ಆನಂದ ಅಪ್ಪುಗೊಳ ವಂಚನೆ ಪ್ರಕರಣ ಸಿಐಡಿ ತನಿಖೆ...!

news18
Updated:July 23, 2018, 11:12 PM IST
ಆನಂದ ಅಪ್ಪುಗೊಳ ವಂಚನೆ ಪ್ರಕರಣ ಸಿಐಡಿ ತನಿಖೆ...!
news18
Updated: July 23, 2018, 11:12 PM IST
- ಚಂದ್ರಕಾಂತ್ ಸುಗಂಧಿ, ನ್ಯೂಸ್ 18 ಕನ್ನಡ

ಬೆಳಗಾವಿ (ಜುಲೈ 23) :  ನಿರ್ಮಾಪಕ ಆನಂದ ಅಪ್ಪುಗೊಳ ಬಹುಕೋಟಿ ವಂಚನೆ ಪ್ರಕರಣ ಈಗ ಸಿಐಡಿಗೆ ಹಸ್ತಾಂತರವಾಗಿದೆ. ಅಪ್ಪುಗೊಳ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರ ನಿರ್ಮಾಣದ ಮೂಲಕ ಇಡೀ ಸ್ಯಾಂಡಲವುಡ್ ನಲ್ಲಿ ಹೆಸರು ಮಾಡಿದ ನಿರ್ಮಾಪಕ.

ಆದರೇ ಆತನ ಸೊಸೈಟಿಯಲ್ಲಿ ಗ್ರಾಹಕರು ಠೇವಣಿ ಇಟ್ಟಿದ್ದ ಕೋಟ್ಯಾಂತರ ರೂಪಾಯಿ ಹಣ ನುಂಗಿ ವಿಲನ್ ಆಗಿದ್ದಾ‌ನೆ.  ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಭೀಮಾಂಬಿಕಾ ಮಹಿಳಾ ಸೊಸೈಟಿಯಲ್ಲಿ ಗ್ರಾಹಕರು ಇಟ್ಟಿದ್ದ ಕೋಟ್ಯಾಂತರ ರೂಪಾಯಿ ಹಣ ವಾಪಸ್ ನೀಡಿಲ್ಲ. ಈ ಪ್ರಕರಣ 1 ಸೆಪ್ಟೆಂಬರ್ 2017 ರಲ್ಲಿ ಮೊಲದ ಭಾರಿಗೆ ಬೆಳಕಿಗೆ ಬಂದಿತ್ತು.

200 ಕೋಟಿಗೂ ಹೆಚ್ಚು ಹಣ ಅಪ್ಪುಗೊಳ ದುರ್ಬಳಕೆ ಮಾಡಿಕೊಂಡಿದ್ದರ ಬಗ್ಗೆ ಸಹಕಾರ ಇಲಾಖೆಯ ಸಹಾಯಕ ನಿಬಂಧಕರು ಖಡೇಬಜಾರ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ನಂತರ ತಪ್ಪಿಸಿಕೊಂಡಿದ್ದ ಆನಂದ ಅಪ್ಪುಗೊಳ ನನ್ನು ಬೆಳಗಾವಿ ಸಿಸಿಬಿ ಪೊಲೀಸರು ಮುಂಬೈನಲ್ಲಿ ಬಂಧಿಸಿದ್ದರು.

ಸದ್ಯ ಆನಂದ ಅಪ್ಪುಗೊಳ ಜಾಮೀನಿನ ಮೇಲೆ ಹೊರಗೆ ಬಂದಿದ್ದಾನೆ . ಈಗ ಪ್ರಕರಣ ಸಿಐಡಿಗೆ ತನಿಖೆ ಒಪ್ಪಿಸಿದ್ದು, ಸಿಐಡಿ ಪೊಲೀಸರು ನಾಳೆಯಿಂದ ತನಿಖೆ ಆರಂಭಿಸುವ ಸಾಧ್ಯತೆ ಇದೆ.

 
First published:July 23, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ