• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಶುಲ್ಕ ಕಡಿತ ವಿಚಾರದಲ್ಲಿ ಭುಗಿಲೆದ್ದ ಸ್ಪೋಟ; ಫೆ.23ರಂದು ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಬೃಹತ್ ಪ್ರತಿಭಟನೆ

ಶುಲ್ಕ ಕಡಿತ ವಿಚಾರದಲ್ಲಿ ಭುಗಿಲೆದ್ದ ಸ್ಪೋಟ; ಫೆ.23ರಂದು ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಬೃಹತ್ ಪ್ರತಿಭಟನೆ

ಖಾಸಗಿ ಶಾಲೆ (ಸಾಂದರ್ಭಿಕ ಚಿತ್ರ)

ಖಾಸಗಿ ಶಾಲೆ (ಸಾಂದರ್ಭಿಕ ಚಿತ್ರ)

ಖಾಸಗಿ ಶಾಲೆಗಳ ಉಳಿವಿಗೆ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಕೈ ಜೋಡಿಸಿದ್ದಾರೆ. ಸುರೇಶ್​ ಕುಮಾರ್ ಕೋವಿಡ್ ಸಮಯದಲ್ಲಿ‌ ಶಿಕ್ಷಕರಿಗೆ ಕೊಟ್ಟ ಕೊಡುಗೆ ಏನು..? ಯಾವ ರೀತಿಯಲ್ಲಿ ಶಿಕ್ಷಣ ಸಂಸ್ಥೆಗಳಿಗೆ ಸಹಾಯ ಮಾಡಿದ್ದೀರಾ? ನಿಮ್ಮಗೆ ಆತ್ಮಸಾಕ್ಷಿ ಇದ್ದರೆ 20 ಜನರಿಗೆ ಕೆಲಸ ಕೊಟ್ಟು ಸಂಬಳ ಕೊಡಿ ನೋಡೋಣ. ಕೊರೋನಾ ಸಂಕಷ್ಟ ಕಾಲದಲ್ಲಿ ಶಿಕ್ಷಣ ಸಂಸ್ಥೆಗಳಿಗೆ ಯಾವ ರೀತಿ ಸಹಾಯ ಮಾಡಿದ್ದೀರಾ? ಪೋಷಕರನ್ನ ಎತ್ತಿಕಟ್ಟುವ ಕೆಲಸ ಮಾಡ್ತಿರಾ? ಇಂತಹ ಎಡಬಿಡಂಗಿ ವ್ಯಕ್ತಿಯನ್ನ ನೋಡಿಲ್ಲ.

ಮುಂದೆ ಓದಿ ...
  • Share this:

ಬೆಂಗಳೂರು(ಫೆ.10): ಖಾಸಗಿ ಶಿಕ್ಷಣ ಸಂಸ್ಥೆಗಳ ಹೋರಾಟ ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ.  ಮತ್ತೆ  ಸರ್ಕಾರದ ವಿರುದ್ಧ ತೊಡೆ ತಟ್ಟಲು ಖಾಸಗಿ ಶಾಲೆಗಳ ಒಕ್ಕೂಟ ನಿರ್ಧರಿಸಿದೆ. ಶುಲ್ಕ ಕಡಿತ ವಿಚಾರದಲ್ಲಿ ಸ್ಪೋಟ ಭುಗಿಲೆದ್ದಿದ್ದು, ಸರ್ಕಾರದ ವಿರುದ್ಧ ಖಾಸಗಿ ಶಾಲೆಗಳ ಒಕ್ಕೂಟಗಳು ಕಿಡಿಕಾರಿವೆ. ಶುಲ್ಕ ಕಡಿತ ಪುನರ್ ಪರಿಶೀಲನೆ ಮಾಡಿ ಎಂದು ಖಾಸಗಿ ಶಿಕ್ಷಣ ಸಂಸ್ಥೆಗಳು ಒತ್ತಾಯಿಸಿವೆ.  ಕ್ಯಾಮ್ಸ್, ಮಿಕ್ಸಾ, ಮಾಸ್ , ಕುಸಮ, ಸಿಬಿಎಸ್ ಇ ಹಾಗೂ ಐಸಿಎಸ್ಸಿ ಇ ಒಕ್ಕೂಟಗಳು ಪ್ರತಿಭಟನೆಗೆ ನಿರ್ಧರಿಸಿವೆ. ಹೀಗಾಗಿ ಇದೇ ಫೆ. 23 ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಕರೆ ನೀಡಿವೆ. 


ಸಭೆಯಲ್ಲಿ ಕೈಗೊಂಡ ನಿರ್ಣಯಗಳು


1.ರಾಜ್ಯ ಸರ್ಕಾರ ಆದೇಶ ಮಾಡಿರುವ ಶೇ. 30 ರಷ್ಟು ಶುಲ್ಕ ಕಡಿತದ ಆದೇಶವನ್ನ ಪುನರ್ ಪರಿಶೀಲನೆ‌ ಮಾಡಬೇಕು. ರಾಜ್ಯ ಸರ್ಕಾರ ಶೇ 30 ರಷ್ಟು ಕಡಿತ ಎಂದು ಹೇಳಿದೆ. ಆದರೆ ಆದೇಶದಲ್ಲಿ ಶೇ. 55 ರಿಂದ 65 ರಷ್ಟು ಶುಲ್ಕ ಕಡಿತವಾಗುತ್ತಿದೆ.


2. ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಮತ್ತು ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿಗೆ ಅನುದಾನ ನೀಡಬೇಕು.


3. ಕಟ್ಟಡ ಸುರಕ್ಷಿತ ಪ್ರಮಾಣ ಪತ್ರ ಹಿಂದಿನ ಶಾಲೆಗಳಿಗೆ ಕೈ ಬಿಡುವಂತೆ ಒತ್ತಾಯ.


4. 1 ರಿಂದ 5 ನೇ ತರಗತಿಗಳನ್ನ ಆರಂಭ ಮಾಡಬೇಕು


5. ಬಿಇಓ, ಡಿಡಿಪಿಐಗಳ ಭ್ರಷ್ಟಾಚಾರ ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು.


ನಿರಂತರ ಜ್ಯೋತಿ ಯೋಜನೆ ಕಾಮಗಾರಿ; ಮೆಸ್ಕಾಂ ಅಧಿಕಾರಿಗಳ ಚಳಿ ಬಿಡಿಸಿದ ಸಚಿವ ಈಶ್ವರಪ್ಪ


ಇನ್ನೂ ವಿವಿಧ ಬೇಡಿಕೆಗಳನ್ನು ಇದೇ ಫೆ. 23ರೊಳಗೆ ಈಡೇರಿಸುವಂತೆ ಸರ್ಕಾರಕ್ಕೆ ಒತ್ತಾಯಿಸಲಾಗಿದೆ. ಒಂದು ವೇಳೆ ಸರ್ಕಾರ ಈ ಮೇಲ್ಕಂಡ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಇದೇ ಫೆ.23ರಂದು ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಲು ನಿರ್ಧರಿಸಲಾಗಿದೆ.


ಖಾಸಗಿ ಶಾಲೆಗಳ ಉಳಿವಿಗೆ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಕೈ ಜೋಡಿಸಿದ್ದಾರೆ. ಸುರೇಶ್​ ಕುಮಾರ್ ಕೋವಿಡ್ ಸಮಯದಲ್ಲಿ‌ ಶಿಕ್ಷಕರಿಗೆ ಕೊಟ್ಟ ಕೊಡುಗೆ ಏನು..? ಯಾವ ರೀತಿಯಲ್ಲಿ ಶಿಕ್ಷಣ ಸಂಸ್ಥೆಗಳಿಗೆ ಸಹಾಯ ಮಾಡಿದ್ದೀರಾ? ನಿಮ್ಮಗೆ ಆತ್ಮಸಾಕ್ಷಿ ಇದ್ದರೆ 20 ಜನರಿಗೆ ಕೆಲಸ ಕೊಟ್ಟು ಸಂಬಳ ಕೊಡಿ ನೋಡೋಣ. ಕೊರೋನಾ ಸಂಕಷ್ಟ ಕಾಲದಲ್ಲಿ ಶಿಕ್ಷಣ ಸಂಸ್ಥೆಗಳಿಗೆ ಯಾವ ರೀತಿ ಸಹಾಯ ಮಾಡಿದ್ದೀರಾ? ಪೋಷಕರನ್ನ ಎತ್ತಿಕಟ್ಟುವ ಕೆಲಸ ಮಾಡ್ತಿರಾ? ಇಂತಹ ಎಡಬಿಡಂಗಿ ವ್ಯಕ್ತಿಯನ್ನ ನೋಡಿಲ್ಲ. ಒಂದು ಕೈಗಾರಿಕೆಗೆ ಎಷ್ಟೆಲ್ಲಾ ಅನುಕೂಲ ಮಾಡಿಕೊಡ್ತೀರಾ? ಅದೇ ರೀತಿ ಶಿಕ್ಷಣ ಸಂಸ್ಥೆಗೇನಾದ್ರೂ‌ ನೀಡಿದ್ದೀರಾ? ನಾನು ಈ ಪಕ್ಷಕ್ಕೆ ಹೊಸದಾಗಿ ಬಂದಿದ್ದೇನೆ. ಚುನಾವಣೆ ಇತ್ತು ಸುಮ್ಮನೆ‌ ಇದ್ದೆ. ಫೆ. 23ರ ಬೃಹತ್ ಹೋರಾಟಕ್ಕೆ ನಾನು ಬರುತ್ತೇನೆ.  ಅದಕ್ಕೂ ಸರ್ಕಾರ ನಮ್ಮ ಬೇಡಿಕೆ ಈಡೇರಲಿಲ್ಲ ಅಂದರೆ, ಸುರೇಶ್ ಕುಮಾರ್ ಕಚೇರಿಗೆ ಬೀಗ ಹಾಕಿ ಹೋರಾಟ ಮಾಡುತ್ತೇವೆ ಎಂದು  ಪುಟ್ಟಣ್ಣ ಗುಡಗಿದರು.


ಪ್ರತಿಭಟನೆಗೆ ರುಪ್ಸಾ ಬೆಂಬಲವಿಲ್ಲ:


ಇನ್ನು, ಶುಲ್ಕ ಕಡಿತ ವಿಚಾರ ಹೋರಾಟದಿಂದ ರುಪ್ಸಾ ಖಾಸಗಿ ಶಾಲೆಗಳ ಒಕ್ಕೂಟ ಹಿಂದೆ ಸರಿದಿದೆ. ಶಿಕ್ಷಣ ಇಲಾಖೆ ತೆಗೆದುಕೊಂಡ ನಿರ್ಧಾರ ಸ್ವಾಗತಿಸಿದ್ದು, ಪೋಷಕರ ಪರ ನಿಂತಿದೆ.
ರುಪ್ಸಾ ಅಡಿಯಲ್ಲಿ ಸುಮಾರು 13 ಸಾವಿರಕ್ಕೂ ಹೆಚ್ಚು ಬಜೆಟ್ ಶಾಲೆಗಳಿವೆ.  ಸಿಬಿಎಸ್ಇ ಹಾಗೂ ಸ್ಟೇಟ್ ಬೋರ್ಡ್ ಇಂಗ್ಲೀಷ್ ಶಾಲೆಗಳಿವೆ. ಶೇ.30 ರಷ್ಟು ಶುಲ್ಕ ಕಡಿತದ ಬಗ್ಗೆ ಸರ್ಕಾರಕ್ಕೆ ರುಪ್ಸಾ ಕಡೆಯಿಂದ ಯಾವುದೇ ತಕರಾರು ಇಲ್ಲ. ಹೀಗಾಗಿ ಇದೇ 23 ರಂದು ಕರೆ ಕೊಟ್ಟಿರುವ ಖಾಸಗಿ ಶಾಲೆಗಳ ಜಂಟಿ ಹೋರಾಟ ಬೆಂಬಲ ಇಲ್ಲ ಎಂದು  ರುಪ್ಸಾ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕಟ್ಟೆ ಸ್ಪಷ್ಟನೆ ನೀಡಿದ್ದಾರೆ.

top videos
    First published: