ಬಾಗಲಕೋಟೆಯಲ್ಲಿ ಫೀಸ್ ಕಟ್ಟಿ ಎಂದು ದುಂಬಾಲು ಬಿದ್ದ ಖಾಸಗಿ ಶಿಕ್ಷಣ ಸಂಸ್ಥೆಗಳು; ಪೋಷಕರ ಆಕ್ರೋಶ

ಈ ಹಿಂದೆ ಒಂದು ತಿಂಗಳ ಹಿಂದೆ ಸೇಂಟ್ ಆನ್ಸ್ ಲಯನ್ಸ್ ಶಾಲೆಯವರು ಪೋಷಕರಿಗೆ ಫೀಸ್ ಕಟ್ಟಿ ಎಂದಾಗ ಶಾಲೆಗೆ ತೆರಳಿ ಪೋಷಕರು ವಿಚಾರಿಸಿದಾಗಲೂ ಶಿಕ್ಷಣ ಸಂಸ್ಥೆಯವರು ಸ್ಪಂದಿಸಿಲ್ಲ, ಫೀಸ್ ಕಟ್ಟಿ ಎಂದು ಹೇಳಿದ್ದಾರೆ. ಇನ್ನು ಇದೀಗ ಅಕ್ಟೋಬರ್ 10 ಮೊದಲ ಕಂತು ಕಟ್ಟುವುದಕ್ಕೆ ಗಡುವು ನೀಡಿದ್ದಾರೆ.

news18-kannada
Updated:October 9, 2020, 9:49 AM IST
ಬಾಗಲಕೋಟೆಯಲ್ಲಿ ಫೀಸ್ ಕಟ್ಟಿ ಎಂದು ದುಂಬಾಲು ಬಿದ್ದ ಖಾಸಗಿ ಶಿಕ್ಷಣ ಸಂಸ್ಥೆಗಳು; ಪೋಷಕರ ಆಕ್ರೋಶ
ಖಾಸಗಿ ಶಾಲೆ
  • Share this:
ಬಾಗಲಕೋಟೆ (ಅಕ್ಟೋಬರ್ 09) : ಕೊರೋನಾ ಮಧ್ಯೆ ಶಾಲಾ ಕಾಲೇಜು ಆರಂಭಿಸಬೇಕೋ ಬೇಡವೋ ಎನ್ನುವ ಚರ್ಚೆ ನಡೆಯುತ್ತಿರುವ ಮಧ್ಯೆ ಬಾಗಲಕೋಟೆಯಲ್ಲಿ ಖಾಸಗಿ ಶಾಲೆಗಳ ಫೀಸ್ ವ್ಯಾಮೋಹ ಮಾತ್ರ ನಿಂತಿಲ್ಲ. ಪೋಷಕರಿಗೆ ವಾಟ್ಸಪ್ ಮೆಸೇಜ್ ಮೂಲಕ ಫೀಸ್ ಕಟ್ಟಿ ಎಂದು ಖಾಸಗಿ ಶಾಲೆಯೊಂದು ದುಂಬಾಲು ಬಿದ್ದಿದೆ. ಜೊತೆಗೆ ಸಂಪೂರ್ಣ ಫೀಸ್ ಕಟ್ಟಿ ಎಂದು ಪೋಷಕರಿಗೆ ಒತ್ತಡ ಹಾಕುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಬಾಗಲಕೋಟೆ ನಗರದಲ್ಲಿರುವ  ಬೆಂಗಳೂರು ಮೂಲದ ಸೇಂಟ್ ಆನ್ಸ್, ಲಯನ್ಸ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ವಿರುದ್ಧ ಫೀಸ್ ಕಟ್ಟುವ ಸಂಬಂಧ ಕಿರುಕುಳ ಆರೋಪ ಕೇಳಿಬಂದಿದ್ದು, ಖಾಸಗಿ ಶಾಲೆಗಳ ಫೀಸ್ ವ್ಯಾಮೋಹ ಕೊರೋನಾ  ಸಂಕಷ್ಟ ಸಂದರ್ಭದಲ್ಲೂ ಮುಂದುವರೆದಿರುವುದು ಕಂಡು ಬಂದಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ಕೆಲವೆಡೆ ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಫೀಸ್ ವಸೂಲಿ ಶುರು ಮಾಡಿದ್ದಾರೆ.

ಇನ್ನು ಈ ಹಿಂದೆ ಒಂದು ತಿಂಗಳ ಹಿಂದೆ ಸೇಂಟ್ ಆನ್ಸ್ ಲಯನ್ಸ್ ಶಾಲೆಯವರು ಪೋಷಕರಿಗೆ ಫೀಸ್ ಕಟ್ಟಿ ಎಂದಾಗ ಶಾಲೆಗೆ ತೆರಳಿ ಪೋಷಕರು ವಿಚಾರಿಸಿದಾಗಲೂ ಶಿಕ್ಷಣ ಸಂಸ್ಥೆಯವರು ಸ್ಪಂದಿಸಿಲ್ಲ, ಫೀಸ್ ಕಟ್ಟಿ ಎಂದು ಹೇಳಿದ್ದಾರೆ. ಇನ್ನು ಇದೀಗ ಅಕ್ಟೋಬರ್ 10 ಮೊದಲ ಕಂತು ಕಟ್ಟುವುದಕ್ಕೆ ಗಡುವು ನೀಡಿದ್ದಾರೆ. ಆಗ ಮತ್ತೊಮ್ಮೆ ಪೋಷಕರು ಶಾಲೆಗೆ ತೆರಳಿ  ಶಾಲೆಯ ವಿರುದ್ಧ ಪೋಷಕರು ಸಿಡಿದೆದ್ದಾರೆ‌. ಶಾಲೆಯ ಫೀಸ್ ಕುರಿತು ಕಿರುಕುಳದ ಬಗ್ಗೆ  ಜಿಲ್ಲಾಧಿಕಾರಿಗಳ ಮೂಲಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಧ್ಯೆ ಪ್ರವೇಶಿಸಿ, ಕ್ರಮ ಕೈಗೊಳ್ಳಬೇಕೆಂದು  ಮನವಿ ಪತ್ರವೊಂದನ್ನು ಕಳುಹಿಸಿದ್ದಾರೆ.

ಕೊರೋನಾ ವೈರಸ್ ಹಿನ್ನೆಲೆಯಲ್ಲಿ ದುಡಿಯಲು ಉದ್ಯೋಗ ಇಲ್ಲ. ಈಗ ಸಂಪೂರ್ಣ ಫೀಸ್ ಕಟ್ಟಿ ಎಂದ್ರೆ ಹೇಗೆ? ಜೂನ್  ವೇಳೆಯಲ್ಲಿ 5ರಿಂದ 7ನೇ ತರಗತಿವರಿಗೆ 15,600 ಪೂರ್ಣ ಫೀಸ್ ರಶೀದಿ ಕೊಟ್ಟಿದ್ದಾರೆ. ಈಗ ಶಾಲೆಯಿಂದ ಪೋಷಕರಿಗೆ  ವಾಟ್ಸಪ್ ಮೂಲಕ  ಫೀಸ್ ಕಟ್ಟಿ ಎಂದು ಮೆಸೇಜ್ ಕಳಿಸುತ್ತಿದ್ದಾರೆ. ಪೂರ್ಣ ಫೀಸ್ ಕಟ್ಟೋಕೆ ಆಗದೇ ಇರೋರು ಎರಡು ಕಂತುಗಳಲ್ಲಾದರೂ ಫೀಸ್ ಕಟ್ಟಿ ಎನ್ನುತ್ತಿದ್ದಾರೆ. ಜೊತೆಗೆ ಶಾಲೆಯೇ ಆರಂಭವಾಗಿಲ್ಲ, ಈಗಾಗಲೇ ಅರ್ಧ ಶೈಕ್ಷಣಿಕ ವರ್ಷ ಮುಗಿತಾ ಬಂದಿದೆ. ಹೇಗೆ  ಸಂಪೂರ್ಣ ಫೀಸ್ ಕಟ್ಟೋದು ಎಂದು ವೀರೇಶ್ ಹಿರೇಮಠ, ಮಂಜುನಾಥ ರೋಕಡೆ ಸೇರಿದಂತೆ  ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ; 19 ಅಭ್ಯರ್ಥಿಗಳಿಂದ 32 ನಾಮಪತ್ರಗಳ ಸಲ್ಲಿಕೆ

ಆಫ್ಲೈನ್ ಕ್ಲಾಸ್ ನಡೆಸಿದ್ದಾರೆ, ವಿಷಯಕ್ಕೆ ಸಂಬಂಧಿಸಿದಂತೆ ವಿಡಿಯೋ ಮಾಡಿ, ವಾಟ್ಸಪ್ ಗೆ ಕಳಿಸ್ತಾರೆ. ಇದ್ರಿಂದ ಮಕ್ಕಳು ಹೇಗೆ ಕಲಿಯಬೇಕು. ಡೌಟ್ಸ್ ಬಂದ್ರೆ ಕೇಳೋದು ಹೇಗೆ ಅಂತಿದ್ದಾರೆ ಪೋಷಕರು. ಫೀಸ್ ನಲ್ಲಿ ಶಾಲಾಭಿವೃದ್ಧಿ ಫೀಸ್ ,ಕಂಪ್ಯೂಟರ್, ಟ್ಯೂಶನ್, ಸೇರಿದಂತೆ ಎಲ್ಲ ಫೀಸ್  ಕೇಳುತ್ತಾರೆ. ಯಾಕೆ ಸಂಪೂರ್ಣ ಫೀಸ್ ಕಟ್ಟಬೇಕು ಎಂದು ಜಿಲ್ಲಾಧಿಕಾರಿ, ಹಾಗೂ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ಪೋಷಕರು ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಸೇಂಟ್ ಆನ್ಸ್ ಲಯನ್ಸ್ ಶಾಲೆಯಲ್ಲಿ ಎಲ್ ಕೆಜಿ , ಯುಕೆಜಿಯಿಂದ 7ನೇ ತರಗತಿಯವರೆಗೆ ಒಟ್ಟು 1400 ವಿದ್ಯಾರ್ಥಿಗಳು ಓದುತ್ತಿದ್ದಾರೆ. 1ರಿಂದ 4 ರವರೆಗೆ 13600, 5 ರಿಂದ7 ತರಗತಿವರೆಗೆ 15,600ಫೀಸ್ ನಿಗದಿಪಡಿಸಿದ್ದಾರೆ.

ಆದರೆ ಶಾಲೆಯ ಮುಖ್ಯ ಶಿಕ್ಷಕಿ,ನಾವೂ ಶಿಕ್ಷಕರಿಗೆ ಸಂಬಳ ಕೊಡ್ಬೇಕು,ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಫೀಸ್ ಹೆಚ್ಚಿಸಿಲ್ಲ. ಕಳೆದ ವರ್ಷದ ನಿಗದಿ ಪಡಿಸಿದ ಫೀಸ್  ಮುಂದುವರಿಸಿದ್ದೇವೆ.‌ ಫೀಸ್ ತುಂಬಿ ಎಂದು ಒತ್ತಡ ಹಾಕಿಲ್ಲ. ಮೇಸೆಜ್ ಕಳಿಸಿದ್ದೇವೆ. ಯಾರಿಗೆ ಸಂಪೂರ್ಣ ಫೀಸ್ ತುಂಬುವದಕ್ಕೆ ಆಗುತ್ತೆ ಅವರು ತುಂಬಿ, ಇಲ್ಲದೆ ಇರುವವರಿಗೆ ಎರಡು ಕಂತುಗಳಲ್ಲಿ ತುಂಬಿ ಎಂದಿದ್ದೇವೆ ಎನ್ನುತ್ತಾರೆ ಮುಖ್ಯ ಶಿಕ್ಷಕಿ ಸಿಸ್ಟರ್ ಜಯಂತಿ.
ಒಟ್ಟಿನಲ್ಲಿ ಬಾಗಲಕೋಟೆ ಜಿಲ್ಲೆಯಲ್ಲಿ ಖಾಸಗಿ ಶಾಲೆಗಳಿಂದ ಫೀಸ್ ಕಟ್ಟಿ ಎಂದು ದುಂಬಾಲು ಬೀಳುತ್ತಿದ್ದಾರೆ.ಸರ್ಕಾರ ಕೊರೊನಾ ಸಂದರ್ಭದಲ್ಲೂ ಖಾಸಗಿ ಶಾಲೆಗಳ ಫೀಸ್ ವ್ಯಾಮೋಹಕ್ಕೆ ಕಡಿವಾಣ ಹಾಕಬೇಕಿದೆ.
Published by: Latha CG
First published: October 9, 2020, 9:49 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading