HOME » NEWS » State » PRIYANKA GANDHI WISHED DK SHIVAKUMAR WHO TOOK OATH AS KPCC PRESIDENT GNR

‘ದೇಶದ ಪ್ರಜಾಪ್ರಭುತ್ವ ಉಳಿಸಲು ಹೋರಾಡೋಣ‘ - ಡಿ.ಕೆ ಶಿವಕುಮಾರ್​​ಗೆ ಫೋನ್​​ನಲ್ಲೇ ಶುಭಾಶಯ ಕೋರಿದ ಪ್ರಿಯಾಂಕಾ ಗಾಂಧಿ

ಪ್ರಿಯಾಂಕಾ ಗಾಂಧಿ ಮುನ್ನ ರಾಹುಲ್​​ ಗಾಂಧಿ ಕೂಡ ಡಿಕೆಶಿಗೆ ಫೋನ್​​ ಮೂಲಕ ಶುಭಾಶಯ ಕೋರಿದ್ದಾರೆ. ಈ ವೇಳೆ ವೇದಿಕೆ ಮೇಲೆಯೇ ಭಾಷಣ ಮಾಡುತ್ತಿದ್ದ ದಿನೇಶ್​ ಗುಂಡೂರಾವ್​​​ ಡಿಕೆಶಿಗೆ ಫೋನ್​​ನಲ್ಲಿ ರಾಹುಲ್​​ ಗಾಂಧಿ ಶುಭಾಶಯ ಕೋರಿದ ಆಡಿಯೋ ಮೈಕ್​​ ಮೂಲಕ ಎಲ್ಲರಿಗೂ ಕೇಳಿಸಿದ್ದಾರೆ.

news18-kannada
Updated:July 2, 2020, 1:54 PM IST
‘ದೇಶದ ಪ್ರಜಾಪ್ರಭುತ್ವ ಉಳಿಸಲು ಹೋರಾಡೋಣ‘ - ಡಿ.ಕೆ ಶಿವಕುಮಾರ್​​ಗೆ ಫೋನ್​​ನಲ್ಲೇ ಶುಭಾಶಯ ಕೋರಿದ ಪ್ರಿಯಾಂಕಾ ಗಾಂಧಿ
ಡಿಕೆಶಿ, ಪ್ರಿಯಾಂಕಾ ಗಾಂಧಿ
  • Share this:
ಬೆಂಗಳೂರು(ಜು.02): ಪದಗ್ರಹಣ ಕಾರ್ಯಕ್ರಮ ಮಧ್ಯೆಯೇ ಕರ್ನಾಟಕ ಪ್ರದೇಶ ಕಾಂಗ್ರೆಸ್​ ಸಮಿತಿಯ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ಡಿ.ಕೆ ಶಿವಕುಮಾರ್ ಅವರಿಗೆ ಫೋನ್​​ ಮಾಡಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಶುಭಾಶಯ ಕೋರಿದರು. ನಾವು ದೇಶದ ಪ್ರಜಾಪ್ರಭುತ್ವವನ್ನು ಉಳಿಸಬೇಕಿದೆ. ಅದಕ್ಕಾಗಿ ಕಾಂಗ್ರೆಸ್​ ಹೋರಾಟವನ್ನು ಮತ್ತಷ್ಟು ಬಲಗೊಳಿಸಬೇಕಿದೆ ಎಂದು ಡಿಕೆಶಿ ಮತ್ತಲವು ಕಾಂಗ್ರೆಸ್​ ಹಿರಿಯ ನಾಯಕರಿಗೆ ಫೋನ್​​ನಲ್ಲೇ ಪ್ರಿಯಾಂಕಾ ಗಾಂಧಿ ತಿಳಿಸಿದ್ದಾರೆ.

ಪ್ರಿಯಾಂಕಾ ಗಾಂಧಿ ಮುನ್ನ ರಾಹುಲ್​​ ಗಾಂಧಿ ಕೂಡ ಡಿಕೆಶಿಗೆ ಫೋನ್​​ ಮೂಲಕ ಶುಭಾಶಯ ಕೋರಿದ್ದಾರೆ. ಈ ವೇಳೆ ವೇದಿಕೆ ಮೇಲೆಯೇ ಭಾಷಣ ಮಾಡುತ್ತಿದ್ದ ದಿನೇಶ್​ ಗುಂಡೂರಾವ್​​​ ಡಿಕೆಶಿಗೆ ಫೋನ್​​ನಲ್ಲಿ ರಾಹುಲ್​​ ಗಾಂಧಿ ಶುಭಾಶಯ ಕೋರಿದ ಆಡಿಯೋ ಮೈಕ್​​ ಮೂಲಕ ಎಲ್ಲರಿಗೂ ಕೇಳಿಸಿದ್ದಾರೆ.

ಇಂದು ನೂತನ ಕರ್ನಾಟಕ ಪ್ರದೇಶ ಕಾಂಗ್ರೆಸ್​ ಸಮಿತಿಯ ಅಧ್ಯಕ್ಷರಾಗಿ ಡಿ.ಕೆ ಶಿವಕುಮಾರ್​ ಪ್ರಮಾಣ ವಚನ ಸ್ವೀಕರಿಸಿದ್ಧಾರೆ. ಮಾಜಿ ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​​ ಇಂದಿನ ಸಮಾರಂಭದಲ್ಲಿ ವೇದಿಕೆ ಮೇಲೆಯೇ ಡಿ.ಕೆ ಶಿವಕುಮಾರ್​​ ಅವರಿಗೆ ತನ್ನ ಅಧಿಕಾರವನ್ನು ಅಧಿಕೃತವಾಗಿ ಹಸ್ತಾಂತರಿಸಿದರು. ಈ ಮೂಲಕ ಕೆಪಿಸಿಸಿ ಸಾರಥ್ಯವನ್ನು ಮುನ್ನಡೆಸುವಂತೆ ಡಿಕೆಶಿಗೆ ಶುಭಾಶಯ ತಿಳಿಸಿದರು.

ಇದನ್ನೂ ಓದಿ: Dk shivakumar Swearing-in-Ceremony: ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕಾರ: ಕಾಂಗ್ರೆಸ್​ ಕಾರ್ಯಕರ್ತರ ಸಂಭ್ರಮ

ನಗರದ ಕ್ವೀನ್ಸ್​ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿ ಸಭಾಂಗಣದಲ್ಲಿ ಡಿಕೆಶಿ ಪದಗ್ರಹಣ ಸಮಾರಂಭ ನಡೆಯುತ್ತಿದೆ. ಕಚೇರಿ ಮುಂಭಾಗ ಧ್ವಜಾರೋಹಣ ನೆರವೇರಿಸುವ ಮೂಲಕ ಕಾರ್ಯಕ್ರಮ ಆರಂಭಿಸಲಾಗಿದೆ. ಪಕ್ಷದ ಹಿರಿಯ ನಾಯಕ ಎ.ಆರ್ ರೆಹಮಾನ್ ಖಾನ್ ಸಂವಿಧಾನದ ಪೀಠಿಕೆಯನ್ನು ಬೋಧಿಸಿದರು.

ಕಕರ್ನಾಟಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್, ಕೇರಳದ ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿತಾಲ್, ಕೇರಳ ಪಿಸಿಸಿ ಅಧ್ಯಕ್ಷ ಮುಲ್ಲಪಳ್ಳಿ ರಾಮಚಂದ್ರನ್, ಸೀಮಾಂಧ್ರದ ಸಾಕೆ ಶೈಲಜನಾಥ್, ಉತ್ತಮ್ ಕುಮಾರ್ ರೆಡ್ಡಿ, ಮಾಜಿ ಸಿಎಂ ಸಿದ್ದರಾಮಯ್ಯ, ಮಲ್ಲಿಕಾರ್ಜುನ್​ ಖರ್ಗೆ ಮತ್ತಲವು ಹಿರಿಯ ನಾಯಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
First published: July 2, 2020, 1:38 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories