ಇಂದು ವಿಶ್ವಾಸಮತ ಸಾಬೀತು ಪ್ರಕ್ರಿಯೆ ಖಚಿತ; ವಿಶ್ವಾಸ ವ್ಯಕ್ತಪಡಿಸಿದ ಸ್ಪೀಕರ್ ರಮೇಶ್ ಕುಮಾರ್

ಶಾಸನ ನಿಯಮ 10ರ ಅಡಿಯಲ್ಲಿ ಶಾಸಕರು ವಿಶ್ವಾಸಮತ ಯಾಚನೆಯ ವೇಳೆ ಕಡ್ಡಾಯ ಹಾಜರಿರಬೇಕು ಎಂದು ಕಾನೂನು ಇದೆ. ಆದರೆ, ಸುಪ್ರೀಂ ಕೋರ್ಟ್ ಶಾಸಕರ ಕಡ್ಡಾಯ ಹಾಜರಾತಿ ಅವಶ್ಯಕತೆ ಇಲ್ಲ ಎಂದು ತೀರ್ಪು ನೀಡಿದೆ. ಹೀಗಾಗಿ ಕಾನೂನು ಗೊಂದಲ ಬಗೆಹರಿಸಲು ಅಡ್ವೋಕೇಟ್ ಜನರಲ್ ಸಲಹೆ ಪಡೆದಿದ್ದೇನೆ. ಇಂದಿನ ಸದನದಲ್ಲಿ ಈ ಎಲ್ಲಾ ಗೊಂದಲ ಬಗೆಹರಿಯುವ ಸಾಧ್ಯತೆ ಇದೆ ಎಂದು ಸ್ಪೀಕರ್ ರಮೇಶ್ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

MAshok Kumar | news18
Updated:July 22, 2019, 11:02 AM IST
ಇಂದು ವಿಶ್ವಾಸಮತ ಸಾಬೀತು ಪ್ರಕ್ರಿಯೆ ಖಚಿತ; ವಿಶ್ವಾಸ ವ್ಯಕ್ತಪಡಿಸಿದ ಸ್ಪೀಕರ್ ರಮೇಶ್ ಕುಮಾರ್
ಕೆ. ರಮೇಶ್​ ಕುಮಾರ್
  • News18
  • Last Updated: July 22, 2019, 11:02 AM IST
  • Share this:
ಬೆಂಗಳೂರು (ಜುಲೈ22); ಇಂದು ಸದನದಲ್ಲಿ ಸರ್ಕಾರದ ಬಹುಮತ ಸಾಬೀತು ಪ್ರಕ್ರಿಯೆ ನಡೆಯುವುದು ಖಚಿತ ಎಂದು ಸ್ಪೀಕರ್ ಕೆ.ಆರ್​. ರಮೇಶ್ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಹುಮತ ಯಾಚನೆಯ ಕುರಿತು ದೊಮ್ಮಲೂರಿನ ತಮ್ಮ ನಿವಾಸದ ಬಳಿ ಹೇಳಿಕೆ ನೀಡಿದ ಸ್ಪೀಕರ್ ರಮೇಶ್ ಕುಮಾರ್, “ಸದನದಲ್ಲಿ ವಿಶ್ವಾಸಮತ ನಿರ್ಣಯದ ಮೇಲಿನ ಚರ್ಚೆ ನಡೆದದ್ದು ಕೇವಲ 2 ದಿನ ಮಾತ್ರ. ಆದರೆ, ವರ್ಷಾನುಗಟ್ಟಲೆ ಕಾಲಹರಣ ಮಾಡಿ ಚರ್ಚೆ ನಡೆದಂತೆ ಬಿಂಬಿಸಲಾಗುತ್ತಿದೆ. ಸೋಮವಾರವೂ ಸಹ ಚರ್ಚೆ ನಡೆಯಲಿದೆ. ಆದರೆ, ಚರ್ಚೆಗೆ ಸಮಯ ನಗದಿ ಮಾಡಿಲ್ಲ, ಆ ಸರ್ವಾಧಿಕಾರ ನನಗಿಲ್ಲ. ಇಂದು ಸಿಎಂ ಕುಮಾರಸ್ವಾಮಿ ಸಹ ಬಹುಮತ ಸಾಬೀತುಪಡಿಸಲು ಒಪ್ಪಿದ್ದಾರೆ. ಹೀಗಾಗಿ ಇಂದು ಬಹುಮತ ಯಾಚನೆ ನಡೆಯುವುದು ಖಚಿತ ಎಂದು ತಿಳಿಸಿದ್ದಾರೆ.

ಅತೃಪ್ತ ಶಾಸಕರ ರಾಜೀನಾಮೆ ಅಂಗೀಕಾರದ ಕುರಿತಾಗಿ ಮಾಹಿತಿ ನೀಡಿದ ಅವರು, “ಕ್ರಮಬದ್ಧವಾಗಿ ರಾಜಿನಾಮೆ ನೀಡಿರುವ ಶಾಸಕರಿಗೆ ನೋಟೀಸ್ ನೀಡಿ ವಿಚಾರಣೆಗೆ ಕರೆದಿದ್ದೇನೆ. ವಿಚಾರಣೆಗಾಗಿ ವಿವಿಧ ದಿನಾಂಕವನ್ನ ನಿಗದಿ ಮಾಡಿ ಈಗಾಗಲೇ ನೋಟೀಸ್ ನೀಡಲಾಗಿದೆ. ಆದರೆ, ಈವರೆಗೆ ನೋಟೀಸ್ ಪಡೆದ ಯಾವ ಶಾಸಕರೂ ವಿಚಾರಣೆಗೆ ಬಂದಿಲ್ಲ.

ಶಾಸನ ನಿಯಮ 10ರ ಅಡಿಯಲ್ಲಿ ಶಾಸಕರು ವಿಶ್ವಾಸಮತ ಯಾಚನೆಯ ವೇಳೆ ಕಡ್ಡಾಯ ಹಾಜರಿರಬೇಕು ಎಂದು ಕಾನೂನು ಇದೆ. ಆದರೆ, ಸುಪ್ರೀಂ ಕೋರ್ಟ್ ಶಾಸಕರ ಕಡ್ಡಾಯ ಹಾಜರಾತಿ ಅವಶ್ಯಕತೆ ಇಲ್ಲ ಎಂದು ತೀರ್ಪು ನೀಡಿದೆ. ಹೀಗಾಗಿ ಕಾನೂನು ಗೊಂದಲ ಬಗೆಹರಿಸಲು ಅಡ್ವೋಕೇಟ್ ಜನರಲ್ ಸಲಹೆ ಪಡೆದಿದ್ದೇನೆ. ಇಂದಿನ ಸದನದಲ್ಲಿ ಈ ಎಲ್ಲಾ ಗೊಂದಲ ಬಗೆಹರಿಯುವ ಸಾಧ್ಯತೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಒಗ್ಗಟ್ಟು ಪ್ರದರ್ಶಿಸಿದರೂ ಅತೃಪ್ತ ಶಾಸಕರಿಗೆ ಕಾಡ್ತಿದೆ ಚಿಂತೆ; ಸರ್ಕಾರ ಬಿದ್ದರೆ ರೆಬೆಲ್​ಗಳ ರಾಜಕೀಯ ಭವಿಷ್ಯವೇ ಅಸ್ತಂಗತ?

First published:July 22, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading