• Home
  • »
  • News
  • »
  • state
  • »
  • Bus Ticket Hike: ಟಿಕೆಟ್ ದರ ದುಪ್ಪಟ್ಟು, ಆದರೂ ಬಸ್ ಫುಲ್ ರಶ್! ಎಲ್ಲೆಡೆ ಟ್ರಾಫಿಕ್ ಜಾಮ್, ಇದು ದಸರಾ ಎಫೆಕ್ಟ್!

Bus Ticket Hike: ಟಿಕೆಟ್ ದರ ದುಪ್ಪಟ್ಟು, ಆದರೂ ಬಸ್ ಫುಲ್ ರಶ್! ಎಲ್ಲೆಡೆ ಟ್ರಾಫಿಕ್ ಜಾಮ್, ಇದು ದಸರಾ ಎಫೆಕ್ಟ್!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹಬ್ಬದ ದಿನಗಳಲ್ಲಿ ಸಾರ್ವಜನಿಕರಿಂದ ಹೆಚ್ಚಿಗೆ ಹಣ ವಸೂಲಿ ಮಾಡದಂತೆ ಎಚ್ಚರಿಕೆ ನೀಡಿದೆ. ಸಾರಿಗೆ ಇಲಾಖೆ ಅಧಿಕಾರಿಗಳು ಸೂಚನೆ ಕೊಟ್ರು ಕ್ಯಾರೆ ಎನ್ನದ ಖಾಸಗಿ ಬಸ್ ಮಾಲೀಕರು ಸಾರ್ವಜನಿಕರಿಂದ ಹೆಚ್ಚಿನ ಹಣ ವಸೂಲಿಗೆ ಮುಂದಾಗಿದೆ.

  • Share this:

ಸಾಲು ಸಾಲು ರಜೆ ಹಿನ್ನೆಲೆ  ಬೆಂಗಳೂರಿನಿಂದ (Bengaluru) ತಮ್ಮೂರುಗಳತ್ತ ತೆರಳಿದ್ದಾರೆ.  ಎಲ್ಲೆಡೆ ಖಾಸಗಿ (Private Bus) ಹಾಗೂ ಸರ್ಕಾರಿ ಬಸ್​ ಗಳು (Government buses) ಕೂಡ ಫುಲ್​ ಭರ್ತಿಯಾಗಿದೆ. ಇತ್ತ ಹಬ್ಬದ ದಿನಗಳಲ್ಲಿ ಖಾಸಗಿ ಬಸ್ ಟಿಕೆಟ್ ದರ ಬೇಕಾಬಿಟ್ಟಿ ಹೆಚ್ಚಳವಾಗಿದೆ.  ಖಾಸಗಿ ಬಸ್ ಟಿಕೆಟ್ ದರ ಹೆಚ್ಚಳ (Ticket Fare Hike) ಸಂಬಂಧ ಸಾರಿಗೆ ಇಲಾಖೆಗೆ ಸಾಲು ಸಾಲು ದೂರುಗಳು ಹರಿದು ಬರ್ತಿದೆ. ಸಾರ್ವಜನಿಕರ ದೂರು ಬಂದ ಹಿನ್ನೆಲೆ ಖಾಸಗಿ ಬಸ್ ಮಾಲೀಕರ ಜೊತೆ ಸಾರಿಗೆ ಇಲಾಖೆ ಚರ್ಚೆ ನಡೆಸಿ ವಾರ್ನಿಂಗ್​ ಸಹ ನೀಡಿದೆ.


ಹೆಚ್ಚಿಗೆ ಹಣ ವಸೂಲಿ ಮಾಡದಂತೆ ಎಚ್ಚರಿಕೆ


ಹಬ್ಬದ ದಿನಗಳಲ್ಲಿ ಸಾರ್ವಜನಿಕರಿಂದ ಹೆಚ್ಚಿಗೆ ಹಣ ವಸೂಲಿ ಮಾಡದಂತೆ ಎಚ್ಚರಿಕೆ ನೀಡಿದೆ. ಸಾರಿಗೆ ಇಲಾಖೆ ಅಧಿಕಾರಿಗಳು ಸೂಚನೆ ಕೊಟ್ರು ಕ್ಯಾರೆ ಎನ್ನದ ಖಾಸಗಿ ಬಸ್ ಮಾಲೀಕರು ಸಾರ್ವಜನಿಕರಿಂದ ಹೆಚ್ಚಿನ ಹಣ ವಸೂಲಿಗೆ ಮುಂದಾಗಿದ್ದು, ಖಾಸಗಿ ಬಸ್ ಮಾಲೀಕರು ಹಬ್ಬದ ದಿನಗಳಲ್ಲಿ ಖಾಸಗಿ ಬಸ್ ಟಿಕೆಟ್ ದರವನ್ನ 30% ಹೆಚ್ಚಳ ಮಾಡುತ್ತೇವೆ. ರಾಜ್ಯ ಹಾಗೂ ಹೊರರಾಜ್ಯಕ್ಕೆ ಸಂಚಾರ ಮಾಡುವ ಎಲ್ಲಾ ಖಾಸಗಿ ಬಸ್ ಗಳ ಟಿಕೆಟ್ ದರ 30% ಹೆಚ್ಚಳಕ್ಕೆ ನಿರ್ಧಾರ ಮಾಡಲಾಗಿದೆ.


ಟಿಕೆಟ್ ದರ 30% ಹೆಚ್ಚಳ


ಡಿಮ್ಯಾಂಡ್ ಹೆಚ್ಚಾಗಿರೋದ್ರಿಂದ ಸಾಮಾನ್ಯವಾಗಿಯೇ ಟಿಕೆಟ್ ದರ ಹೆಚ್ಚಳ ಮಾಡ್ತಿವಿ ಎಂದು ಅಂತರರಾಜ್ಯ ಖಾಸಗಿ ಬಸ್ ಮಾಲಿಕರ ಸಂಘ ಖಜಾಂಚಿ ಶಕೀಲ್ ತಿಳಿಸಿದ್ದಾರೆ. ಖಾಸಗಿ ಬಸ್ ಮಾಲೀಕರಾಗಿ ನಮಗೂ ಸಮಸ್ಯೆಗಳಿಗೆ ಹೆಚ್ಚಿಗೆ ಜನರು ಹಬ್ಬದ ಸಮಯಗಳಲ್ಲಿ ಊರುಗಳಿಗೆ ತೆರಳುತ್ತಾರೆ. ಪ್ರತಿಸಲ ಹಬ್ಬದ ಸಂದರ್ಭದಲ್ಲಿ ಟಿಕೆಟ್ ದರ ಹೆಚ್ಚಾಗುತ್ತದೆ. ಹೀಗಾಗಿ ಈ ಬಾರಿಯೂ ಟಿಕೆಟ್ ದರವನ್ನ 30% ಹೆಚ್ಚಿಗೆ ಮಾಡುತ್ತೇವೆ ಎಂದು ಶಕೀಲ್​ ಹೇಳಿದ್ದಾರೆ.


ಬೆಂಗಳೂರಿನಲ್ಲಿ ಟ್ರಾಫಿಕ್‌ ಜಾಮ್ 


ದಸರಾ ಹಬ್ಬ ಹಿನ್ನೆಲೆ  ತಮ್ಮೂರುಗಳತ್ತ ಜನರು ತೆರಳುತ್ತಿದ್ದಾರೆ. ಮಧ್ಯಾಹ್ನದಿಂದಲೇ ಬಸ್ ಗಳು ಫುಲ್ ರಶ್​ ಆಗಿದೆ. ಬೆಂಗಳೂರಿನಲ್ಲಿ ಟ್ರಾಫಿಕ್‌ ಜಾಮ್ ಉಂಟಾಗಿದೆ. ಇಂದು KSRTC ಯಿಂದ 2000 ಹೆಚ್ಚುವರಿ ಬಸ್ ಬಿಡಲಾಗಿದೆ. ಮೈಸೂರು ಪ್ರವಾಸಿ ತಾಣಗಳಿಗೆ 450 ವಿಶೇಷ ಬಸ್ ಗಳ‌ ನಿಯೋಜನೆ ಮಾಡಲಾಗಿದೆ.


ಇದನ್ನೂ ಓದಿ: H D Kumaraswamy: ಅವ್ರು 50 ಕೋಟಿ ಕೊಟ್ಟಿರೋದು ನನ್ನನ್ನು ಕಟ್ಟಿ ಹಾಕಲು; ನಮ್ಮ ಕಾರ್ಯಕರ್ತರನ್ನು ಕೆಣಕಬೇಡಿ ಎಂದ್ರು ಕುಮಾರಸ್ವಾಮಿ


ಅಕ್ಟೋಬರ್ 3 ರವರೆಗೆ ಬೆಂಗಳೂರಿನಿಂದ ರಾಜ್ಯ, ಹೊರರಾಜ್ಯಕ್ಕೆ ಹೆಚ್ಚುವರಿ ಬಸ್​ ಬಿಡಲಾಗಿದೆ. ರಾಜ್ಯ, ಹೊರರಾಜ್ಯದಿಂದ ಬೆಂಗಳೂರಿಗೆ ಹೆಚ್ಚುವರಿ ಬಸ್ ಗಳ ಸಂಚಾರ ನಡೆಸಲಾಗಿದೆ. ಮೆಜೆಸ್ಟಿಕ್, ಮೈಸೂರು ರಸ್ತೆ ಬಸ್ ನಿಲ್ದಾಣ, ಶಾಂತಿನಗರದ ಬಸ್ ನಿಲ್ದಾಣದಿಂದ ಹೆಚ್ಚುವರಿ ಬಸ್ ಗಳ ಸಂಚರಿಸುತ್ತಿವೆ.  ಈಗಾಗಲೇ ಪ್ರತಿದಿನ ಎಸಿ, ನಾನ್ ಎಸಿ, ಸ್ಲೀಪರ್, ಸೆಮಿ ಸ್ಲೀಪರ್, ಐರಾವತಿ ರಿಸರ್ವರ್ಡ್ ಫುಲ್​ ರಶ್​ ಆಗಿದೆ.


ಬೆಂಗಳೂರಿನಿಂದ ಪ್ರತಿದಿನ ಎರಡು ಸಾವಿರ ಬಸ್


ರಾಜ್ಯಾದ್ಯಂತ‌ ದಿನನಿತ್ಯ ಏಳುವರೆ ಸಾವಿರ ಬಸ್ ಸಂಚಾರ ಮಾಡಲಿದೆ.  ಬೆಂಗಳೂರಿನಿಂದ ಪ್ರತಿದಿನ ಎರಡು ಸಾವಿರ ಬಸ್. ಒಂದು ಲಕ್ಷದವರೆಗೆ ಪ್ರಯಾಣಿಕರು ಬಸ್​ಗಳಲ್ಲಿ ಸಂಚಾರ ಮಾಡ್ತಿದ್ದಾರೆ. ದಸರಾ ಹಬ್ಬ ಹಿನ್ನೆಲೆ 30-50 ಸಾವಿರ ಪ್ರಯಾಣಿಕರು ಹೆಚ್ಚುವರಿ ಪ್ರಯಾಣ ನಿರೀಕ್ಷೆ ಇದೆ. ಎರಡು ಸಾವಿರ ಬಸ್ ಸಂಚಾರ ಹೆಚ್ಚಳ ಬೇಡಿಕೆ ಬರುವ ಊರುಗಳಿಗೆ ಬಸ್ ಕಾರ್ಯಾಚರಣೆ ಅದೇ ರೀತಿ ಬೇರೆ ರಾಜ್ಯಗಳಿಗೆ ಬಸ್ ಹೆಚ್ಚುವರಿ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.


ಇದನ್ನೂ ಓದಿ:  Davanagere: ಶಾಲೆಯಲ್ಲಿ ಮಕ್ಕಳಿಗೆ ಲೈಂಗಿಕ ಕಿರುಕುಳ; ಶಿಕ್ಷಕನಿಗೆ ಧರ್ಮದೇಟು


ಬೆಂಗಳೂರಿನಿಂದ ಮೈಸೂರಿಗೆ 200 ವಿಶೇಷ ಬಸ್


ರಾಜ್ಯದ ಧರ್ಮಸ್ಥಳ , ಕುಕ್ಕೆಸುಬ್ರಹ್ಮಣ್ಯ , ಶೃಂಗೇರಿ , ಹೊರನಾಡು , ಶಿವಮೊಗ್ಗ , ಮಡಿಕೇರಿ , ಮಂಗಳೂರು , ದಾವಣಗೆರೆ , ಗೋಕರ್ಣ , ಕೊಲ್ಲೂರು , ಹುಬ್ಬಳ್ಳಿ , ಧಾರವಾಡ , ಬೆಳಗಾವಿ ವಿಜಯಪುರ , ಕಾರವಾರ , ಬಳ್ಳಾರಿ , ಹೊಸಪೇಟೆ , ಕಲಬುರಗಿ ರಾಯಚೂರು ಮುಂತಾದ ಸ್ಥಳಗಳು ಹಾಗೂ ನೆರೆ ರಾಜ್ಯಗಳಾದ ಹೈದರಾಬಾದ್ , ಚೆನ್ನೈ , ಊಟಿ , ಕೊಡೈಕೆನಾಲ್ , ಸೇಲಂ , ತಿರುಚನಾಪಳ್ಳಿ , ಪುದುಚೇರಿ , ಮಧುರೈ , ಪಣಜಿ , ಶಿರಡಿ , ಪೂನಾ , ಏರ್ನಾಕುಲಂ , ಪಾಲ್ಗಾಟ್ ಹಾಗೂ ಇತರ ಸ್ಥಳಗಳಿಗೆ ವಿಶೇಷ ಸಾರಿಗೆಗಳ ಬಸ್​ ಸಂಚಾರ ಆರಂಭಗೊಂಡಿದೆ. ಬೆಂಗಳೂರಿನಿಂದ ಮೈಸೂರಿಗೆ 200 ವಿಶೇಷ ಬಸ್ ಹಾಗೂ ಮೈಸೂರಿನ ಧಾರ್ಮಿಕ ಹಾಗೂ ಪ್ರವಾಸಿ ತಾಣಗಳಿಗೆ 250 ಬಸ್ ನಿಯೋಜ‌ನೆ ಮಾಡಲಾಗಿದೆ.

Published by:ಪಾವನ ಎಚ್ ಎಸ್
First published: