HOME » NEWS » State » PROF G VENKATASUBBAIAH THE KANNADA DICTIONARY EXPERT PASSES AWAY SNVS

RIP G Venkatasubbaiah - ನಿಘಂಟು ತಜ್ಞ, ಶತಾಯುಷಿ ಪ್ರೊ| ಜಿ ವೆಂಕಟಸುಬ್ಬಯ್ಯ ನಿಧನ

108 ವರ್ಷ ವಯಸ್ಸಾಗಿದ್ದ ಪ್ರೊ| ಜಿ. ವೆಂಕಟಸುಬ್ಬಯ್ಯ ಅವರು ಏಪ್ರಿಲ್ 18-19 ಮಧ್ಯರಾತ್ರಿ ಬೆಂಗಳೂರಿನ ಜಯನಗರ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದಿದ್ದಾರೆ.

news18-kannada
Updated:April 19, 2021, 7:55 AM IST
RIP G Venkatasubbaiah - ನಿಘಂಟು ತಜ್ಞ, ಶತಾಯುಷಿ ಪ್ರೊ| ಜಿ ವೆಂಕಟಸುಬ್ಬಯ್ಯ ನಿಧನ
ಪ್ರೊ| ಜಿ ವೆಂಕಟಸುಬ್ಬಯ್ಯ
  • Share this:
ಬೆಂಗಳೂರು(ಏ. 19): ಕನ್ನಡದ ನಿಘಂಟು ಶಾಸ್ತ್ರಜ್ಞರೆಂದೇ ಖ್ಯಾತರಾಗಿರುವ ಸಾಹಿತಿ ಹಾಗೂ ಶತಾಯುಷಿ ಪ್ರೊ| ಜಿ. ವೆಂಕಟಸುಬ್ಬಯ್ಯ ಇಂದು ಕೊನೆಯುಸಿರೆಳೆದಿದ್ದಾರೆ. 108 ವರ್ಷದ ವೆಂಕಟಸುಬ್ಬಯ್ಯ ಅವರು ವಯೋಸಹಜ ಆರೋಗ್ಯ ಸಮಸ್ಯೆಗಳನ್ನ ಎದುರಿಸುತ್ತಿದ್ದರು. ಮಧ್ಯರಾತ್ರಿ 1:30ಕ್ಕೆ ಜಯನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.

1913ರ, ಆಗಸ್ಟ್ 23ರಂದು ಮಂಡ್ಯ ಜಿಲ್ಲೆಯ ಶ್ರಿರಂಗಪಟ್ಟಣದ ಗಂಜಾಮ್​ನಲ್ಲಿ ಜನಿಸಿದ ಪ್ರೊ| ಜಿ. ವೆಂಕಟಸುಬ್ಬಯ್ಯ ಕನ್ನಡದ ಅಪ್ರತಿಮ ಭಾಷಾ ತಜ್ಞರು, ಸಂಶೋಧಕರು, ಬರಹಗಾರರು ಹಾಗೂ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಾಚೀನ ಸಾಹಿತ್ಯ ಅಧ್ಯಯನ ಹಾಗೂ ಅನುವಾದ ಕ್ಷೇತ್ರಗಳಲ್ಲಿ ಅವರ ಕೊಡುಗೆ ಅಪಾರ. ಎಲ್ಲಕ್ಕಿಂತ ಹೆಚ್ಚು ಕೊಡುಗೆ ಇರುವುದು ನಿಘಂಟು ಕ್ಷೇತ್ರಕ್ಕೆ. ಕನ್ನಡ ನಿಘಂಟು ತಜ್ಞರೆಂದೇ ಖ್ಯಾತರಾಗಿರುವ ಅವರಿಗೆ ಪದ್ಮಶ್ರೀ, ನಾಡೋಜ, ಪಂಪ, ಭಾಷಾ ಸನ್ಮಾನ್ ಪ್ರಶಸ್ತಿ ಗೌರವಗಳು ಸಿಕ್ಕಿವೆ.

ವೆಂಕಟಸುಬ್ಬಯ್ಯ ಅವರು ಎಂಟಕ್ಕೂ ಹೆಚ್ಚು ನಿಘಂಟುಗಳನ್ನ ರಚಿಸಿದ್ದಾರೆ. ಇವರ ಕನ್ನಡ ನಿಘಂಟು ಶಾಸ್ತ್ರ ಪರಿಚಯ ಎಂಬ ಪುಸ್ತಕ ಸಾಹಿತ್ಯಾಸಕ್ತರಿಗೆ ಈಗಲೂ ಅಧ್ಯಯನಯೋಗ್ಯವೆನಿಸಿದೆ. ಇವರ ಇಗೋ ಕನ್ನಡ ಎಂಬುದು ಅತ್ಯಂತ ಜನಪ್ರಿಯ ನಿಘಂಟುಗಳಲ್ಲಿ ಒಂದೆನಿಸಿದೆ.

ಇದನ್ನೂ ಓದಿ: ಮೀನು ಮಾರಿ ದುಡಿದು ಓದಿ ಡಾಕ್ಟರೇಟ್ ಪದವಿ ಗಳಿಸಿದ ನಿಯಾಜ್ ಪಣಕಜೆ

ವೆಂಕಟಸುಬ್ಬಯ್ಯ ಅವರ ತಂದೆ ಗಂಜಾಮ್ ತಿಮ್ಮಣ್ಣಯ್ಯ ಅವರೂ ಕೂಡ ಕನ್ನಡ ಮತ್ತು ಸಂಸ್ಕೃತ ಭಾಷೆಯ ವಿದ್ವಾಂಸರಾಗಿದ್ದವರು. ಸರ್ಕಾರಿ ನೌಕರಿಯಲ್ಲಿದ್ದರು. ವೆಂಕಟಸುಬ್ಬಯ್ಯ ಅವರು ಹೆಚ್ಚಾಗಿ ಓದಿದ್ದು ಮೈಸೂರಿನಲ್ಲಿ. 1938ರಲ್ಲಿ ಇವರು ಚಿನ್ನದ ಪದಕದೊಂದಿಗೆ ಸ್ನಾತಕೋತ್ತರ ಪದವಿ ಪಡೆದಿದ್ದರು. ಮಂಡ್ಯದ ಸರ್ಕಾರಿ ಶಾಲೆ ಹಾಗೂ ಬೆಂಗಳೂರಿನ ಬಿಎಚ್​ಎಸ್ ಶಾಲೆಯಲ್ಲಿ ಇಂಗ್ಲೀಷ್ ಶಿಕ್ಷಕರಾಗಿದ್ದ ಇವರು ವಿಜಯಾ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾದ ಇವರು ನಿವೃತ್ತರಾಗುವ ಮುನ್ನ ಪ್ರೊಫೆಸರ್ ಹಾಗೂ ಪ್ರಾಂಶುಪಾಲರಾಗಿ ಸೇವೆ ನಿಭಾಯಿಸಿದ್ದರು..
Published by: Vijayasarthy SN
First published: April 19, 2021, 7:34 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories