ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ (BJP Government) ಮೇಲೆ ಕಾಂಗ್ರೆಸ್ (Congress) ಬಾಂಬ್ ಸಿಡಿಸಿದೆ. ಕಾಕಂಬಿ ರಫ್ತಿನಲ್ಲಿ (Kakambi) ಭಾರೀ ಅಕ್ರಮ ಎಸಗಲಾಗಿದೆ ಅಂತ ಪ್ರಿಯಾಂಕ್ ಖರ್ಗೆ, ಸ್ಫೋಟಕ ಆಡಿಯೋ ಬಿಡುಗಡೆ ಮಾಡಿದ್ದಾರೆ. ಡೀಲ್ ಮಾಡಿದ್ದಾರೆ ಎನ್ನಲಾದ ಆಡಿಯೋ ರಿಲೀಸ್ (Audio Release) ಮಾಡಲಾಗಿದ್ದು, ಖುದ್ದು ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai) ಭಾಗಿಯಾಗಿದ್ದಾರೆಂದು ಆರೋಪಿಸಿದ್ದಾರೆ. ಇಬ್ಬರು ಸಂಸದರು ಸಿಎಂ ಬೊಮ್ಮಾಯಿ ಮೇಲೆ ಒತ್ತಡ ಹೇರಿದ್ದಾರೆ. ಕೇಂದ್ರ ಹಣಕಾಸು ಸಚಿವರ ಕೈವಾಡವಿದೆ. ನೇರವಾಗಿ ಸಿಎಂ ಬೊಮ್ಮಾಯಿ ಡೀಲ್ ಮಾಡಿದ್ದಾರೆ ಅಂತ ಆರೋಪಿಸಿದ್ದಾರೆ.
ಏನಿದು ಆರೋಪ?
ಮದ್ಯ ತಯಾರಿಕೆಗೆ ಕಾಕಂಬಿ ಬಳಸಲಾಗುತ್ತೆ. ಒಂದು ಟನ್ ಕಾಕಂಬಿಗೆ 10 ಸಾವಿರ ರೂಪಾಯಿ ಇದೆ. ಗೋವಾದಿಂದ 2 ಲಕ್ಷ ಮೆಟ್ರಿಕ್ ಟನ್ ರಫ್ತು ಮಾಡುತ್ತಿದ್ದಾರೆ ಎಂಬ ಆರೋಪವಿದೆ. ಯಾಕೆ ನಮ್ಮಲ್ಲಿ ಕಾರವಾರ ಬಂದರು ಇಲ್ವೇ? ಯಾಕೆ ಎಲ್ಲರ ಕಣ್ತಪ್ಪಿಸಿ ರಫ್ತು ಮಾಡುತ್ತಾರೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನೆ ಮಾಡಿದ್ದಾರೆ. ಕಾಕಂಬಿ ರಫ್ತು ಗುತ್ತಿಗೆದಾರ ಹಾಗೂ ಖಾಸಗಿ ಕಂಪನಿಗೆ ಸೇರಿದ್ದ ಇಬ್ಬರು ಮಾತಾಡಿದ್ದಾರೆ ಎನ್ನಲಾದ ಆಡಿಯೋಯನ್ನು ಪ್ರಿಯಾಂಕ್ ಖರ್ಗೆ ರಿಲೀಸ್ ಮಾಡಿದ್ದಾರೆ.
ಇದನ್ನೂ ಓದಿ: Bhaskar Rao: ರಾಜ್ಯಕ್ಕೆ ಆಗಮಿಸೋ ಮುನ್ನವೇ ಕೇಜ್ರಿವಾಲ್‌ಗೆ ಶಾಕ್, ಎಎಪಿ ತೊರೆದು ಬಿಜೆಪಿ ಸೇರ್ತಿದ್ದಾರೆ ಭಾಸ್ಕರ್ ರಾವ್!
ಬಿಜೆಪಿ ಮುಕ್ತ ಕರ್ನಾಟಕ ಆಗುವ ಕಾಲ ಬರುತ್ತಿದೆ
ಕರ್ನಾಟಕ ಭ್ರಷ್ಟಾಚಾರದ ಕೂಪ ಆಗಿದೆ. ರಾಜ್ಯ ಬಿಜೆಪಿ ಸರ್ಕಾರ ಜನರಿಗೆ ಹೇಗೆ ಮೋಸ ಮಾಡಿದೆ ಅನ್ನೋದು ಜನರಿಗೆ ಗೊತ್ತಿದೆ. ಜನರು ದಡ್ಡರಲ್ಲ. ಈ ಬಾರಿ ಜನರು ತಕ್ಕ ಉತ್ತರ ಕೊಡುತ್ತಾರೆ ಅಂತ ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಅಲ್ಲದೆ, ಬಿಜೆಪಿಗೆ ಲಿಂಗಾಯತ ಮತ ತಪ್ಪುತ್ತಿದೆ ಅಂತ ನಾನು ಜಾತಿ ಮೇಲೆ ಹೇಳೋಲ್ಲ. ಕರ್ನಾಟಕ ಬಿಜೆಪಿ ಮುಕ್ತ ಆಗುವ ಕಾಲ ಬರುತ್ತಿದೆ ಅಂತ ಹೇಳಿದರು.
ಯಡಿಯೂರಪ್ಪ ಅವರು ರಾಜೀನಾಮೆ ಕೊಟ್ಟು, ವಿಧಾನಸೌಧದಿಂದ ರಾಜಭವನಕ್ಕೆ ಹೋಗುವಾಗ ಕಣ್ಣೀರು ಹಾಕಿದರು. ಅವರು ಯಾಕೆ ಕಣ್ಣೀರು ಹಾಕಿದರು ಅನ್ನೋದನ್ನು ಬಿಜೆಪಿ ನಾಯಕರು ಹೇಳಬೇಕು ಅಂತ ಡಿಕೆ ಶಿವಕುಮಾರ್ ಪ್ರಶ್ನಿಸಿದರು.
ಇದನ್ನೂ ಓದಿ: HD Deve Gowda: ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರಿಗೆ ಅನಾರೋಗ್ಯ, ಖಾಸಗಿ ಆಸ್ಪತ್ರೆಗೆ ದಾಖಲು
ನಮ್ಮ ಪಕ್ಷದ ಬಗ್ಗೆ ಅವರಿಗೆ ಚಿಂತೆ ಯಾಕೆ?
ಈ ನಡುವೆ ಬಿಎಸ್ ಯಡಿಯೂರಪ್ಪ ಕಣ್ಣೀರು ಹಾಕಿದರು ಎನ್ನುವ ಡಿಕೆ ಶಿವಕುಮಾರ್ ಹೇಳಿಕೆಗೆ ಸಚಿವ ಸೋಮಶೇಖರ್ ತಿರುಗೇಟು ಕೊಟ್ಟಿದ್ದಾರೆ. ಡಿಕೆ ಶಿವಕುಮಾರ್ಗೆ ನಮ್ಮ ಪಕ್ಷದ ಬಗ್ಗೆ ಯಾಕೆ ಚಿಂತೆ ಮಾಡುತ್ತಿದ್ದಾರೆ. ನಾನು ಬಿಜೆಪಿಯಲ್ಲಿ ಇದ್ದೇನೆ. ಬಿಜೆಪಿಯಲ್ಲೇ ಸ್ಪರ್ಧೆ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್‌ನವರು ಬಿಟ್ಟಿರುವ ಆಡಿಯೋ ಸುಳ್ಳು
ಕಾಕಂಬಿ ರಫ್ತಿಗೆ ಅವಕಾಶ ಕೊಡುವ ಮೂಲಕ ಅಬಕಾರಿ ಇಲಾಖೆಯಲ್ಲಿ 200 ಕೋಟಿ ರೂಪಾಯಿ ಅಕ್ರಮ ನಡೆದಿದೆ ಎಂಬ ಆರೋಪಕ್ಕೆ ಸ್ಪಷ್ಟನೆ ನೀಡಿರುವ ಅಬಕಾರಿ ಇಲಾಖೆ ಸಚಿವ ಕೆ ಗೋಪಾಲಯ್ಯ, ಪ್ರಿಯಾಂಕ್ ಖರ್ಗೆ ಮಾಡಿರುವ ಆರೋಪಗಳು ಸುಳ್ಳು. ಕಾಂಗ್ರೆಸ್ ನಾಯಕರು ಹತಾಶರಾಗಿದ್ದಾರೆ, ಹೀಗಾಗಿ ಇಂತಹ ಆರೋಪಗಳನ್ನು ಮಾಡುತ್ತಿದ್ದಾರೆ. ಅಬಕಾರಿ ಇಲಾಖೆಯಲ್ಲಿ ಈ ಸಲ ದಾಖಲೆಯ ತೆರಿಗೆ ಸಂಗ್ರಹ ಆಗಿದೆ.
ಆದಾಯ ತರುವ ನಿಟ್ಟಿನಲ್ಲಿ ಪ್ರಾಮಾಣಿಕ ಕೆಲಸ ಮಾಡಿದ್ದೇವೆ. ಕೆ.ಎನ್ ರೀಸೋರ್ಸ್ ಸಂಸ್ಥೆಗೆ ಈ ಮೊದಲೇ ಅನುಮತಿ ಕೊಟ್ಟಿದ್ದೇವೆ. ಅನುಮತಿ ಕೊಟ್ಟಿದ್ದರಲ್ಲಿ ಯಾರ ಒತ್ತಡವೂ ಇರಲಿಲ್ಲ. ಕಾಂಗ್ರೆಸ್‌ನವರು ಬಿಟ್ಟಿರುವ ಆಡಿಯೋ ಸುಳ್ಳು, ಅವರು ಮಾಡಿರುವ ಆರೋಪ ನಿರಾಧಾರ. ಕಾಂಗ್ರೆಸ್‌ನವರು ಏನೇ ಆರೋಪ ಮಾಡಿದರೂ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೋಲುತ್ತೆ ಅಂತ ತಿರುಗೇಟುಕೊಟ್ಟರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ