HOME » NEWS » State » PRO KANNADA FIGHTER VATAL NAGARAJ DONT SUPPORT TOMORROWS KARNATAKA BANDH LG

ನಾಳಿನ ಬಂದ್​ಗೆ ನನ್ನ ಬೆಂಬಲ ಇಲ್ಲ, ಮಾರ್ಚ್​ 5ಕ್ಕೆ ವಿಧಾನಸೌಧ ಮುತ್ತಿಗೆ; ವಾಟಾಳ್ ನಾಗರಾಜ್

ಕೋಡಿಹಳ್ಳಿ ಅವರಿಂದ ನಾನು ಬುದ್ಧಿ ಹೇಳಿಸಿಕೊಳ್ಳಬೇಕಾಗಿಲ್ಲ.  ಏನು ಮಾಡಬೇಕು, ಏನು ಮಾಡಬಾರದು ಎಂದು ನನಗೆ ಗೊತ್ತಿದೆ. ಮಾರ್ಚ್​​ 5ರಂದು ನಾನೂ ಹೋರಾಟ ಮಾಡುತ್ತೇನೆ ನೋಡಿ.

news18-kannada
Updated:February 12, 2020, 3:55 PM IST
ನಾಳಿನ ಬಂದ್​ಗೆ ನನ್ನ ಬೆಂಬಲ ಇಲ್ಲ, ಮಾರ್ಚ್​ 5ಕ್ಕೆ ವಿಧಾನಸೌಧ ಮುತ್ತಿಗೆ; ವಾಟಾಳ್ ನಾಗರಾಜ್
ವಾಟಾಳ್ ನಾಗರಾಜ್
  • Share this:
ಬೆಂಗಳೂರು(ಫೆ.12): ಸರೋಜಿನಿ ಮಹಿಷಿ ವರದಿ ಜಾರಿ ಮಾಡುವಂತೆ ಆಗ್ರಹಿಸಿ ನಾಳೆ ಕರೆ ಕೊಟ್ಟಿರುವ ಕರ್ನಾಟಕ ಬಂದ್​ಗೆ ಬೆಂಬಲ ನೀಡುವುದಿಲ್ಲ ಎಂದು ಕನ್ನಡಪರ ಹೋರಾಟಗಾರ ವಾಟಾಳ್​ ನಾಗರಾಜ್​ ಸ್ಪಷ್ಟನೆ ನೀಡಿದ್ದಾರೆ.

ನ್ಯೂಸ್​ 18 ಕನ್ನಡದ ಜೊತೆ ಮಾತನಾಡಿದ ಅವರು, "ನಾಳೆ ನಡೆಯಲಿರುವ ಕರ್ನಾಟಕ ಬಂದ್​ಗೆ ನನ್ನ ಬೆಂಬಲವಿಲ್ಲ. ವರದಿ ಜಾರಿಗೆ ಪೂರಕ ಸಮಿತಿ ರಚನೆ ಮಾಡುವ ವೇಳೆ ನಾನಿದ್ದೆ. ಸರೋಜಿನಿ ಮಹಿಷಿಯವರನ್ನು ನೇಮಿಸಿದ್ದೇ ನಾನು. ಇವತ್ತು ಹೋರಾಟ ಮಾಡುತ್ತಿರುವವರಿಗೆ ಇತಿಹಾಸ ಗೊತ್ತಿಲ್ಲ," ಎಂದು ಕಿಡಿಕಾರಿದರು.

ಸರೋಜಿನಿ ಮಹಿಷಿ ವರದಿ ಜಾರಿಗೆ ಒತ್ತಾಯ; ಪ್ರತಿಭಟನಾಕಾರರು ಬಂದ್ ಕೈಬಿಡುವ ವಿಶ್ವಾಸವಿದೆ; ಗೋವಿಂದ ಕಾರಜೋಳ

ನಾಳಿನ ಬಂದ್​ಗೆ ನನ್ನನ್ನು ಯಾರೂ ಕರೆದಿಲ್ಲ‌. ಯಾರೊಬ್ಬರೂ ನಮ್ಮ ಬೆಂಬಲ ಕೇಳಿಲ್ಲ. ಸುಳ್ಳು ಹೇಳಬಾರದು. ಮಾರ್ಚ್​​ 5ಕ್ಕೆ ಹೋರಾಟ ಮಾಡಿ, ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಹೇಳಿದರು.

ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಕಿಡಿ

ಇದೇ ವೇಳೆ, ವಾಟಾಳ್​ ನಾಗರಾಜ್​ ಕೋಡಿಹಳ್ಳಿ ಚಂದ್ರಶೇಖರ್​ ವಿರುದ್ಧ ತೀವ್ರ ಕಿಡಿಕಾರಿದರು. ವ್ಯಕ್ತಿಗತ ಪ್ರತಿಷ್ಠೆ ಬಿಟ್ಟು ಒಂದಾಗಬೇಕು ಎನ್ನುವ ಕೋಡಿಹಳ್ಳಿ ಹೇಳಿಕೆಗೆ ವಾಟಾಳ್​ ಗರಂ ಆದರು. " ಕೋಡಿಹಳ್ಳಿ ಅವರಿಂದ ನಾನು ಬುದ್ಧಿ ಹೇಳಿಸಿಕೊಳ್ಳಬೇಕಾಗಿಲ್ಲ.  ಏನು ಮಾಡಬೇಕು, ಏನು ಮಾಡಬಾರದು ಎಂದು ನನಗೆ ಗೊತ್ತಿದೆ. ಮಾರ್ಚ್​​ 5ರಂದು ನಾನೂ ಹೋರಾಟ ಮಾಡುತ್ತೇನೆ ನೋಡಿ. ಅವತ್ತು ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ," ಎಂದರು.

ಸಾಲದ ಸುಳಿಯಲ್ಲಿ ಸಿಲುಕಿದ್ದವನಿಗೆ ಬಂಪರ್ ಲಾಟರಿ; ಕೇರಳದ ದಿನಗೂಲಿ ಕಾರ್ಮಿಕ ಈಗ 12 ಕೋಟಿ ಒಡೆಯ!
Youtube Video
First published: February 12, 2020, 3:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories