ಎರಡು ನದಿ ಹರಿದರೂ ರಾಯಚೂರು ಜಿಲ್ಲೆಯಲ್ಲಿ ನೀರಿಗೆ ಪರದಾಟ - ಶುದ್ಧ ಕುಡಿಯುವ ನೀರು ಗಗನ ಕುಸುಮ

ಜಿಲ್ಲೆಯಲ್ಲಿ 560 ಕ್ಕೂ ಕಡೆ ಶುದ್ದ ನೀರಿನ ಘಟಕಗಳಿವೆ. ಅವುಗಳಲ್ಲಿ ಸುಮಾರು 187 ಶುದ್ದ ಕುಡಿಯುವ ನೀರಿನ ಘಟಕಗಳು ಬಳಕೆಯಾಗದೆ ಹಾಳಾಗಿವೆ

ಶುದ್ದ ನೀರಿನ ಘಟಕ

ಶುದ್ದ ನೀರಿನ ಘಟಕ

  • Share this:
ರಾಯಚೂರು(ಜ. 29): ಜಿಲ್ಲೆಯಲ್ಲಿ ಎರಡು ನದಿಗಳಿವೆ. ಆದರೂ, ಶುದ್ದ ಕುಡಿಯುವ ನೀರು ಸಿಗುತ್ತಿಲ್ಲ, ಬೇಸಿಗೆಯಲ್ಲಿ ಜಿಲ್ಲೆಯ ಅನೇಕ ಗ್ರಾಮಗಳು ನೀರಿಗಾಗಿ ಪರದಾಡುವಂತಾಗಿದೆ. ಈ ಎಲ್ಲಾ ಕಾರಣಕ್ಕೆ ಹಿಂದಿನ ಸರಕಾರದಲ್ಲಿ ನೂತನ ಯೋಜನೆ ಜಾರಿಗೆ ಮುಂದಾಗಿತ್ತು. ಆದರೆ, ಸರಕಾರ ಬದಲಾದಂತೆ ಈ ಯೋಜನೆ ನೆನೆಗುದಿಗೆ ಬಿದ್ದಿದೆ ಎನ್ನಲಾಗಿದೆ. 

ಹಿಂದಿನ ಸರಕಾರದಲ್ಲಿ ಗ್ರಾಮೀಣಾಭಿವೃದ್ದಿ ಸಚಿವರಾಗಿದ್ದ ಕೃಷ್ಣ ಭೈರೇಗೌಡರು ರಾಯಚೂರು ಜಿಲ್ಲೆಯಿಂದ ಜಲಧಾರೆ ಎಂಬ ಸರ್ವ ಋತು ಕುಡಿವ ನೀರು ಒದಗಿಸುವ ಯೋಜನೆಗೆ ಪ್ರಸ್ತಾವನೆ ಸಿದ್ದವಾಗಿತ್ತು, ಈ ಕುರಿತು ಅಂದು ಕೃಷ್ಣಾ ಭೈರೇಗೌಡರ ಕೃಷ್ಣಾ ನದಿ ಮೂಲದಿಂದ ನೀರು ಎತ್ತಿಕೊಂಡು ಜಿಲ್ಲೆಯಲ್ಲಿ 7 ತಾಲೂಕಿನಲ್ಲಿಯೂ ನೀರನ್ನು ಒದಗಿಸುವ ಯೋಜನೆ ಸಿದ್ದ ಮಾಡಲು ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಈ ಕುರಿತು ಅಂದು ಜಿಲ್ಲೆಯಲ್ಲಿ ಒಂದು ಕಾರ್ಯಾಗಾರವು ಸಹ ನಡೆದಿತ್ತು. ಸುಮಾರು 5400 ಕೋಟಿ ರೂಪಾಯಿ ಬೃಹತ್ ಯೋಜನೆಗೆ ಪೂರ್ವಭಾವಿ ಸಭೆ ನಡೆಸಿದ್ದರು, ಆದರೆ, ಅಂದು ಸಮ್ಮಿಶ್ರ ಸರಕಾರವು ಹೋಗಿ ಬಿಜೆಪಿ ಸರಕಾರ ಬಂದಿದೆ. ಹೊಸ ಸರಕಾರದಲ್ಲಿ ಈ ಯೋಜನೆಗೆ ಮತ್ತೆ ಚಾಲನೆ ನೀಡಬೇಕಾಗಿದೆ, ಹಿಂದಿನ ಸರಕಾರದ ಯೋಜನೆಗಳನ್ನು ಮುಂದುವರಿಸುವ ಕುರಿತು ಇಂದಿನ ಸರಕಾರ ಎಷ್ಟರಮಟ್ಟಿಗೆ ಸ್ಪಂದಿಸುತ್ತೆ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ.

ಆದರೆ, ಈ ಬಗ್ಗೆ ಜಿಲ್ಲಾ ಪಂಚಾಯತ್ ನಿರ್ವಾಹಣಾಧಿಕಾರಿಗಳು ಈ ಯೋಜನೆ ಮುಂದುವರಿದಿದೆ, ಈಗಾಗಲೇ ಯೋಜನೆಯ ಡಿಪಿಆರ್ ತಯಾರಾಗುತ್ತಿದೆ ಎಂದು ಹೇಳಿದ್ದಾರೆ. ಈ ಮಧ್ಯೆ ಜಿಲ್ಲೆಯಲ್ಲಿ ಕುಡಿವ ನೀರಿದ್ದು ದೊಡ್ಡ ಸಮಸ್ಯೆ ಇದೆ.

ಜಿಲ್ಲೆಯಲ್ಲಿ ಒಟ್ಟು 883 ಗ್ರಾಮಗಳಲ್ಲಿ 457 ಕುಡಿವ ಗಳ ಕುಡಿಯುವ ನೀರಿನಲ್ಲಿ ಫ್ಲೋರೈಡ್, ಆರ್ಸೆನಿಕ್ ಸೇರಿದಂತೆ ಕುಡಿಯಲು ಯೋಗ್ಯವಲ್ಲದ ನೀರು ಇವೆ, ಇದೇ ನೀರನ್ನೆ ಕುಡಿದು ಜಿಲ್ಲೆಯ ಜನರು ಅನೇಕ ರೋಗಗಳಿಂದ ಬಳಲುತ್ತಿದ್ದಾರೆ. ಕೆಲವು ಕಡೆ ಅಧಿಕ ಫ್ಕೋರೈಡ್ ಅಂಶವಿರುವುದರಿಂದ ಮೂಳೆ ಸಮಸ್ಯೆ ಇದೆ, ಇನ್ನೂ ಬೆಟ್ಟದೂರ ತಾಂಡಾದಲ್ಲಿ ನೀರಿನಿಂದಾಗಿ ಕಿಡ್ನಿಯಲ್ಲಿ ಕಲ್ಲುಗಳಿವೆ ಎಂಬ ವರದಿ ಇದೆ.

ಈ ಮಧ್ಯೆ ಜಿಲ್ಲೆಯಲ್ಲಿ 560 ಕ್ಕೂ ಕಡೆ ಶುದ್ದ ನೀರಿನ ಘಟಕಗಳಿವೆ. ಅವುಗಳಲ್ಲಿ ಸುಮಾರು 187 ಶುದ್ದ ಕುಡಿಯುವ ನೀರಿನ ಘಟಕಗಳು ಬಳಕೆಯಾಗದೆ ಹಾಳಾಗಿವೆ. ಶುದ್ದ ಹಾಗೂ ನಿರಂತರ ಕುಡಿಯುವ ನೀರು ನೀಡಬೇಕೆಂದು ಜನರು ಆಗ್ರಹಿಸಿದ್ದಾರೆ.

ಈ ಬಗ್ಗೆ ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳನ್ನು ಕೇಳಿದರೆ  'ಶುದ್ದ ಕುಡಿವ ನೀರಿನ ಘಟಕಗಳ ನಿರ್ವಹಣೆಗೆ ಗುತ್ತಿಗೆ ನೀಡಲು ಮುಂದಾಗಿದ್ದು, ಗುತ್ತಿಗೆ ಪಡೆಯಲು ಯಾರು ಮುಂದೆ ಬರುತ್ತಿಲ್ಲ. ಈಗ ಶುದ್ದ ಕುಡಿಯುವ ನೀರಿನ ಘಟಕಗಳನ್ನು ಗ್ರಾಮ ಪಂಚಾಯತ್ ಯಿಂದ ನಿರ್ವಹಿಸಲು ಯೋಜನೆ ಸಿದ್ದಪಡಿಸಲಾಗುತ್ತಿದೆ' ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಪೊಲೀಸ್ ಅಧಿಕಾರಿಯ ಪರಿಸರ ಪ್ರೇಮ: ರಾಯಚೂರು ಎಸ್​ಪಿಯಿಂದ 5 ಲಕ್ಷ ಮರ ಬೆಳೆಸಲು ಸಿದ್ದತೆ 

ಈ ಮಧ್ಯೆ ರಾಯಚೂರು ಜಿಲ್ಲೆಯಲ್ಲಿ ಒಟ್ಟು 14 ಬಹು ಗ್ರಾಮ ಕುಡಿಯುವ ನೀರಿನ ಯೋಜನೆಗಳಿವೆ, ಆದರೆ, ಈ ಯೋಜನೆಗಳು 2 ದಶಕಗಳಾದರೂ ಪೂರ್ಣಗೊಂಡಿಲ್ಲ, ಹಲವು ಸಮಸ್ಯೆಗಳಿಂದ ಬಳಲುತ್ತಿರುವ ರಾಯಚೂರು ಜಿಲ್ಲೆಯಲ್ಲಿ ಜಲಧಾರೆ ಯೋಜನೆ ಜಾರಿಯಾಗುವ ಹಂತದಲ್ಲಿತ್ತು, ಆದರೆ ಸರಕಾರ ಬದಲಾದಂತೆ ಈ ಯೋಜನೆಯ ಸ್ಥಗಿತಗೊಂಡಿದೆ, ರಾಜಕೀಯಕ್ಕಾಗಿ ಈ ಯೋಜನೆಯನ್ನು ಕೈ ಬಿಡಬಾರದು ಎಂದು ಜನತೆ ಆಗ್ರಹಿಸಿದ್ದಾರೆ.
First published: