PSI Scam: ಸರ್ಕಾರದ ರಕ್ಷಣೆಗಾಗಿ ಮಾತ್ರ ಈ ತನಿಖೆ: ಪ್ರಿಯಾಂಕ್ ಖರ್ಗೆ ಆರೋಪ

ಬಂಧಿಸಿದ ಆರೋಪಿಗಳ ವಿವರ ಸರ್ಕಾರ ಯಾಕೆ ನೀಡುತ್ತಿಲ್ಲ. ಇಲ್ಲಿವರೆಗೆ ತಲೆಮರೆಸಿಕೊಂಡಿರುವರು ಎಷ್ಟು ಜನ? ಸರ್ಕಾರವನ್ನ ರಕ್ಷಣೆ ಮಾಡಲು ಮಾತ್ರವಷ್ಟೇ ತನಿಖೆ ನಡೆಲಾಗ್ತಿದೆ ಎಂದು ಆರೋಪಿಸಿದರು.

ಪ್ರಿಯಾಂಕ್ ಖರ್ಗೆ

ಪ್ರಿಯಾಂಕ್ ಖರ್ಗೆ

  • Share this:
PSI Recruitment Scam: ಪಿಎಸ್‌ಐ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣ ಸಂಬಂಧ ಕಲಬುರಗಿಯಲ್ಲಿ (Kalaburagi) ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ (Priyank Kharge) ಸುದ್ದಿಗೋಷ್ಠಿ ನಡೆಸಿದರು. ಆರಂಭದಲ್ಲಿಯೇ ಸರ್ಕಾರಕ್ಕೆ ಪ್ರಿಯಾಂಕ್ ಖರ್ಗೆ ಕೆಲವು ಪ್ರಶ್ನೆಗಳನ್ನು ಕೇಳಿದರು. ಮೇ 5 ರಂದು ಗೃಹ ಸಚಿವ ಆರಗ ಜ್ಞಾನೇಂದ್ರ (Home Minister Araga Jnanendra) ಅವರಿಗೆ ಪತ್ರವನ್ನ ಬರೆದು  ಪ್ರಭು ಚೌವ್ಹಾಣ್, ಶಶೀಲ್ ನಮೋಶಿರನ್ನ ಕರೆಯಿಸಿ ವಿಚಾರಣೆ ನಡೆಸಲು ಮನವಿ ಮಾಡಲಾಗಿತ್ತು. ವಿಚಾರಣೆಗೆ ಕರಸೊದು ಮತ್ತು ಬಿಢೋದು ಸರ್ಕಾರಕ್ಕೆ (Government) ಬಿಟ್ಟಿದ್ದು. ಮಾರ್ಚ್ 10 ರಂದು ಐದು ಅಭ್ಯರ್ಥಿಗಳು ಅಕ್ರಮದ ಬಗ್ಗೆ ದೂರು ಸಲ್ಲಿಸಿರುತ್ತಾರೆ ಅಂತಾ ಗೃಹ ಸಚಿವರು ಹೇಳಿದ್ದಾರೆ. ದೂರುಗಳು ಬಂದಿವೆ, ಆದರೆ ಇದನ್ನ ನಾವು ಮೇಲಾಧಿಕಾರಿಯ ಪರಿಶೀಲನೆಗೆ ನೀಡಿದ್ದೇನೆ ಎಂದಿದ್ದಾರೆ. ಅರ್ಹತೆ ಪ್ರಕಾರ ಅಂಕ ನೀಡಲಾಗಿದೆ ಅಂತಾ ಹೇಳಿದ್ದಾರೆ

ಈಗ ತನಿಖೆಯಲ್ಲಿ ಲೋಪ ಕಂಡು ಬಂದಿದೆ. ತನಿಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ. 12 ಜನರನ್ನ ಸಸ್ಪೆಂಡ್ ಮಾಡಲಾಗಿದೆ. ತನಿಖೆ ನಡೆಸಿದ ಹಿರಿಯ ಅಧಿಕಾರಿಗಳು ಯಾರು? ತನಿಖೆ ನಡೆದಿದ್ದು ಹೇಗೆ? ಆ ವರದಿ ಎಲ್ಲಿದೆ? ಗೃಹ ಸಚಿವರು ಸದನದಲ್ಲಿ ಉತ್ತರ ಕೊಟ್ಟ ಮೇಲೆ ಆಫಿಸಿಯಲ್ ವರದಿ ಏನಾಗಿದೆ ಎಂದು ಪ್ರಶ್ನೆ ಮಾಡಿದರು.

ಬಂಧಿತರ ಪಟ್ಟಿ ಹೇಳ್ತಿಲ್ಲ ಯಾಕೆ?

ವಿಧಾನ ಪರಿಷತ್‌ನಲ್ಲಿ ಗೃಹ ಸಚಿವರು ಅಕ್ರಮ ನಡೆದಿಲ್ಲ ಅಂತಾ ಹೇಳಿದ್ದಾರೆ. ಪಿಎಸ್‌ಐ ಅಕ್ರಮದಲ್ಲಿ ಬಂಧಿತರ ನಿಖರ ಲಿಸ್ಟ್ ಇದುವರೆಗೆ ಸರ್ಕಾರ ಹೇಳುತ್ತಿಲ್ಲ. ಬಂಧಿಸಿದ ಆರೋಪಿಗಳ ವಿವರ ಸರ್ಕಾರ ಯಾಕೆ ನೀಡುತ್ತಿಲ್ಲ. ಇಲ್ಲಿವರೆಗೆ ತಲೆಮರೆಸಿಕೊಂಡಿರುವರು ಎಷ್ಟು ಜನ? ಸರ್ಕಾರವನ್ನ ರಕ್ಷಣೆ ಮಾಡಲು ಮಾತ್ರವಷ್ಟೇ ತನಿಖೆ ನಡೆಲಾಗ್ತಿದೆ ಎಂದು ಆರೋಪಿಸಿದರು.

ಇದನ್ನೂ ಓದಿ:  Bannerghatta: ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಚಿರತೆ ಸಫಾರಿ; ಬನ್ನೇರುಘಟ್ಟ ಜೈವಿಕ ಉದ್ಯಾನದ ಮತ್ತೊಂದು ಮೈಲಿಗಲ್ಲು

ವೆಬ್ ಸೈಟ್ ಬಂದ್ ಮಾಡಿದ್ದು ಏಕೆ?

ಇದುವರೆಗೆ ಎಷ್ಟು ಜನರಿಗೆ ನೋಟಿಸ್ ನೀಡಿದ್ದಿರಿ? ಎಷ್ಟು ಜನರಿಗೆ ವಿಚಾರಣೆ ನಡೆಸಿದ್ದಿರಿ? ವೆಬ್ ಸೈಟ್ ನಲ್ಲಿ ಎಲ್ಲಾ ಅಭ್ಯರ್ಥಿಗಳ ವರದಿ ಅಪ್ಲೋಡ್ ಮಾಡುತ್ತಿದ್ದರು. ಆದ್ರೆ ಈಗ ವೆಬ್ ಸೈಟ್ ನಲ್ಲಿ ಅವರ ಓಎಂಆರ್ ಶೀಟ್ ಹಾಕಬೇಕು. ಆದ್ರೆ ಕಳೆದ 6 ತಿಂಗಳ ಹಿಂದೆ ವೆಬ್ ಸೈಟ್ ಬಂದಾಗಲಾಗಿದೆ. ವೆಬ್ ಸೈಟ್ ನಲ್ಲಿ ಹಾಕಿದ್ರೆ ಅವರ ಮಾಹಿತಿ ಸಾರ್ವಜನಿಕರಿಗೆ ಸಿಗ್ತಾ ಇತ್ತು . ಸರ್ಕಾರ ಯಾಕೆ ವೆಬ್ ಸೈಟ್ ಬಂದ್ ಮಾಡಿದೆ ಅನ್ನೋದು ಸಾರ್ವಜನಿಕರಿಗೆ ತಿಳಿಸಬೇಕು ಎಂದು ಆಗ್ರಹಿಸಿದರು.

ಮೇನ್ ಕಿಂಗ್ ಪಿನ್ ಗಳು ಇರೋದು ಬೆಂಗಳೂರಿನಲ್ಲಿ

ಪೇದೆಗಳ ನೇಮಕಾತಿಯಲ್ಲೂ ಸಹ ಅಕ್ರಮ ನಡೆದಿತ್ತು. ಅದೇ ಜನರು ಪಿಎಸ್‌ಐ ಅಕ್ರಮದಲ್ಲೂ ಭಾಗಿಯಾಗಿದ್ದಾರೆ. ಪೇದೆ ನೇಮಕಾತಿ ಅಕ್ರಮ ತನಿಖೆ ಎಲ್ಲಿಗೆ ಬಂದಿದೆ. ಬಂಧಿತ ದಿವ್ಯಾ ಹಾಗರಗಿ ಮತ್ತು ಆರ್‌ಡಿ ಪಾಟೀಲ್ ಕಿಂಗ್‌ಪಿನ್ ಅಂತಾ ಹೇಳ್ತಿದಾರೆ. ಇವರೇ ಕಿಂಗ್‌ಪಿನ್ ಅಂತಾ ಸರ್ಕಾರದ ಹೇಳಿಕೆಯನ್ನ ನಾ ಒಪ್ಪುವುದಿಲ್ಲ ಎಂದರು.

ಇದನ್ನೂ ಓದಿ: Exclusive: ಪೊಲೀಸರ ಮುಂದೆ ಆಸಿಡ್ ದಾಳಿಕೋರ ಹೇಳಿದ್ದೇನು? ನಾಗನ ವಿಕೃತ ಮನಸ್ಸು ಕಂಡು ಶಾಕ್!

ಹೋಮ್ ಮಿನಿಸ್ಟರ್ ಗೆ ಅವರ ಪಕ್ಷದವರೇ ಸರ್ಟಿಫಿಕೇಟ್ ಕೊಟ್ಟಿದ್ದಾರೆ

ಮೆನ್ ಕಿಂಗ್‌ಪಿನ್‌ಗಳು ಇರೋದು ಬೇರೆ, ಅವರು ಬೆಂಗಳೂರಿನಲ್ಲಿ ಇದ್ದಾರೆ. ಮಹಾನ್ ಕಿಂಗ್‌ಪಿನ್‌ಗಳು ಇರೋದು ಬೆಂಗಳೂರಿನಲ್ಲಿ ಅವರನ್ನ ಹೊರತರಬೇಕು. ಗೃಹ ಸಚಿವರು ಅನ್‌ಫಿಟ್ ಅಂತಾ ನಾ ಹೇಳುವುದಿಲ್ಲ. ಅವರದ್ದೇ ಪಕ್ಷದ ಕೆಲವರು ಈಗಾಗಲೇ ಹೋಮ್‌ ಮಿನಿಸ್ಟರ್‌ಗೆ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಗೃಹ ಸಚಿವರು ಹೇಗಿದಾರೆಂದು ನಾನು ಹೇಳುವುದಕ್ಕಿಂತ 57 ಸಾವಿರ ಸ್ಟೂಡೆಂಟ್ಸ್ ಹೇಳಿದ್ದಾರೆ ಎಂದು ಕಿಡಿಕಾರಿದರು.
Published by:Mahmadrafik K
First published: