ಸಿಎಎ ವಿರೋಧ ಮಾಡುತ್ತಿರುವವರು 'ಹಲ್ಕಟ್ ನನ್ ಮಕ್ಳು'; ನಾಲಿಗೆ ಹರಿಬಿಟ್ಟ ಶಿವಾನಂದಮಠದ ಗುರು ಪ್ರಸಾದ್ ಸ್ವಾಮೀಜಿ

ಸಿಎಎ ಕಾನೂನನನ್ನು ಬೆಂಬಲಿಸಿ ಇಂದು ಬಾಗಲಕೋಟೆ ಜಿಲ್ಲೆಯಲ್ಲಿ ಸಮಾವೇಶವನ್ನು ಆಯೋಜಿಸಲಾಗಿತ್ತು. ಈ ಸಮಾವೇಶಕ್ಕೆ ಹಲವಾರು ಮಠಗಳ ಸ್ವಾಮೀಜಿಗಳನ್ನೂ ಆಹ್ವಾನಿಸಲಾಗಿತ್ತು. ಆದರೆ, ಈ ಕಾರ್ಯಕ್ರಮದಲ್ಲಿ ಮಾತನಾಡುವ ಭರದಲ್ಲಿ ಮೈಗೂರು ವಿರಕ್ತಮಠದ ಗುರು ಪ್ರಸಾದ ಸ್ವಾಮೀಜಿ ನಾಲಿಗೆ ಹರಿಬಿಟ್ಟು ವಿವಾದಕ್ಕೆ ಗುರಿಯಾಗಿದ್ದಾರೆ.

ಮೈಗೂರು ಗ್ರಾಮದ ಶಿವಾನಂದಮಠದ ಗುರು ಪ್ರಸಾದ್ ಸ್ವಾಮೀಜಿ.

ಮೈಗೂರು ಗ್ರಾಮದ ಶಿವಾನಂದಮಠದ ಗುರು ಪ್ರಸಾದ್ ಸ್ವಾಮೀಜಿ.

  • Share this:
ಬಾಗಲಕೋಟೆ (ಜನವರಿ.21); ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾನೂನು ವಿರುದ್ಧ ದೇಶದಾದ್ಯಂತ ಪ್ರತಿಭಟನೆ, ಮುಷ್ಕರ ಹಾಗೂ ಚಳುವಳಿಗಳು ಪ್ರತಿನಿತ್ಯ ನಡೆಯುತ್ತಲೇ ಇವೆ. ಈ ಕುರಿತು ಪರ-ವಿರೋಧ ಚರ್ಚೆಗಳಿಗೂ ಸಾಕಷ್ಟು ವೇದಿಕೆಗಳನ್ನು ಕಲ್ಪಿಸಲಾಗಿದೆ. ಆದರೆ, ‘ಸಿಎಎ’ ವಿರೋಧಿಸುವವರು “ಹಲ್ಕಟ್ ನನ್ ಮಕ್ಳು” ಎಂದು ಹೇಳುವ ಮೂಲಕ ಬಾಗಲಕೋಟೆ ಜಿಲ್ಲೆ ಮೈಗೂರು ಗ್ರಾಮದ ಶಿವಾನಂದಮಠದ ಗುರು ಪ್ರಸಾದ್ ಸ್ವಾಮೀಜಿ ಇದೀಗ ವಿವಾದಕ್ಕೆ ಗುರಿಯಾಗಿದ್ದಾರೆ. ಅಲ್ಲದೆ, ಅವರ ವಿಡಿಯೋ ಭಾಷಣ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

ಸಿಎಎ ಕಾನೂನನನ್ನು ಬೆಂಬಲಿಸಿ ಬಾಗಲಕೋಟೆ ಜಿಲ್ಲೆಯ ಬನಹಟ್ಟಿಯಲ್ಲಿ ಜನವರಿ 18ರಂದು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಹಲವಾರು ಮಠಗಳ ಸ್ವಾಮೀಜಿಗಳನ್ನೂ ಆಹ್ವಾನಿಸಲಾಗಿತ್ತು. ಆದರೆ, ಈ ಕಾರ್ಯಕ್ರಮದಲ್ಲಿ ಮಾತನಾಡುವ ಭರದಲ್ಲಿ ನಾಲಿಗೆ ಹರಿಬಿಟ್ಟ ಮೈಗೂರು ವಿರಕ್ತಮಠದ ಗುರು ಪ್ರಸಾದ ಸ್ವಾಮೀಜಿ,

“ಒಂದು ದೇಶಕ್ಕೆ ಒಂದು ಕಾನೂನು ಇರಲೇಬೇಕು ಅದು ಸಿಎಎ. ಈ ಕಾನೂನು ನಮಗಾಗಿ ಜಾರಿಯಾಗಿದೆ. ಹೀಗಾಗಿ ನಾವು ಇದನ್ನು ಬೆಂಬಲಿಸಲೇಬೇಕು. ಯಾರ್ಯಾರು ಈ ಕಾನೂನನ್ನು ವಿರೋಧಿಸುತ್ತಿದ್ದಾರೆ ಅವರೆಲ್ಲರೂ ಹಲ್ಕಟ್ ನನ್ ಮಕ್ಳು” ಎಂದು ಹೇಳುವ ಮೂಲಕ ಹೊಸ ವಿವಾದವನ್ನು ಹುಟ್ಟುಹಾಕಿದ್ದಾರೆ. ಅಲ್ಲದೆ ಈ ಮೂಲಕ ಸ್ವತಃ ವಿವಾದಕ್ಕೂ ಗುರಿಯಾಗಿದ್ದಾರೆ.

ಖಾವಿ ಧರಿಸಿದ ಸ್ವಾಮೀಜಿ ಒಬ್ಬರು ಹೀಗೆ ಸಮಾವೇಶದಲ್ಲಿ ಸಾವಿರಾರು ಸಾರ್ವಜನಿಕರ ಎದುರು ಅವಾಚ್ಯ ಶಬ್ಧ ಬಳಸಿ ಸಿಎಎ ವಿರೋಧಿಸುವವರನ್ನು ನಿಂಧಿಸಿರುವುದು ಇದೀಗ ಹಲವರ ಕೆಂಗಣ್ಣಿಗೆ ಗುರಿಯಾಗಿದೆ. ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲೂ ಸ್ವಾಮೀಜಿ ಮಾತಿಗೆ ಸಾಕಷ್ಟು ವಿರೋಧಗಳೂ ವ್ಯಕ್ತವಾಗುತ್ತಿವೆ.

(ವರದಿ- ರಾಚಪ್ಪ ಬನ್ನಿದಿನ್ನಿ)

ಇದನ್ನೂ ಓದಿ : ರೈತರಿಂದ ಬಲವಂತ ಸಾಲ ವಸೂಲಿಗೆ ಬಿಜೆಪಿ ಪರವಾನಗಿ ನೀಡುತ್ತಿದೆಯೇ?; ಸರ್ಕಾರದ ನಡೆಗೆ ಸಿದ್ದರಾಮಯ್ಯ ಗರಂ
First published: