Priyanka Gandhi: ಕರ್ನಾಟಕದಿಂದ ರಾಜ್ಯಸಭೆ ಪ್ರವೇಶಿಸುತ್ತಾರಾ ಪ್ರಿಯಾಂಕಾ ಗಾಂಧಿ? ಕಾಂಗ್ರೆಸ್ ನಾಯಕಿಗೆ ಡಿಕೆಶಿ ಆಹ್ವಾನ

ಕರ್ನಾಟಕದ ರಾಜಕಾರಣ ಅದೆಷ್ಟೋ ರಾಷ್ಟ್ರೀಯ ನಾಯಕರಿಗೆ ರಾಜಕೀಯವಾಗಿ ಭದ್ರ ಬುನಾದಿ ಒದಗಿಸಿ ಕೊಟ್ಟಿದೆ. ಈ ರಾಜಕಾರಣಿಗಳ ಸಾಲಿಗೆ ಪ್ರಿಯಾಂಕಾ ಗಾಂಧಿ ಸೇರುತ್ತಾರಾ ಎಂಬ ಚರ್ಚೆ ಶುರುವಾಗಿದೆ. ಇದಕ್ಕೆ ಕಾರಣ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇಟ್ಟಿರುವ ಪ್ರಸ್ತಾಪ.

ಪ್ರಿಯಾಂಕಾ ಗಾಂಧಿಯವರಿಗೆ ಆಹ್ವಾನ ನೀಡಿದ ಡಿಕೆಶಿ

ಪ್ರಿಯಾಂಕಾ ಗಾಂಧಿಯವರಿಗೆ ಆಹ್ವಾನ ನೀಡಿದ ಡಿಕೆಶಿ

  • Share this:
ರಾಜಸ್ಥಾನ: ಕರ್ನಾಟಕ (Karnataka) ರಾಜ್ಯ ಅಂದ್ರೆ ಬರೀ ಕರ್ನಾಟಕದ ರಾಜಕಾರಣಿಗಳಿಗೆ (Politicians) ಮಾತ್ರವೇ ಅಲ್ಲ, ದೇಶದ ಅದೆಷ್ಟೋ ರಾಜಕಾರಣಿಗಳ ರಾಜಕೀಯ ಪ್ರವೇಶ ಹಾಗೂ ರಾಜಕೀಯ ಪುನರ್ಜನ್ಮಕ್ಕೆ ಕರ್ನಾಟಕದ ರಾಜಕೀಯ ಕಾರಣವಾಗಿದೆ. ಮಾಜಿ ಪ್ರಧಾನಿ ಇಂದಿರಾಗಾಂಧಿ (Indira Gandhi), ಸೋನಿಯಾಗಾಂಧಿ (Sonia Gandhi), ವೆಂಕಯ್ಯ ನಾಯ್ಡು (Venkaiah Naidu), ನಿರ್ಮಲಾ ಸೀತಾರಾಮನ್ (Nirmala Sitharaman) ಸೇರಿದಂತೆ ಹಲವು ಘಟಾನುಘಟಿ ನಾಯಕರು ಕರ್ನಾಟಕದಿಂದಲೇ ಗೆದ್ದು ರಾಷ್ಟ್ರರಾಜಕಾರಣಕ್ಕೆ ಹೋಗಿದ್ದಾರೆ. ಇದೀಗ ಆ ಸಾಲಿಗೆ ಕಾಂಗ್ರೆಸ್ ನಾಯಕಿ (Congress Leader) ಪ್ರಿಯಾಂಕಾ ಗಾಂಧಿ (Priyanka Gandhi) ಕೂಡ ಸೇರಲಿದ್ದಾರ ಎಂಬ ಕುತೂಹಲ ಶುರುವಾಗಿದೆ. ಯಾಕೆಂದ್ರೆ ಮುಂಬರುವ ರಾಜ್ಯಸಭಾ ಚುನಾವಣೆಗೆ (Rajyasabha Election) ರಾಜ್ಯದಿಂದಲೇ ಸ್ಪರ್ಧಿಸುವಂತೆ ಪ್ರಿಯಾಂಕಾ ಗಾಂಧಿಯವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (KPCC President D.K. Shivakumar) ಆಹ್ವಾನ ನೀಡಿದ್ದಾರೆ. ರಾಜಸ್ಥಾನದ (Rajasthan) ಉದಯಪುರದಲ್ಲಿ (Udaipur) ನಡೆಯುತ್ತಿರುವ ಕಾಂಗ್ರೆಸ್ ಚಿಂತನ ಶಿಬಿರದ ವೇಳೆ ಭೇಟಿಯಾಗಿದ್ದಾಗ ಡಿಕೆಶಿ ಈ ಪ್ರಸ್ತಾಪ ಇಟ್ಟಿದ್ದಾರೆ.

ಕರ್ನಾಟಕದಿಂದ ಕಣಕ್ಕಿಳಿಯುತ್ತಾರಾ ಪ್ರಿಯಾಂಕಾ ಗಾಂಧಿ?

ಹೌದು, ಇಂಥದ್ದೊಂದು ಮಾತು ರಾಜ್ಯ ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿದೆ. ಇದಕ್ಕೆ ಕಾರಣ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರಿಗೆ ನೀಡಿರುವ ಆಹ್ವಾನ. ಸದ್ಯ ರಾಜಸ್ಥಾನದ ಉದಯಪುರದಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಚಿಂತನ ಶಿಬಿರ ನಡೆಯುತ್ತಿದೆ. ಈ ವೇಳೆ ಪ್ರಿಯಾಂಕಾ ಗಾಂಧಿಯವರನ್ನು ಭೇಟಿಯಾದ ಡಿಕೆಶಿ, ಮುಂಬರುವ ರಾಜ್ಯಸಭೆ ಚುನಾವಣೆಗೆ ಕರ್ನಾಟಕದಿಂದಲೇ ಸ್ಪರ್ಧಿಸುವಂತೆ ಪ್ರಿಯಾಂಕಾ ಗಾಂಧಿಯವರಿಗೆ ಆಹ್ವಾನ ನೀಡಿದ್ದಾರೆ ಎನ್ನಲಾಗಿದೆ.

ಆಹ್ವಾನದ ಹಿಂದಿದೆಯಾ ಡಿಕೆಶಿ ಲೆಕ್ಕಾಚಾರ?

ಪ್ರಿಯಾಂಕಾ ಗಾಂಧಿಯವರಿಗೆ ಡಿಕೆಶಿ ಆಹ್ವಾನ ನೀಡಿರುವುದರ ಹಿಂದೆ ರಾಜಕೀಯ ಲಾಭದ ಲೆಕ್ಕಾಚಾರ ಇದೆ ಅಂತ ವಿಶ್ಲೇಷಿಸಲಾಗುತ್ತಿದೆ. ಇದರ ಹಿಂದೆ ಹೈಕಮಾಂಡ್ ನಾಯಕರ ವಿಶ್ವಾಸಗಳಿಸಲು ಡಿ.ಕೆ. ಶಿವಕುಮಾರ್ ತಂತ್ರ ಮಾಡಿದ್ದಾರೆ ಎನ್ನಲಾಗುತ್ತಿದೆ. ಅಷ್ಟೇ ಅಲ್ಲ ದೆಹಲಿ ಮಟ್ಟದಲ್ಲಿ ಪ್ರಭಾವಿಯಾಗಬಹುದೆಂಬ ಲೆಕ್ಕಾಚಾರ ಹಾಕಿದ್ದು, ಮುಂದೆ ರಾಜ್ಯದಲ್ಲಿ ಕಾಂಗ್ರೆಸ್ ಬಹುಮತ ಪಡೆದರೆ ಮುಂದೆ ಸಿಎಂ ಆಗುವುದಕ್ಕೆ ಇರುವ ಅಡ್ಡಿ ತೊಲಗಿಸಲು ಹೊಸ ಅಸ್ತ್ರ ಸಿಕ್ಕಂತಾಗುತ್ತದೆ ಎಂಬುದು ಡಿಕೆಶಿ ಲೆಕ್ಕಾಚಾರ.

ಇದನ್ನೂ ಓದಿ: BJP Decision: ರಾಜ್ಯಸಭೆಗೆ ಮತ್ತೊಮ್ಮೆ ನಿರ್ಮಲಾ ಸೀತಾರಾಮನ್, ವಿಧಾನ ಪರಿಷತ್ತಿಗೆ ವಿಜಯೇಂದ್ರ ಹೆಸರು ಶಿಫಾರಸು

ಡಿಕೆಶಿ ಆಹ್ವಾನಕ್ಕೆ ಪ್ರಿಯಾಂಕಾ ಗಾಂಧಿ ಹೇಳಿದ್ದೇನು?

ಇನ್ನು ಡಿಕೆ ಶಿವಕುಮಾರ್ ಆಹ್ವಾನದ ಬಗ್ಗೆ ಪ್ರಿಯಾಂಕಾ ಗಾಂಧಿ ಇನ್ನೂ ಏನೂ ಹೇಳಿಲ್ಲ ಎನ್ನಲಾಗಿದೆ. ಕರ್ನಾಟಕದಿಂದ ರಾಜ್ಯಸಭೆ ಪ್ರವೇಶಿಸಿದರೆ ಪ್ರಿಯಾಂಕಾ ಗಾಂಧಿ ಕನ್ನಡಿಗರ ಮನಸ್ಸು ಗೆಲ್ಲಲು ಸುಲಭವಾಗುತ್ತದೆ. ಇದು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯ ಕಾಂಗ್ರೆಸ್‌ಗೆ ಸಹಾಯವಾಗಲಿದೆ ಎನ್ನಲಾಗಿದೆ. ಆದರೆ ಪ್ರಿಯಾಂಕಾ ಗಾಂಧಿ ಈ ಬಗ್ಗೆ ಇನ್ನೂ ನಿರ್ಧರಿಸಿಲ್ಲ ಎನ್ನಲಾಗಿದೆ.

ಸೋನಿಯಾ ಗಾಂಧಿಯವರನ್ನು ಭೇಟಿಯಾದ ಡಿಕೆಶಿ

ಇನ್ನು ರಾಜಸ್ಥಾನದ ಉದಯಪುರದಲ್ಲಿ ನಡೆಯುತ್ತಿರುವ ಎಐಸಿಸಿ ಚಿಂತನಾ ಶಿಬಿರ ಸಂದರ್ಭದಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಭೇಟಿ ಮಾಡಿದರು. ಈ ವೇಳೆ ಉಭಯ ನಾಯಕರು ಮಾತುಕತೆ ನಡೆಸಿದರು ಎನ್ನವಾಗಿದೆ. ಆದರೆ ಇದು ಸೌಹಾರ್ದಯುತ ಚರ್ಚೆಯೋ ಅಥವಾ ಬೇರೆ ಏನಾದರೂ ಮಹತ್ವದ ಮಾತುಕತೆ ನಡೆದಿದೆಯಾ ಎನ್ನುವುದು ಇನ್ನೂ ಬಹಿರಂಗವಾಗಿಲ್ಲ.

ಇದನ್ನೂ ಓದಿ: C.P Yogeshwar: ಚನ್ನಪಟ್ಟಣದಲ್ಲಿ ಡಿ.ಕೆ ಬ್ರದರ್ಸ್​ಗೆ ಶಾಕ್; ಕಾಂಗ್ರೆಸ್ ಮುಖಂಡರು ಬಿಜೆಪಿ ಸೇರ್ಪಡೆ

ಬಿಜೆಪಿಯಿಂದ ಅಭ್ಯರ್ಥಿಗಳ ಪಟ್ಟಿ ರೆಡಿ

ಇತ್ತ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ವಿಧಾನ ಪರಿಷತ್ ಮತ್ತು ರಾಜ್ಯಸಭೆ ಅಭ್ಯರ್ಥಿಯಾಗಿ ಒಂದು ಸ್ಥಾನಕ್ಕೆ ತಲಾ ಐದು ಹೆಸರುಗಳನ್ನು ಕಳುಹಿಸಲು ತೀರ್ಮಾನಿಸಲಾಗಿದೆ. ಬಳಿಕ ಬಿಜೆಪಿ ಹೈಕಮಾಂಡ್ ಅಭ್ಯರ್ಥಿಗಳ ಹೆಸರುಗಳನ್ನು ಅಂತಿಮಗೊಳಿಸಲಿದೆ. ಪರಿಷತ್ ಸ್ಥಾನದ ಅಭ್ಯರ್ಥಿಯಾಗಿ ಬಿ.ವೈ.ವಿಜಯೇಂದ್ರ ಹೆಸರನ್ನೂ ಕಳುಹಿಸಲು ಕೋರ್ ಕಮಿಟಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಇತ್ತ ರಾಜ್ಯಸಭೆ ಅಭ್ಯರ್ಥಿಯಾಗಿ ನಿರ್ಮಲಾ ಸೀತಾರಾಮನ್ ಹೆಸರು ಕಳುಹಿಸಲು ತೀರ್ಮಾನಿಸಲಾಗಿದೆ.
Published by:Annappa Achari
First published: