HOME » NEWS » State » PRIVATE TEACHERS PROTESTED USING VEGETABLE PUSHING HANDCART IN UNIQUE STYLE IN BANGALORE HK

ತರಕಾರಿ ತಳ್ಳುವ ಗಾಡಿಯಿಂದ ಬೀದಿಗಿಳಿದು ಪ್ರತಿಭಟಿಸಿದ ಖಾಸಗಿ ಶಾಲಾ ಶಿಕ್ಷಕರು; ಸಚಿವರಿಬ್ಬರ ಎಂಟ್ರಿಯಿಂದ ಧರಣಿ ವಾಪಸ್

ಪ್ರತಿಭಟನೆಯಲ್ಲಿ ಕೆಲಸ‌ ಕಳೆದುಕೊಂಡ ಶಿಕ್ಷಕರು ತರಕಾರಿ ಮಾರುವ ತಳ್ಳುಗಾಡಿ ತಂದರೆ, ಇನ್ನು‌ ಕೆಲವರು ತಟ್ಟೆ, ಚಮಚ ಬಾರಿಸುತ್ತ ಪ್ರತಿಭಟನೆಯಲ್ಲಿ ತಮ್ಮ ದಯನೀಯ ಸ್ಥಿತಿ ಪ್ರದರ್ಶಿಸಿದರು

news18-kannada
Updated:December 16, 2020, 9:20 PM IST
ತರಕಾರಿ ತಳ್ಳುವ ಗಾಡಿಯಿಂದ ಬೀದಿಗಿಳಿದು ಪ್ರತಿಭಟಿಸಿದ ಖಾಸಗಿ ಶಾಲಾ ಶಿಕ್ಷಕರು; ಸಚಿವರಿಬ್ಬರ ಎಂಟ್ರಿಯಿಂದ ಧರಣಿ ವಾಪಸ್
ತರಕಾರಿ ತಳ್ಳುವ ಗಾಡಿ
  • Share this:
ಬೆಂಗಳೂರು(ಡಿಸೆಂಬರ್​. 16): ರೈತರು, ಸಾರಿಗೆ ಸಿಬ್ಬಂದಿಗಳ ಪ್ರತಿಭಟನೆ ಮುಷ್ಕರವಾಯಿತು‌. ಇದೀಗ ಖಾಸಗಿ ಶಾಲಾ ಶಿಕ್ಷಕರ ಸರದಿ. ಕೊರೋನಾ‌ ಪರಿಣಾಮ ಸಂಕಷ್ಟದಲ್ಲಿರುವ ಶಿಕ್ಷಕರು ನ್ಯಾಯಯುತ ಬೇಡಿಕೆಗಳನ್ನಿಟ್ಟುಕೊಂಡು ಪ್ರತಿಭಟನೆ ಮಾಡಿದರು‌. ಆದರೆ ಈ ಹಿಂದೆ ಸರ್ಕಾರ ನಿರ್ಲಕ್ಷ್ಯ ಮಾಡದೆ ಹೋರಾಟಕ್ಕಿಳಿದ ಒಂದು ಗಂಟೆಯೊಳಗೆ ಸಚಿವರಿಬ್ಬರು ಎಂಟ್ರಿ ಕೊಟ್ಟು ಶಿಕ್ಷಕರ ಆಕ್ರೋಶ ತಣಿಸುವಲ್ಲಿ ಯಶಸ್ವಿಯಾದರು. ಸಾಲು ಸಾಲು ಪ್ರತಿಭಟನೆ, ಮುಷ್ಕರಗಳಿಗೆ ಸಾಕ್ಷಿಯಾಗಿರುವ ಬೆಂಗಳೂರಿನಲ್ಲಿ ಇಂದು ಖಾಸಗಿ ಶಾಲಾ ಶಿಕ್ಷಕರ ಪ್ರತಿಭಟನೆ ಜರುಗಿತು‌. ಖಾಸಗಿ ಶಾಲಾ ಶಿಕ್ಷಕರ ಸಮಸ್ಯೆಗಳನ್ನ ಬಗೆಹರಿಸುವಂತೆ ಒತ್ತಾಯಿಸಿ ಇಂದು ಬೃಹತ್ ಮಟ್ಟದಲ್ಲಿ ವಿನೂತನವಾಗಿ ಪ್ರತಿಭಟಿಸಿದರು‌. ರಾಜ್ಯ ಖಾಸಗಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಒಕ್ಕೂಟ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ರಾಜ್ಯದಾದ್ಯಂತ ಅನುದಾನರಹಿತ ಶಿಕ್ಷಣ ಸಂಸ್ಥೆಗಳ ಶಿಕ್ಷಕರು,‌ ಶಿಕ್ಷಕೇತರ ಸಿಬ್ಬಂದಿಗಳು ಆಗಮಿಸಿದ್ದರು‌. ಶಿಕ್ಷಕರು ಉಳಿದರೆ, ಶಿಕ್ಷಣ ಎಂಬ ಶೀರ್ಷಿಕೆಯಡಿ ಸಚಿವ ಸುರೇಶ್ ಕುಮಾರ್ ಹೇಳಿಕೆಗಳಿಂದ ಶಿಕ್ಷಣ ಸಂಸ್ಥೆಗಳು ಸಂಕಷ್ಟದಲ್ಲಿರುವುದನ್ನು ಕಟುವಾಗಿ ಟೀಕಿಸುವಂತಹ ಫಲಕಗಳು ಪ್ರತಿಭಟನ ರ‍್ಯಾಲಿಯಲ್ಲಿ ರಾರಾಜಿಸಿದವು.

ಮೌರ್ಯ ಸರ್ಕಲ್ ನಿಂದ ಫ್ರೀಡಂ ಪಾರ್ಕ್ ಗೆ ಎರಡು ಸಾವಿರಕ್ಕೂ ಹೆಚ್ಚು ಜನರು ಜಾಥದಲ್ಲಿ ಭಾಗಿಯಾಗಿದ್ದರು‌. ಜಾಥಾದಲ್ಲಿ ಎಂಎಲ್ ಸಿ ಪುಟ್ಟಣ್ಣ ಹೋರಾಟದ ಮುಂಚೂಣಿ ಹೊಂದಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಆಗ್ರಹಿಸಿದರು‌. ಎಂಎಲ್ ಸಿ ಬಸವರಾಜ್ ಹೊರಟ್ಟಿ ಸಹ ಪ್ರತಿಭಟನೆಯಲ್ಲಿ ಭಾಗವಹಿಸಿ ಬೆಂಬಲಿಸಿದರು‌. ಬೆಳಗಾವಿ ವಲಯದಲ್ಲಿ ತಾವೇ ಹೋರಾಟದ ನೇತೃತ್ವ ವಹಿಸುವುದಾಗಿ ಹೇಳಿದರು‌.

ಪ್ರತಿಭಟನೆಯಲ್ಲಿ ಪಾಲ್ಗೊಂಡ ಶಿಕ್ಷಕರು


ಪ್ರಮುಖ ಬೇಡಿಕೆಗಳೇನು?

ಖಾಸಗಿ ಶಾಲಾ ಶಿಕ್ಷಕರನ್ನು ಕೊರೋನಾ ವಾರಿಯರ್ ಎಂದು ಘೋಷಿಸಿ ಕೊರೊನಾ ಲಸಿಕೆ ವಿತರಣೆ ಆದ್ಯತೆಯ ಮೇರೆ ಕೊಡಿ, ಖಾಸಗಿ ಶಾಲಾ ಸಿಬ್ಬಂದಿಗಳಿಗೆ ಪರಿಹಾರ ಕೊಡಿಸಿಬ್ಬಂದಿ, ಶಿಕ್ಷಕರಿಗೆ ಕೊರೋನಾ ಕಿಟ್‌ ಕೊಡಿ, ಕೊವಿಡ್ ಮುಗಿಯುವರೆಗೆ ಗೌರವ ಧನ ಕೊಡಿ, ಪ್ರತ್ಯೇಕ ವಿಮೆ ಸೌಲಭ್ಯ ಕೊಡಿ, ಖಾಸಗಿ ಶಾಲೆಗಳ ಪುನರಾರಂಭ ಮಾಡಿ, ದಾಖಲಾತಿ, ಹಾಜರಾತಿ, ಶುಲ್ಕದ‌ ಬಗ್ಗೆ‌ ಸರ್ಕಾರ ಸ್ಪಷ್ಟತೆ ನೀಡಿ ಪ್ರತಿಭಟನೆಯಲ್ಲಿ ಕೆಲಸ‌ ಕಳೆದುಕೊಂಡ ಶಿಕ್ಷಕರು ತರಕಾರಿ ಮಾರುವ ತಳ್ಳುಗಾಡಿ ತಂದರೆ, ಇನ್ನು‌ ಕೆಲವರು ತಟ್ಟೆ, ಚಮಚ ಬಾರಿಸುತ್ತ ಪ್ರತಿಭಟನೆಯಲ್ಲಿ ತಮ್ಮ ದಯನೀಯ ಸ್ಥಿತಿ ಪ್ರದರ್ಶಿಸಿದರು.

ಶಿಕ್ಷಕಿಯರು


ಇನ್ನು‌ ಕೆಲವರು ಭಿತ್ತಿಪತ್ರ ಬರೆದುಕೊಂಡು ಬಂದಿದ್ದರು. ಇದರ ಜೊತೆಗೆ ರೈತರ ಪ್ರತಿಭಟನೆ ಹಿನ್ನೆಲೆ ಮೌರ್ಯ ವೃತ್ತದಿಂದ ಕೆ ಆರ್ ವೃತ್ತದವರೆಗೆ ಕೆಲ ಗಂಟೆಗಳ ಕಾಲ ಪ್ರಯಾಣಿಕರು ಟ್ರಾಫಿಕ್ ನಿಂದ ಪರದಾಡಬೇಕಾಯಿತು. ಪ್ರತಿಭಟನಾ ರ‍್ಯಾಲಿ ಫ್ರೀಡಂ ಪಾರ್ಕ್ ಆಗಮಿಸುತ್ತಿದ್ದಂತೆ ಕಂದಾಯ ಸಚಿವರಾದ ಆರ್ ಅಶೋಕ್, ಗೃಹ ಸಚಿವರಾದ ಬಸವರಾಜ್ ಬೊಮ್ಮಾಯಿ ಸರಕಾರದ ಪ್ರತಿನಿಧಿಯಾಗಿ ಆಗಮಿಸಿ ಖಾಸಗಿ ಶಾಲಾ ಶಿಕ್ಷಕರ ಅಹವಾಲು ಸ್ವೀಕರಿಸಿದರು‌‌.ಇದನ್ನೂ ಓದಿ : ರೋಷನ್ ಬೇಗ್ ಅಕ್ರಮ ಆಸ್ತಿ ಗಳಿಕೆ ಪ್ರಕರಣ: ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಸೂಚನೆ

ಸಚಿವರ ಜೊತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಾದ ಅನ್ಬುಕುಮಾರ್ ಆಗಮಿಸಿದ್ದರು‌. ಸಿಎಂ ಸೂಚನೆ ಮೇರೆಗೆ ಆಗಮಿಸಿರುವ ನಾವು ನಿಮ್ಮ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತೇವೆ. ಪ್ರತಿಭಟನೆ ಕೈಬಿಡಿ ಎಂದು ಮನವಿ ಮಾಡಿಕೊಂಡರು‌. ಶಿಕ್ಷಣ ಇಲಾಖೆ ಆಯುಕ್ತರಿಗೆ ಸಣ್ಣಪುಟ್ಟ ಆದೇಶ ಕೂಡಲೇ ಹೊರಡಿಸುವಂತೆ ಸಚಿವರು ಸ್ಥಳದಲ್ಲಿಯೇ ಸೂಚನೆ ನೀಡಿದರು‌.

ಈ‌ ಹಿಂದೆ ಜರುಗಿದ ರೈತರ ಹಾಗೂ ಸಾರಿಗೆ ಸಿಬ್ಬಂದಿಗಳ ಪ್ರತಿಭಟನೆಗೆ ಮಾಡಿದ ನಿರ್ಲಕ್ಷ್ಯ ಮಾಡದೇ ಈ ಬಾರಿ ಖಾಸಗಿ ಶಿಕ್ಷಕರ ಪ್ರತಿಭಟನೆ ಜಾಥಾ ಫ್ರೀಡಂ ಪಾರ್ಕ್ ತಲುಪಿದ ಗಂಟೆಯೊಳಗೆ ಆಗಮಿಸಿದ ಸಚಿವರಿಬ್ಬರು ಮನವೊಲಿಸುವ ಕೆಲಸ ಮಾಡಿದರು. ಸಿಎಂ ಸೂಚನೆ ಮೇರೆಗೆ ಎಚ್ಚೆತ್ತ ಕೊರೊನಾ ಸಂಕಷ್ಟದಲ್ಲಿರುವ ಶಾಲಾಶಿಕ್ಷಕರು ಹಾಗೂ ಆಡಳಿತ ಮಂಡಳಿಯ ಬೇಡಿಕೆ ಈಡೇರಿಕೆಗೆ ಸಕಾರಾತ್ಮಕ ಭರವಸೆ ನೀಡಿ ಸದ್ಯ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಿದೆ.
Published by: G Hareeshkumar
First published: December 16, 2020, 9:15 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories