ಬೆಂಗಳೂರು: “ಕನ್ನಡಿಗರನ್ನು (Kannadigas) ಅದರಲ್ಲೂ ಕರ್ನಾಟಕದ ಮಹಿಳೆಯರನ್ನು (women of Karnataka) ನೋಡಿದರೆ ನನಗೆ ನಿಜಕ್ಕೂ ಹೆಮ್ಮೆ ಆಗುತ್ತದೆ” ಅಂತ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ (Congress leader Priyanka Gandhi) ಹೇಳಿದ್ದಾರೆ. ರಾಜಧಾನಿ ಬೆಂಗಳೂರಿನ ಅರಮನೆ ಮೈದಾನದಲ್ಲಿ (Bengaluru Palace Ground) ಕಾಂಗ್ರೆಸ್ ಆಯೋಜಿಸಿದ್ದ ‘ನಾ ನಾಯಕಿ’ (Naa Nayaki) ಸಮಾರಂಭದಲ್ಲಿ ಭಾಗಿವಹಿಸಿ ಮಾತನಾಡಿದ ಅವರು, “ನೀವು ಭುವನೇಶ್ವರಿ ದೇವಿ, ಚಾಮುಂಡಿ ತಾಯಿಯ ಮಕ್ಕಳು” ಎಂದರು. “ರಾಣಿ ಚೆನ್ನಮ್ಮ, ಬಸವಣ್ಣ ಮುಂತಾದ ಖ್ಯಾತ ವ್ಯಕ್ತಿಗಳು ಈ ನಾಡಿನಲ್ಲಿ ಹುಟ್ಟಿದ್ದಾರೆ. ಬಸವಣ್ಣನವರು ಎಲ್ಲರೂ ಸಮಾನರು ಎಂದು ಸಾರಿದ್ದರು” ಅಂತ ಸ್ಮರಿಸಿಕೊಂಡಿದ್ದಾರೆ.
“ನಿಮ್ಮನ್ನು ನೋಡಿದರೆ ಹೆಮ್ಮೆಯಾಗುತ್ತದೆ”
ಕರ್ನಾಟಕದಲ್ಲಿ ಸಾಕಷ್ಟು ಕೈಗಾರಿಕಾ ವಲಯಳಿವೆ ಎಂದ ಪ್ರಿಯಾಂಕಾ ಗಾಂಧಿ, ಅದರಲ್ಲೂ ಐಟಿ ಕ್ಷೇತ್ರ ಇಲ್ಲಿ ಸಾಕಷ್ಟು ಪ್ರಗತಿಯಲ್ಲಿದೆ ಎಂದರು. ನಿಮ್ಮನ್ನು ನೋಡಿದ್ರೆ ಹೆಮ್ಮೆ ಆಗುತ್ತೆ, ನೀವು ಭುವನೇಶ್ವರಿ, ಚಾಮುಂಡಿ ತಾಯಿ ಮಕ್ಕಳು. ರಾಣಿ ಚೆನ್ನಮ್ಮ, ಬಸವಣ್ಣ ಈ ನಾಡಿನಲ್ಲಿ ಹುಟ್ಟಿದ್ದಾರೆ. ಎಲ್ಲರೂ ಸಮಾನರು ಎಂದು ಬಸವಣ್ಣ ಸಾರಿದ್ದರು ಅಂತ ಸ್ಮರಿಸಿದರು.
“ಅನಿವಾರ್ಯವಾಗಿ ಸೋನಿಯಾಗಾಂಧಿ ರಾಜಕೀಯ ಪ್ರವೇಶ”
ನಾನು ಸೋನಿಯಾ ಗಾಂಧಿ ಅವರನ್ನು ನೋಡಿಕೊಂಡು ಬೆಳೆದಿದ್ದು. ಸೋನಿಯಾ ಗಾಂಧಿ ಅವರು ರಾಜೀವ್ ಗಾಂಧಿ ಅವರನ್ನು ಮದುವೆಯಾಗಿ ಭಾರತಕ್ಕೆ ಬಂದ್ರು. ದೇಶದ ಸಂಸ್ಕೃತಿ ತಿಳಿದುಕೊಳ್ಳಲು ಸೋನಿಯಾ ಗಾಂಧಿ ತುಂಬಾ ಪ್ರಯತ್ನ ಪಟ್ರು. ಈ ನಡುವೆಯೇ ಅನಿವಾರ್ಯ ಕಾರಣದಿಂದ ಜನರ ಸೇವೆ ಮಾಡೋದಕ್ಕೆ ರಾಜಕೀಯಕ್ಕೆ ಬಂದರು ಅಂತ ತಮ್ಮ ತಾಯಿಯವರನ್ನು ಸ್ಮರಿಸಿಕೊಂಡರು.
“ಈಗ ಸರ್ಕಾರ ಬದಲಿಸುವ ಸಮಯ ಬಂದಿದೆ”
ಮಹಿಳೆಯರು ಜೀವನ ಸಾಗಿಸಲು ಎಷ್ಟು ಕಷ್ಟ ಪಡ್ತಾ ಇದ್ದಾರೆ ಅಂತ ನನಗೆ ಗೊತ್ತಿದೆ. ಕೊರೊನದ ಬಳಿಕ ಜೀವನ ದುಸ್ತರ ಆಗಿದೆ, ಹೀಗಾಗಿ ಅವರೆಲ್ಲರ ಕಷ್ಟ ನನಗೂ ಕೂಡ ಮನವರಿಕೆ ಆಗಿದೆ ಅಂತ ಪ್ರಿಯಾಂಕಾ ಗಾಂಧಿ ಹೇಳಿದ್ರು. ಈಗ ಸರ್ಕಾರ ಬದಲಿಸಲು ಸಮಯ ಬಂದಿದೆ. ನಿಮಗೆ ಉದ್ಯೋಗ, ಮಕ್ಕಳ ಭವಿಷ್ಯ, ಮಕ್ಕಳ ವಿಧ್ಯಾಭ್ಯಾಸ ಎಲ್ಲ ಸರಿಯಾಗಬೇಕು. ಶೇಕಡಾ 50ರಷ್ಟು ಮಹಿಳೆಯರು ಈ ದೇಶದಲ್ಲಿ ಇದ್ದೇವೆ. ಆರ್ಥಿಕವಾಗಿ ಮಹಿಳೆಯರು ಸ್ವಾವಲಂಬಿ ಆಗಬೇಕು. ನೀವು ಶಕ್ತಿವಂತರಗಬೇಕು, ನಿಮ್ಮ ಶಕ್ತಿ ಅರಿವಾಗಬೇಕು ಅಂತ ಪ್ರಿಯಾಂಕಾ ಗಾಂಧಿ ಕರೆ ಕೊಟ್ಟರು.
"ಈ ವೇದಿಕೆಯಿಂದ ಮಹಿಳೆಯರು ಸಂದೇಶ ನೀಡೋಣ"
ನೀವು ರಾಜಕೀಯ ಅರಿತುಕೊಳ್ಳಬೇಕು, ರಾಜಕೀಯ ಪಕ್ಷಗಳು ಮಹಿಳೆಯರ ಕಡಗಣನೆ ಮಾಡಿವೆ. ರಾಜಕೀಯ ಪಕ್ಷಗಳಿಗೆ ಈ ವೇದಿಕೆಯಿಂದ ನಾವು ಸಂದೇಶ ನೀಡಬೇಕು ಅಂತ ಹುರಿ ದುಂಬಿಸಿದರು. ಬಿಜೆಪಿ 8 ವರ್ಷದಿಂದ ಆಡಳಿತ ಮಾಡುತ್ತಿದೆ. ಆದರೆ ನಿಮ್ಮ ಮಕ್ಕಳಿಗೆ ಉದ್ಯೋಗ ಸಿಕ್ಕಿದೆಯಾ? ಅಂತ ಪ್ರಿಯಾಂಕಾ ಗಾಂಧಿ ಪ್ರಶ್ನಿಸಿದ್ರು. ಇನ್ನು 3 ತಿಂಗಳಲ್ಲಿ ರಾಜ್ಯದಲ್ಲಿ ಚುನಾವಣೆ ಬರ್ತಾ ಇದೆ. ಹೀಗಾಗಿ ನೀವೆಲ್ಲ ಈಗಲೇ ವಿಚಾರ ಮಾಡಬೇಕು. ಯಾರಿಗೆ ಮತಹಾಕಬೇಕು ಅಂತ ತೀರ್ಮಾನಿಸಬೇಕು ಅಂತ ಕರೆ ನೀಡಿದ್ರು.
“ರಾಜ್ಯದಲ್ಲಿ ಶೇಕಡಾ 40ರ ಬಿಜೆಪಿ ಸರ್ಕಾರ ಇದೆ”
ರಾಜ್ಯದಲ್ಲಿ ಶೆ. 40ರ ಬಿಜೆಪಿಸರ್ಕಾರವಿದೆ ಅಂತ ಗುಡುಗಿದ ಪ್ರಿಯಾಂಕಾ ಗಾಂಧಿ, ನಿಮ್ಮ ತೆರಿಗೆ ಹಣವನ್ನು ಭ್ರಷ್ಟಾಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಬೆಂಗಳೂರಿಗೆ 8 ಸಾವಿರ ಕೋಟಿ ರೂ. ಬಜೆಟ್ ಇದೆ. ಆದರೆ ಅಷ್ಟು ಕೆಲಸ ಬಿಜೆಪಿ ಮಾಡಿದೆಯಾ? ಅಂತ ಪ್ರಿಯಾಂಕಾ ಗಾಂಧಿ ಪ್ರಶ್ನಿಸಿದರು.
“ಬಿಜೆಪಿ ಸರ್ಕಾರದಿಂದ ಬೆಲೆ ಏರಿಕೆ”
ಕಾಂಗ್ರೆಸ್ ಸರ್ಕಾರ ಇದ್ದಾಗ ಸಿಲಿಂಡರ್ ಬೆಲೆ ಎಷ್ಟಿತ್ತು? ಬಿಜೆಪಿ ಸರ್ಕಾರ ಬಂದ ಮೇಲೆ ಸಿಲಿಂಡರ್ ಬೆಲೆ ಎಷ್ಟು ಏರಿಕೆ ಆಗಿದೆ? ಮಕ್ಕಳ ಶಾಲೆ ಪೀಸ್ ಸೇರಿದಂತೆ ಎಲ್ಲವೂ ಬೆಲೆ ಏರಿಕೆ ಆಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ ಅಂತ ಆರೋಪಿಸಿದರು. ಜನರ ಪರವಾಗಿ ಬಿಜೆಪಿ ಕೆಲಸ ಮಾಡಲ್ಲ, ಬದಲಾಗಿ ಬಂಡವಾಳಶಾಹಿ ಪರವಾಗಿ ಮಾತ್ರ ಕೆಲಸ ಮಾಡುತ್ತಿದೆ ಅಂತ ಆರೋಪಿಸಿದ್ರು.
“ಕಾಂಗ್ರೆಸ್ ಸರ್ಕಾರ ಹಲವು ಯೋಜನೆ ತಂದಿತ್ತು”
ಸರ್ಕಾರಿ ಉದ್ಯೋಗಗಳು ಇವತ್ತು ಮಾರಾಟಕ್ಕಿವೆ. ಬಿಜೆಪಿ ಕೇವಲ ಉಳ್ಳವರ ಪರವಾಗಿದೆ, ಬಡವರ ಪರ ಇಲ್ಲ. ಸಿದ್ದರಾಮಯ್ಯ ಸರ್ಕಾರ ಅನೇಕ ಜನಪರ ಕಾರ್ಯಕ್ರಮ ಕೊಟ್ಟಿತ್ತು. ಸಿದ್ದರಾಮಯ್ಯ ಹಲವು ಭಾಗ್ಯ ಕಾರ್ಯಕ್ರಮ ನೀಡಿದ್ದಾರೆ. ಇಂದಿರಾ ಕ್ಯಾಂಟಿನ್ ನೀಡಿದ್ದರು. ಸ್ತ್ರೀ ಶಕ್ತಿ ಸಂಘ ಕೊಡುಗೆ ನೀಡಿದ್ದು ಕಾಂಗ್ರೆಸ್. ಈಗ 'ನಾ ನಾಯಕಿ' ಕಾರ್ಯಕ್ರಮ ಕಾಂಗ್ರೆಸ್ ನೀಡ್ತಾ ಇದೆ ಅಂತ ಶ್ಲಾಘಿಸಿದ್ರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ