Omicron: ಖಾಸಗಿ ​ ಲ್ಯಾಬ್ಎಡವಟ್ಟು- ಮತ್ತೊಬ್ಬ ಓಮೈಕ್ರಾನ್ ಸೋಂಕಿತ ಎಲ್ಲಿದ್ದಾರೆ ಅಂತ ಯಾರಿಗೂ ಗೊತ್ತಿಲ್ಲ!

Private Lab Mistake: ಇನ್ನು ಜನರು ಸಹಕಾರ ನೀಡಿದ್ರೆ.. ಲಾಕ್ ಡೌನ್ ಮಾಡೋದಿಲ್ಲ. ಒಂದು ವೇಳೆ ಜನರು ಕೊರೋನಾ ನಿಯಮಗಳನ್ನು ಅನುಸರಿಸದೇ ಇದ್ರೇ..ಲಾಕ್ ಡೌನ್ ಮಾಡೋದು ಅನಿವಾರ್ಯವಾಗುತ್ತದೆ ಎಂಬುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಜನರಿಗೆ ಎಚ್ಚರಿಕೆಯನ್ನು ನೀಡಿದರು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ರಾಜ್ಯದಲ್ಲಿ ಒಂದೆಡೆ ಕೊರೊನಾ (Corona)  ರೂಪಾಂತರ ಓಮೈಕ್ರಾನ್​ (Omicron) ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದರೆ, ಇನ್ನೊಂದೆಡೆ ಖಾಸಗಿ ಲ್ಯಾಬ್ ನ (Private Lab) ಯಡವಟ್ಟಿನಿಂದ ಆತಂಕ ಎದುರಾಗಿದೆ.  ಖಾಸಗಿ ಲ್ಯಾಬ್​ಗೆ ಟೆಸ್ಟಿಂಗ್ ಗೆ ಬಂದಿರೋ ವ್ಯಕ್ತಿಯ ಡೇಟಾ ಕಲೆಕ್ಟ್ ಮಾಡದೇ ಬಿಟ್ಟರೋ ಲ್ಯಾಬ್ ಸಿಬ್ಬಂದಿಯ ಎಡವಟ್ಟಿನಿಂದ ಕೊರೊನಾ (Coronavirus) ಭಯ ಹೆಚ್ಚಾಗಿದೆ. ಡಿಸಂಬರ್ 28ಕ್ಕೆ ಖಾಸಗಿ ಲ್ಯಾಬ್ ನಲ್ಲಿ ಟೆಸ್ಟಿಂಗ್ ಮಾಡಿಸಿಕೊಂಡಿರೋ ವ್ಯಕ್ತಿಯಲ್ಲಿ ಡಿಸೆಂಬರ್ 29ಕ್ಕೆ ಕೊರೊನಾ ಸೋಂಕು ಪತ್ತೆಯಾಗಿದೆ, ಅದರಲ್ಲೂ ಜಿನೋಮ್ ಸಿಕ್ವೇನ್ಸ್ ನಿಂದ ಇಂದು ಓಮೈಕ್ರಾನ್ ರಿಪೋರ್ಟ್ ಬಂದಿದ್ದು, ಆ ವ್ಯಕ್ತಿಯಲ್ಲಿ ಓಮೈಕ್ರಾನ್ ರೂಪಾಂತರಿ ವೈರಸ್ ಪತ್ತೆಯಾಗಿದೆ, ಆದರೆ ಆ ವ್ಯಕ್ತಿಯ ಬಗ್ಗೆ ಮಾಹಿತಿ ಇಲ್ಲದಿರುವುದು ತಲೆನೋವಾಗಿ ಪರಿಣಮಿಸಿದೆ.  

ಈಗ ಆತ ಎಲ್ಲಿದ್ದಾನೆ, ಅವನ ಪ್ರೈಮರಿ ಕಾಂಟ್ಯಾಕ್ಟ್ ಎಷ್ಟು, ಎಲ್ಲಿಂದ ಆತನಿಗೆ ವೈರಸ್ ತಗುಲಿದ್ದು, ಆ ವ್ಯಕ್ತಿಯ ಆರೋಗ್ಯ ಹೇಗಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲದಿರುವುದು ನಿಜಕ್ಕೂ ಕಷ್ಟಕರ ಪರಿಸ್ಥಿತಿಯಾಗಿದೆ.  ಅಲ್ಲದೇ ಸೋಂಕಿತ ವ್ಯಕ್ತಿ ಐಸೋಲೇಷನ್ ಆಗಿದ್ದಾರಾ ಇಲ್ವಾ.? ಯಾವ ಮಾಹಿತಿಯೂ ಆರೋಗ್ಯ ಇಲಾಖೆ ಬಳಿ ಇಲ್ಲ.

ಲ್ಯಾಬ್​ನಲ್ಲಿ ಓಮೈಕ್ರಾನ್ ಸೋಂಕಿತ ವ್ಯಕ್ತಿಯ ಡೀಟೈಲ್ಸ್ ರಿಪೋರ್ಟ್ನ ವ್ಯಕ್ತಿಯ ಮಾಹಿತಿ ಜಾಗದಲ್ಲಿ Unknown ಎಂದು ಉಲ್ಲೇಖವಾಗಿದ್ದು ಈ ಎಲ್ಲಾ ಸಮಸ್ಯೆಗಳಿಗೆ ಕಾರಣವಾಗಿದೆ, ಆ ವ್ಯಕ್ತಿ ನೀಡಿರೋ ಪೋನ್ ನಂಬರ್ ಕೂಡ ಈಗ ಲಭ್ಯವಿಲ್ಲ, ಇದರಿಂದ ಆರೋಗ್ಯ ಇಲಾಖೆ ಪೊಲೀಸರಿಗೆ ದೂರು ನೀಡಿದ್ದು, ಸೋಂಕಿತ ವ್ಯಕ್ತಿಯನ್ನು ಪತ್ತೆಹಚ್ಚುವ ಕಾರ್ಯ ಆರಂಭಿಸಲಾಗಿದೆ.

ರಾಜ್ಯದಲ್ಲಿ ಹೊಸದಾಗಿ 10 ಜನರಿಗೆ ಓಮೈಕ್ರಾನ್

ರಾಜ್ಯದಲ್ಲಿ ಇಂದು ಬೆಳಗ್ಗೆ ಅಷ್ಟೇ ಮಾಹಿತಿ ಬಂದಿದ್ದು 10 ಜನರಲ್ಲಿ ಓಮೈಕ್ರಾನ್​ ಸೋಂಕು ಕಾಣಿಸಿಕೊಂಡಿದ್ದು, ಸೋಂಕಿತರನ್ನು ಕ್ವಾರೆಂಟೈನ್​ ಮಾಡಲಾಗಿದೆ. ಆರೋಗ್ಯ ಸಚಿವ ಸುಧಾಕರ್ ಈ ಬಗ್ಗೆ ಟ್ವಿಟರ್ ಮೂಲಕ ಮಾಹಿತಿ ನೀಡಿದ್ದು ರಾಜ್ಯದಲ್ಲಿ ಹೊಸದಾಗಿ 10 ಜನರಿಗೆ ಓಮೈಕ್ರಾನ್ ಸೋಂಕು ಕಾಣಿಸಿಕೊಂಡಿದೆ.. ಈ ಮೂಲಕ ರಾಜ್ಯದಲ್ಲಿ ಓಮೈಕ್ರಾನ್ ಸೋಂಕಿತರ ಸಂಖ್ಯೆ 276ಕ್ಕೆ ಏರಿಕೆ ಆಗಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಓಮೈಕ್ರಾನ್ ಸ್ಫೋಟ : ಒಂದೇ ದಿನ 10 ಜನರಿಗೆ ವಕ್ಕರಿಸಿಕೊಂಡ ಮಹಾಮಾರಿ

ಇಂದು ಪತ್ತೆಯಾಗಿರುವ ಓಮೈಕ್ರಾನ್ ಪ್ರಕರಣದಲ್ಲಿ 8 ಕೇಸುಗಳು ಬೆಂಗಳೂರಿನಲ್ಲಿ ಕಾಣಿಸಿಕೊಂಡಿದ್ರೆ, ಧಾರವಾಡದಲ್ಲಿ ಎರಡು ಪ್ರಕರಣಗಳು ಪತ್ತೆಯಾಗಿವೆ. ಬೆಂಗಳೂರಿನಲ್ಲಿ ಪತ್ತೆಯಾಗಿರುವ ಎಂಟು ಪ್ರಕರಣಗಳಲ್ಲಿ ಐದು ಜನರು ಅಂತರಾಷ್ಟ್ರೀಯ ಪ್ರಯಾಣಿಕರಾಗಿದ್ದಾರೆ ಎಂದು ಆರೋಗ್ಯ ಸಚಿವ ಸುಧಾಕರ್ ಮಾಹಿತಿ ನೀಡಿದ್ದಾರೆ. ಸದ್ಯ ಓಮೈಕ್ರಾನ್ ಸೋಂಕು ಕಾಣಿಸಿಕೊಂಡಿರುವ 10 ಜನ ಪ್ರಯಾಣಿಕರ ಮೇಲೆ ತೀವ್ರ ನಿಗಾ ವಹಿಸಲಾಗಿದ್ದು ಹೆಚ್ಚಿನ ತಪಾಸಣೆ ನಡೆಸಲಾಗುತ್ತಿದೆ.

ಲಾಕ್ ಡೌನ್ ಸುಳಿವು ಕೊಟ್ಟ ಸಿಎಂ ಬೊಮ್ಮಾಯಿ

ಇನ್ನು ಜನರು ಸಹಕಾರ ನೀಡಿದ್ರೆ.. ಲಾಕ್ ಡೌನ್ ಮಾಡೋದಿಲ್ಲ. ಒಂದು ವೇಳೆ ಜನರು ಕೊರೋನಾ ನಿಯಮಗಳನ್ನು ಅನುಸರಿಸದೇ ಇದ್ರೇ.. ಲಾಕ್ ಡೌನ್ ಮಾಡೋದು ಅನಿವಾರ್ಯವಾಗುತ್ತದೆ ಎಂಬುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಜನರಿಗೆ ಎಚ್ಚರಿಕೆಯನ್ನು ನೀಡಿದ್ದಾರೆ. ಇದು ಸಾಲದು ಎಂಬಂತೆ ನಿನ್ನೆ ಕೋವಿಡ್ ಪ್ರಕರಣ ಹೆಚ್ಚುತ್ತಿರುವುದರಿಂದ ತಜ್ಞರು ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲು ಟಫ್ ರೂಲ್ಸ್ ಜಾರಿಗೆ ಸಲಹೆ ನೀಡಿದ್ದಾರೆ. ಅದರಂತೆ ಕಠಿಣ ನಿಯಮಗಳನ್ನು ಜಾರಿ ಮಾಡುತ್ತೇವೆ. ಒಂದು ವೇಳೆ ಜನರು ಕಠಿಣ ನಿಯಮಕ್ಕೆ ಸಹಕಾರ ನೀಡದಿದ್ದರೆ ಲಾಕ್ ಡೌನ್ ಜಾರಿ ಮಾಡಬೇಕಾಗುತ್ತೆ ಎಂದು ಕಂದಾಯ ಸಚಿವ ಆರ್ ಅಶೋಕ್ ಪರೋಕ್ಷವಾಗಿ ಲಾಕ್ಡೌನ್ ಸುಳಿವು ನೀಡಿದ್ದರು.

ಕೋವಿಡ್ ತಡೆಯಲು ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿ

ಇದನ್ನೂ ಓದಿ: ಇಂದಿನಿಂದ 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೊರೊನಾ ಲಸಿಕೆ

ಇನ್ನು ರಾಜ್ಯದಲ್ಲಿ ನಿರಂತರವಾಗಿ ಏರಿಕೆಯಾಗುತ್ತಿರುವ ಕೋವಿಡ್ ತಡೆಯಲು ರಾಜ್ಯದಲ್ಲಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗಿದೆ. ಡಿಸೆಂಬರ್ 28ರಿಂದಲೇ ನೈಟ್ ಕರ್ಫ್ಯೂ ಜಾರಿಗೊಳಿಸಿದೆ. ಜನವರಿ 7ರ ತನಕ ರಾತ್ರಿ 10 ರಿಂದ ಬೆಳಗ್ಗೆ 5 ಗಂಟೆಯ ತನಕ ನೈಟ್ ಕರ್ಫ್ಯೂ ಬೆಂಗಳೂರು ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲಿ ಜಾರಿ ಮಾಡಲಾಗಿದೆ.. ಇದೇ ರೀತಿ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಅಧಿಕವಾಗುತ್ತಾ ಹೋದರೆ ರಾಜ್ಯ ಸರ್ಕಾರ ಲಾಕ್ ಡೌನ್ ಮಾಡುವ ಎಲ್ಲಾ ಸಾಧ್ಯತೆಗಳು ಇವೆ.
Published by:Sandhya M
First published: