ಚಿಕ್ಕಮಗಳೂರು : ಅಂದು ಸಂಕಷ್ಟದಲ್ಲಿದ್ದಾಗ ಚಿಕ್ಕಮಗಳೂರು (Chikkamagaluru) ಜನರು ನನ್ನ ಅಜ್ಜಿಯ ಕೈ ಹಿಡಿದಿದ್ರು. ಈಗಲೂ ನಮ್ಮ ಕುಟುಂಬ ಸಂಕಷ್ಟದ ಸಮಯವನ್ನು ಅನುಭವಿಸುತ್ತಿದೆ. (Assembly Election 2023) ಚಿಕ್ಕಮಗಳೂರನ್ನು ನಾನು ಯಾವತ್ತಿಗೂ ಮರೆಯೋದಿಲ್ಲ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ (Priyanka Gandhi) ಅವರು ಹೇಳಿದರು.
ಚಿಕ್ಕಮಗಳೂರಿನಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಬೃಹತ್ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅವರು, ಮಳೆ ಬರ್ತಾ ಇದೆ ನೋಡಿ ಇದು ಭಗವಂತನ ಆಶೀರ್ವಾದ. ಅಜ್ಜಿ ಬಂದಾಗ ಹೇಗಿತ್ತೋ, ಅದೇ ರೀತಿ ಸೌಂದರ್ಯ ಈಗಲೂ ಇದೆ. ಚಿಕ್ಕಮಗಳೂರನ್ನು ಜೀವಮಾನದಲ್ಲಿ ನಾನು ಯಾವತ್ತು ಮರೆಯಲ್ಲ ಎಂದು ಹೇಳಿದರು.
ಇದನ್ನೂ ಓದಿ: Sudan Clashes: ಸುಡಾನ್ ಕನ್ನಡಿಗರ ಬಗ್ಗೆ ಸಿದ್ದರಾಮಯ್ಯ ಆತಂಕ; ಜೈಶಂಕರ್ ‘ರಾಜಕೀಯ’ ಹೇಳಿಕೆಗೆ ಮಾಜಿ ಸಿಎಂ ಕೌಂಟರ್!
ರಾಹುಲ್ ಗಾಂಧಿ ಮೇಲೆ ಸುಳ್ಳು ಕೇಸ್ ಹಾಕಿ ಲೋಕಸಭೆಯಿಂದ ಹೊರಹಾಕಿದ್ದಾರೆ ಎಂದ ಪ್ರಿಯಾಂಕ ಗಾಂಧಿ, ರಾಹುಲ್ ಗಾಂಧಿ ಮತ್ತೆ ಲೋಕಸಭಾ ಸದಸ್ಯರಾಗಿ ಬರ್ತಾರೆ ಅಂತಾ ನಮಗೆ ವಿಶ್ವಾಸ ಇದೆ. ಪರಶಿವನ ಆಶೀರ್ವಾದ ಇದೆ, ಸತ್ಯಕ್ಕೆ ಜಯ ಸಿಕ್ಕೆ ಸಿಗುತ್ತೆ. ಕರ್ನಾಟಕದ ಚುನಾವಣೆ ಸತ್ಯ ಮತ್ತು ಜಯದ ಹೋರಾಟ. ಒಂದು ಮಾತು ಹೇಳ್ತೇನೆ, ನಮಗೆ ಎಲ್ಲ ಕಡೆ ಮೋಸ ಆಗ್ತಿದೆ. ನಿಮ್ಮ ಮತವನ್ನು ನೀಡಿ ವಿಶ್ವಾಸ ತುಂಬಿ. ಕರ್ನಾಟಕದಲ್ಲಿ ಹೇಳುವವರು ಕೇಳುವವರು ಇಲ್ಲದ ಸ್ಥಿತಿ ನಿರ್ಮಾಣವಾಗಿದೆ ಎಂದು ಜನರಲ್ಲಿ ಮನವಿ ಮಾಡಿದರು.
ಮಳೆ ಬಂದರೂ ಇಲ್ಲೇ ಇದ್ದೀರಾ
ಬಾಳೆಹೊನ್ನೂರಿನಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಪ್ರಿಯಾಂಕ ಗಾಂಧಿ ಭಾಷಣದ ವೇಳೆ ಮಳೆಯೂ ಬಂತು. ಆಗ ಮಳೆ ಬಂದರೂ ನೀವು ಇಲ್ಲೇ ಕೂತಿದ್ದೀರಾ ಎಂದ ಪ್ರಿಯಾಂಕ, ನನ್ನ ಸಹೋದರಿಯರು ಮಳೆಯಲ್ಲಿ ನೆನೆದರೂ ಇಲ್ಲೆ ಇದ್ದೀರಾ. ನಿಮಗೆ ತುಂಬಾ ಧನ್ಯವಾದಗಳು ತಿಳಿಸುತ್ತೇನೆ. ಮಳೆ ಬರ್ತಾ ಇದೆ ಅಂದ್ರೆ ಇದು ಭಗವಂತನ ಆಶೀರ್ವಾದ ಎಂದು ಹೇಳಿದರು.
ಕರ್ನಾಟಕ ಸ್ವಾಭಿಮಾನ ದ ರಾಜ್ಯ
ಇದು ಕರ್ನಾಟಕ ಸ್ವಾಭಿಮಾನ ಪರಿಚಯ ಮಾಡುವಂತಹ ಸಮಯ ಎಂದ ಪ್ರಿಯಾಂಕ ಗಾಂಧಿ, ಕರ್ನಾಟಕ ಸ್ವಾಭಿಮಾನ ದ ರಾಜ್ಯ. ಈ ರಾಜ್ಯದ ಪರಿಸ್ಥಿತಿ ಏನು ಅಂತಾ ಪ್ರತಿಯೊಬ್ಬರಿಗೂ ಗೊತ್ತಿದೆ. ನಾವು ಈ ಪರಿಸ್ಥಿತಿಯನ್ನು ಬದಲಾಯಿಸುತ್ತೇವೆ. ನಾವು ನಿಮ್ಮಿಂದ ಲೂಟಿ ಮಾಡುವುದಿಲ್ಲ, ನಾವು ನಿಮ್ಮ ಹಣವನ್ನ ನಿಮಗೆ ವಾಪಸ್ಸು ನೀಡುತ್ತೇವೆ. ಬೆಲೆ ಏರಿಕೆ ಕಡಿಮೆ ಮಾಡುತ್ತೇವೆ. ಕರ್ನಾಟಕವನ್ನ ಅಭಿವೃದ್ಧಿ ಪಡಿಸುವ ಉದ್ದೇಶದಿಂದ ನಮ್ಮ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬರಬೇಕು ಎಂದು ಹೇಳಿದರು.
ಇದನ್ನೂ ಓದಿ: Siddaramaiah: ಮೋದಿಯವ್ರೇ, ನೀವು ರಾಜ್ಯಕ್ಕೆ ಬರೋದು ಕನ್ನಡಿಗರಿಗೆ ಕೊಡೋದಕ್ಕೋ, ಕಿತ್ಕೊಳ್ಳೋದಕ್ಕೋ? ಸಿದ್ದರಾಮಯ್ಯ ವ್ಯಂಗ್ಯ
ಇನ್ನು ನಾನು ಚುನಾವಣೆಗೋಸ್ಕರ ಇಲ್ಲಿಗೆ ಬಂದಿಲ್ಲ ಎಂದ ಪ್ರಿಯಾಂಕ, ಕರ್ನಾಟಕ ದೇಶದಲ್ಲಿ ಪ್ರಸಿದ್ಧಿ ಪಡೆದಿರುವ ರಾಜ್ಯ. ನಮ್ಮ ಕುಟುಂಬಕ್ಕೂ ಚಿಕ್ಕಮಗಳೂರಿಗೆ ಅವಿನಾಭಾವ ಸಂಬಂಧ ಇದೆ. ನಮ್ಮ ತಂದೆ ದೇಶಕ್ಕಾಗಿ ಹುತಾತ್ಮರಾದರು. ಹುತಾತ್ಮರಾದ ನಂತರ ಬೆಂಗಳೂರು ನಗರ ಸಿಲಿಕಾನ್ ಸಿಟಿ ಆಯ್ತು ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ