ಗುಂಡಾರ್ ನದಿ ಜೊತೆ ಕಾವೇರಿ ನದಿ ಜೋಡಣೆಗೆ ಕನ್ನಡಪರ ಹೋರಾಟಗಾರರ ಆಕ್ರೋಶ; ಗಡಿಯಲ್ಲಿ ರಸ್ತೆ ತಡೆದು ಪ್ರತಿಭಟನೆ

ಈಗಾಗಲೇ ಕೇಂದ್ರ ಸರ್ಕಾರ ವೆಲ್ಲೂರು, ವೈಗೈ ಮತ್ತು ಗುಂಡಾರ್ ನದಿಗಳ ಜೊತೆ ಕಾವೇರಿ ನದಿ ಜೋಡಣೆ ಕಾಮಗಾರಿಗೆ 6941 ಕೋಟಿ ಹಣ ಬಿಡುಗಡೆ ಮಾಡಿದೆ . ನಾಲ್ಕು ನದಿಗಳ ಜೋಡಣೆಗಾಗಿ 118 ಕಿ.ಮಿ ಕಾಲುವೆ ನಿರ್ಮಾಣ  ಮಾಡಲು ನಿನ್ನೆ ತಮಿಳುನಾಡು ಸರ್ಕಾರ ಶಂಕು ಸ್ಥಾಪನೆ ಸಹ ಮಾಡಿದೆ.

ವಾಟಾಳ್ ನಾಗರಾಜ್

ವಾಟಾಳ್ ನಾಗರಾಜ್

  • Share this:
ಆನೇಕಲ್(ಮಾ.03): ಕಾವೇರಿ ನದಿ ಹಂಚಿಕೆ ವಿವಾದ ಕರ್ನಾಟಕ ಮತ್ತು ತಮಿಳುನಾಡು ನಡುವೆ ಹಲವು ದಶಕಗಳಿಂದ ನಡೆಯುತ್ತಿದ್ದು , ಇದೀಗ ಕಾವೇರಿ ನದಿ ಹಾಗೂ ಗುಂಡಾರ್ ನದಿ ಜೋಡಣೆಗೆ ಮುಂದಾಗಿರುವ ತಮಿಳುನಾಡು ಸರ್ಕಾರ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಕನ್ನಡ ಒಕ್ಕೂಟ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನೂರಾರು ಕನ್ನಡ ಪರ ಹೋರಾಟಗಾರರು ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಅತ್ತಿಬೆಲೆ ಗಡಿಯಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ .

ಈ ವೇಳೆ ಪೊಲೀಸರೊಂದಿಗೆ ವಾಗ್ವಾದ ನಡೆಸಿ ಹೆದ್ದಾರಿ ತಡೆಗೆ ಮುಂದಾದ ವಾಟಾಳ್ ನಾಗರಾಜ್ , ಸಾರಾ ಗೋವಿಂದ್ ಸೇರಿದಂತೆ ಹಲವರನ್ನು ವಶಕ್ಕೆ ಪಡೆದ ಅತ್ತಿಬೆಲೆ ಪೊಲೀಸರು ಬಸ್ಸಿನಲ್ಲಿ ಕರೆದೊಯ್ದು ಠಾಣೆ ಬಳಿ ಬಿಟ್ಟು ಕಳುಹಿಸಿದ್ದಾರೆ .

ಇದಕ್ಕೂ ಮೊದಲು ಮಾಧ್ಯಮಗಳೊಂದಿಗೆ ಮಾತನಾಡಿದ ವಾಟಾಳ್ ನಾಗರಾಜ್ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ . ಈಗಾಗಲೇ ಕೇಂದ್ರ ಸರ್ಕಾರ ವೆಲ್ಲೂರು, ವೈಗೈ ಮತ್ತು ಗುಂಡಾರ್ ನದಿಗಳ ಜೊತೆ ಕಾವೇರಿ ನದಿ ಜೋಡಣೆ ಕಾಮಗಾರಿಗೆ 6941 ಕೋಟಿ ಹಣ ಬಿಡುಗಡೆ ಮಾಡಿದೆ . ನಾಲ್ಕು ನದಿಗಳ ಜೋಡಣೆಗಾಗಿ 118 ಕಿ.ಮಿ ಕಾಲುವೆ ನಿರ್ಮಾಣ  ಮಾಡಲು ನಿನ್ನೆ ತಮಿಳುನಾಡು ಸರ್ಕಾರ ಶಂಕು ಸ್ಥಾಪನೆ ಸಹ ಮಾಡಿದೆ.

ರಾಸಲೀಲೆ ವಿಡಿಯೋ ರಿಲೀಸ್; ಅಜ್ಞಾತ ಸ್ಥಳದಿಂದಲೇ ರಮೇಶ್ ಜಾರಕಿಹೊಳಿ ಕಾನೂನು ಹೋರಾಟಕ್ಕೆ ಸಜ್ಜು

ಇದು ಕನ್ನಡಿಗರಿಗೆ ಕೇಂದ್ರ ಸರ್ಕಾರ ಮಾಡಿದ ಅವಮಾನ‌. ಕೇಂದ್ರ ಸರ್ಕಾರ ರಾಜ್ಯದ ನೀರಾವರಿ ಯೋಜನೆಗಳಿಗೆ ಹಣ ನೀಡದೇ ಇರಬಹುದು ತಾರತಮ್ಯ ಮಾಡುತ್ತಿದೆ .  ಇಷ್ಟಾದರೂ ಸಿಎಂ ಮತ್ತು ನಿರಾವರಿ ಮತ್ತು ಗೃಹ ಮಂತ್ರಿ ಕತ್ತೆ ಕಾಯಲು ಹೋಗಬೇಕು . ಇದೇ ತಿಂಗಳು 27ನೇ ತಾರೀಖಿನ ಒಳಗೆ ಕಾಮಗಾರಿ ರದ್ದು ಮಾಡಿಸಬೇಕು . ಇಲ್ಲವಾದರೆ ಸಿಎಂ ಸೇರಿದಂತೆ ಸಂಬಂಧಪಟ್ಟ ಸಚಿವರು ರಾಜೀನಾಮೆ ‌ನೀಡಬೇಕು ಎಂದು ಆಗ್ರಹಿಸಿದ ವಾಟಾಳ್ ನಾಗರಾಜ್ ಎಲ್ಲಾ ಕನ್ನಡ ಪರ ಸಂಘಟನೆಗಳ ಜೊತೆ ಚರ್ಚಿಸಿ ಕರ್ನಾಟಕ ಬಂದ್ಗೆ ಕರೆ ನೀಡಬೇಕಾಗುತ್ತದೆ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಎಚ್ಚರಿಸಿದ್ದಾರೆ.

ನಿರ್ಮಾಪಕ ಮತ್ತು ಕನ್ನಡಪರ ಹೋರಾಟಗಾರ ಸಾ ರಾ ಗೋವಿಂದ್ ಮಾತನಾಡಿ ತಮಿಳುನಾಡು ವಿಧಾನಸಭೆ ಚುನಾವಣೆ ದೃಷ್ಟಿಯಲ್ಲಿ ಇಟ್ಟುಕೊಡಿರುವ ಕೇಂದ್ರ ಸರ್ಕಾರ ತಮಿಳುನಾಡಿಗೆ ಬೆಂಬಲವಾಗಿ ನಿಂತು ಕನ್ನಡಿಗರಿಗೆ ದ್ರೋಹವೆಸಗುತ್ತಿದೆ . ಕೇವಲ ರಾಜಕೀಯ ಬೆಳೆ ಬೇಯಿಸಿಕೊಳ್ಳಲು ಪ್ರಧಾನಿ ಮೋದಿ ಸಹ ತಮಿಳುನಾಡಿನ ಯೋಜನೆಗಳಿಗೆ ಹಣ ನೀಡಿದ ರಾಜ್ಯದ ಯೋಜನೆಗಳಿಗೆ ಬಿಡಿಗಾಸು ನೀಡುತ್ತಿಲ್ಲ . ಒಂದು ವೇಳೆ ಕಾವೇರಿ ನದಿ ಗುಂಡಾರ್ ನದಿ ಜೊತೆ ಜೋಡಣೆಯಾದರೆ ರಾಜ್ಯದ ಅಚ್ಚುಕಟ್ಟು ಪ್ರದೇಶ ಬರಿದಾಗಲಿದೆ . ಜೊತೆಗೆ ಬಯಲು ಸೀಮೆಗೆ ನೀರಿನ ಬರ ಎದುರಿಸಲಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದಾರೆ .
Published by:Latha CG
First published: