HOME » NEWS » State » PRO KANNADA ACTIVIST VATAL NAGARAJ HITS OUT AT CHIEF MINISTER B S YEDIYURAPPA HK

ಮರಾಠ ಪ್ರಾಧಿಕಾರ ರಚಿಸಿರುವ ಯಡಿಯೂರಪ್ಪನವರಿಗೆ ಹುಚ್ಚು ಹಿಡಿದಿದೆ: ವಾಟಾಳ್ ನಾಗರಾಜ್

ಮರಾಠ ಅಭಿವೃದ್ಧಿ ಪ್ರಾಧಿಕಾರ ಆದೇಶ ಹಿಂಪಡೆಯಲು ಇನ್ನೂ ಕಲಾವಕಾಶ ಇದೆ. ಒಂದು ನೀವು ಹಿಂಪಡೆಯದಿದ್ದರೆ ಕರ್ನಾಟಕ ಬಂದ್ ಖಚಿತ. ಅದಕ್ಕೂ ಮಣಿಯದಿದ್ದರೆ ರಾಜ್ಯಾದ್ಯಂತ ಜೈಲ್ ಬರೋ ಚಳವಳಿ ನಡೆಸಬೇಕಾಗುತ್ತದೆ

news18-kannada
Updated:November 26, 2020, 7:37 PM IST
ಮರಾಠ ಪ್ರಾಧಿಕಾರ ರಚಿಸಿರುವ ಯಡಿಯೂರಪ್ಪನವರಿಗೆ ಹುಚ್ಚು ಹಿಡಿದಿದೆ: ವಾಟಾಳ್ ನಾಗರಾಜ್
ವಾಟಾಳ್ ನಾಗರಾಜ್
  • Share this:
ಆನೇಕಲ್(ನವೆಂಬರ್​.26): ಮರಾಠ ಅಭಿವೃದ್ಧಿ ಪ್ರಾಧಿಕಾರ ರಚಿಸಿರುವ ಸರ್ಕಾರದ ಧೋರಣೆ ಖಂಡಿಸಿ ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಅತ್ತಿಬೆಲೆ ಗಡಿಯಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ. ಕೂಡಲೇ ಮರಾಠ ಅಭಿವೃದ್ಧಿ ಪ್ರಾಧಿಕಾರ ಆದೇಶ ಹಿಂಪಡೆಯುವಂತೆ ಆಗ್ರಹಿಸಿದ್ದಾರೆ. ಮಳೆಯ ನಡುವೆಯು ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ವಿರೋಧಿಸಿ ಅತ್ತಿಬೆಲೆ ಗಡಿಯಲ್ಲಿ ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ ನೂರಾರು ಕಾರ್ಯಕರ್ತರು ಸಿಎಂ ಯಡಿಯೂರಪ್ಪ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೂ ಪ್ರತಿಭಟನೆ ವೇಳೆ ಗಡಿಯಲ್ಲಿ ಸಿಎಂ ವಿರುದ್ಧ ಗುಡುಗಿದ ವಾಟಾಳ್ ನಾಗರಾಜ್, ಯಡಿಯೂರಪ್ಪರವರಿಗೆ ಹುಚ್ಚು ಹಿಡಿದಿದೆ. ನಾವು ಹಲವಾರು ಬಾರಿ ಕರ್ನಾಟಕ ಬಂದ್ ಮಾಡಿದ್ದೆವೆ. ಆದರೆ ಈ ರೀತಿ ಹೋರಾಟ ಹತ್ತಿಕ್ಕಲು ಯಾವ ಮುಖ್ಯಮಂತ್ರಿಯು ಯತ್ನಿಸಿರಲಿಲ್ಲ. ನೀವು ಬಂದ್ ತಡೆಯಲು ಪ್ರಯತ್ನ ಮಾಡಿದರೆ ನಾವು ಕರ್ನಾಟಕ ಬಂದ್ ಮಾಡಿಯೇ ಸಿದ್ದ ಎಂದರು.

ಮರಾಠ ಅಭಿವೃದ್ಧಿ ಪ್ರಾಧಿಕಾರ ಆದೇಶ ಹಿಂಪಡೆಯಲು ಇನ್ನೂ ಕಲಾವಕಾಶ ಇದೆ. ಒಂದು ನೀವು ಹಿಂಪಡೆಯದಿದ್ದರೆ ಕರ್ನಾಟಕ ಬಂದ್ ಖಚಿತ. ಅದಕ್ಕೂ ಮಣಿಯದಿದ್ದರೆ ರಾಜ್ಯಾದ್ಯಂತ ಜೈಲ್ ಬರೋ ಚಳವಳಿ ನಡೆಸಬೇಕಾಗುತ್ತದೆ ಎಂದು ವಾಟಾಳ್ ನಾಗರಾಜ್ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಕನ್ನಡ ಪ್ರರ ಹೋರಾಟಗಾರ ಸಾ ರಾ ಗೋವಿಂದ್ ಮಾತನಾಡಿ, ಇನ್ನೂ ಕೇವಲ ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ಉಪಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಕನ್ನಡಿಗರಿಗೆ ಸಿಎಂ ಯಡಿಯೂರಪ್ಪ ದ್ರೋಹ ಬಗೆಯುತ್ತಿದ್ದಾರೆ. ಮರಾಠಿಗರು ಪ್ರಾಧಿಕಾರ ಕೇಳದಿದ್ದರು ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿದ್ದಾರೆ. ಹಾಗಾದರೆ ರಾಜ್ಯದಲ್ಲಿ ತಮಿಳರು, ಮಾರ್ವಾಡಿಗಳು, ಗುಜರಾತಿಗಳು ಸೇರಿದಂತೆ ಬೇರೆ ಬೇರೆ ಭಾಷಿಕರಿದ್ದಾರೆ ಅವರೆಲ್ಲರಿಗೂ ಪ್ರಾಧಿಕಾರ ರಚನೆ ಮಾಡುತ್ತೀರಾ ಎಂದು ಪ್ರಶ್ನಿಸಿದರು.

ಇದನ್ನೂ ಓದಿ : ಬಳ್ಳಾರಿ ವಿಭಜನೆ ಆಯಿತು ; ರಾಜ್ಯದ ದೊಡ್ಡ ಜಿಲ್ಲೆ ಬೆಳಗಾವಿ ವಿಭಜನೆ ಯಾವಾಗ ?

ಯಾವುದೇ ಕಾರಣಕ್ಕೂ ಕರ್ನಾಟಕ ಬಂದ್ ನಿಲ್ಲಿಸುವ ಪ್ರಶ್ನೆಯೇ ಇಲ್ಲ ಡಿಸೆಂಬರ್ 5 ರಂದು ಅಖಂಡ ಕರ್ನಾಟಕ ಬಂದ್ ನಡೆಸುವುದಾಗಿ ಸಾ ರಾ ಗೋವಿಂದ್ ತಿಳಿಸಿದ್ದಾರೆ.
Youtube Video

ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಖಂಡಿಸಿ ಕನ್ನಡ ಒಕ್ಕೂಟ ಕರೆ ನೀಡಿರುವ ಕರ್ನಾಟಕ ಬಂದ್​​ಗೆ ಸರ್ಕಾರದ ವ್ಯಾಪಾಕ ವಿರೋಧ ಮತ್ತು ಕೆಲ ಸಂಘಟನೆ ಭಿನ್ನರಾಗದ ನಡುವೆ ವಾಟಾಳ್ ಅಂಡ್ ಟೀಮ್ ಮಾತ್ರ ಡಿಸೆಂಬರ್ 5 ರಂದು ಬಂದ್ ಮಾಡಿಯೇ ಸಿದ್ದ ಎನ್ನುತ್ತಿದ್ದು, ಅಷ್ಟೋತ್ತಿಗೆ ಸರ್ಕಾರ ಹೋರಾಟದ ಬೆದರಿಕೆಗೆ ಮಣಿಯುತ್ತಾ ಇಲ್ಲವೇ ಅದೇಶಕ್ಕೆ ಬದ್ಧವಾಗಿರುತ್ತಾ ಎಂಬುದನ್ನು ಕಾದುನೋಡಬೇಕಿದೆ.
Published by: G Hareeshkumar
First published: November 26, 2020, 7:13 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories