• Home
  • »
  • News
  • »
  • state
  • »
  • Bengaluru: 'ಕೋಳಿ ಕೂಗೋದರಿಂದ ನಿದ್ದೆ ಬರ್ತಿಲ್ವಂತೆ' - ಬೆಂಗಳೂರು ಪೊಲೀಸರಿಗೆ ಬಂತು ವಿಶೇಷ ದೂರು

Bengaluru: 'ಕೋಳಿ ಕೂಗೋದರಿಂದ ನಿದ್ದೆ ಬರ್ತಿಲ್ವಂತೆ' - ಬೆಂಗಳೂರು ಪೊಲೀಸರಿಗೆ ಬಂತು ವಿಶೇಷ ದೂರು

ಕೋಳಿ

ಕೋಳಿ

ಕೋಳಿ ಕೂಗುವುದರಿಂದ ನಮ್ಮ ನಿದ್ದೆ ಹಾಳಾಗುತ್ತಿದೆ. ಕೋಳಿಯಿಂದ ನಮಗೆ ನಿದ್ದೆಯೇ ಬರ್ತಿಲ್ಲ ಅಂತ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ. ಬೆಂಗಳೂರಿನ ಜೆಪಿ ನಗರದ 8ನೇ ಹಂತದಲ್ಲಿ ಇಂತಹ ವಿಶೇಷ ಘಟನೆ ನಡೆದಿದೆ.

  • News18 Kannada
  • Last Updated :
  • Bangalore [Bangalore], India
  • Share this:

ಬೆಂಗಳೂರು: ಅದೊಂದು ಕಾಲ ಇತ್ತು, ಕೋಳಿ ಕೂಗುತ್ತಿದ್ದಂತೆ ನಿದ್ದೆಯಿಂದ (Sleeping) ಎಚ್ಚರಗೊಳ್ಳುತ್ತಿದ್ದ ಜನರು ತಮ್ಮ ತಮ್ಮ ಕೆಲಸದಲ್ಲಿ ತೊಡಗಿಕೊಳ್ಳುತ್ತಿದ್ದರು. ಇಂದಿಗೂ ಕೋಳಿ ಗ್ರಾಮೀಣ ಭಾಗದಲ್ಲಿ (Village People ) ಅಲರಾಂ (Alarm Clock) ಇದ್ದಂತೆ. ಮುಂಜಾನೆ ಆಗುತ್ತಿದ್ದಂತೆ ಮನೆ ಹಟ್ಟಿಯಲ್ಲಿರೋ ಕೋಳಿ ಅಥವಾ ಪಕ್ಕದ ಮನೆಯಲ್ಲಿರುವ ಕೋಳಿ ಕೂಗುತ್ತಿದ್ದಂತೆ ಗ್ರಾಮೀಣ ಭಾಗದ ಜನರು ತಮ್ಮ ತಮ್ಮ ಬ್ಯುಸಿಯಾಗುತ್ತಾರೆ. ಅದೆಷ್ಟೇ ಹೆಚ್ಚು ಕೆಲಸ ಮಾಡಿದ್ದ ವೇಳೆ ಮೈರೆತು ಹಾಸಿಗೆ ಮೇಲೆ ಮಲಗಿರುವ ಜನರನ್ನು ಕೋಳಿ ಕೂಗು ಎಚ್ಚರುಗೊಳ್ಳುವಂತೆ ಮಾಡುತ್ತದೆ. ಆದರೆ ಇಲ್ಲಿ ಒಂದಷ್ಟು ಮಂದಿ ಕೋಳಿ ಕೂಗುವುದರಿಂದ ನಮ್ಮ ನಿದ್ದೆ ಹಾಳಾಗುತ್ತಿದೆ. ಕೋಳಿಯಿಂದ ನಮಗೆ ನಿದ್ದೆಯೇ ಬರ್ತಿಲ್ಲ ಅಂತ ಪೊಲೀಸ್​ ಠಾಣೆ (Police Station) ಮೆಟ್ಟಿಲೇರಿದ್ದಾರೆ.


ಸಾಮಾಜಿಕ ಜಾಲತಾಣದಲ್ಲಿ ಪೊಲೀಸರಿಗೆ ದೂರು


ಬೆಂಗಳೂರಿನ  (Bengaluru) ಜೆಪಿ ನಗರದ (JP Nagar) 8ನೇ ಹಂತದ ಸ್ಥಳೀಯ ನಿವಾಸಿಗಳು ಪೊಲೀಸರಿಗೆ ದೂರು ನೀಡಿದ್ದಾರೆ.  ಹೌದು, ಬೆಂಗಳೂರಿನ ಜೆಪಿ ನಗರದ 8ನೇ ಹಂತದ, ಆರ್ಯ ಹಂಸ ಗ್ರ್ಯಾಂಡ್ ಅಪಾರ್ಟ್‌ಮೆಂಟ್ ಪಕ್ಕ ಇರುವ ನಿವಾಸಿಯೊಬ್ಬರು ಕೋಳಿ ಹಾಗೂ ಬಾತುಕೋಳಿ ಸಾಕಾಣೆ ಮಾಡ್ತಿದ್ದಾರೆ. ಇದರಿಂದ ಸ್ಥಳೀಯ ನಿವಾಸಿಗಳು ಟ್ವಿಟರ್​ ಮೂಲಕ ತಮಗೆ ಆಗುತ್ತಿರುವ ತೊಂದರೆಯನ್ನು ಸಾಮಾಜಿಕ ಜಾಲತಾಣ ಮೂಲಕ ಪೊಲೀಸರಿಗೆ ದೂರು ನೀಡಿದ್ದಾರೆ. ಕೋಳಿ ಕೂಗುತ್ತಿರುವ ಕಾರಣ ಇಲ್ಲಿನ ಜನರಿಗೆ ನಿದ್ದೆ ಬರುತ್ತಿಲ್ಲ. ಇದರಿಂದ ಅಕ್ಕ ಪಕ್ಕದ ಜನರಿಗೆ ಹೆಚ್ಚು ಸಮಸ್ಯೆ ಆಗ್ತಿದೆ ಎಂದು ಬರೆದುಕೊಂಡಿದ್ದಾರೆ.


ಟ್ವಿಟರ್​​ನಲ್ಲಿ ದೂರು


ಜೆಪಿ ನಗರದ ಮನೆಯೊಂದರಲ್ಲಿ ಕೋಳಿ ಮತ್ತು ಬಾತುಕೋಳಿ ಸಾಕಾಣೆ ಮಾಡಲಾಗುತ್ತಿದೆ. ಆದರೆ ಕೋಳಿಗಳು ಕೂಗುತ್ತಿರುವ ಕಾರಣ ಜನರಿಗೆ ನಿದ್ದೆ ಬರುತ್ತಿಲ್ಲವಂತೆ. ಮನೆಯಲ್ಲಿರುವ ಎರಡು ತಿಂಗಳ ಮಗು ಬೇಗ ನಿದ್ದೆಯಿಂದ ಎಚ್ಚರಗೊಳ್ಳುತ್ತಿದೆ. ಕೋಳಿ ಕೂಗುವುದರಿಂದ ನಿದ್ದೆಗೆ ಸಮಸ್ಯೆ ಆಗುತ್ತಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಟ್ವಿಟರ್​ನಲ್ಲಿ ನಗರ ಪೊಲೀಸ್ ಕಮಿಷನರ್, ದಕ್ಷಿಣ ವಿಭಾಗ ಡಿಸಿಪಿಗೆ ಟ್ಯಾಗ್ ಮಾಡಿ ದೂರು ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.


ಇದನ್ನೂ ಓದಿ: Bengaluru: ಇಡೀ ದೇಶದಲ್ಲಿ ಬೆಂಗಳೂರಲ್ಲಿ ಮಾತ್ರ ಸಿಗುವ ಚಿಕಿತ್ಸೆಯಿದು!


ಕೋಳಿ ಸಾಕುತ್ತಿರೋ ಮನೆ ಮಾಲೀಕ ಹೇಳಿದ್ದೇನು?


ಇನ್ನು, ಈ ಬಗ್ಗೆ ನ್ಯೂಸ್​18 ಕನ್ನಡದೊಂದಿಗೆ ಮಾತನಾಡಿದ ಮನೆ ಮಾಲೀಕ ರವಿ ಅವರು, ನಮ್ಮ ಮನೆಯಲ್ಲಿ ನಾವು ಕೋಳಿ ಸಾಕೋದಕ್ಕೂ ಅನುಮತಿ ತೆಗೆದುಕೊಳ್ಳಬೇಕಾ? ಈಗ ನಮ್ಮ ನಮ್ಮ ಮನೆಯಲ್ಲಿ 10 ಕೋಳಿ, ಟರ್ಕಿ ಹಾಗೂ ಬಾತುಕೋಳಿ ಇದೆ. ಆದರೆ ಅಪಾರ್ಟ್‌ಮೆಂಟ್ ನಿವಾಸಿಗಳು ಮಗುವಿಗೆ ನಿದ್ದೆ ಬರುತ್ತಿಲ್ಲ ಎಂದ ದೂರು ಕೊಟ್ಟಿದ್ದಾರೆ. ಹೀಗಾಗಿ ಪೊಲೀಸರು ಮನೆ ಬಳಿ ಬಂದು ಮಾಹಿತಿ ಪಡೆದುಕೊಂಡಿದ್ದಾರೆ. ಕೋಳಿಯನ್ನು ಇಟ್ಟುಕೊಳ್ಳಬೇಡಿ ಎಂದು ಸಲಹೆ ನೀಡಿದ್ದಾರೆ. ಅದಕ್ಕೆ ಈಗಾಗಲೇ ಟರ್ಕಿ ಕೋಳಿ ಎಲ್ಲವನ್ನು ನನ್ನ ಸ್ನೇಹಿತರಿಗೆ ಕೊಟ್ಟಿದ್ದೇನೆ. ಎಲ್ಲೆಲ್ಲಿಂದನೋ ಬರುತ್ತಾರೆ. ಇಲ್ಲಿ ಕೋಳಿ ಕೂಗಿದರೆ ಸಮಸ್ಯೆ ಅಂತ ಹೇಳುತ್ತಾರೆ ಏನು ಮಾಡೋಣಾ ಅಂತ ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ.


ಅಪಾರ್ಟ್​​ಮೆಂಟ್


ಇದನ್ನೂ ಓದಿ: Bengaluru: ರಾಜ್ಯಾದ್ಯಂತ ಸ್ತಬ್ಧವಾಗುತ್ತಾ ಸಾರಿಗೆ ಸಂಚಾರ? ಮುಷ್ಕರಕ್ಕೆ ಸಜ್ಜಾದ ನೌಕರರು!


"ಯಾವುದೋ ಟೆನ್ಶನ್​ ತಗೊಂಡು ಬಂದಿ ನಮ್ಮ ಮೇಲೆ ಹಾಕ್ತಾರೆ"


ನಾವೇನಾದರೂ ಸಣ್ಣ ದೂರು ನೀಡಬೇಕು ಎಂದರೇ ಪೊಲೀಸರು ಅಷ್ಟು ಮಹತ್ವ ಕೊಡುವುದಿಲ್ಲ. ಆದರೆ ಯಾರೋ ಟ್ವಿಟರ್​, ಫೇಸ್​​ಬುಕ್​​ ಮೂಲಕ ಒಂದು ಮನವಿ ಮಾಡಿದರೆ, ಕೂಡಲೇ ನಮ್ಮ ಮನೆ ಬಳಿ ಬಂದು ಸಲಹೆ ನೀಡಿದ್ದಾರೆ. ಅಪಾರ್ಟ್​​ಮೆಂಟ್​ನಲ್ಲಿ ವಾಸಿಸುವವರು ಬೇರೆ ಬೇರೆ ಯಾವುದೋ ಟೆನ್ಶನ್​​ಗಳನ್ನು ತಂದು ನಮ್ಮಂತಹ ಸ್ಥಳೀಯ ನಿವಾಸಿಗಳ ಮೇಲೆ ತೋರಿಸುತ್ತಾರೆ. ಇದಕ್ಕೆ ಏನು ಮಾಡೋಕೆ ಆಗುತ್ತೆ ಅಂತ ಪ್ರಶ್ನೆ ಮಾಡಿದ್ದಾರೆ.

Published by:Sumanth SN
First published: