ಹೋರಾಟಕ್ಕೆ ಮುಂದಾದ ಖಾಸಗಿ ಶಿಕ್ಷಣ ಸಂಸ್ಥೆಗಳು; ಆನ್​ಲೈನ್ ಕ್ಲಾಸ್ ಬಂದ್ ಮಾಡಲು ನಿರ್ಧಾರ!

ಈ ಹಿನ್ನೆಲೆಯಲ್ಲಿ ಹೋರಾಟಕ್ಕೆ ಮುಂದಾಗಿರುವ ರುಪ್ಸಾ ಖಾಸಗಿ ಶಾಲೆಗಳ ಒಕ್ಕೂಟ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಇಂದು 10 ಗಂಟೆಗೆ ಸಭೆ ನಡೆಯಲಿದ್ದು ಬಳಿಕ 1 ಗಂಟೆಗೆ ಸುದ್ದಿಗೋಷ್ಟಿಯಲ್ಲಿ ಅಧಿಕೃತ ನಿರ್ಧಾರ ಪ್ರಕಟ ಮಾಡಲಿದ್ದಾರೆ ಎನ್ನಲಾಗುತ್ತಿದೆ.

ಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆ

ಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆ

 • Share this:
  ಬೆಂಗಳೂರು (ಡಿಸೆಂಬರ್​ 20); ಕೊರೋನಾ ಭೀತಿಯ ನಡುವೆಯೂ ಜನವರಿ 1 ರಿಂದ ಶಾಲಾ ಕಾಲೇಜುಗಳನ್ನು ತೆರೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಸಿಎಂ ಬಿ.ಎಸ್. ಯಡಿಯೂರಪ್ಪ ಈ ಸಂಬಂಧ ಶನಿವಾರ ಅಧಿಕೃತ ಅಧಿಸೂಚನೆಯನ್ನೂ ಬಿಡುಗಡೆ ಮಾಡಿದ್ದರು. ಆದರೆ, ಇನ್ನೇನು ಶಾಲೆಗಳು ಆರಂಭವಾಗಲಿವೆ ಎನ್ನುತ್ತಿರುವಾಗಲೇ ಖಾಸಗಿ ಶಾಲೆಗಳು ಇದೀಗ ಮತ್ತೊಮ್ಮೆ ಹೋರಾಟಕ್ಕೆ ಮುಂದಾಗಿವೆ. ಅಲ್ಲದೆ, ಇಂದಿನಿಂದ ಆನ್​ಲೈನ್​ ತರಗತಿಗಳನ್ನೂ ಬಂದ್​ ಮಾಡುವ ನಿರ್ಧಾರವನ್ನು ಕೈಗೊಂಡಿವೆ. ರುಪ್ಸಾ ಖಾಸಗಿ ಶಾಲೆಗಳ ಒಕ್ಕೂಟ ಶಾಲೆಗಳನ್ನು ಮುಚ್ಚುವ ಬೆದರಿಕೆ ಒಡ್ಡಿದ್ದು, ತಮ್ಮ ಬೇಡಿಕೆ ಈಡೇರಿಸುವವರೆಗೆ ಶಾಲೆಗಳನ್ನು ಆರಂಭಿಸುವುದಿಲ್ಲ ಎಂದು ಸರ್ಕಾರಕ್ಕೆ ಬೆದರಿಕೆ ಹಾಕಿವೆ.​ 

  ಮೂರುವರೆ ಸಾವಿರ ಮರು ನೋಂದಣಿಗೆ ಸಲ್ಲಿಸಿದ ಶಾಲೆಗಳು ಅನುಮತಿ ನೀಡಬೇಕು, ಅದಾಲತ್ ರೂಪದಲ್ಲಿ ಏಕಕಾಲಕ್ಕೆ ಅರ್ಜಿಗಳನ್ನ ವಿಲೇವಾರಿ ‌ಮಾಡಿ 124 ಶಾಲೆಗಳ ಮುಚ್ಚುವ ಆಲೋಚನೆ ನಿರ್ಧಾರ ಹಿಂಪಡೆಯಬೇಕು, 25 ವರ್ಷಗಳಿಂದ ಅನುದಾನಕ್ಕೆ ಒಳಪಡದೆ ಇದ್ದ ಶಾಲೆಗಳನ್ನ ಅನುದಾನಕ್ಕೆ ಒಳಪಡಿಸಬೇಕು, ಖಾಸಗಿ ಶಾಲಾ ಶಿಕ್ಷಕರಿಗೆ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಬೇಕು, ಆರ್ಥಿಕ ಸಂಕಷ್ಟದಲ್ಲಿರುವ ಶಾಲೆಗಳ ವಾಹನಗಳ ಸಾಲಗಳ ಮರುಪಾತಿ ಮುಂದೂಡಬೇಕು, ಶಾಲೆಗಳ ಕಟ್ಟಡಗಳು ಸುರಕ್ಷತಾ ಪ್ರಮಾಣ ಪತ್ರದ ಅಗತ್ಯತೆಯ ಕುರಿತು ಸುತ್ತೋಲೆ ಮರು ಪರಿಶೀಲನೆಗೆ ಮಾಡಬೇಕು ಎಂಬುದು ರುಪ್ಸಾ ಒಕ್ಕೂಟದ ಒತ್ತಾಯ.

  ಇದನ್ನೂ ಓದಿ : ಹಳ್ಳ ಹಿಡಿದ ಪ್ರಧಾನಮಂತ್ರಿ ಆವಾಸ್ ಯೋಜನೆ; 4 ವರ್ಷದಿಂದ ಹಣ ಬಿಡುಗಡೆ ಇಲ್ಲ, ಜನರೇ ಸಾಲ ಮಾಡಿ ಮನೆ ನಿರ್ಮಾಣ

  ಈ ಹಿನ್ನೆಲೆಯಲ್ಲಿ ಹೋರಾಟಕ್ಕೆ ಮುಂದಾಗಿರುವ ರುಪ್ಸಾ ಖಾಸಗಿ ಶಾಲೆಗಳ ಒಕ್ಕೂಟ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಇಂದು 10 ಗಂಟೆಗೆ ಸಭೆ ನಡೆಯಲಿದ್ದು ಬಳಿಕ 1 ಗಂಟೆಗೆ ಸುದ್ದಿಗೋಷ್ಟಿಯಲ್ಲಿ ಅಧಿಕೃತ ನಿರ್ಧಾರ ಪ್ರಕಟ ಮಾಡಲಿದ್ದಾರೆ ಎನ್ನಲಾಗುತ್ತಿದೆ.

  ತಮ್ಮ ಬೇಡಿಕೆ ಈಡೇರಿಕೆಗಾಗಿ ಜನವರಿ 6ರಿಂದ ಬೆಂಗಳೂರಿನಲ್ಲಿ ಸತ್ಯಾಗ್ರಹ ಹೋರಾಟಕ್ಕಿಳಿಯಲೂ ಈ ಒಕ್ಕೂಟ ನಿರ್ಧರಿಸಿದೆ ಎನ್ನಲಾಗುತ್ತಿದೆ. ಈ ವೇಳೆ ರಾಜ್ಯದಾದ್ಯಂತ ಶಾಲೆಗಳು ಬಂದ್ ಆಗಲಿವೆ. ಅನುದಾನರಹಿತ ಖಾಸಗಿ ಶಾಲೆಗಳ ರುಪ್ಸಾ ಒಕ್ಕೂಟದಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಶಾಲೆಗಳಿವೆ.
  Published by:MAshok Kumar
  First published: