ಕಲಬುರಗಿ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ವಿಷಸರ್ಪ ಹೇಳಿಕೆ ಬೆನ್ನಲ್ಲೇ ಇದೀಗ ಅವರ ಪುತ್ರ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರನ್ನು ಪರೋಕ್ಷವಾಗಿ ನಾಲಾಯಕ್ ಎಂದು ಕರೆದು ವಾಗ್ದಾಳಿ ನಡೆಸಿದ್ದಾರೆ. ಮೋದಿ ಮಳಖೇಡಕ್ಕೆ ಬಂದಾಗ ಬಂಜಾರಾ ಸಮಾಜದವರಿಗೆ (Banjara Community) ಏನು ಹೇಳಿದ್ರು? ಬಂಜಾರಾ ಸಮಾಜದ ಜನರ ಮಗ ದೆಹಲಿಯಲ್ಲಿದ್ದಾನೆ ಅಂತ ಮೋದಿ ಹೇಳಿದ್ದರು. ಆದ್ರೆ ಇಂತಹ ನಾಲಾಯಕ್ ಮಗನಿದ್ರೆ ಹೇಗೆ ನಡೆಯುತ್ತೆ? ದೇಶ ನಡೆಸೋನು ಮಾತ್ರವಲ್ಲ. ಮನೆಯಲ್ಲಿ ಒಬ್ಬ ನಾಲಾಯಕ್ ಮಗನಿದ್ರೂ ಮನೆ ಸುಸೂತ್ರವಾಗಿ ನಡೆಯೋದಿಲ್ಲ ಎಂದು ಹೇಳಿದರು. ಆದ್ರೆ ಸುದ್ದಿಗೋಷ್ಠಿಯ ಕೊನೆಗೆ ನಾನು ಮೋದಿಗೆ ಹಾಗೆ ಅಂದಿಲ್ಲ ಎಂದು ತೆರಳಿದರು. ನನಗೆ ವೈಯಕ್ತಿಕ ನಿಂದನೆಗಿಂತ ಅವರಿಂದ ಕೆಲವು ಪ್ರಶ್ನೆಗೆ ಉತ್ತರ ಮುಖ್ಯ ಎಂದು ಸಮಜಾಯಿಸಿ ನೀಡಲು ಯತ್ನಿಸಿದರು.
ಪ್ರಿಯಾಂಕ್ ಖರ್ಗೆ ಕೇಳಿದ ಆರು ಪ್ರಶ್ನೆಗಳು
1)ಮೋದಿ ರೋಡ್ ಶೋಗೆ ಜನ ಸೇರುತ್ತಾರೆ ಅದಕ್ಕೆ ಅನುಮಾನ ಇಲ್ಲ. ಆದ್ರೆ ಅಲ್ಲಿ ಸೇರಿದ ಜನ ನಿಮಗೆ ಕೋಲಿ ಜನಾಂಗಕ್ಕೆ ಎಸ್ಟಿ ಮೀಸಲಾಯಿ ಯಾವಾಗ ಕೊಡುತ್ತೀರಿ ಎಂದು ಕೇಳುತ್ತಾರೆ.
2)ರೂಪ್ಸಾ, ಕಾಂಟ್ರಾಕ್ಟ್ ಸಂಘ 40% ಬಗ್ಗೆ ನಿಮಗೆ ಪತ್ರ ಬರೆದಿದ್ದಾರೆ, ಆ ಪತ್ರ ಓದಲು ನಿಮಗೆ ಟೈಂ ಇಲ್ಲವಾ? ನಿಮ್ಮಲ್ಲಿ ರೈತರ ಆತ್ಮಹತ್ಯೆ ಲಿಸ್ಟ್ ಇದೆಯಾ? ಮಾಡಾಳು ವಿರೂಪಾಕ್ಷಪ್ಪ ಮನೆಯಲ್ಲಿ ಕೋಟಿ ಕೋಟಿ ಹಣ ಸಿಕ್ಕಿದೆ ಅದೂ ನೋಡಕ್ಕೆ ಟೈಂ ಇರಲಿಲ್ವಾ? ಮಲ್ಲಿಕಾರ್ಜುನ ಖರ್ಗೆ, ನನ್ನ ಬಗ್ಗೆ, ನೆಹರು ಬಗ್ಗೆ ಮಾತಾಡ್ತಿರಾ ? ಟೀಕೆಗಳನ್ನು ಸಹಿಸಿಕೊಳ್ಳಲು ಆಗದಿದ್ರೆ ರಾಜಕೀಯ ಬಿಟ್ಟು ಬಿಡಬೇಕು.
5) ಕ್ರಿಮಿನಲ್ ಹಿನ್ನೆಲೆ ಇರೋರಿಗೆ ಟಿಕೆಟ್ ಕೊಡಲ್ಲ ಅಂದಿದ್ರಲ್ಲ, ಮಕ್ಕಳ ಹಾಲಿನ ಪೌಡರ್ ಕದ್ದಿರೋರಿಗೆ ಟಿಕೆಟ್ ಕೊಟ್ಟಿದ್ದಿರಲ್ಲ, ಅದಕ್ಕೆ ಸಮರ್ಥಿಸಿಕೊಳ್ಳುತ್ತಿದ್ದಿರಾ? ಉತ್ತರ ಕೊಡಬೇಕು
6) ರೋಡ್ ಶೋ ಮಾಡೋದಕ್ಕು ಮುನ್ನ ಒಂದೂ ಪ್ರೆಸ್ಮೀಟ್ ಮಾಡಿ
ನಾಲಾಯಕ್ ಹೇಳಿಕೆಗೆ ಸ್ಪಷ್ಟನೆ
ನಾನು ಯಾರಿಗೂ ನಾಲಾಯಕ್ ಅಂದಿಲ್ಲ, ನಾಲಾಯಕ್ ಮಗ ಇದ್ರೆ ಮನೆ ಹೇಗೆ ನಡೆಯುತ್ತೆ ಅಂತಾ ಹೇಳ್ತಿದ್ದೇನೆ ಅಷ್ಟೆ ಎಂದು ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದರು.
ಇದನ್ನೂ ಓದಿ: Amit Shah: ಬಿಎಸ್ವೈ ಮಗ, ಉಮೇಶ್ ಕತ್ತಿ ಪುತ್ರ, ಸೋದರನಿಗೆ ಟಿಕೆಟ್; ಶಾ ಪ್ರಕಾರ ಕುಟುಂಬ ರಾಜಕಾರಣ ಎಂದರೇನು?
ಪ್ರಧಾನಿಗಳು ಕಲಬುರಗಿಗೆ ಬಂದಾಗ ಬಂಜಾರಾ ಕಾ ಬೇಟಾ ಏಕ್ ದೆಹಲಿ ಮೇ ಬೈಠಾ ಹೈ ಅಂತಾ ಹೇಳಿ ಹೋಗಿದ್ರು. ಇಂತಹ ನಾಲಾಯಕ್ ಮಗ ಇದ್ರೆ ಮನೆ ನಡೆಸಲು ಆಗುತ್ತಾ? ನಾವು ವಿರೋಧ ಪಕ್ಷದಲ್ಲಿದ್ದು, ಟೀಕೆ ಮಾಡುತ್ತೇವೆ, ವೈಯಕ್ತಿಕವಾಗಿ ಟೀಕೆ ಮಾಡಲ್ಲ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ