ರಮ್ಯಾ ಎಲ್ಲಿದ್ದೀಯಮ್ಮ?: ರಮ್ಯಾ ಮತ್ತು ಪ್ರಕಾಶ್ ರೈ ವಿರುದ್ಧ ಶಿಲ್ಪಾ ಗಣೇಶ್ ಟೀಕಾಸ್ತ್ರ

ಮತ್ತೆ ಆರಂಭವಾಗಿದೆ ಟ್ವೀಟ್​ ವಾರ್​. ಲೋಕಸಭಾ ಚುನಾವಣಾ ಫಲಿತಾಂಶದ ನಂತರ ಶಿಲ್ಪಾ ಗಣೇಶ್ ಮೋದಿಯನ್ನು ಟೀಕಿಸಿ ಟ್ವೀಟ್​ ಮಾಡುತ್ತಿದ್ದವರನ್ನು ಟೀಕಿಸಿ ಟ್ವೀಟ್​ ಮಾಡಿದ್ದಾರೆ. ಈಗ ನಿಖಿಲ್​ ಎಲ್ಲಿದ್ದೀಯಪ್ಪಾ.... ಟೈಟಲ್​​ ಸದ್ದು ಕಡಿಮೆಯಾಗುತ್ತಿದ್ದಂತೆಯೇ ಈಗ ರಮ್ಯಾ ಎಲ್ಲಿದ್ದೀಯಮ್ಮಾ... ಅನ್ನೋ ಕೂಗು ಕೇಳಿ ಬರುತ್ತಿದೆ.

Anitha E | news18
Updated:May 24, 2019, 9:44 PM IST
ರಮ್ಯಾ ಎಲ್ಲಿದ್ದೀಯಮ್ಮ?: ರಮ್ಯಾ ಮತ್ತು ಪ್ರಕಾಶ್ ರೈ ವಿರುದ್ಧ ಶಿಲ್ಪಾ ಗಣೇಶ್ ಟೀಕಾಸ್ತ್ರ
ರಮ್ಯಾ, ಶಿಲ್ಪಾಗಣೇಶ್​, ಪ್ರಕಾಶ್​ ರೈ
Anitha E | news18
Updated: May 24, 2019, 9:44 PM IST
ಲೋಕಸಭಾ ಚುನಾವಣೆಯಲ್ಲಿ ದಿಗ್ವಿಜಯ ಸಾಧಿಸಿದೆ. ರಾಜ್ಯದಲ್ಲಿ ಒಟ್ಟು 28 ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್​ ಕೇವಲ ಒಂದೇ ಒಂದು ಕ್ಷೇತ್ರದಲ್ಲಿ ಗೆದ್ದರೆ, ಜೆಡಿಎಸ್​ ಒಂದು ಕ್ಷೇತ್ರದಲ್ಲಿ ಹಾಗೂ ಸುಮಲತಾ ಪಕ್ಷೇತರ ಅಭ್ಯರ್ಥಿಯಾಗಿ ವಿಜಯಿಯಾಗಿದ್ದಾರೆ. ಉಳಿದಂತೆ ರಾಜ್ಯದಲ್ಲೂ ಬಿಜೆಪಿ 25 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದೆ.

ಬಿಜೆಪಿಯ ಈ ದಿಗ್ವಿಜಯದಿಂದಾಗಿ ಕಾರ್ಯಕರ್ತರ ಖುಷಿಗೆ ಪಾರವೇ ಇಲ್ಲದಂತಾಗಿದೆ. ಇದರಿಂದಾಗಿಯೇ ಎಲ್ಲೆಡೆ ಸಂಭ್ರಮಾಚರಣೆ ನಡೆಯುತ್ತಿದೆ. ಇದರ ನಡುವೆಯೇ ರಾಜ್ಯ ಬಿಜೆಪಿ ಮಹಿಳಾ ಮೋರ್ಚಾದ ಉಪಾಧ್ಯಕ್ಷೆ ಹಾಗೂ ನಿರ್ಮಾಪಕಿ ಶಿಲ್ಪಾ ಗಣೇಶ್​ ಚುನಾವಣೆಗೂ ಮುನ್ನ ಮೋದಿಯವನ್ನು ಟೀಕಿಸುತ್ತಿದ್ದ ಕೆಲವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: 26 ವರ್ಷಗಳ ಹಿಂದೆಯೇ ಸ್ಯಾಂಡಲ್​ವುಡ್​ನಲ್ಲಿ ರ‍್ಯಾಪ್​ ಹಾಡಿನ ಪ್ರಯೋಗ ಮಾಡಿದ್ದ ಜಗ್ಗೇಶ್​..!

ಹೌದು, ಚುನಾವಣಾ ಫಲಿತಾಂಶದ ನಂತರ ನಟ ಪ್ರಕಾಶ್ ರೈ ಮತ್ತು ರಮ್ಯಾಗೆ ಟ್ವಿಟ್ಟರ್​ನಲ್ಲಿ ಶಿಲ್ಪಾ ಖಾರವಾಗಿ ಟ್ವೀಟ್​ ಮಾಡಿದ್ದಾರೆ. ಮೋದಿ ಅವರನ್ನು ಪದೇ ಪದೇ ಟ್ವಿಟರ್​ನಲ್ಲಿ ಟಾರ್ಗೆಟ್ ಮಾಡ್ತಿದ್ದ ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಮುಖ್ಯಸ್ಥೆ ರಮ್ಯಾಗೆ 'ರಮ್ಯಾ ಎಲ್ಲಿದ್ದೀಯಮ್ಮಾ' ಅಂತ ಕೇಳಿದ್ದಾರೆ.

ರಮ್ಯಾ ಎಲ್ಲಿದಿಯಮ್ಮಾ? ಎಲ್ಲಿ ನಿಮ್ಮ ಅದ್ಯಕ್ಷ ರಾಹುಲ್? ಎಲ್ಲಿ ನಿಮ್ಮ ಫೇಕ್ ಅಕೌಂಟ್ ಸೈನ್ಯ? ಎಲ್ಲಿ ನಿಮ್ಮ ತಲೆಬುಡವಿಲ್ಲದ ಟ್ವೀಟ್ಗಳು? ಎಲ್ಲೋಯ್ತು ನಿಮ್ಮ ಆಧಾರವಿಲ್ಲದ ಆರೋಪಗಳು? ಅದಕ್ಕೆ ಹೇಳೋದು ಇನ್ನೊಬ್ಬರ ಬಗ್ಗೆ ಆಪಾದನೆ ಮಾಡೋ ಮೊದಲು ತಮ್ಮ ಬಗ್ಗೆ ತಮಗೆ ತಿಳಿದಿರಬೇಕು.....🤦‍♀️ pic.twitter.com/428S861eLK

Loading...ಅಷ್ಟೆ ಅಲ್ಲ ಎಲ್ಲಿ ನಿಮ್ಮ ಅಧ್ಯಕ್ಷ ರಾಹುಲ್? ನಿಮ್ಮ ಫೇಕ್​ ಅಕೌಂಟ್​ ಸೈನ್ಯ? ಎಲ್ಲಿ ನಿಮ್ಮ ತಲೆಬುಡವಿಲ್ಲದ ಟ್ವೀಟ್​ಗಳು? ಎಲ್ಲಿ ಹೋಯಿತು ನಿಮ್ಮ ಆಧಾರವಿಲ್ಲದ ಆರೋಪಗಳು ಎಂದು ರಮ್ಯಾರನ್ನು ಪ್ರಶ್ನಿಸಿದ್ದಾರೆ ಶಿಲ್ಪಾ.

ಇನ್ನೂ ಪ್ರಕಾಶ್​ ಅವರಿಗೂ ವ್ಯಂಗ್ಯವಾಗಿಯೇ ಟ್ವೀಟ್​ ಮಾಡಿರುವ ಶಿಲ್ಪಾ, 'ಪ್ರಕಾಶ್​ ರಾಜ್​ ಜನವರಿಯಲ್ಲಿ ಹೇಳಿದ್ದು, 6 ತಿಂಗಳ ನಂತರ ಮೋದಿ ಕೇವಲ ಎಂಪಿ (ಸಂಸದ) ಎಂದು. ಆದರೆ ಇಂದು ಪ್ರಕಾಶ್​ ರೈ ತಮ್ಮ ಠೇವಣಿ ಜತೆಗೆ ಮೆದುಳನ್ನೂ ಕಳೆದುಕೊಂಡಿದ್ದಾರೆ' ಎಂದು ಬರೆದುಕೊಂಡಿದ್ದಾರೆ.ಈ ಹಿಂದೆಯೂ ರಮ್ಯಾ, ಮೋದಿಯವರನ್ನು ಟೀಕಿಸುತ್ತಾ ಟ್ವೀಟ್​ ಮಾಡಿದ್ದಾಗಲೂ ಶಿಲ್ಪಾ ಅದಕ್ಕೆ ಖಾರವಾಗಿಯೇ ಉತ್ತರಿಸಿದ್ದರು. ಆಗ ಇವರಿಬ್ಬರ ನಡುವೆ ಟ್ವೀಟ್​ ವಾರ್​ ಸಹ ನಡೆದಿತ್ತು.

First published:May 24, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...