Priyank Kharge: ನೌಕರಿ ಯುವಕರಿಗೆ ಬೇಕಾದ್ರೆ ಲಂಚ, ಯುವತಿಯರಿಗೆ ಬೇಕಾದ್ರೆ ಮಂಚ! ಸರ್ಕಾರದ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಕಲಬುರಗಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ರಾಜ್ಯ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ರು. “ಇದು ಲಂಚ, ಮಂಚದ ಸರ್ಕಾರ. ಯುವಕರಿಗೆ ನೌಕರಿ ಬೇಕು ಅಂದ್ರೆ ಅವರು ಲಂಚ ಕೊಡಬೇಕು. ಅದೇ ರೀತಿ ಯುವತಿಯರಿಗೆ ನೌಕರಿ ಬೇಕು ಅಂದ್ರೆ ಅವರು ಮಂಚ ಹತ್ತಬೇಕು” ಅಂತ ಆರೋಪಿಸಿದ್ರು.

ಸುದ್ದಿಗೋಷ್ಠಿ ನಡೆಸಿದ ಪ್ರಿಯಾಂಕ್ ಖರ್ಗೆ

ಸುದ್ದಿಗೋಷ್ಠಿ ನಡೆಸಿದ ಪ್ರಿಯಾಂಕ್ ಖರ್ಗೆ

  • Share this:
ಕಲಬುರಗಿ: ರಾಜ್ಯ ಸರ್ಕಾರದ (State Government) ವಿರುದ್ಧ ಮಾಜಿ ಸಚಿವ ಹಾಗೂ ಹಾಲಿ ಕಲಬುರಗಿಯ (Kalaburagi) ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ (Priyank Kharge) ಗಂಭೀರ ಆರೋಪ ಮಾಡಿದ್ದಾರೆ. ಪಿಎಸ್ಐ ಪರೀಕ್ಷೆಯಂತೆಯೇ (PSI Exam) ಕಳೆದ 7ರಂದು ನಡೆದ ಕೆಪಿಟಿಸಿಎಲ್ ಪರೀಕ್ಷೆಯಲ್ಲಿಯೂ (KPTCL) ಭಾರೀ ಅಕ್ರಮ ನಡೆದಿದೆ ಅಂತ ಅವರು ಆರೋಪಿಸಿದ್ದಾರೆ. ಕಲಬುರಗಿಯಲ್ಲಿ ಸುದ್ದಿಗೋಷ್ಠಿ (Pressmeet) ನಡೆಸಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ರಾಜ್ಯ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ರು. “ಇದು ಲಂಚ, ಮಂಚದ ಸರ್ಕಾರ. ಯುವಕರಿಗೆ ನೌಕರಿ ಬೇಕು ಅಂದ್ರೆ ಅವರು ಲಂಚ ಕೊಡಬೇಕು. ಅದೇ ರೀತಿ ಯುವತಿಯರಿಗೆ ನೌಕರಿ ಬೇಕು ಅಂದ್ರೆ ಅವರು ಮಂಚ ಹತ್ತಬೇಕು” ಅಂತ ಆರೋಪಿಸಿದ್ರು. ಸರಕಾರ ಯುವಕರಿಗೆ ಉದ್ಯೋಗ ಕೊಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದ ಅವರು, ಯುವಕರ ಭವಿಷ್ಯದ ಜೊತೆಗೆ ಇವರು ಚೆಲ್ಲಾಟವಾಡುತ್ತಿದ್ದಾರೆ. ಈ ಸರಕಾರದಲ್ಲಿ ಪ್ರತಿಯೊಂದು ಹುದ್ದೆಗಳು ಮಾರಾಟಕ್ಕಿವೆ ಅಂತ ಗಂಭೀರ ಆರೋಪ ಮಾಡಿದ್ರು.

“ಪಿಎಸ್ಐ ಪರೀಕ್ಷೆಯಂತೆ ಕೆಪಿಟಿಸಿಎಲ್ ಪರೀಕ್ಷೆಯಲ್ಲಿಯೂ ಅಕ್ರಮ”

ಮೊನ್ನೆ ಮೊನ್ನೆ ನಡೆದ KPTCL ನೇಮಕಾತಿ ಪರೀಕ್ಷೆಯಲ್ಲೂ ಅಕ್ರಮ ನಡೆದಿದೆ ಅಂತ ಪ್ರಿಯಾಂಕ್ ಖರ್ಗೆ ಆರೋಪಿಸಿದ್ರು. ಪಿಎಸ್ಐ ಅಕ್ರಮದ ರೀತಿಯಲ್ಲಿಯೇ KPTCL ನೇಮಕಾತಿಯಲ್ಲಿಯೂ ಬ್ಲ್ಯೂಟೂತ್ ಮೂಲಕ ಅಕ್ರಮ ನಡೆದಿದೆ. ಸ್ಮಾರ್ಟ್ ವಾಚ್ ಮೂಲಕ ಅಕ್ರಮ ನಡೆಸಿದ ಆರೋಪದ ಮೇಲೆ ಗೋಕಾಕನ ಒಬ್ಬ ಯುವಕನನ್ನು ಬಂಧಿಸಲಾಗಿದೆ ಅಂತ ಹೇಳಿದ್ರು.

“ಸುಮಾರು 300 ಕೋಟಿಗೂ ಹೆಚ್ಚು ಅಕ್ರಮದ ಶಂಕೆ”

KPTCL ನೇಮಕಾತಿ ಪರೀಕ್ಷೆಯಲ್ಲಿ ಸುಮಾರು 300 ಕೋಟಿಗೂ ಹೆಚ್ಚು ಭ್ರಷ್ಟಾಚಾರ ನಡೆದಿದೆ ಎಂದ ಪ್ರಿಯಾಂಕ್ ಖರ್ಗೆ, PSI ನೇಮಕಾತಿ ಅಕ್ರಮದಲ್ಲಿ ಐಪಿಎಸ್ ಅಧಿಕಾರಿಯೇ ಅರೆಸ್ಟ್ ಆಗಿದ್ದಾರೆ. ಅದಾಗ್ಯೂ ಮಧ್ಯವರ್ತಿಗಳಿಗೆ ಇಷ್ಟೊಂದು ಧೈರ್ಯ ಇದೆ ಅಂದ್ರೆ ಏನರ್ಥ ? ಇದು ಅಸಮರ್ಥ ಸರಕಾರ.. ಇವರಿಂದ ಏನೂ ಮಾಡಲು ಆಗೋದಿಲ್ಲ ಅಂತ ಮಧ್ಯವರ್ತಿಗಳಿಗೆ ಗೊತ್ತಿದೆ. 40 ಪರ್ಸೆಂಟ್ ಕೊಟ್ರೆ ವಿಧಾನಸೌಧವೂ ಮಾರಾಟ ಮಾಡಲು ರೆಡಿ ಇದ್ದಾರೆ ಇವರು ಅಂತ ಟೀಕಿಸಿದ್ರು.

ಇದನ್ನೂ ಓದಿ: ACB vs Lokayukta: ಎಸಿಬಿಯನ್ನೇ ರದ್ದು ಮಾಡಿದ್ದೇಕೆ ಹೈಕೋರ್ಟ್? ಲೋಕಾಯುಕ್ತಕ್ಕೆ ಬರುತ್ತಾ ಮತ್ತಷ್ಟು ಬಲ?

ಹಗರಣದ ಸೂಕ್ತ ತನಿಖೆಗೆ ಆಗ್ರಹ

ಕೆಪಿಟಿಸಿಎಲ್‌ನ ಸಹಾಯಕ ಎಂಜಿನಿಯರ್, ಕಿರಿಯ ಎಂಜಿನಿಯರ್, ಸಿವಿಲ್ ಎಂಜಿನಿಯರ್ ಸೇರಿದಂತೆ ಒಟ್ಟು 1492 ಹುದ್ದೆಗಳಿಗೆ ನೇಮಕಾತಿ ನಡೆಸಿದೆ. ಬ್ಲೂಟೂತ್ ಬಳಸಿ ಪರೀಕ್ಷೆ ಬರೆಯುತ್ತಿದ್ದ ಅಭ್ಯರ್ಥಿ ಗೋಕಾಕನಲ್ಲಿ ಬಂಧನಕ್ಕೊಳಗಾಗಿದ್ದಾನೆ. ನನಗಿರುವ ಮಾಹಿತಿಯ ಪ್ರಕಾರ ಒಟ್ಟು 600 ಹುದ್ದೆಗಳಿಗೆ ಡೀಲ್‌ ನಡೆದಿರುವ ಸಾಧ್ಯತೆ ಇದೆ. ಈ ಕೂಡಲೇ ಈ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು. ಇಲ್ಲವೇ ಎಸ್‌ಐಟಿ ರಚಿಸಬೇಕು’ ಎಂದು ಒತ್ತಾಯಿಸಿದರು.

“ಫಾಸ್ಟ್ ಟ್ರ್ಯಾಕ್ ಕೋರ್ಟ್ ರಚಿಸಿ”

3 ಲಕ್ಷ ಯುವಕರ ಭವಿಷ್ಯದ ಪ್ರಶ್ನೆ ಇದು ಎಂದ ಅವರು, ಪ್ರಶ್ನೆ ಪತ್ರಿಕೆ ಲೀಕ್ ಆದ ಕಾರಣ KPTCL ಮರು ಪರೀಕ್ಷೆ ನಡೆಸಲು ಸರಕಾರ ನಿರ್ಣಯ ಕೈಗೊಳ್ಳುತ್ತದೆಯೇ ? ಎಲ್ಲಾ ನೇಮಕಾತಿ ಹಗರಣದ ತನಿಖೆಗಾಗಿಯೇ ಸರಕಾರ ಫಾಸ್ಟ್ ಟ್ರ್ಯಾಕ್ ಕೋರ್ಟ್ ರಚನೆ ಮಾಡಬೇಕು, ಈ ಮೂಲಕ ಎಲ್ಲಾ ನೇಮಕಾತಿ ಹಗರಣದ ತನಿಖೆಯಾಗಬೇಕು ಅಂತ ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ರು.

ಇದನ್ನೂ ಓದಿ: Accident: ತಂದೆಯ ಎದುರೇ ಪ್ರಾಣಬಿಟ್ಟ ಪುಟ್ಟ ಮಗ! ನೋಡ ನೋಡುತ್ತಿದ್ದಂತೆ ನಡೆಯಿತು ಆ್ಯಕ್ಸಿಡೆಂಟ್

ಪ್ರಿಯಾಂಕ್ ಖರ್ಗೆ ಆರೋಪಕ್ಕೆ ಮಾಧುಸ್ವಾಮಿ ತಿರುಗೇಟು

ಇನ್ನು ಲಂಚ ಮಂಚದ ಬಗ್ಗೆ ಕಾಂಗ್ರೆಸ್ ಶಾಸಕ  ಪ್ರಿಯಾಂಕ್ ಖರ್ಗೆ ಆರೋಪ ವಿಚಾರಕ್ಕೆ ಸಚಿವ ಮಾಧುಸ್ವಾಮಿ ತಿರುಗೇಟು ನೀಡಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ ಅವರು ತಮ್ಮ ಆರೋಪಕ್ಕೆ ಬದ್ಧರಾಗಿ, ದಾಖಲೆ ನೀಡಲಿ. ದಾಖಲೆ ನೀಡಿದ ಬಳಿಕ ಆಮೇಲೆ ಮಾತನಾಡಲಿ ಅಂತ ಸವಾಲು ಹಾಕಿದ್ರು.
Published by:Annappa Achari
First published: