ಬೆಂಗಳೂರು: ಇಂದು ಕರ್ನಾಟಕಕ್ಕೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಚುನಾವಣಾ ಪ್ರಚಾರಕ್ಕೆ ಬರುತ್ತಿದ್ದಾರೆ. ಹಳೇ ಮೈಸೂರು ಟಾರ್ಗೆಟ್ ಮಾಡ್ಕೊಂಡು ಪ್ರಿಯಾಂಕಾ ರಾಜ್ಯಕ್ಕೆ ಎಂಟ್ರಿ ಕೊಡ್ತಿದ್ದಾರೆ. ಇಂದು ಮಧ್ಯಾಹ್ನ 12 ಗಂಟೆಗೆ ಟಿ ನರಸೀಪುರದಲ್ಲಿ ಪಕ್ಷದ ಅಭ್ಯರ್ಥಿ ಡಾ.ಹೆಚ್ಸಿ ಮಹದೇವಪ್ಪ (HD Mahadevappa) ಪರವಾಗಿ ಪ್ರಚಾರ ನಡೆಸಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಹನೂರಿನಲ್ಲಿ (Hanur) ಮಹಿಳೆಯರ ಜೊತೆಗೆ ಪ್ರಿಯಾಂಕಾ ಗಾಂಧಿ ಸಂವಾದದಲ್ಲಿ ಭಾಗಿಯಾಗಲಿದ್ದಾರೆ. ಸಂಜೆ 5.30ಕ್ಕೆ ಕೃಷ್ಣರಾಜನಗರದಲ್ಲಿ ರೋಡ್ ಶೋ ಕೂಡ ನಡೆಸುತ್ತಿದ್ದಾರೆ.
ಕಬ್ಬು ಬೆಳೆಗಾರರ ಜೊತೆ ರಾಹುಲ್ ಗಾಂಧಿ ಸಭೆ
ಸೋಮವಾರ ಬೆಳಗಾವಿಯ ರಾಮದುರ್ಗದಲ್ಲಿ ರಾಹುಲ್ಗಾಂಧಿ ಕಬ್ಬು ಬೆಳೆಗಾರರ ಜೊತೆ ಸಂವಾದ ನಡೆಸಿದ್ರು. ರೈತರೊಂದಿಗೆ ಸಂವಾದ ನಡೆಸಿದ ರಾಹುಲ್ ಗಾಂಧಿ ಕೃಷಿ ಸಮಸ್ಯೆಗಳ ಬಗ್ಗೆ ರೈತರಿಂಣದ ಮಾಹಿತಿ ಕಲೆಹಾಕಿದ್ರು. ಭ್ರಷ್ಟ ಬಿಜೆಪಿ ಸರ್ಕಾರ ಕಿತ್ತುಹಾಕಿ, ನೀವು ಎದುರಿಸುತ್ತಿರುವ ಸಮಸ್ಯೆಗಳನ್ನ ಬಗೆಹರಿಸೋಣ. ಕಾಂಗ್ರೆಸ್ ಪಕ್ಷ ಎಂದಿಗೂ ರೈತರ ಬೆನ್ನಿಗೆ ನಿಲ್ಲಲಿದೆ ಎಂಬ ಭರವಸೆ ನೀಡಿದರು.
ಜಿಎಸ್ಟಿ ತೆಗೆದು ಹಾಕ್ತೀವಿ.
ಜಿಎಸ್‌ಟಿಯಿಂದ ರೈತಾಪಿ ವರ್ಗದವರಿಗೆ ಸಮಸ್ಯೆಯಾಗಿದೆ. ಜಿಎಸ್ಟಿ ಶ್ರೀಮಂತ ವ್ಯಕ್ತಿಗಳನ್ನ ಮತ್ತಷ್ಟು ಶ್ರೀಮಂತರನ್ನಾಗಿ ಮಾಡಿದೆ. ದೆಹಲಿಯಲ್ಲಿ ನಮ್ಮ ಸರ್ಕಾರ ಬಂದ್ರೆ ಐದು ತರಹದ ಜಿಎಸ್ಟಿ ತೆಗೆದುಹಾಕ್ತೀವಿ. ಈ ಸರ್ಕಾರ 40% ಸರ್ಕಾರ. ಲೂಟಿ ಸರ್ಕಾರ. ನಮ್ಮ ಸರ್ಕಾರ ರೈತರ, ಜನಸಮಾನ್ಯರ ಸರ್ಕಾರ ಎಂದು ಹೇಳಿದರು.
ಇದನ್ನೂ ಓದಿ: Kanakapura: ಡಿಕೆಶಿಗೆ ಸಾಥ್ ಕೊಟ್ಟ ಪತ್ನಿ ಉಷಾ; ಆರ್ ಅಶೋಕ್ ಸ್ಪರ್ಧೆ ಬಗ್ಗೆ ಹೇಳಿದ್ದು ಹೀಗೆ
ಗದಗ ನಗರದ ತಿರಂಗಾ ಪಾರ್ಕ್ನಲ್ಲಿ ನಡೆದ ಯುವ ನಿಧಿ, ಭಾರತ್ ಜೋಡೋ ಕಾರ್ಯಕ್ರಮ ವಿಷಯವಾಗಿ ಚರ್ಚೆ ನಡೆಸಿದರು. ಯುವಕರ ಸಮಸ್ಯೆಗಳು, ನಿರುದ್ಯೋಗವನ್ನೇ ಪ್ರಮುಖವಾಗಿ ಚರ್ಚೆ ಮಾಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ