Sandesh Nagaraj: ‘ಸ್ಯಾಂಡಲ್​​ವುಡ್​​ಗೆ ಹಿರಿಯರು ಅನ್ನೋರು ಇಲ್ಲದಿರುವುದೇ ಇಂತಹ ಘಟನೆಗಳಿಗೆ ಕಾರಣ‘ - ಡ್ರಗ್ಸ್​ ಮಾಫಿಯಾ ಬಗ್ಗೆ ನಿರ್ಮಾಪಕ ಸಂದೇಶ್ ನಾಗರಾಜ್

ಹಿಂದೆ ಹಿರಿಯ ನಟರಿದ್ದರು. ಅವರ ಮೇಲಿನ ಭಯ ಹಾಗೂ ಗೌರವದಿಂದ ಯಾರು ಈ ರೀತಿಯ ಘಟನೆಗಳಲ್ಲಿ ಭಾಗಿಯಾಗೋದಕ್ಕು ಹೆದರುತ್ತಿದ್ದರು. ಆದ್ರೆ ಈಗ ಮೇಟಿ ಇಲ್ಲದ ಹಾಗೇ ಚಿತ್ರರಂಗದಲ್ಲಿ ಸೂಕ್ತ ನಾಯಕತ್ವ ಇಲ್ಲದೆ ಇರೋದು ಇಷ್ಟಕ್ಕೆಲ್ಲ ಕಾರಣವಾಗಿದೆ ಎಂದರು ಸಂದೇಶ್​ ನಾಜರಾಜ್​.

ನಿರ್ಮಾಪಕ ಸಂದೇಶ ನಾಗರಾಜ್​​

ನಿರ್ಮಾಪಕ ಸಂದೇಶ ನಾಗರಾಜ್​​

  • Share this:
ಮೈಸೂರು(ಸೆ.04): ಕನ್ನಡ ಚಿತ್ರರಂಗಕ್ಕೆ ಮೇಟಿ ಇಲ್ಲದಿರುವುದೇ ಇಂತ ಸಮಸ್ಯೆಗೆ ಕಾರಣ ಆಗಿದೆ. ಡಾ.ರಾಜ್ , ವಿಷ್ಣು, ಅಂಬರೀಷ್ ಇದ್ದಾಗ ಒಂದು ಭಯ ಇತ್ತು. ಅವರ ಮೇಲಿನ ಗೌರವಕ್ಕೆ ಹೆದರಿ ಯಾರು ದಾರಿ ತಪ್ಪಿರಲಿಲ್ಲ. ಆದರೀಗ ಕನ್ನಡ ಚಿತ್ರರಂಗ ಮೇಟಿ ಇಲ್ಲದಿರುವುದೇ ಇಷ್ಟಕ್ಕೆಲ್ಲ ಕಾರಣವಾಗಿದೆ ಎಂದು ಹಿರಿಯ ನಿರ್ಮಾಪಕ ಸಂದೇಶ್ ನಾಗರಾಜ್ ಹೇಳಿದ್ದಾರೆ. ಇಂದು ಮೈಸೂರಿನಲ್ಲಿ ಮಾತನಾಡಿದ ಅವರು ಡ್ರಗ್ಸ್ ವಿಚಾರ ಕನ್ನಡ ಚಿತ್ರರಂಗಕ್ಕೆ ಅಂಟಿಕೊಂಡಿರೋದಕ್ಕೆ ಚಿತ್ರರಂಗದ ಮೇಲೆ ಗೂಬೆ ಕೂರಿಸೋದು ಬೇಡ ಎಂದು ಮನವಿ ಮಾಡಿದರು. ಹಿಂದೆ ಹಿರಿಯ ನಟರಿದ್ದರು. ಅವರ ಮೇಲಿನ ಭಯ ಹಾಗೂ ಗೌರವದಿಂದ ಯಾರು ಈ ರೀತಿಯ ಘಟನೆಗಳಲ್ಲಿ ಭಾಗಿಯಾಗೋದಕ್ಕು ಹೆದರುತ್ತಿದ್ದರು. ಆದ್ರೆ ಈಗ ಮೇಟಿ ಇಲ್ಲದ ಹಾಗೇ ಚಿತ್ರರಂಗದಲ್ಲಿ ಸೂಕ್ತ ನಾಯಕತ್ವ ಇಲ್ಲದೆ ಇರೋದು ಇಷ್ಟಕ್ಕೆಲ್ಲ ಕಾರಣವಾಗಿದೆ ಎಂದರು.

ಈಗ ಶಿವರಾಜ್‍ಕುಮಾರ್ ನೇತೃತ್ವ ವಹಿಸಿಕೊಳ್ಳುತ್ತಿದ್ದಾರೆ. ಅವರು ವಿವಾದ ಇಲ್ಲದ ನಾಯಕನಾಗಿದ್ದಾರೆ. ಅವರಿಗಾದರೂ ಎಲ್ಲರು ಗೌರವ ಕೊಟ್ಟು ಚಿತ್ರರಂಗದ ಹೆಸರು ಉಳಿಸಿ. ಶಿವರಾಜ್‍ಕುಮಾರ್ ಎಲ್ಲರನ್ನು ಒಟ್ಟಿಗೆ ಕರೆದುಕೊಂಡು ಹೋಗೋ ವಿಶ್ವಾಸ ಇದೆ. ಅವರೋಬ್ಬರೆ ಅಲ್ಲ ನಾವು ಸಹ ಅವರಿಗೆ ಗೌರವ ಕೊಟ್ಟು ಅವರ ಮಾತಿನಂತೆ ನಡೆದುಕೊಂಡು ಚಿತ್ರರಂಗಕ್ಕೆ ಒಳ್ಳೆಯ ಹೆಸರು ತರಬೇಕು ಎಂದು ಮನವಿ ಮಾಡಿದರು ಸಂದೇಶ್​ ನಾಜರಾಜ್​​.

ಡ್ರಗ್ ವಿಚಾರದಲ್ಲಿ ಇಡೀ ಚಿತ್ರರಂಗ ಬೊಟ್ಟು ಮಾಡೋದು ಸರಿಯಲ್ಲ. ತಪ್ಪಿತಸ್ಥರ ಬಗ್ಗೆ ಬೇಕಾದರೆ ಹೇಳಲಿ. ಈ ಬಗ್ಗೆ ನಾನು ಇಂದ್ರಜಿತ್ ಕೇಳ್ತೇನೆ ನೇರವಾಗಿ ಹೆಸರು ಹೇಳಿಬಿಡಿ ಅಲ್ಲಿಗೆ ಚಿತ್ರರಂಗದ ಮೇಲಿನ ಕಳಂಕ ತಪ್ಪಲಿದೆ. ಕನ್ನಡ ಚಿತ್ರರಂಗದಲ್ಲಿ ಹಲವು ಹಿರೋ ಹಿರೋಯಿನ್​​ಗಳು ಇದ್ದಾರೆ. ಅವರೆಲ್ಲ ಡ್ರಗ್ಸ್ ತೆಗೆದುಕೊಳ್ತಾರೆ ಅನ್ನೋದು ಸುಳ್ಳು. ಸಿನಿಮಾದಲ್ಲಿ ಎಲ್ಲರು ಡ್ರಗ್ಸ್ ತಗೋಳೋಲ್ಲ ಅಂತ ನಾನು ಹೇಳೋಲ್ಲ. ಯಾರೋ ಶೇ.1ರಷ್ಟು ಜನ ತೆಗೆಕೊಳ್ಳಬಹುದು. ಯಾರು ತೆಗೆದುಕೊಳ್ಳುತ್ತಾರೆ ಎನ್ನುವ ಬಗ್ಗೆ ಮಾಹಿತಿ ಇದ್ರೆ ನೇರವಾಗಿ ಹೇಳಲಿ ಅಂತ ಆಗ್ರಹಿಸಿದರು.

ಇನ್ನು ನಾನು ಸಹ 30 ಚಿತ್ರ ನಿರ್ಮಾಣ ಮಾಡಿದ್ದೇನೆ. ನನಗೆ ಈ ಅನುಭವ ಆಗಿಲ್ಲ. ಇಂದ್ರಜಿತ್ ಅವರಿಗೆ ಮಾಹಿತಿ ಸಾಕ್ಷಿ ಇದ್ರೆ ಆರೋಪಿಗಳ ಹೆಸರು ಓಪನ್ ಆಗಿ ಹೇಳಿಲಿ. ಡ್ರಗ್ಸ್ ತೆಗೆದುಕೊಂಡರೆ ಅದು ಅವರ ವೈಯುಕ್ತಿಕ. ಚಿತ್ರರಂಗದವರೊಬ್ಬರೆ ಡ್ರಗ್ಸ್ ತೆಗೆದುಕೊಳ್ಳೊಲ್ಲ ಎಲ್ಲರು ತಗೋತಾರೆ. ಯಾರು ಇಂತಹ ಕೆಲಸ ಮಾಡಿದ್ದಾರೆ ಅವರಿಗೆ ಶಿಕ್ಷೆ ಆಗಲಿ ಎಂದು ಒತ್ತಾಯಿಸಿದರು.

ಕೊರೋನಾ ಹಿನ್ನೆಲೆ ಸಿನಿಮಾಗೆ ಹೊಸ ಮಾರ್ಗಸೂಚಿ ಬಂದಿದೆ. ಮಾರ್ಗಸೂಚಿ ಬಂದ ಮೇಲೆ ಸಿನಿಮಾ ನಿರ್ಮಾಣದ ಬಜೆಟ್ ಕಡಿಮೆ ಆಗಿದೆ ಅಂತ ನಿರ್ಮಾಪಕ ಸಂದೇಶ್ ನಾಗರಾಜ್ ಅಭಿಪ್ರಾಯಪಟ್ಟಿದ್ದಾರೆ.

ಸಿನಿಮಾ ನಿರ್ಮಾಣಕ್ಕೆ ಮೊದಲಿನಷ್ಟು ಹಣ ವೆಚ್ಚವಾಗುತ್ತಿಲ್ಲ. ಕಡಿಮೆ ಬಜೆಟ್ ಸಿನಿಮಾ ಮಾಡುವುದಕ್ಕೆ ಈ ಮಾರ್ಗಸೂಚಿ ಬಹಾಳ ಉಪಯೋಗ ಆಗಿದೆ. ದೊಡ್ಡ ಹೀರೋಗಳ ಸಿನಿಮಾ ಮಾಡೋಕೆ ಮಾತ್ರ ಕಷ್ಟವಾಗುತ್ತೆ. ಈ ಹಿನ್ನಲೆಯಲ್ಲಿ ನಾನು ಎರಡು ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾನೆ. ಎರಡು ಸಿನಿಮಾಗಳು ಮುಂದಿನ ವಾರದಿಂದ ಶೂಟಿಂಗ್ ಆರಂಭ ಆಗಲಿದೆ ಎಂದು ತಿಳಿಸಿದರು.

ಇದನ್ನೂ ಓದಿ: Basavaraj Bommai: ‘ಡ್ರಗ್ಸ್​ ದಂಧೆಗೆ ಬ್ರೇಕ್​ ಹಾಕುವ ತನಕ ಪೊಲೀಸರ ಕಾರ್ಯಾಚರಣೆ ನಿಲ್ಲದು‘ - ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟನೆ

ಇನ್ನು OTT ವೇದಿಕೆ ಒಳ್ಳೆಯದು. ಆದ್ರೆ ನಾವು ಖರ್ಚು ಮಾಡಿದಷ್ಟು ಹಣ ಕೊಟ್ಟರೆ ಮಾತ್ರ ನಮಗೆ ಉಪಯೋಗ ಆಗೋದು.  ‍3 ಕೋಟಿ ಖರ್ಚು ಮಾಡೋರಿಗೆ ‍1 ಕೋಟಿ ಕೊಟ್ಟರೆ ಸಾಲೋದಿಲ್ಲ. ಈಗಿನ ಸಿನಿಮಾಗಳನ್ನ ಓಟಿಟಿಯಲ್ಲೆ ಬಿಡುಗಡೆ ಮಾಡ್ತಿದ್ದಾರೆ. ಆದರೂ ನಮಗೆ ಕಲೆಕ್ಷನ್ ಆಗೋದು ಥಿಯೇಟರ್‍ನಲ್ಲಿ ಮಾತ್ರ. ಹಾಗಾಗಿ ಒಟಿಟಿ ಜೊತೆಗೆ ಥಿಯೇಟರ್ ಇರಲಿ ಎಂದು ನಿರ್ಮಾಪಕ ಸಂದೇಶ್ ನಾಗರಾಜ್ ತಿಳಿಸಿದ್ದಾರೆ.
Published by:Ganesh Nachikethu
First published: