ಈಗಲಾದರೂ ನಿಮ್ಮ ಕಣ್ಣಿಗೆ ಕಲಬುರ್ಗಿ ಕಾಣಿಸಿತೇ?; ರೈಲ್ವೆ ಸಚಿವ ಪಿಯೂಷ್​ ಗೋಯೆಲ್​ಗೆ ಕುಟುಕಿದ ಪ್ರಿಯಾಂಕ್​ ಖರ್ಗೆ

ಪೌರತ್ವ ಪರ ಮೆರವಣಿಗೆಗಳು ನಿಮ್ಮ ಕಣ್ಣಿಗೆ ಗೋಚರಿಸುತ್ತವೆ. ಅದೇ ಜಿಲ್ಲೆಗಳಿಗೆ ನೀಡಿದ ಅನುದಾನಗಳ ಬಗ್ಗೆ ಚಕಾರ ಎತ್ತುವುದಿಲ್ಲ. ಅದರಲ್ಲಿಯೂ ಕಲಬುರ್ಗಿ ಕಡೆಗೂ ನಿಮ್ಮ ಕಣ್ಣಿಗೆ ಬಿದ್ದಿದೆ. ಜಿಲ್ಲೆಗೆ  ಮಂಜೂರಾದ ರೈಲ್ವೆ ವಲಯ ಹಾಗೂ ನಿಮ್ಜ್ ಯೋಜನೆಯ ಸದ್ಯದ ಸ್ಥಿತಿ ಏನೆಂಬುದು ತಿಳಿಸಿ ಎಂದು ಆಗ್ರಹಿಸಿದ್ದಾರೆ.

news18-kannada
Updated:January 14, 2020, 12:30 PM IST
ಈಗಲಾದರೂ ನಿಮ್ಮ ಕಣ್ಣಿಗೆ ಕಲಬುರ್ಗಿ ಕಾಣಿಸಿತೇ?; ರೈಲ್ವೆ ಸಚಿವ ಪಿಯೂಷ್​ ಗೋಯೆಲ್​ಗೆ ಕುಟುಕಿದ ಪ್ರಿಯಾಂಕ್​ ಖರ್ಗೆ
ಪ್ರಿಯಾಂಕ್​ ಖರ್ಗೆ-ಪಿಯೂಶ್​ ಗೋಯೆಲ್​
  • Share this:
ಕಲಬುರ್ಗಿ (ಜ.14): ಪೌರತ್ವ ತಿದ್ದುಪಡಿ ಕಾಯ್ದೆ ಪರ ವಿರೋಧ ಕುರಿತು ದೇಶದ ಹಲವು ಭಾಗಗಳಲ್ಲಿ ಪರ ವಿರೋಧ ಹೋರಾಟಗಳು ನಡೆಯುತ್ತಿದೆ. ಇನ್ನು ಇತ್ತೀಚೆಗೆ ಕೇಂದ್ರ ಸರ್ಕಾರದ ಈ ಕಾಯ್ದೆ ಬೆಂಬಲಿಸಿ ಕಲಬುರ್ಗಿಯಲ್ಲಿ ನಡೆದ ಬೃಹತ್​ ಮೆರವಣಿಗೆ ಸುದ್ದಿಯಾಗಿತ್ತು. ಈ ಕುರಿತು ಟ್ವೀಟ್​ ಮಾಡಿ ಕೇಂದ್ರ ರೈಲ್ವೆ ಸಚಿವರಾದ ಪಿಯೂಷ್​ ಗೋಯಲ್​ ಗಮನಸೆಳೆದಿದ್ದರು. ಈ ಟ್ವೀಟ್​ಗೆ ತಿರುಗೇಟು ನೀಡಿರುವ ಕಾಂಗ್ರೆಸ್​ ನಾಯಕ ಪ್ರಿಯಾಂಕ್​ ಖರ್ಗೆ ಈಗಲಾದರೂ ನಿಮಗೆ ಕಲಬುರ್ಗಿ ಕಾಣಿಸಿತಲ್ಲಾ ಸಂತಸ ತಂದಿದೆ. ಅಂದಹಾಗೇ ಕಲಬುರ್ಗಿ ರೈಲ್ವೆ ವಿಭಾಗದ  ಕಥೆಯೇನು ಎಂದು ಪ್ರಶ್ನಿಸಿದ್ದಾರೆ.ಪೌರತ್ವ ಪರ ಮೆರವಣಿಗೆಗಳು ನಿಮ್ಮ ಕಣ್ಣಿಗೆ ಗೋಚರಿಸುತ್ತವೆ. ಅದೇ ಜಿಲ್ಲೆಗಳಿಗೆ ನೀಡಿದ ಅನುದಾನಗಳ ಬಗ್ಗೆ ಚಕಾರ ಎತ್ತುವುದಿಲ್ಲ. ಅದರಲ್ಲಿಯೂ ಕಲಬುರ್ಗಿ ಕಡೆಗೂ ನಿಮ್ಮ ಕಣ್ಣಿಗೆ ಬಿದ್ದಿದೆ. ಜಿಲ್ಲೆಗೆ  ಮಂಜೂರಾದ ರೈಲ್ವೆ ವಲಯ ಹಾಗೂ ನಿಮ್ಜ್ ಯೋಜನೆಯ ಸದ್ಯದ ಸ್ಥಿತಿ ಏನೆಂಬುದು ತಿಳಿದಿಲ್ಲ. ಈ ಬಗ್ಗೆ ಜಿಲ್ಲಾ ಸಂಸದರಾದ ಉಮೇಶ ಜಾಧವ್ ಅವರಿಗೂ ಮಾಹಿತಿ ಇಲ್ಲ ಈ ಕುರಿತು ಮೊದಲು ತಿಳಿಸಿ ಎಂದು ಟ್ವೀಟ್​ನಲ್ಲಿ ಆಗ್ರಹಿಸಿದ್ದಾರೆ.

ಮೋದಿ ವೈಫಲ್ಯದಿಂದ ರಾಜ್ಯದ ಅನುದಾನಕ್ಕೆ ಕತ್ತರಿ : ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಆರ್ಥಿಕ ನೀತಿ ಮತ್ತು ದುರಾಡಳಿತದ ಪರಿಣಾಮ ಕರ್ನಾಟಕಕ್ಕೆ ಬರಬೇಕಿದ್ದ ಅನುದಾನಕ್ಕೆ ಕತ್ತರಿ ಬಿದ್ದಿದೆ.  ವಸತಿ ಯೋಜನೆಗಳಿಗೆ 1 ಸಾವಿರ ಕೋಟಿ, ಮಹಿಳಾ ಕಲ್ಯಾಣ ಯೋಜನೆಗಳಿಗೆ 1,786 ಕೋಟಿ, ಶೈಕ್ಷಣಿಕ ಯೋಜನೆಗಳಿಗೆ 267 ಕೋಟಿ, ಯುವಜನ ಸಬಲೀಕರಣ ಯೋಜನೆಗಳಿಗೆ 474 ಕೋಟಿ ರೂಪಾಯಿ ಹಣವನ್ನು ನೀಡದೆ ಕೇಂದ್ರ ಸರ್ಕಾರ ಸತಾಯಿಸುತ್ತಿದೆ ಎಂದು ಇದೇ ವೇಳೆ ಆರೋಪಿಸಿದ್ದಾರೆ.

ಇದನ್ನು ಓದಿ: ರಾಜ್ಯಕ್ಕೆ ಅಮಿತ್​ ಶಾ ಆಗಮಿಸಿದಾಗಲೇ ಸಂಪುಟ ವಿಸ್ತರಣೆ ಕುರಿತು ಚರ್ಚೆ; ಸಿಎಂ ಯಡಿಯೂರಪ್ಪ

ರಾಜ್ಯದ ಜಿ.ಎಸ್.ಟಿ. ಪಾಲಿನ ತೆರಿಗೆಯಲ್ಲಿಯೂ ಕೇಂದ್ರ ಸರ್ಕಾರ ಸುಮಾರು 7000 ಕೋಟಿ ರೂಪಾಯಿ ನೀಡದೇ ಸತಾಯಿಸುತ್ತಿದೆ. ಹೀಗೆಯೇ ಮುಂದುವರೆದರೆ ಕರ್ನಾಟಕದ ಪರಿಸ್ಥಿತಿ ಏನಾಗಲಿದೆ. ಸುಭಿಕ್ಷೆಯ ನಾಡೆನಿಸಿಕೊಂಡ ನಮ್ಮ ದೇಶ ಬಿಜೆಪಿ ಆಡಳಿತದಲ್ಲಿ ಅಧೋಗತಿಗೆ ತಲುಪಿರೋದು ಆತಂಕಕಾರಿ ಎಂದು ಇದೇ ಸಂದರ್ಭದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.
Published by: Seema R
First published: January 14, 2020, 12:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading