ಬೆಂಗಳೂರು: ಯುಗಾದಿ ಹಬ್ಬ (Ugadi) ಎಂದಾಕ್ಷಣ ನೆನಪಾಗುವುದು ಬೇವು-ಬೆಲ್ಲ. ಯುಗಾದಿಯ ಸಿಹಿ (Sweet) ಊಟದ ಸವಿದ ಮರುದಿನವೇ ಹಳೇ ಮೈಸೂರಿನ (Mysuru) ಭಾಗದಲ್ಲಿ ಹೊಸ ತೊಡಕು ಆಚರಣೆ ಮಾಡುತ್ತಾರೆ. ಹೊಸ ತೊಡಕಿನಲ್ಲಿ ಬಗೆ ಬಗೆಯ ಬಾಡೂಟ ಮಾಡಿ ಮನೆಮಂದಿಯೆಲ್ಲಾ ಕುಳಿತು ಊಟ ಮಾಡುತ್ತಾರೆ. ಈ ವರ್ಷವೂ ಭರ್ಜರಿಯಾಗಿ ಹಬ್ಬ ಆಚರಣೆ ಮಾಡಲು ಜನತೆ ಸಿದ್ಧವಾಗಿದ್ದಾರೆ. ಇದರ ನಡುವೆ ಹಿಂದೂ ಪರ ಸಂಘಟನೆಗಳು (Pro-Hindu Organisations) ಹೊಸ ಅಭಿಯಾನವನ್ನು (Campaign) ಶುರು ಮಾಡಿದ್ದಾರೆ. ಯುಗಾದಿ ಹಬ್ಬ ಮರುದಿನ ಮಾಡುವ ಹೊಸ ತೊಡಕಿಗೆ ಹಲಾಲ್ (Halal) ಮಾಂಸ ಖರೀದಿ ಮಾಡದಂತೆ ಜನರಲ್ಲಿ ಮನವಿ ಮಾಡುತ್ತಿದ್ದಾರೆ.
ಸಾರ್ವಜನಿಕರಿಗೆ ಹಿಂದೂ ಕಾರ್ಯಕರ್ತರ ಮನವಿ
ಬೆಂಗಳೂರಿನ ಹಂಪಿ ನಗರ, ಆರ್ಪಿಸಿ ಲೇಔಟ್, ವಿಜಯನಗರ, ರಾಜಾಜಿನಗರ ಭಾಗದ ಪಾರ್ಕ್ ನಲ್ಲಿ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಸಾರ್ವಜನಿಕರಿಗೆ ಮನವರಿಗೆ ಮಾಡುವ ಕಾರ್ಯ ಮಾಡುತ್ತಿದ್ದಾರೆ. ಕರಪತ್ರ ಹಂಚಿ ಹಿಂದೂ ನಂಬಿಕೆಗಳಿಗೆ ಧಕ್ಕೆ ಆಗದಂತೆ ನಡೆದುಕೊಳ್ಳುವಂತೆ ಅಭಿಯಾನ ಆರಂಭಿಸಿದ್ದಾರೆ.
ಇದನ್ನೂ ಓದಿ: Karnataka Elections: ಪೊಲೀಸರ ಭರ್ಜರಿ ಕಾರ್ಯಾಚರಣೆ; ₹24 ಲಕ್ಷ ಹಣ, ಕೆಜಿಗಟ್ಟಲೇ ಚಿನ್ನ, ಲೀಟರ್ಗಟ್ಟಲೇ ಮದ್ಯ ವಶ
ಮುಸ್ಲಿಮರ ಹಲಾಲ್ ಮಾಂಸ ಖರೀದಿಸಿ ಕುಕೃತ್ಯಗಳಿಗೆ ಪರೋಕ್ಷವಾಗಿ ಬೆಂಬಲಿಸದಿರಿ ಎಂದು ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಕ್ಯಾಂಪೇನ್ ಮಾಡ್ತಿದ್ದಾರೆ. ಹಿಂದೂ ಜನ ಜಾಗೃತಿ ಸಂಘಟನೆಯಿಂದ ನಗರದ ಹಲವು ಭಾಗದಲ್ಲಿ ಪ್ರಚಾರ ನಡೆಸಲಾಗುತ್ತಿದೆ. ಸಂಜೆ ಸಮಯದ್ಲಿ ಪಾರ್ಕ್ ಹಾಗೂ ಸಾರ್ವಜನಿಕರ ಸ್ಥಳಗಳಲ್ಲಿ ಕರ ಪತ್ರ ಹಂಚಿಕೆ ಮಾಡಿ ವಾಕಿಂಗ್ ಬರುವ ಸಾರ್ವಜನಿಕರು ಹಾಗು ಜನ ಸಾಮಾನ್ಯರಿಗೆ ಮನವಿ ಮಾಡುತ್ತಿದ್ದಾರೆ.
ಹಲಾಲ್ ಮಾಂಸ ಮಾರಾಟ ನಿಷೇಧಕ್ಕೆ ಆಗ್ರಹ
ಕಳೆದ ವರ್ಷವೂ ಹಿಂದೂ ಪರ ಸಂಘಟನೆಗಳು ಹಲಾಲ್ ಮಾಂಸ ಖರೀದಿ ಮಾಡದಂತೆ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡುತ್ತಿದ್ದವು. ಅಲ್ಲದೆ ಹಬ್ಬಕ್ಕೆ ಹಲಾಲ್ ಮಾಂಸದ ಮೇಲೆ ನಿಷೇಧ ವಿಧಿಸಬೇಕು ಎಂದು ಕೆಲ ಸಂಘಟನೆಗಳು ಆಗ್ರಹಿಸಿದ್ದವು.
ರಾಜ್ಯದಲ್ಲಿ ಹಲಾಲ್ ಮಾಂಸದ ಬಗ್ಗೆ ಭಾರೀ ಪ್ರಮಾಣದಲ್ಲಿ ಚರ್ಚೆಯಾಗಿತ್ತು. ಹಲವು ಹಿಂದೂ ಪರ ಸಂಘಟನೆಗಳು ಹಲಾಲ್ ಪ್ರಮಾಣ ಪತ್ರ ಬಳಸಿಕೊಂಡು ಸಂಗ್ರಹಿಸುತ್ತಿರುವ ಕೋಟಿ ಕೋಟಿ ಹಣವನ್ನು ದೇಶ ವಿರೋಧಿ ಕೃತ್ಯಗಳಿಗೆ ಬಳಕೆ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದವು.
ಹಿಂದೂ ಪರ ಸಂಘಟಗಳಿಂದ ಹಲವು ಅಭಿಯಾನ
ಕಳೆದ ವರ್ಷವೂ ನಮ್ಮ ಅಭಿಯಾನಕ್ಕೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ವರ್ಷವೂ ಮತ್ತಷ್ಟು ಜನರಿಗೆ ಈ ಬಗ್ಗೆ ಅರಿವು ಮಾಡಿಕೊಡಲಾಗುತ್ತಿದೆ. ಇನ್ನು, ಕರಾವಳಿ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಹಿಂದೂ ಧಾರ್ಮಿಕ ಕೇಂದ್ರಗಳ ಬಳಿ ಬೇರೆಯವರಿಗೆ ವ್ಯಾಪಾರ ನಡೆಸಲು ಅನುಮತಿ ನೀಡಬಾರದು.
ಇದನ್ನೂ ಓದಿ: Metro Inauguration: 'ಮುಗಿಯದ ಕಾಮಗಾರಿಗೆ ಉದ್ಘಾಟನೆ ಭಾಗ್ಯ', ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ಕಿಡಿ
ಜಾತ್ರೆ, ಹಬ್ಬ, ಹಿಂದೂ ಧಾರ್ಮಿಕ ಕಾರ್ಯಕ್ರಮಗಳ ಸ್ಥಳದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ವ್ಯವಹಾರ ಮಾಡಲು ಅವಕಾಶ ನೀಡಬಾರದು ಎಂದು ಹಿಂದೂ ಪರ ಸಂಘಟನೆಗಳು ಸರ್ಕಾರಕ್ಕೆ ಆಗ್ರಹಿಸಿದ್ದವು. ಧಾರ್ಮಿಕ ಕೇಂದ್ರಗಳಿಗೂ ಸಹ ಈ ಬಗ್ಗೆ ಮನವಿ ಪತ್ರ ನೀಡಿದ್ದವು. ಈ ವೇಳೆ ಈ ಬಗ್ಗೆ ಭಾರೀ ಚರ್ಚೆ ನಡೆದಿತ್ತು. ಸದ್ಯ ಈ ಬಾರಿಯೂ ಹಿಂದೂ ಪರ ಸಂಘಟನೆಗಳು ತಮ್ಮ ಅಭಿಯಾನವನ್ನು ಮುಂದುವರಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ