ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿ ನಿರ್ಮಾಪಕ ಎಸ್​.ಎ. ಚಿನ್ನೇಗೌಡ ಆಯ್ಕೆ: ಇಂದು ಅಧಿಕಾರ ಸ್ವೀಕಾರ

news18
Updated:June 27, 2018, 8:29 AM IST
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿ ನಿರ್ಮಾಪಕ ಎಸ್​.ಎ. ಚಿನ್ನೇಗೌಡ ಆಯ್ಕೆ: ಇಂದು ಅಧಿಕಾರ ಸ್ವೀಕಾರ
news18
Updated: June 27, 2018, 8:29 AM IST
ನ್ಯೂಸ್ 18 ಕನ್ನಡ
ಬೆಂಗಳೂರು (ಜೂನ್​ 27): ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ನಿನ್ನೆ ನಡೆದ ಚುನಾವಣೆಯಲ್ಲಿ ಹಿರಿಯ ನಿರ್ಮಾಪಕ ಮತ್ತು ವಿತರಕ ಎಸ್​.ಎ. ಚಿನ್ನೇಗೌಡ ಆಯ್ಕೆಯಾಗಿದ್ದಾರೆ.

ಕಳೆದ ವರ್ಷವೇ ನಡೆಯಬೇಕಾಗಿದ್ದ ಚುನಾವಣೆ ಕಾರಣಾಂತರದಿಂದ ನಡೆದಿರಲಿಲ್ಲ. ಹಿಂದಿನ ಅವಧಿಗೆ ನಿರ್ಮಾಪಕ ಸಾ.ರಾ. ಗೋವಿಂದು ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಈ ಬಾರಿ ಚುನಾವಣೆ ಪ್ರಕ್ರಿಯೆಗೆ ವಿದ್ಯುನ್ಮಾನ ಮತಯಂತ್ರವನ್ನು ಬಳಸಿದ್ದರಿಂದ ಪಾರದರ್ಶಕವಾಗಿ ಮತದಾನ ನಡೆಯಿತು. ಸಿನಿಮಾ ವಿತರಕ ಮಾರ್ಸ್​ ಸುರೇಶ್​ ಮತ್ತು ಚಿನ್ನೇಗೌಡ ಅವರ ನಡುವೆ ಸ್ಪರ್ಧೆ ಏರ್ಪಟ್ಟಿತ್ತು. ಸುರೇಶ್​ 317 ಮತ ಮತ್ತು ಚಿನ್ನೇಗೌಡರು 552 ಮತಗಳನ್ನು ಪಡೆದುಕೊಂಡಿದ್ದಾರೆ. ಅಂತಿಮವಾಗಿ ಹಲವು ದಶಕಗಳಿಂದ ಸಿನಿಮಾ ವಿತರಣೆ ಮತ್ತು ನಿರ್ಮಾಪಕರಾಗಿ ಗುರುತಿಸಿಕೊಂಡಿರುವ ಚಿನ್ನೇಗೌಡ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಇದೇ ಮೊದಲ ಬಾರಿಗೆ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಇಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಬಾಕಿ ಪದಾಧಿಕಾರಿಗಳ ಆಯ್ಕೆ: ಇನ್ನುಳಿದಂತೆ,ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಉಪಾಧ್ಯಕ್ಷರಾಗಿ ನಿರ್ಮಾಪಕರ ವಲಯದಿಂದ ಕರಿಸುಬ್ಬು ಮತ್ತು ವಿತರಕರ ವಲಯದಿಂದ ಕೆ. ಮಂಜು, ಖಜಾಂಚಿಯಾಗಿ ಕೆ.ಎಂ. ವೀರೇಶ್​ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ನಿರ್ಮಾಪಕ ವಲಯದಿಂದ ಭಾ.ಮಾ. ಹರೀಶ್​ ಮತ್ತು ವಿತರಕರ ವಲಯದಿಂದ ಶಿಲ್ಪಾ ಶ್ರೀನಿವಾಸ್​ ಗೆಲುವು ಸಾಧಿಸಿದ್ದಾರೆ. ಪ್ರದರ್ಶಕರ ವಲಯದಿಂದ ಸುಂದರ್​ರಾಜು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ನೂತನ ಮಂಡಳಿ ಕೂಡ ಇಂದು ಅಧಿಕಾರ ಸ್ವೀಕರಿಸಲಿದೆ.

ಒಟ್ಟಾರೆ 721 ನಿರ್ಮಾಪಕರು, 378 ವಿತರಕರು ಮತ್ತು 136 ಪ್ರದರ್ಶಕರು ಚಲನಚಿತ್ರ ವಾಣಿಜ್ಯ ಮಂಡಳಿಯ ಚುನಾವಣೆಯಲ್ಲಿ ಮತ ಚಲಾಯಿಸಿದ್ದರು. ಅಂದಹಾಗೆ, ಎಸ್​.ಎ. ಚಿನ್ನೇಗೌಡ ಅವರು ಪಾರ್ವತಮ್ಮ ರಾಜ್​ಕುಮಾರ್​ ಅವರ ಸಹೋದರರಾಗಿದ್ದು, ಇವರ ಮಕ್ಕಳಾದ ವಿಜಯ್​ ರಾಘವೇಂದ್ರ ಮತ್ತು ಶ್ರೀಮುರಳಿ ಕೂಡ ಚಿತ್ರರಂಗದ ಖ್ಯಾತ ನಾಯಕರೆನಿಸಿಕೊಂಡಿದ್ದಾರೆ.
First published:June 27, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ