Priyank Kharge: ಜನೋತ್ಸವ ರದ್ದಾಗಿದ್ದು ಜನಾಕ್ರೋಶಕ್ಕೆ ಹೆದರಿ; ಗೃಹ ಸಚಿವರಿಗೆ ಪ್ರಿಯಾಂಕ್ ಖರ್ಗೆ ಚಾಲೆಂಜ್!

ಬಿಜೆಪಿ ಸರ್ಕಾರದ ಮುಂದೆ ಪ್ರಿಯಾಂಕ್ ಖರ್ಗೆ 3 ಬೇಡಿಕೆ ಇಟ್ಟಿದ್ದಾರೆ. ತನಿಖೆ ಬೇಗ ನಡೆಯಬೇಕು, ಪಾರದರ್ಶಕವಾಗಿರಬೇಕು, ಕೋಮು ಗಲಭೆಗಳ ಹತ್ಯೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಕೊಡಿ. ಎಲ್ಲಾ ಪ್ರಕಕಣಗಳನ್ನ ನ್ಯಾಯಾಂಗ ತನಿಖೆಗೆ ಕೊಡಿ ಎಂದ್ರು. ನಮ್ಮ ಆಡಳಿತದ ಸಮಯದಲ್ಲಿ ಆದ ಕೇಸ್​ನನ್ನು ಸೇರಿಸಿ ನ್ಯಾಯಾಂಗ ತನಿಖೆ ಮಾಡಿಸಿ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಪ್ರಿಯಾಂಕ್ ಖರ್ಗೆ

ಪ್ರಿಯಾಂಕ್ ಖರ್ಗೆ

  • Share this:
ಬೆಂಗಳೂರು (ಜು.28): ಬಿಜೆಪಿ (BJP) ಸರ್ಕಾರ ಜನೋತ್ಸವ (Janotsava) ಕಾರ್ಯಕ್ರಮ ರದ್ದು ಪಡಿಸಲು ಅಸಲಿ ಕಾರಣವೇ ಬೇರೆ ಇದೆ ಎಂದು ಕಾಂಗ್ರೆಸ್​ ಶಾಸಕ ಪ್ರಿಯಾಂಕ್ ಖರ್ಗೆ (Priyank Kharge) ಕಿಡಿಕಾರಿದ್ದಾರೆ. ನನ್ನ ಮನಸ್ಸು ಒಪ್ತಿಲ್ಲ ಅದಕ್ಕೆ ರದ್ದು ಮಾಡಿದ್ದೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದ್ದಾರೆ. ಪ್ರವೀಣ್ ಕುಟುಂಬದ ನೋವಿಗೆ ಜನೋತ್ಸವ ರದ್ದಾಗಲಿಲ್ಲ, ರದ್ದು ಮಾಡಿದ್ದು ಬಿಜೆಪಿ ಕಾರ್ಯಕರ್ತರ ಆಕ್ರೋಶಕ್ಕೆ ಎಂದು ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.

ಜನಾಕ್ರೋಶಕ್ಕೆ ಹೆದರಿ ಜ್ಞಾನೋದಯವಾಗಿದೆ

ಜುಲೈ 27 ರಂದೇ ಪ್ರವೀಣ್ ಹತ್ಯೆಯಾಗುತ್ತೆ ಕ್ಯಾನ್ಸಲ್ ಮಾಡಬೇಕಿದ್ದರೆ ಸಂಜೆಯೇ ಮಾಡಬೇಕಿತ್ತು. ಯಾಕೆ ಅವರು ರದ್ಧು ಮಾಡಲಿಲ್ಲ. ಕಟೀಲ್ ಕಾರಿನ ಮೇಲೆ ಅಟ್ಯಾಕ್ ಆಯ್ತು ಅದಕ್ಕೆ ಈ ನಿರ್ಧಾರ ಮಾಡಿದ್ರಾ? ಬಿಜೆಪಿ ಕಾರ್ಯಕರ್ತರು ರಾಜೀನಾಮೆ ನೀಡಿದ್ರು. ಇದಕ್ಕೆ ಹೆದರಿ ಸರ್ಕಾರ ರದ್ದು ಪಡಿಸಿತಾ? ಜನಾಕ್ರೋಶಕ್ಕೆ ಹೆದರಿ ಜ್ಞಾನೋದಯವಾಗಿದೆ. ಸಿಎಂ ಸಿಂಪಥಿ ಅನ್ನೋದು ಸುಳ್ಳು ಇವರನ್ನು ನಂಬಿದ್ರೆ ಅಷ್ಟೇ ಅಂತ ಪ್ರವೀಣ್ ಪತ್ನಿ ಹೇಳಿದ್ದಾರೆ. ಜನೋತ್ಸವ ರದ್ದಾಗಿದ್ದು ಅನುಕಂಪಕ್ಕಾಗಿ ಅಲ್ಲ ಕ್ಯಾನ್ಸಲ್ ಮಾಡಿದ್ದು ಜನಾಕ್ರೋಶಕ್ಕೆ ಹೆದರಿ, ಇವತ್ತು ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದ ಎಂದು ಪ್ರಿಯಾಂಕ್​ ಖರ್ಗೆ ಕಿಡಿಕಾರಿದ್ರು.

ಹರ್ಷನಿಗೊಂದು ನ್ಯಾಯ, ಪ್ರವೀಣ್ ಗೊಂದು ನ್ಯಾಯವೇ?

ಹರ್ಷನಿಗೊಂದು ನ್ಯಾಯ, ಪ್ರವೀಣ್ ಗೊಂದು ನ್ಯಾಯವೇ? ಹರ್ಷನ ಹತ್ಯೆಯಲ್ಲಿ ನಿಮಗೆ ಲಾಭವಿತ್ತು. ಇಲ್ಲಿ ನಿಮಗೆ ಲಾಭ ಇಲ್ವಲ್ವಾ. ಅದಕ್ಕೆ ಅವರ ಮನೆಗೆ ಹೋಗಿ ಕುಟುಂಬಕ್ಕೆ ಸಾಂತ್ವನ ತುಂಬುತ್ತಿಲ್ಲ ಎಂದು ಪ್ರಿಯಾಂಕ್​ ಖರ್ಗೆ ಆರೋಪಿಸಿದ್ದಾರೆ.

ಇದನ್ನೂ ಓದಿ: Ashwath Narayan: ಮೃತ ಪ್ರವೀಣ್ ಕುಟುಂಬಕ್ಕೆ 10 ಲಕ್ಷ ರೂ. ವೈಯಕ್ತಿಕ ನೆರವು ನೀಡಿದ ಅಶ್ವತ್ಥ ನಾರಾಯಣ

ಸ್ವಯಂಪ್ರೇರಿತರಾಗಿ ನೀವೇ ರಾಜೀನಾಮೆ ಕೊಟ್ಬಿಡಿ

ಗೃಹ ಸಚಿವರು ಅದ್ಯಾಕೆ ಇದ್ದಾರೋ ಗೊತ್ತಿಲ್ಲ, ಇಷ್ಟೆಲ್ಲಾ ಆದ್ರೂ  ಎಲ್ಲಿದ್ದಾರೋ ಗೊತ್ತಿಲ್ಲ. ನೀವೆ ಸುಮ್ಮನೆ ರಾಜೀನಾಮೆ ಕೊಟ್ಬಿಡಿ. ನಿಮಗೆ ಕಾನ್ಫಿಡೆಂಟ್ ಇದೆಯಾ? ಬನ್ನಿ ಚುನಾವಣೆಗೆ ಹೋಗೋಣ, ಮೋದಿಯವರ ಮೇಲೆ ನಂಬಿಕೆ ಇದೆ ಅಲ್ವಾ? ಬನ್ನಿ ಚುನಾವಣೆ ಎದುರಿಸೋಣ, ನಾವು ಎಲ್ಲದಕ್ಕೂ ರೆಡಿಯಾಗಿದ್ದೇವೆ ಎಂದು ಸವಾಲ್ ಹಾಕಿದ್ದಾರೆ.

ಸರ್ಕಾರದ ಮುಂದೆ 3 ಬೇಡಿಕೆ ಇಟ್ಟ ಪ್ರಿಯಾಂಕ್​ ಖರ್ಗೆ

ಬಿಜೆಪಿ ಸರ್ಕಾರದ ಮುಂದೆ ಪ್ರಿಯಾಂಕ್ ಖರ್ಗೆ 3 ಬೇಡಿಕೆ ಇಟ್ಟಿದ್ದಾರೆ. ತನಿಖೆ ಬೇಗ ನಡೆಯಬೇಕು, ಪಾರದರ್ಶಕವಾಗಿರಬೇಕು, ಕೋಮು ಗಲಭೆಗಳ ಹತ್ಯೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಕೊಡಿ. ಎಲ್ಲಾ ಪ್ರಕಕಣಗಳನ್ನ ನ್ಯಾಯಾಂಗ ತನಿಖೆಗೆ ಕೊಡಿ ಎಂದ್ರು. ನಮ್ಮ ಆಡಳಿತದ ಸಮಯದಲ್ಲಿ ಆದ ಕೇಸ್​ನನ್ನು ಸೇರಿಸಿ ನ್ಯಾಯಾಂಗ ತನಿಖೆ ಮಾಡಿಸಿ. ಕೋಮು ಸೌಹಾರ್ಧತೆಗೆ ಧಕ್ಕೆ ತರುವ ಸಂಘಟನೆ ನಿಷೇಧಿಸಿ. ಯಾವುದೇ ಸಂಘಟನೆ ಇದ್ದರೂ ನಿಷೇಧ ಮಾಡಿ. ಇದಕ್ಕೆ ನಮ್ಮ ಸಂಪೂರ್ಣ ಸಹಕಾರವಿದೆ ಎಂದು ಪ್ರಿಯಾಂಕ್​ ಖರ್ಗೆ ಹೇಳಿದ್ದಾರೆ. ಸಿಎಂ, ಗೃಹ ಸಚಿವರು ರಾಜೀನಾಮೆ ಕೊಡಬೇಕು. ಇದು ನಮ್ಮ ಪಕ್ಷದ 3 ಬೇಡಿಕೆಗಳು ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಇದನ್ನೂ ಓದಿ: BJP Program: ಜನೋತ್ಸವಕ್ಕೆ ಮಾಡಿ ಉಳಿದ ಊಟ ಅನಾಥಾಶ್ರಮಕ್ಕೆ, ಇದು ನಿಯಮ ಬಾಹಿರ; ಆ ಮಕ್ಕಳಿಗೆ ಮಿಕ್ಕ ಆಹಾರ ಕೊಡ್ಬೇಡಿ!

ಶೋಭಾ ಕರಂದ್ಲಾಜೆಗೆ ಟಾಂಗ್ ಕೊಟ್ಟ ಪ್ರಿಯಾಂಕ್ ಖರ್ಗೆ

ಘಟನೆಗಳು ಸಂಭವಿಸಿದಾಗ ತಕ್ಷಣ NIA ಕೊಡ್ತೇವೆ ಎನ್ನುತ್ತೀರಾ‌? ಯಾಕೆ ಪೊಲೀಸ್ ಇಲಾಖೆ ಮೇಲೆ ನಂಬಿಕೆ ಇಲ್ಲ. ಯಾಕೆಂದರೆ ಹಣ ಕೊಟ್ಟು ಆ ಸ್ಥಾನಕ್ಕೆ ಬಂದಿದ್ದಾರೆ. ಹಾಗಾಗಿ ಅವರ ಮೇಲೆ‌ ನಂಬಿಕೆಯಿಲ್ಲ. ಬಿಜೆಪಿ ಕಾರ್ಯಕರ್ತರಿಗೂ ಅವರ ಮೇಲೆ ನಂಬಿಕೆಯಿಲ್ಲ. ಆದ್ದರಿಂದ NIA ಕೊಡಬೇಕು ಅಂತಾರೆ. ಪರೋಕ್ಷವಾಗಿ NIA ತನಿಖೆಗೆ ಒತ್ತಾಯ ಮಾಡಿದ್ದ ಶೋಭಾ ಕರಂದ್ಲಾಜೆಗೆ ಟಾಂಗ್ ಕೊಟ್ಟ ಪ್ರಿಯಾಂಕ್ ಖರ್ಗೆ
Published by:Pavana HS
First published: