Karnataka Politics: ಸಚಿವ ಸುನೀಲ್ ಕುಮಾರ್, ಸಂಸದ ಪ್ರತಾಪ್ ಸಿಂಹಗೆ ಪ್ರಿಯಾಂಕ್ ಖರ್ಗೆ ಸವಾಲ್

ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರಕ್ಕೆ ಸಂಬಂಧಿಸಿದಂತೆ ರೋಹಿತ್ ಚಕ್ರತೀರ್ಥ ಅವರ ಸಮಿತಿ ಪ್ರಜ್ಞಾವಂತಿಕೆ ಬಗ್ಗೆ ನಮಗೆ ಅನುಮಾನ ಇದೆ. ಪ್ರತಿಯೊಂದು ಸಮಾಜಕ್ಕೂ ಪಠ್ಯಪುಸ್ತಕದಲ್ಲಿ ಅವಮಾನ ಮಾಡಿದ್ದಾರೆ. ಹಿರಿಯ ಬಿಜೆಪಿ ನಾಯಕರ ಮೌನ ಯಾಕೆ? ಸಮಾಜದ ಹೆಸರೇಳಿ ವೋಟು ತೆಗೆದುಕೊಳ್ತಾರೆ ಎಂದು ಪ್ರಿಯಾಂಕ್​ ಖರ್ಗೆ ಹೇಳಿದ್ದಾರೆ.

ಶಾಸಕ ಪ್ರಿಯಾಂಕ್​ ಖರ್ಗೆ

ಶಾಸಕ ಪ್ರಿಯಾಂಕ್​ ಖರ್ಗೆ

  • Share this:
ಬೆಂಗಳೂರು (ಜೂ 6): ಬಿಜೆಪಿ (BJP) ವಿರುದ್ಧ ಕಾಂಗ್ರೆಸ್​ ನಾಯಕ (Congress Leader) ಪ್ರಿಯಾಂಕ್​ ಖರ್ಗೆ ವಾಗ್ದಾಳಿ ನಡೆಸಲಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅವರು ಸಚಿವ ಸುನಿಲ್ ಕುಮಾರ್ (Sunil Kumar) ನನ್ನ ಬಗ್ಗೆ ವೈಯಕ್ತಿಕ ಮಾತನಾಡಿದ್ದಾರೆ, ಕಾನ್ವೆಂಟ್ ದಲಿತ ಅಂತ ನನ್ನ ಬಗ್ಗೆ ಹೇಳಿದ್ದಾರೆ. ಇಂಥ ಹೇಳಿಕೆಗಳನ್ನು ಮಂತ್ರಿಗಳಿಗೆ ಬಿಜೆಪಿ ಐಟಿ ಸೆಲ್ ಹೇಳಿಕೊಡುತ್ತಾ ಎಂದು ಪ್ರಶ್ನೆ ಮಾಡಿದ್ರು. ದಲಿತರು ಬೆಂಗಳೂರಲ್ಲಿ ಹುಟ್ಟಬಾರದಾ? ಮೈಸೂರು ದಲಿತರು (Dalita) ಬೇರೆ ಬೆಂಗಳೂರು ದಲಿತರು ಬೇರೇನಾ? ನಾನು ಓದಿದ್ದು ಕಾನ್ವೆಂಟ್ ನಲ್ಲಿ ಅಲ್ಲ, ಉಡುಪಿಯ (Udupi) ಅದಮಾರು ಮಠದ ಶಾಲೆ ಬೆಂಗಳೂರಲ್ಲಿದೆ. ಆ ಅದಮಾರು ಮಠದ ಶಾಲೆಯಲ್ಲಿ ಓದಿದ್ದೇನೆ. ಬಿಜೆಪಿಯವರಿಗೆ ಕಾನ್ವೆಂಟ್ ನಲ್ಲಿ ಓದುವ ದಲಿತರು ಇಷ್ಟ ಇಲ್ವಾ? ಬಿಜೆಪಿಯವರಿಗೆ ಎಂಥ ದಲಿತರು ಇಷ್ಟ ಹಾಗಾದರೆ? ಚರಂಡಿ ಎತ್ತುವ ದಲಿತರು ಇಷ್ಟವಾ? ದಲಿತರು ಎಲ್ಲಿ ಇರಬೇಕು ಅಂತ ಬಯಸುತ್ತೀರಿ? ನಾನು ಪ್ರಜ್ಞಾವಂತ ದಲಿತ, ನಾನು ಕಾಸ್ಮೋ ಪಾಲಿಟನ್ ದಲಿತ ಎಂದು ಪ್ರಿಯಾಂಕ್​ ಖರ್ಗೆ ಹೇಳಿದ್ದಾರೆ.

ಯಾವ ವಿಷಯವಾದ್ರೂ ಚರ್ಚೆಗೆ ಸಿದ್ಧ

ಚಿಕಾಗೋದಿಂದ ಹಿಡಿದು ಚಿತ್ತಾಪುರದವರೆಗೆ ಯಾವುದೇ ವಿಷಯ ನಿರ್ಧಾರ ಮಾಡಿ ನಾನು ಚರ್ಚೆಗೆ ಸಿದ್ದ ಇದ್ದೇನೆ. ನಿಮ್ಮ ಎರಡು ರೂ. ಟ್ರೋಲರ್ ಗಳು ನೆಹರೂ ಬಗ್ಗೆ ಸಿದ್ದರಾಮಯ್ಯ ಬಗ್ಗೆ ಮಾತಾಡ್ತಾರೆ. ಅವರಿಗೆ ಇರೋ ಯೋಗ್ಯತೆ ನಮಗಿಲ್ವಾ?, ನಾನು ಕೂಡ ಎರಡು ಬಾರಿ ಮಂತ್ರಿ ಆಗಿದ್ದೇನೆ. ಸಿಎಂಗೆ ಪ್ರಶ್ನೆ ಮಾಡುವ ಜವಾಬ್ದಾರಿ ನನ್ನದು, ನಾನು ವಿರೋಧ ಪಕ್ಷದ ವಕ್ತಾರ, ನಿಮ್ಮನ್ನು ಹೇಳಿಕೊಂಡು ಕೇಳಿಕೊಂಡು ಕೂರುವುದಕ್ಕೆ ನಾನು ಇದ್ದೀನಾ?

ಪ್ರತಾಪ್ ಸಿಂಹಗೆ ಪ್ರಿಯಾಂಕ ಖರ್ಗೆ ಸವಾಲು

ವೈಯಕ್ತಿಕ ಟೀಕೆ ಮಾಡುವುದು ನಿಮ್ಮ ಸ್ಟ್ರಾಟಜಿ, ನೀವು ಎಷ್ಟೇ ವೈಯಕ್ತಿಕ ಟೀಕೆ ಮಾಡಿದರೂ ನಾನು ಪ್ರಶ್ನೆ ಮಾಡುವುದನ್ನು ನಿಲ್ಲಿಸುವುದಿಲ್ಲ. ಸಚಿವ ಸುನಿಲ್ ಕುಮಾರ್, ಪ್ರತಾಪ್ ಸಿಂಹಗೆ ಪ್ರಿಯಾಂಕ ಖರ್ಗೆ ಸವಾಲು ಹಾಕಿದ್ದಾರೆ.

ಇದನ್ನೂ ಓದಿ: Udupi ಕಾರ್ಕಳದ ರಸ್ತೆಯೊಂದರ ಫಲಕದಲ್ಲಿ ನಾಥೂರಾಮ್ ಗೋಡ್ಸೆ ಹೆಸರು ಪ್ರತ್ಯಕ್ಷ; ಪೊಲೀಸರಿಂದ ತೆರವು

ನಮ್ಮ ಸರಳ ಪ್ರಶ್ನೆಗಳಿಗೆ ಉತ್ತರ ಕೊಡೋದಕ್ಕೆ ಬಿಜೆಪಿಯವರಿಗೆ ಉತ್ತರ ಕೊಡುವ ಯೋಗ್ಯತೆ ಇಲ್ಲ, ಗುರು ನಾರಾಯಣ ಸ್ತಭ್ದ ಚಿತ್ರ ನಿರ್ಬಂಧ ಮಾಡಿದಾಗ ಸುನಿಲ್ ಕುಮಾರ್ ಯಾಕೆ ಸುಮ್ಮನಿದ್ರಿ? ಗುರು ನಾರಾಯಣಗೆ ಅವಮಾನ ಮಾಡಿ ಪಾಠ ಕೈ ಬಿಟ್ಟಿದ್ದೀರಲ್ಲ ಈಗ ಯಾಕೆ ಮಾತಾಡ್ತಿಲ್ಲ. ಮೋದಿ ಬಗ್ಗೆ ಹೊಗಳುವಾಗ ಒಳ್ಳೋಳ್ಳೆ ಶಬ್ದ ಬರುತ್ತದೆ. ಗುರು ನಾರಾಯಣಗೆ ಅವಮಾನ ಆದಾಗ ತುಟಿಗೆ ಹೊಲಿಗೆ ಹಾಕಿರ್ತೀರಾ?

ಸಮಿತಿ ಪ್ರಜ್ಞಾವಂತಿಕೆ ಬಗ್ಗೆ ನಮಗೆ ಅನುಮಾನ

ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರಕ್ಕೆ ಸಂಬಂಧಿಸಿದಂತೆ ರೋಹಿತ್ ಚಕ್ರತೀರ್ಥ ಅವರ ಸಮಿತಿ ಪ್ರಜ್ಞಾವಂತಿಕೆ ಬಗ್ಗೆ ನಮಗೆ ಅನುಮಾನ ಇದೆ. ಪ್ರತಿಯೊಂದು ಸಮಾಜಕ್ಕೂ ಪಠ್ಯಪುಸ್ತಕದಲ್ಲಿ ಅವಮಾನ ಮಾಡಿದ್ದಾರೆ. ಹಿರಿಯ ಬಿಜೆಪಿ ನಾಯಕರ ಮೌನ ಯಾಕೆ? ಸಮಾಜದ ಹೆಸರೇಳಿ ವೋಟು ತೆಗೆದುಕೊಳ್ತಾರೆ. ಸಮಾಜದ ಹಿರಿಯರಿಗೆ ಅವಮಾನ ಆಗಿದೆ. ಆದ್ರೂ ಯಾಕೆ ಸುಮ್ಮನೆ ಇದ್ದಾರೆ.

ಯಡಿಯೂರಪ್ಪ ಯಾಕೆ ಇನ್ನೂ ಮೌನವಾಗಿದ್ದಾರೆ?

ಬಸವಣ್ಣಗೆ ಅವಮಾನ ಆಗಿದೆ ಅಂತ ಮಠಾಧೀಶರೆಲ್ಲಾ ಹೇಳಿದ್ದಾರೆ. ಆದರೆ ಬಿಜೆಪಿಯ ಯಡಿಯೂರಪ್ಪ ಯಾಕೆ ಇನ್ನೂ ಮೌನವಾಗಿದ್ದಾರೆ? ಬಿಜೆಪಿ ಲಿಂಗಾಯತ ನಾಯಕರದ್ದು ಸ್ಮಶಾನ ಮೌನ ಈ ವಿಚಾರದಲ್ಲಿ ಮಾನ್ಯ ಯಡಿಯೂರಪ್ಪ ಯಾಕೆ ಸರ್ಕಾರ ತಪ್ಪು ಮಾಡ್ತಿದೆ ಅಂತ ಹೇಳ್ತಿಲ್ಲ? ಯಡಿಯೂರಪ್ಪ ಹೊರಗೆ ಬಂದು ಸರ್ಕಾರಕ್ಕೆ ಮಾರ್ಗದರ್ಶನ ಮಾಡಬೇಕು. ಕುವೆಂಪುಗೆ ಅವಮಾನ ಆಗಿದೆ ಆದರೆ ಯಾಕೆ ಸಚಿವರಾದ ಅಶ್ವತ್ಥ ನಾರಾಯಣ ಅಶೋಕ್ ಇದನ್ನು ತಪ್ಪು ಅಂತ ಹೇಳ್ತಿಲ್ಲ? ಮಾತನಾಡಿಲ್ಲ ಅಂದ್ರೆ ಇದಕ್ಕೆ ಒಪ್ಪಿಗೆ ಇದೆ ಅಂತ ರಾಂಗ್ ಸಿಗ್ನಲ್ ಹೋಗ್ತಿದೆ. ಇದು ರಾಜಕೀಯ ವಿಷಯ ಅಲ್ಲ, ಸಮಾಜದ ವಿಷಯ ಎಂದು ಪ್ರಿಯಾಂಕ್​ ಖರ್ಗೆ ಹೇಳಿದ್ದಾರೆ.

ಶ್ರೀರಾಮುಲುಗೆ ರಾಮ ಬೇಕು, ವಾಲ್ಮೀಕಿ ಬೇಡವಾ?

ಬಿಜೆಪಿಯವರಿಗೆ ಶ್ರೀರಾಮುಲುಗೆ ರಾಮ ಬೇಕು, ವಾಲ್ಮೀಕಿ ಬೇಡವಾ? ಮೊದಲಿಂದಲೂ ಅಂಬೇಡ್ಕರ್ ಅಂದ್ರೆ ಬಿಜೆಪಿಯವರಿಗೆ ಅಲರ್ಜಿ, ಇತಿಹಾಸದ ಪುಟಗಳಿಂದ ಅಂಬೇಡ್ಕರ್ ಹೆಸರೇ ಅಳಿಸಬೇಕು ಎಂಬ ಸಂಚು ನಡೆದಿದೆ. ಅಂಬೇಡ್ಕರ್ ತಂದೆ, ತಾಯಿ ಹೆಸರೇ ತೆಗೆದು ಹಾಕಿದ್ದಾರೆ. ಸಂವಿಧಾನ ಶಿಲ್ಪಿ ಅನ್ನೋ ಹೆಸರನ್ನೇ ಯಾಕೆ ತೆಗೆದು ಹಾಕಿದ್ದಾರೆ. ಬಿ.ಎನ್ ರಾವ್ ಅವರನ್ನು ಸಂವಿಧಾನ ಶಿಲ್ಪಿ ಎಂಬಂತೆ ಬಿಂಬಿಸುತ್ತಿದ್ದಾರೆ.

ಇದನ್ನೂ ಓದಿ: Nalin Kumar Kateel: ಚಡ್ಡಿಗೆ ಬೆಂಕಿ ಹಾಕಿ ಅಂತ ಹೇಳ್ತಿರೋ ಸಿದ್ದರಾಮಯ್ಯನೇ ಆ ಬೆಂಕಿಯಲ್ಲಿ ಸುಟ್ಟು ಹೋಗ್ತಾರೆ: ಕಟೀಲ್

ಅಂಬೇಡ್ಕರ್​ಗೆ ಅವಮಾನ ಆಗಿದೆ, ಈಗ ಪಿ ರಾಜೀವ್ ಎಲ್ಲಿ?

ಅಂಬೇಡ್ಕರ್​ಗೆ ಅವಮಾನ ಆಗಿದೆ, ಈಗ ಪಿ ರಾಜೀವ್ ಎಲ್ಲಿ? ಎನ್.ಮಹೇಶ್ ಎಲ್ಲಿ? ಗೋವಿಂದ ಕಾರಜೋಳ ಎಲ್ಲಿ? ಮುಂಚೆ ಎನ್.ಮಹೇಶ್ ಅಂಬೇಡ್ಕರ್ ಬುಕ್ ಇಟ್ಕೊಂಡು ಓಡಾಡ್ತಿದ್ರು, ಈಗ ಸಾವರ್ಕರ್ ಬುಕ್ ಇಟ್ಕೊಂಡು ಓಡಾಡ್ತಿದ್ದಾರೆ. ಬೌದ್ದ ಜೈನ ಧರ್ಮಗಳು ಧರ್ಮಗಳೇ ಅಲ್ಲ ಅಂತ ಪಠ್ಯಪುಸ್ತಕ ದಲ್ಲಿ ಹೇಳಿದ್ದಾರೆ. ಬೌದ್ಧ ಜೈನ ಕೇವಲ ಮತಗಳು ಅಂತ ಪಠ್ಯಪುಸ್ತಕ ದಲ್ಲಿ ಬಿಂಬಿಸಿದ್ದಾರೆ. ಇವೆರಡು ಧರ್ಮಕ್ಕೆ ಅವಮಾನ ಮಾಡಿದ್ದಾರೆ.
Published by:Pavana HS
First published: