ದಯನೀಯ ಸ್ಥಿತಿಯಲ್ಲಿ ಖಾಸಗಿ ಶಾಲೆಗಳ ಮಾಲೀಕರು; ಸರ್ಕಾರದಿಂದ ಬೆಂಬಲ ಸಿಗುವ ನಿರೀಕ್ಷೆಯಲ್ಲಿ ಪ್ರೈವೇಟ್​ ಸ್ಕೂಲ್​ಗಳು

ಅನೇಕ ಶಾಲೆಗಳಲ್ಲಿ ಶಿಕ್ಷಕರಿಗೆ ಅರ್ಧ ಸಂಬಳ ಮಾತ್ರ ನೀಡಲಾಗ್ತಿದೆ. ಪರಿಸ್ಥಿತಿಗೆ ಬೇರೆ ಮಾರ್ಗವಿಲ್ಲದೆ ಎಲ್ಲರೂ ಹೊಂದಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಮತ್ತೊಂದೆಡೆ ಶಿಕ್ಷಕೇತರ ಸಿಬ್ಬಂದಿಯ ಪರಿಸ್ಥಿತಿಯೂ ದಯನೀಯವಾಗಿದೆ. ಅನೇಕ ದೊಡ್ಡ ಸಂಸ್ಥೆಗಳೇ ಶಾಲೆ ನಡೆಸಲು ಪರದಾಡುತ್ತಿದ್ದು, ಮುಚ್ಚುವ ಆಲೋಚನೆ ಮಾಡುತ್ತಿವೆ.

news18-kannada
Updated:August 30, 2020, 6:38 PM IST
ದಯನೀಯ ಸ್ಥಿತಿಯಲ್ಲಿ ಖಾಸಗಿ ಶಾಲೆಗಳ ಮಾಲೀಕರು; ಸರ್ಕಾರದಿಂದ ಬೆಂಬಲ ಸಿಗುವ ನಿರೀಕ್ಷೆಯಲ್ಲಿ ಪ್ರೈವೇಟ್​ ಸ್ಕೂಲ್​ಗಳು
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು(ಆ.30): ಕೋವಿಡ್ ಸಂದರ್ಭದಲ್ಲಿ ಪ್ರೈವೇಟ್ ಶಾಲೆಗಳು ಕುಂಟುತ್ತಾ ಸಾಗಿವೆ. ನಮ್ಮ ಗೋಳು ಕೇಳೋರಿಲ್ಲ ಎನ್ನುತ್ತಿರುವ ಶಾಲಾ ಆಡಳಿತ ಮಂಡಳಿಗಳು ಸಾಲಾಗಿ ತಮ್ಮ ಸಮಸ್ಯೆ ಹೇಳಿಕೊಳ್ಳುತ್ತಿವೆ. ಅನೇಕ ಶಾಲೆಗಳಲ್ಲಿ ಪೋಷಕರು ಕಳೆದ ವರ್ಷದ ಶುಲ್ಕವನ್ನೇ ಕಟ್ಟದೇ ಬಾಕಿ ಉಳಿಸಿಕೊಂಡಿದ್ದಾರೆ. ಹಾಗಾಗಿ ಬಾಕಿ ಇರುವ ಹಣ ಬರದೆ ಹೊಸ ಹೂಡಿಕೆ ಕಷ್ಟಕರ ಕೆಲಸವಾಗಿದೆ ಎನ್ನುತ್ತಾರೆ ಖಾಸಗಿ ಶಾಲಾ ಮಾಲೀಕರು. ಈಗಾಗಲೇ ಪ್ರಿ ಪ್ರೈಮರಿ ಶಾಲೆಗಳ 50 ಸಾವಿರಕ್ಕೂ ಅಧಿಕ ಶಿಕ್ಷಕರು ಕೆಲಸ ಕಳೆದುಕೊಂಡಿದ್ದಾರೆ.

ಇತ್ತ ಸರ್ಕಾರ ಆರ್​ಟಿಇ ಹಣವನ್ನೂ ಬಿಡುಗಡೆ ಮಾಡದೆ ಸತಾಯಿಸುತ್ತಿದೆ. ಆನ್​ಲೈನ್ ತರಗತಿಗಳಿಗಾಗಿ ಮತ್ತಷ್ಟು ಹೆಚ್ಚು ಹಣ ಹೂಡುವ ಅನಿವಾರ್ಯತೆ ಕೂಡಾ ಈಗಿದೆ.  ಕೋವಿಡ್ ಆರ್ಭಟ ಕಡಿಮೆಯಾಗದೇ ಇರುವುದರಿಂದ ಅನೇಕ ಶಿಕ್ಷಕರು ಕೆಲಸಕ್ಕೆ ಬರಲು ಇನ್ನೂ ಹೆದರುತ್ತಿದ್ದಾರೆ. ಕನಿಷ್ಠ ಶುಲ್ಕವನ್ನೂ ನೀಡಲು ಪೋಷಕರು ಹಿಂದೇಟು ಹಾಕ್ತಿದ್ದಾರೆ. ಕೆಲಸ ಕಳೆದುಕೊಂಡವರ ಮಾತು ಹಾಗಿರಲಿ, ಸರ್ಕಾರಿ ಕೆಲಸದಲ್ಲಿದ್ದು ನಿಯಮಿತವಾಗಿ ಸಂಬಳ ಪಡೆಯುವ ಪೋಷಕರೂ ಫೀಸ್ ಕಟ್ಟುತ್ತಿಲ್ಲ.

ನಕಲಿ ಕೀಟನಾಶಕ ತಡೆಯಲು ಮುಂದಾದ ಕೃಷಿ ಇಲಾಖೆ; ತಂಡ ರಚಿಸಿ ಕೃಷಿ ಪರಿಕರ ಮಾರಾಟ ಮಳಿಗೆಗಳ ತಪಾಸಣೆ

ಇಷ್ಟೆಲ್ಲಾ ಇದ್ದರೂ ಶಿಕ್ಷಕರಿಗೆ ವೇತನವನ್ನು ಕೊಡಲೇಬೇಕಿದೆ. ಅನೇಕ ಶಾಲೆಗಳಲ್ಲಿ ಶಿಕ್ಷಕರಿಗೆ ಅರ್ಧ ಸಂಬಳ ಮಾತ್ರ ನೀಡಲಾಗ್ತಿದೆ. ಪರಿಸ್ಥಿತಿಗೆ ಬೇರೆ ಮಾರ್ಗವಿಲ್ಲದೆ ಎಲ್ಲರೂ ಹೊಂದಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಮತ್ತೊಂದೆಡೆ ಶಿಕ್ಷಕೇತರ ಸಿಬ್ಬಂದಿಯ ಪರಿಸ್ಥಿತಿಯೂ ದಯನೀಯವಾಗಿದೆ. ಅನೇಕ ದೊಡ್ಡ ಸಂಸ್ಥೆಗಳೇ ಶಾಲೆ ನಡೆಸಲು ಪರದಾಡುತ್ತಿದ್ದು, ಮುಚ್ಚುವ ಆಲೋಚನೆ ಮಾಡುತ್ತಿವೆ.

ಇಂತಹ ಸಂದರ್ಭದಲ್ಲಿ ಸರ್ಕಾರವು ಖಾಸಗಿ ಶಾಲೆಗಳ ಬೆಂಬಲಕ್ಕೆ ಬರುತ್ತಿಲ್ಲ ಎನ್ನುವುದು ಖಾಸಗಿ ಶಾಲಾ ಮಾಲೀಕರ ಬೇಸರಕ್ಕೆ ಕಾರಣವಾಗಿದೆ. ಈ ಎಲ್ಲದರ ನಡುವೆ ತಮ್ಮ ಉಳಿವಿಗಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳು ಒದ್ದಾಡುತ್ತಿವೆ.

ಸರ್ಕಾರ ಕನಿಷ್ಠ ಬಾಕಿ ಇರುವ ಆರ್​ಟಿಐ ಹಣ ಬಿಡುಗಡೆ ಮಾಡಿ ಒಂದಷ್ಟು ಬೆಂಬಲ ನೀಡಿದರೆ, ಖಾಸಗಿ ಶಾಲೆಗಳು ಉಳಿಯುತ್ತವೆ ಎನ್ನುತ್ತಾರೆ ಖಾಸಗಿ ಶಾಲಾ ಒಕ್ಕೂಟದ ಕಾರ್ಯದರ್ಶಿ ಶಶಿಕುಮಾರ್. ರಾಜ್ಯದಲ್ಲಿ ಶೇಕಡಾ 60 ರಷ್ಟು ಖಾಸಗಿ ಶಾಲೆಗಳೇ ಇರುವಾಗ ಸರ್ಕಾರ ಇಷ್ಟಾದರೂ ಸಹಕಾರ ನೀಡಲಿ ಎನ್ನುವುದಷ್ಟೇ ಇವರ ನಿರೀಕ್ಷೆ.
Published by: Latha CG
First published: August 30, 2020, 6:12 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading