ಬೆಂಗಳೂರು: ಪೊಲೀಸ್ ಸಬ್ ಇನ್ಸ್ಪೆಕ್ಟರ್ ಅಕ್ರಮ ನೇಮಕಾತಿ ಹಗರಣವನ್ನು (Karnataka PSI Scam) ಮುಚ್ಚಿ ಹಾಕಲು ಗೃಹ ಸಚಿವ (Home Minister) ಆರಗ ಜ್ಞಾನೇಂದ್ರ (Araga Jnanendra) ಅವರು ಪ್ರಯತ್ನಿಸುತ್ತಿದ್ದಾರೆ. ಅಕ್ರಮದಲ್ಲಿ ಶಾಸಕರು (MLAs), ಹಿರಿಯ ಅಧಿಕಾರಿಗಳು (Senior Officers) ಶಾಮೀಲಾಗಿರುವ ಬಗ್ಗೆ ಸಾಕ್ಷಿಗಳಿವೆ. ಈ ಬಗ್ಗೆ ತನಿಖೆ ನಡೆಸಿ ಅಂತ ಅಭ್ಯರ್ಥಿಯೊಬ್ಬರು ಗೃಹ ಸಚಿವರ ಬಳಿಕ ಮನವಿ ಮಾಡಿದ್ದಾರೆ. ಆದರೆ ಸಚಿವರು ಪ್ರಭಾವಿಗಳಿಗೆ ರಕ್ಷಣೆ ನೀಡುತ್ತಿದ್ದಾರೆ ಎಂದು ಕೆಪಿಸಿಸಿ (KPCC) ಸಂವಹನ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ (Priyank Kharge) ಹೇಳಿದ್ದಾರೆ.
ಈ ಕುರಿತಂತೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಪ್ರಿಯಾಂಕ್ ಖರ್ಗೆ ಅವರು, ಅಕ್ರಮ ನೇಮಕಾತಿ ಕುರಿತಂತೆ ಅಭ್ಯರ್ಥಿಯೊಬ್ಬರು ಸಚಿವರನ್ನು ಭೇಟಿಯಾಗಿ ಅಕ್ರಮದಲ್ಲಿ ಶಾಸಕರು ಮತ್ತು ಪ್ರಭಾವಿಗಳು ಶಾಮೀಲಾಗಿದ್ದಾರೆ ಅಂತ ಸಾಕ್ಷ್ಯಗಳನ್ನು ನೀಡಿದ್ದರು. ಆದರೆ ಈ ಬಗ್ಗೆ ತನಿಖೆ ನಡೆಸಿಲ್ಲ. ಅಂದು ಸಾಕ್ಷಿ ನೀಡಿದ್ದ ವ್ಯಕ್ತಿಯೇ ಸಚಿವರಿಗೆ ಕರೆ ಮಾಡಿ ತನಿಖೆ ಸರಿಯಾಗಿ ಮಾಡಿಲ್ಲ ಅಂತ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಆಡಿಯೋ ತುಣುಕನ್ನು ಬಿಡುಗಡೆ ಮಾಡುತ್ತಿದ್ದೇನೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.
ಗೃಹ ಸಚಿವ ಆರಗ ಜ್ಞಾನೇಂದ್ರ ಅವರೇ ಆಡಿಯೋದಲ್ಲಿ ಮಾತನಾಡಿದ್ದಾರೆ
ಸುದ್ದಿಗೋಷ್ಠಿಯಲ್ಲಿ ಆಡಿಯೋ ಬಿಡುಗಡೆ ಮಾಡಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ಈ ಆಡಿಯೋ ಬಗ್ಗೆ ಗೃಹ ಸಚಿವರೇ ಹೇಳಬೇಕು. ಗೃಹ ಸಚಿವರೇ ಆಡಿಯೋದಲ್ಲಿ ಮಾತನಾಡಿದ್ದಾರೆ. ಇದಕ್ಕೂ ನಮಗೆ ನೊಟೀಸ್ ಕೊಡ್ತಾರಾ? ನಾವು ಸಾಕ್ಷ್ಯ ಕೊಟ್ಟರೂ ನೀವು ತನಿಖೆ ಮಾಡುತ್ತಿಲ್ಲ. ಹೀಗಂತ ಗೃಹ ಸಚಿವರಿಗೆ ಅಭ್ಯರ್ಥಿ ಕೇಳಿದ್ದಾನೆ. ಆದರೆ ಅದರ ಬಗ್ಗೆ ಗೃಹ ಸಚಿವರ ಬಳಿ ಉತ್ತರವಿಲ್ಲ. ಎಲ್ಲರಿಗೂ ಜಾಮೀನು ಸಿಗುತ್ತಿದೆ ಅಂತ ಗೃಹ ಸಚಿವರು ಹೇಳಿದ್ದಾರೆ. ಆ ವೇಳೆ ಅಭ್ಯರ್ಥಿ, ಅದು ಹೇಗೆ ಜಾಮೀನು ಸಿಗುತ್ತೆ ಅಂತ ಕೇಳಿದ್ದು, ಇದಕ್ಕೆ ಸಚಿವರು, ಟೆಕ್ನಿಕಲ್ ಪ್ರಾಬ್ಲಂ ಇರಬಹುದು ಎಂದಿದ್ದಾರೆ.
ಆ ಬಳಿಕ ಆಡಿಯೋದಲ್ಲಿ ಅಭ್ಯರ್ಥಿ ಹೇಳ್ತಾರೆ, ಡಿಜಿ, ಐಜಿಪಿ, ಕಲಬುರಗಿ ಆಯುಕ್ತರ ಸಾಕ್ಷ್ಯ ಕೊಟ್ಟಿದ್ದೇವೆ. ಈ ಬಗ್ಗೆ ಮೂವರು ಶಾಸಕರ ಮೇಲೆ ದೂರಿದೆ. ನೀವೇಕೆ ಇನ್ನೂ ತನಿಖೆ ಮಾಡ್ತಿಲ್ಲ ಅಂತ, ಗೃಹ ಸಚಿವರಿಗೆ ಅಭ್ಯರ್ಥಿ ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಅವರ ಬಗ್ಗೆ ಸಾಕ್ಷ್ಯಗಳಿಲ್ಲ ಅಂತಾರೆ.
ಇದನ್ನೂ ಓದಿ: Belagavi Politics: ಬೆಳಗಾವಿಯಲ್ಲಿ ಬಿಜೆಪಿಗೆ ಬಿಗ್ ಶಾಕ್? ಕುಂದಾನಗರಿಯಲ್ಲಿ ಕುಂದುತ್ತಿದೆಯಾ ಕಮಲ ಶಕ್ತಿ?
ಸದನದಲ್ಲಿ ಚರ್ಚೆ ಮಾಡಲು ಯಾಕೆ ಅವಕಾಶ ಕೊಡ್ತಿಲ್ಲ
ಹಾಗಾದರೇ, ಆ ಮೂವರು ಶಾಸಕರು ಯಾರು? ಇದನ್ನ ಏಕೆ ಸದನದಲ್ಲಿ ಚರ್ಚೆ ಮಾಡೋಕು ಬಿಡುತ್ತಿಲ್ಲ. ಇದಕ್ಕೂ ಮುನ್ನ ಒಬ್ಬ ಎಂಎಲ್ಎ ಆಡಿಯೋ ರಿಲೀಸ್ ಆಗಿತ್ತು. ಆ ಆಡಿಯೋ ಧ್ವನಿ ನನ್ನದೇ ಅಂತ ಶಾಸಕ ಹೇಳಿದ್ದಾರೆ. ಶಾಸಕರ ಭವನದಲ್ಲೇ ಡೀಲ್ ಆಗಿದೆ. ಆದರೂ ಯಾಕೆ ಆ ಶಾಸಕರ ಮೇಲೆ ಕ್ರಮ ತೆಗೆದುಕೊಳ್ಳಲಿಲ್ಲ. ಇದುವರೆಗೂ ಯಾಕೆ ಅವರನ್ನು ವಿಚಾರಗೊಳಪಡಿಸಲಿಲ್ಲ ಎಂದು ಸರ್ಕಾರಕ್ಕೆ ಪ್ರಿಯಾಂಕ್ ಖರ್ಗೆ ಪ್ರಶ್ನೆ ಮಾಡಿದ್ದಾರೆ.
ಯತ್ನಾಳ್, ಯಡಿಯೂರಪ್ಪ ಹಾಗೂ ಅವರ ಪುತ್ರರನ್ನು ಯಾಕೆ ತನಿಖೆ ಮಾಡಿಲ್ಲ
ಬಿಜೆಪಿ ಪಕ್ಷದ ಶಾಸಕರೇ ಆಗಿರುವ ಯತ್ನಾಳ್ ಅವರೇ ಹೇಳುವಂತೆ, ಮಾಜಿ ಸಿಎಂ ಯಡಿಯೂರಪ್ಪ, ವಿಜಯೇಂದ್ರ ಇದ್ದರಲ್ಲಿ ಇದ್ದಾರೆ. ಅವರು ಬಹಿರಂಗವಾಗಿಯೇ ಹೇಳಿಕೆ ಕೊಟ್ಟಿದ್ದಾರೆ. ಆದರೆ ಇದುವರೆಗೂ ಯಾಕೆ ಯತ್ನಾಳ್ ಅವರನ್ನು ವಿಚಾರಣೆಗೊಳಪಡಿಸಿಲ್ಲ? ಅಥವಾ ಯಡಿಯೂರಪ್ಪ, ಅವರ ಪುತ್ರನನ್ನ ವಿಚಾರಣೆ ಮಾಡಿದ್ರಾ?
ಆದರೆ, ನಾನು ಪೇಪರ್ ನಲ್ಲಿ ಬಂದಿದ್ದನ್ನ ಹೇಳಿದ್ದೆ. ಅದಕ್ಕೆ ನನಗೆ ನೊಟೀಸ್ ಕೊಡ್ತಾರೆ ಯಾಕೆ? ಅಮೃತ್ ಪಾಲ್ ಕೋರ್ಟ್ ನಲ್ಲಿ ಸಾಕ್ಷ್ಯ ಹೇಳ್ತೇನೆ ಅಂತಾರೆ. ಯಾಕೆ ಅವರನ್ನ ಅಲ್ಲಿ ಹೇಳೋಕೆ ಬಿಟ್ಟಿಲ್ಲ.
#PSIScam ಕುರಿತಾಗಿ ಗೃಹಸಚಿವರು ಹಾಗೂ ಅಭ್ಯರ್ಥಿ ನಡುವಿನ ಫೋನ್ ಸಂಭಾಷಣೆಯಿಂದ ಹಲವು ಅನುಮಾನಗಳು, ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿವೆ.@JnanendraAraga ಅವರಿಗೆ ಅಭ್ಯರ್ಥಿ ನೀಡಿದ ಸಾಕ್ಷಿಗಳು ಏನು? ಅವುಗಳನ್ನು ಮುಚ್ಚಿಟ್ಟಿರುವುದೇಕೆ?
ಡಿಜಿ, ಐಜಿಪಿ ಹಾಗೂ ಕಲ್ಬುರ್ಗಿ ಕಮಿಷನರ್ ಬಗ್ಗೆ ದಾಖಲೆ ನೀಡಿದ್ದರೂ ಆವರ ತನಿಖೆಯಾಗದಿರುವುದೇಕೆ?
— Karnataka Congress (@INCKarnataka) December 17, 2022
ಬಿಜೆಪಿ ಜನಸಂಪರ್ಕದಲ್ಲಿ ಯಾತ್ರೆಯಲ್ಲಿ ಮಾತ್ರ ಸಿಎಂ ತಾಕತ್ ಬಗ್ಗೆ ಮಾತನಾಡ್ತಾರೆ. ಈಗ ತಾಕತ್ ಇದ್ದರೆ ಜಡ್ಜ್ ಮುಂದೆ ಪಾಲ್ ಅವರನ್ನು ಸಾಕ್ಷ್ಯ ಹೇಳಿಕೆ ನೀಡಲು ಬಿಡಿ. ಯಾಕೆ ಇನ್ನೂ ಅವರನ್ನ ನೀವು ಬಿಡ್ತಿಲ್ಲ? ಯಾಕೆ ನ್ಯಾಯಾಂಗ ತನಿಖೆಗೆ ನೀವು ಕೊಡ್ತಿಲ್ಲ. ನಾವು ತನಿಖೆಗೆ ಕೊಟ್ಟಿದ್ದೇವೆ ಅಂತಿದ್ದೀರಿ. ಈಗಲಾದರೂ ನ್ಯಾಯಾಂಗ ತನಿಖೆಗೆ ಕೊಡಿ ಎಂದು ಪ್ರಿಯಾಂಕ್ ಖರ್ಗೆ, ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಮೊದಲು ದಿವ್ಯಾ ಹಾಗರಗಿ ಯಾರೋ ಗೊತ್ತಿಲ್ಲ ಅಂದ್ರು, ನಾವು ಹಂಗಲ್ಲ
ಮೊದಲು ದಿವ್ಯಾ ಹಾಗರಗಿ ಯಾರೂ ಗೊತ್ತಿಲ್ಲ ಅಂದರು. ಆದರೆ ಆಕೆ ಬಿಜೆಪಿಯ ಎಲ್ಲಾ ಸ್ಥಾನಗಳಲ್ಲಿ ಇದ್ದರು. ಅವರಂತೆ ನಾವು ಸುಳ್ಳು ಹೇಳಿಲ್ಲ. ಮಹಾಂತೇಶ್ ಪಾಟೀಲ್ ನಮ್ಮವರಲ್ಲ ಅಂತ ಹೇಳಲ್ಲ. ಅವರು ಹಿಂದೆಯೇ ರಾಜೀನಾಮೆ ಕೊಟ್ಟಿದ್ದರು. ಅವರು ಪಾರ್ಟಿಯಲ್ಲಿ ಇರಲಿಲ್ಲ. ಅವರು ವೈಯುಕ್ತಿಕ ಕಾರಣಕ್ಕೆ ರಾಜೀನಾಮೆ ಕೊಟ್ಟಿರಬಹುದು. ಅಲ್ಲಮಪ್ರಭು ಮಾಜಿ ಶಾಸಕರು ಸ್ನೇಹ ಇರಬಹುದು. ಕಾರಣವಕ್ಕೆ ಅವರನ್ನು ಭೇಟಿಯಾಗಿರಬಹುದು. ನಾವು ಮಹಾಂತೇಶ್ ನಮ್ಮವರಲ್ಲ ಅಂತ ಹೇಳಲಿಲ್ಲ ಅಲ್ವಾ. ಆದರೆ ದಿವ್ಯಾ ಹಾಗರಗಿ ನಮ್ಮವರಲ್ಲ ಅಂತ ಬಿಜೆಪಿಯವರು ಹೇಳ್ತಿದ್ದಾರೆ.
ಪ್ರಕರಣವನ್ನ ಲಾಕಜಿಲ್ ಎಂಡ್ಗೆ ತರುತ್ತೇವೆ
ಯಾವುದೇ ಕಾರಣಕ್ಕೂ ನಾವು ಹಗರಣದ ಹೋರಾಟ ಕೈಬಿಟ್ಟಿಲ್ಲ. ನಮ್ಮ ಹೋರಾಟ ಮುಂದುವರೆದಿದೆ. ಪೊನ್ನಣ್ಣ ಅವರು ಹೈಕೋರ್ಟಿಗೆ ಪಿಐಎಲ್ ಹಾಕಿದ್ದಾರೆ. ಬಹುಶಃ ಮುಂದಿನವಾರ ವಿಚಾರಣೆಗೆ ಬರಬಹುದು. ನಾವು ಕಾನೂನಾತ್ಮಕವಾಗಿಯೂ ಹೋರಾಟ ನಡೆಸಿದ್ದೇವೆ. ಇದನ್ನ ಲಾಜಿಕಲ್ ಎಂಡ್ ಗೆ ಕೊಂಡೊಯ್ತೇವೆ. ಯಾವುದೇ ಕಾರಣಕ್ಕೂ ಅರ್ಧದಲ್ಲಿ ಕೈಬಿಡಲ್ಲ ಎಂದು ಸ್ಪಷ್ಟಪಡಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ