Hijab ವಿವಾದ ಬಗೆಹರಿಯುವ ಮುನ್ನವೇ ಖಾಸಗಿ ಶಾಲೆಗಳಿಂದ ಪೋಷಕರಿಗೆ ಡ್ರೆಸ್ ಕೋಡ್

Private School: ಕೆಲವು ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಬಿಡುವಾಗ ಹಾಗೂ ಶಾಲೆಯಿಂದ ಕರೆದುಕೊಂಡು ಹೋಗಲು ಬರುವಾಗ ಮನೆಯಲ್ಲಿಯೇ ಇರುವ ಉಡುಪುಗಳನ್ನು ಧರಿಸಿ ಬರುತ್ತಾರೆ.. ಹೀಗಾಗಿ ಇದನ್ನು ಗಮನಿಸಿರುವ ಖಾಸಗಿ ಶಾಲೆಗಳು ಪೋಷಕರು ತಮ್ಮ ಮಕ್ಕಳನ್ನು ನೋಡಲು ಶಾಲೆಗಳಿಗೆ ಬಂದಾಗ ಅನೌಪಚಾರಿಕ ಉಡುಪುಗಳಲ್ಲಿ ಬರುವುದನ್ನ ತಪ್ಪಿಸಬೇಕು ಎನ್ನುವ ಕಾರಣಕ್ಕೆ ಡ್ರೆಸ್ ಕೋಡ್ ಜಾರಿ ಮಾಡಿದೆ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ಸದ್ಯ ರಾಜ್ಯದಲ್ಲಿ ಹಿಜಾಬ್ (Hijab)ವಿವಾದ ದೊಡ್ಡದಾಗಿ ಬೆಳೆದುಕೊಂಡಿದೆ. ಶಾಲಾ-(School)ಕಾಲೇಜುಗಳ ಮಕ್ಕಳು ಹಿಜಾಬ್ ಧರಿಸಿ ಬರುತ್ತಿರುವುದು ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.. ರಾಜಕೀಯ(Politics) ಸ್ವರೂಪ ಪಡೆದು ಕೊಂಡಿರುವ ಹಿಜಾಬ್ ವಿವಾದದ ಕುರಿತು ಪ್ರತಿ ನಿತ್ಯ ಒಬ್ಬರಲ್ಲಾ ಒಬ್ಬರು ರಾಜಕೀಯ ನಾಯಕರು(Politicians) ಪ್ರತಿಕ್ರಿಯೆ ನೀಡುತ್ತಲೇ ಇರುತ್ತಾರೆ.. ಶಾಲಾ-ಕಾಲೇಜುಗಳಲ್ಲಿ ಧಾರ್ಮಿಕ ಸಂಕೇತದ ವಸ್ತುಗಳನ್ನು ಧರಿಸದಂತೆ ಹೈಕೋರ್ಟ್(High Court) ಮಧ್ಯಂತರ ಆದೇಶ ನೀಡಿದೆ. ಅಲ್ಲದೆ ಹಿಜಾಬ್ ಕುರಿತು ಸಲ್ಲಿಕೆಯಾಗಿರುವ ಅರ್ಜಿಗಳ ಕುರಿತು ಹೈಕೋರ್ಟ್ ಸಹ ಹಿಜಾಬ್ ವಿವಾದದ ಕುರಿತು ವಿಚಾರಣೆ ನಡೆಸುತ್ತಿದೆ. ಈ ವಿವಾದ ಇನ್ನೂ ತಾರ್ಕಿಕ ಅಂತ್ಯ ಕಂಡಿಲ್ಲ. ಹೀಗಾಗಿ ಎಲ್ಲರೂ ಹೈಕೋರ್ಟ್ ತೀರ್ಮಾನದ ಕುರಿತು ಕಾಯುತ್ತಿದ್ದಾರೆ. ಇಷ್ಟೆಲ್ಲಾ ಸಮಸ್ಯೆಗಳು ಇರುವಾಗಲೇ ಖಾಸಗಿ ಶಾಲೆಯನ್ನು ತೆಗೆದುಕೊಂಡಿರುವ ನಿರ್ಧಾರ ಈಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ..

  ಪೋಷಕರಿಗೆ ವಸ್ತ್ರಸಂಹಿತೆ ಜಾರಿ ಮಾಡಿದ ಖಾಸಗಿ ಶಾಲೆ

  ಕೇಸರಿ ಶಾಲು ಹಾಗೂ ಹಿಜಾಬ್ ವಿವಾದ ತಾರ್ಕಿಕ ಅಂತ್ಯ ಪಡೆಯುವ ಮೊದಲೇ ರಾಜ್ಯದ ಕೆಲವು ಅನುದಾನಿತ ಖಾಸಗಿ ಶಾಲೆಗಳು ಪೋಷಕರಿಗೆ ವಸ್ತ್ರಸಂಹಿತೆ ಜಾರಿ ಮಾಡಿವೆ.ಕೆಲವು ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಬಿಡುವಾಗ ಹಾಗೂ ಶಾಲೆಯಿಂದ ಕರೆದುಕೊಂಡು ಹೋಗಲು ಬರುವಾಗ ಮನೆಯಲ್ಲಿಯೇ ಇರುವ ಉಡುಪುಗಳನ್ನು ಧರಿಸಿ ಬರುತ್ತಾರೆ.. ಹೀಗಾಗಿ ಇದನ್ನು ಗಮನಿಸಿರುವ ಖಾಸಗಿ ಶಾಲೆಗಳು ಪೋಷಕರು ತಮ್ಮ ಮಕ್ಕಳನ್ನು ನೋಡಲು ಶಾಲೆಗಳಿಗೆ ಬಂದಾಗ ಅನೌಪಚಾರಿಕ ಉಡುಪುಗಳಲ್ಲಿ ಬರುವುದನ್ನ ತಪ್ಪಿಸಬೇಕು ಎನ್ನುವ ಕಾರಣಕ್ಕೆ ಡ್ರೆಸ್ ಕೋಡ್ ಜಾರಿ ಮಾಡಿದೆ.

  ಇದನ್ನೂ ಓದಿ: ಸಿಖ್ ವಿದ್ಯಾರ್ಥಿನಿಗೆ ಧರಿಸಿದ ಟರ್ಬನ್ ತೆಗೆಯುವಂತೆ ಹೇಳಿದ ಬೆಂಗಳೂರಿನ ಕಾಲೇಜು

  ಮನೆಯಲ್ಲಿ ಧರಿಸುವ ಬಟ್ಟೆ ಹಾಕಿ ಬಂದ ಪೋಷಕರಿಗೆ ನೋ ಎಂಟ್ರಿ

  ಶಾಲೆಗಳು ಕಳುಹಿಸಿರುವ ಸುತ್ತೋಲೆಯಲ್ಲಿ ಲಭ್ಯವಿರುವ ವಿವರಗಳ ಪ್ರಕಾರ, ಮಕ್ಕಳನ್ನು ಶಾಲೆಯಲ್ಲಿ ಬಿಡುವಾಗ ಅಥವಾ ಶಾಲೆಯಿಂದ ಕರೆದುಕೊಂಡು ಹೋಗುವಾಗ ಪೋಷಕರು ಅಥವಾ ಪಾಲಕರು ಬರ್ಮುಡಾ, ಶಾರ್ಟ್ಸ್, ಸ್ಪೋರ್ಟ್ಸ್ ವೇರ್‌, ಹೌಸ್ ವೇರ್, ಸ್ಲೀವ್‌ಲೆಸ್ ಮತ್ತು ಟ್ರ್ಯಾಕ್ ಪ್ಯಾಂಟ್ ಇತ್ಯಾದಿಗಳನ್ನು ಧರಿಸುವುದನ್ನು ನಿರ್ಬಂಧಿಸಲಾಗಿದೆ. ಈ ಬಗ್ಗೆ ಕೆಲವು ಶಾಲೆಗಳು ಸುತ್ತೋಲೆಯನ್ನು ಹೊರಡಿಸಿದೆ.

  ಸೂಕ್ತವಾದ ಬಟ್ಟೆ ಧರಿಸಿ ಬರುವಂತೆ ಪೋಷಕರಿಗೆ ಸುತ್ತೋಲೆ

  ಬೆಂಗಳೂರು ದಕ್ಷಿಣದಲ್ಲಿರುವ ಒಂದು ಪ್ರಾಥಮಿಕ ಶಾಲೆ ಹೊರಡಿಸಿದ ಅಂತಹ ಒಂದು ಸುತ್ತೋಲೆಯ ಪ್ರಕಾರ, "ಶಾಲೆಗೆ ಭೇಟಿ ನೀಡುವಾಗ ಡ್ರೆಸ್ ಕೋಡ್‌ಗೆ ಬದ್ಧರಾಗಿರಿ. ಫಾರ್ಮಲ್/ಸೆಮಿ ಫಾರ್ಮಲ್ ಬಟ್ಟೆಯನ್ನು ಧರಿಸಿ. ಶಾರ್ಟ್ಸ್, ಬರ್ಮುಡಾ, ಸ್ಲೀವ್‌ಲೆಸ್, ಟ್ರ್ಯಾಕ್ ಪ್ಯಾಂಟ್‌ಗಳು, ಸ್ಪೋರ್ಟ್ಸ್ ವೇರ್‌, ನೈಟ್‌ವೇರ್, ಹೌಸ್ ವೇರ್ ಇತ್ಯಾದಿಗಳನ್ನು ಧರಿಸುವುದನ್ನು ತಪ್ಪಿಸಿ," ಎಂದು ಸುತ್ತೋಲೆಯಲ್ಲಿ ಉಲ್ಲೇಖ ಮಾಡಲಾಗಿದೆ. ಖಾಸಗಿ ಶಾಲೆಗಳ ಆಡಳಿತ ಪ್ರತಿನಿಧಿಗಳು ಮತ್ತು ಮುಖ್ಯ ಪ್ರಾಧ್ಯಾಪಕರ ಪ್ರಕಾರ, ಪೋಷಕರು ಅಥವಾ ಪಾಲಕರು ಮಕ್ಕಳನ್ನು ಶಾಲೆಯಲ್ಲಿ ಬಿಡಲು ಬರುವಾಗ ಅಥವಾ ಶಾಲೆಯಿಂದ ಕರೆದುಕೊಂಡು ಹೋಗುವಾಗ ಯಾವ ಬಟ್ಟೆ ಹಾಕಬಹುದು ಹಾಗೂ ಯಾವ ಬಟ್ಟೆಯನ್ನು ಹಾಕಬಾರದು ಎಂಬ ಡ್ರೆಸ್‌ ಕೋಡ್‌ ಅನ್ನು ವಿಧಿಸಲು ಒತ್ತಾಯ ಮಾಡಿದೆ.

  ಇದನ್ನೂ ಓದಿ: ಮುಸ್ಲಿಂ ಕುಟುಂಬವನ್ನು ಉದ್ರಿಕ್ತರ ಗುಂಪಿನಿಂದ ರಕ್ಷಿಸಿದ ಮೆಗ್ಗಾನ್‌ ಆಸ್ಪತ್ರೆಯ ವೈದ್ಯರು!

  ಕೆಲವು ಪೋಷಕರಿಂದ ಅಸಮಾಧಾನ

  ಇನ್ನು ಮಕ್ಕಳನ್ನ ಶಾಲೆಗೆ ಬಿಡುವಾಗ ಹಾಗೂ ಶಾಲೆಯಿಂದ ಕರೆದುಕೊಂಡು ಹೋಗುವಾಗ ಸೂಕ್ತವಾದ ರೀತಿಯ ಉಡುಪು ಧರಿಸಿ ಬರುವಂತೆ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ಹೊರಡಿಸಿರುವ ಸುತ್ತೋಲೆ ಕೆಲವು ಪೋಷಕರು ಒಪ್ಪಿಗೆ ಸೂಚಿಸಿದರೆ ಇನ್ನೂ ಕೆಲವು ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.. ನಮ್ಮ ಮಕ್ಕಳು ಸೇರಿದಂತೆ ನೂರಾರು ಮಕ್ಕಳು ನಮ್ಮನ್ನು ನೋಡುತ್ತಾರೆ ಎಂಬ ಕಾರಣಕ್ಕೆ ನಾವು ಪೋಷಕರು ಸ್ವಲ್ಪ ಡ್ರೆಸ್ ಸೆನ್ಸ್ ಹೊಂದಿರಬೇಕು ನಿಜ. ನಾವು ಧರಿಸುವ ಬಟ್ಟೆ ಇತರರಿಗೆ ಮುಜುಗರವಾಗಬಾರದು," ಎಂದು ಅಭಿಪ್ರಾಯ ಪಟ್ಟಿದ್ದಾರೆ. ಆದಾಗ್ಯೂ, ಕೆಲವು ಪೋಷಕರು ಉಡುಗೆ ತಮ್ಮ ಆಯ್ಕೆ ಎಂದು ಭಾವಿಸುತ್ತಾರೆ. ಶಾಲೆಗಳು ಪೋಷಕರಿಗೆ ಡ್ರೆಸ್ ಕೋಡ್ ಹೇರಬಾರದು. ನಮಗೆ ಆರಾಮದಾಯಕವಾದುದನ್ನು ಧರಿಸಲು ನಮಗೆ ಅವಕಾಶ ನೀಡಬೇಕು. ಕೆಲವು ಖಾಸಗಿ ಶಾಲೆಗಳು ಪೋಷಕರನ್ನೂ ನಿಯಂತ್ರಿಸಲು ಪ್ರಾರಂಭಿಸಿರುವುದು ಬೇಸರದ ಸಂಗತಿ ಎಂದು ಬೇಸರ ಹೊರಹಾಕಿದ್ದಾರೆ.
  Published by:ranjumbkgowda1 ranjumbkgowda1
  First published: