾದರೂ ಕಾಣಿಕೆ ಹಾಕುತ್ತೀರಿ. ತಟ್ಟೆ ಹಾಕದೆ ಇದ್ದರೆ ಅವನು ತಟ್ಟೆಯನ್ನೇ ನಿಮಗೆ ತೋರಿಸೋದಿಲ್ಲ. ದೇವಸ್ಥಾನದಿಂದಲೇ ಭ್ರಷ್ಟಾಚಾರ ಶುರುವಾಗಿದೆ.


ಕುವೆಂಪು 1936ರಲ್ಲೇ ಕಾನೂನು ಹೆಗ್ಗಡತಿ ಮಹಾ ಕಾದಂಬರಿ ಬರೆದಿದ್ದರು. ಕನ್ನಡದ ಮೊಟ್ಟ ಮೊದಲ ಮಹಾ ಕಾದಂಬರಿ. 600 ಪುಟಗಳ ಈ ಕಾದಂಬರಿ ಬುದ್ಧ ಜಯಂತಿಯಲ್ಲಿ ಕೊನೆಯಾಗುತ್ತದೆ. ನಾನು ಈ ಕಾದಂಬರಿ ಬಗ್ಗೆ ವಿಮರ್ಶೆ ಬರೆಯುವ ಮುನ್ನ ಹಲವು ಅದನ್ನು ಟೀಕೆ ಮಾಡಿ ವಿಮರ್ಶೆ ಮಾಡಿದ್ದರು. ಆದರೆ ನಾನು ವಿಮರ್ಶೆ ಬರೆದ ಬಳಿಕ ಎಲ್ಲರೂ ಸುಮ್ಮನಾದರು. ಕಾದಂಬರಿಯ ನಾಯಕ ಹೂವಯ್ಯ, ಅಸಮಾನತೆಯನ್ನು ಸಾರುವ ಹಿಂದೂ ಧರ್ಮವನ್ನು ತಿರಸ್ಕರಿಸಿ ಬೌದ್ಧ ಧರ್ಮಕ್ಕೆ ಹೋಗ್ತಾನೆ. ಅವರೆಲ್ಲರೂ ರೈತರೇ ಆಗಿದ್ದರು. ರೈತ ನೆಲದ ಮೂಲ ಪುರುಷ. ಬುದ್ಧ ಧರ್ಮ ನಮ್ಮ ನೆಲದ ಮೂಲಕ ಧರ್ಮ.


ಇದನ್ನೂ ಓದಿ: Photos: ಮುಂದಿನ ಸಂಕ್ರಾಂತಿ ವೇಳೆಗೆ ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ! ಎಲ್ಲಿವರೆಗೆ ಬಂತು ರಾಮಮೂರ್ತಿಯ ಕೆತ್ತನೆ ಕಾರ್ಯ?


ಈಗ ದೇಶದಲ್ಲಿ ರಾಮನ ದೇವಸ್ಥಾನ ಕಟ್ಟುತ್ತಿದ್ದಾರೆ. ನಾನು ಒಂದು ಪುಸ್ತಕ ಬರೆಯುತ್ತಿದ್ದೇನೆ, ರಾಮ ಮಂದಿರ ಏಕೆ ಬೇಡ ಎಂದು ಬರೆದಿದ್ದೇನೆ. ವಿವಿಧ ಭಾಷೆಗಳಲ್ಲಿ ಪುಸ್ತಕ ಬಿಡುಗಡೆ ಆಗಲಿದೆ ಎಂದು ಹೇಳಿದರು. ಅಲ್ಲದೇ 2 ಸಾವಿರ ವರ್ಷಗಳಿಂದ ಶೂದ್ರ ಎಂಬ ಪದವನ್ನು ಕೇಳಿಸಿಕೊಂಡು ಬಂದಿದ್ದಾರೆ. ಇಲ್ಲಿ ರಾಮ ರಾಜ್ಯ ಎಂಬುವುದು ಅಪಾಯಕಾರಿಯಾದ ಮಾತು. ನಮಗೆ ಬೇಕಿರೋದು ಸಂವಿಧಾನದಲ್ಲಿ ಇರುವ ರಾಜ್ಯ.


ಟಿಪ್ಪು ಸುಲ್ತಾನ್​ ಕನ್ನಂಬಾಡಿ ಕಟ್ಟಲು ಮೊದಲು ಪ್ರಯತ್ನಿಸಿದ್ದ


ಮೊದಲು ಕನ್ನಂಬಾಡಿ ಕಟ್ಟೆ ಕಟ್ಟಲು ಟಿಪ್ಪು ಸುಲ್ತಾನ್​ ಪ್ರಯತ್ನಿಸಿದ್ದ. ಆದರೆ, ಆ ವೇಳೆಗೆ ಆಂಗ್ಲೋ–ಮೈಸೂರು ಯುದ್ಧ ಆರಂಭವಾಗಿದ್ದ ಕಾರಣ ಕನ್ನಂಬಾಡಿ ಕಟ್ಟಲು ಸಾಧ್ಯವಾಗಲಿಲ್ಲ. ಅವರು ಏನಾದರೂ ಕನ್ನಂಬಾಡಿ ಕಟ್ಟಿದ್ದರೆ ಇಂದು ಟಿಪ್ಪು ವಿರುದ್ಧದ ಹೇಳಿಕೆಗಳು ಇರುತ್ತಿರಲಿಲ್ಲ. ಕರ್ನಾಟಕ ಹಾಗೂ ತಮಿಳುನಾಡು ಎರಡು ರಾಜ್ಯಗಳ ಜನರು ನೆಮ್ಮದಿಯಿಂದ ಇರುತ್ತಿದ್ದರು. ಏಕೆಂದರೆ ಟಿಪ್ಪು ಆಡಳಿತದಲ್ಲಿ ಈಗಿನ ತಮಿಳುನಾಡಿನ ಪ್ರದೇಶಗಳು ಕೂಡ ಆತನ ಆಳ್ವಿಕೆಗೆ ಒಳಪಟ್ಟಿದ್ದವು ಎಂದು ಹೇಳಿದ್ದಾರೆ.

Published by:Sumanth SN
First published: