HOME » NEWS » State » PRIVATE BUS OWNERS ASSOCIATION EXPRESS DISAPPOINTED AGAINST STATE GOVERNMENT RHHSN

ಸರ್ಕಾರ ನಮ್ಮ ಮೂಗಿನ ಮೇಲೆ ಬೆಣ್ಣೆ ಇಟ್ಟಿದೆ, ಅದರ ಅರಿವು ನಮಗೆ ಚೆನ್ನಾಗಿ ಗೊತ್ತಿದೆ; ಖಾಸಗಿ ಬಸ್ ಮಾಲೀಕರ ಸಂಘ 

ಖಾಸಗಿ ಬಸ್ ಮಾಲೀಕರ ಸಹ ಕೆಲವು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದಾರೆ. ಅವುಗಳಲ್ಲಿ ಕೆಲವನ್ನು ಈಡೇರಿಸುವುದಾಗಿಯೂ ಸರ್ಕಾರ ಭರವಸೆ ನೀಡಿದೆ. ಜೊತೆಗೆ ಸರ್ಕಾರ ಹೆಚ್ಚುವರಿ ರೈಲುಗಳನ್ನು ಸಹ ನೆನ್ನೆಯಿಂದ ಆರಂಭಿಸಿದೆ. ಬೆಂಗಳೂರಿನಲ್ಲಿ ಮೆಟ್ರೋ ಸಂಚಾರವನ್ನು ಹೆಚ್ಚಳ ಮಾಡಿದೆ. ಆದಾಗ್ಯೂ ಸಾರಿಗೆ ಮುಷ್ಕರ ಹೀಗೆ ಮುಂದುವರೆದರೆ ಸರ್ಕಾರ ಮತ್ತಷ್ಟು ಸಂಕಟಕ್ಕೆ ಸಿಲುಕಲಿದೆ.

news18-kannada
Updated:April 8, 2021, 2:41 PM IST
ಸರ್ಕಾರ ನಮ್ಮ ಮೂಗಿನ ಮೇಲೆ ಬೆಣ್ಣೆ ಇಟ್ಟಿದೆ, ಅದರ ಅರಿವು ನಮಗೆ ಚೆನ್ನಾಗಿ ಗೊತ್ತಿದೆ; ಖಾಸಗಿ ಬಸ್ ಮಾಲೀಕರ ಸಂಘ 
ಖಾಸಗಿ ಬಸ್​ಗಳು
  • Share this:
ಬೆಂಗಳೂರು: ಸಾರಿಗೆ ಇಲಾಖೆ ನೌಕರರ ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದೆ. ಮುಷ್ಕರದಿಂದಾಗಿ ಬಸ್​ ಸೇವೆ ಇಲ್ಲದೆ ಸಾರ್ವಜನಿಕರು ಪರದಾಡುವಂತಾಗಿದೆ. ಏತನ್ಮಧ್ಯೆ, ಪ್ರಯಾಣಿಕರಿಗೆ ತೊಂದರೆ ಆಗದಂತೆ ಸರ್ಕಾರ ಖಾಸಗಿ ಬಸ್​ಗಳನ್ನು ಓಡಿಸಲು ಅನುವು ಮಾಡಿಕೊಟ್ಟಿದೆ. ಆದರೆ, ಇಲ್ಲಿಯೂ ಕೆಲವು ಸಮಸ್ಯೆಗಳಾಗುತ್ತಿದ್ದು, ಸರ್ಕಾರದ ವಿರುದ್ಧ ಖಾಸಗಿ ಬಸ್ ಮಾಲೀಕರ ಸಂಘ ಅಸಮಾಧಾನ ಹೊರಹಾಕಿವೆ.

ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಕರ್ನಾಟಕ ಟೂರಿಸ್ಟ್ ಟ್ರಾವೆಲ್ಸ್ ಮಾಲೀಕರ ಸಂಘದ ಅಧ್ಯಕ್ಷ ಬೈರವ ಸಿದ್ದರಾಮಯ್ಯ ಅವರು, ಇನ್ಶುರೆನ್ಸ್ ಹಾಗೂ ಡಾಕ್ಯುಮೆಂಟ್ ಸರಿ ಇಲ್ಲದ ವಾಹನಗಳನ್ನು ರಸ್ತೆಗೆ ಇಳಿಸಿ ಎಂದು ಸರ್ಕಾರ ಹೇಳಿದೆ. ಆದರೆ ಟ್ರಾಫಿಕ್ ಪೊಲೀಸರು ನಮ್ಮ ಮೇಲೆ ಫೈನ್ ಹಾಕುತ್ತಿದ್ದಾರೆ. ಈಗಾಗಲೇ ಇದರಿಂದ ಸಾಕಷ್ಟು ತೊಂದರ ಆಗ್ತಿದೆ. ಈ ಬಗ್ಗೆ ಪೊಲೀಸ್ ಇಲಾಖೆ ಜೊತೆ ಮಾತನಾಡಬೇಕು ಅಂತ ಒತ್ತಾಯ ಮಾಡಿದರು.

ರಾಜ್ಯ ಖಾಸಗಿ ಬಸ್ ಮಾಲೀಕರ ಕೂಟದ ಅಧ್ಯಕ್ಷ ನಟರಾಜ ಶರ್ಮಾ ಮಾತನಾಡಿ, ನಾವು ಇನ್ಶುರೆನ್ಸ್ ಇಲ್ಲದ ವಾಹನಗಳನ್ನು ರಸ್ತೆಗೆ ಇಳಿಸಿಲ್ಲ. ನಮಗೆ ಒಂದು ತಿಂಗಳ ತೆರಿಗೆ ಮನ್ನಾ ಮಾಡಿ ಅಂತ ಕೇಳಿಕೊಂಡಿದ್ದೇವೆ. ಅದರ ಬಗ್ಗೆ ಮಾತುಕತೆ ನಡೆಸೋಣ ಎಂದು ಹೇಳಿದ್ದಾರೆ. ಸಾರ್ವಜನಿಕರಿಗೆ ತೊಂದರೆ ಆಗಬಾರದು ಅಂತ ಸಾರಿಗೆ ಇಲಾಖೆ ಅಧಿಕಾರಿಗಳೂ ಮನವಿ ಮಾಡಿದ್ದರು. ಈ ವೇಳೆ ಖಾಸಗಿ ಬಸ್ ಮಾಲೀಕರು ಸಭೆ ಮಾಡಿದ್ದೆವು. ತೆರಿಗೆ ವಿನಾಯಿತಿ ಬಗ್ಗೆ ಮನವಿ ಮಾಡುವಂತೆ ನಿರ್ಧಾರ ಮಾಡಿದ್ದೆವು. ಈಗ ಅದನ್ನೇ ನಾವು ಕೇಳಿದ್ದೇವೆ. ಯಾರು ಇನ್ಸುರೆನ್ಸ್ ಇಲ್ಲದ ಗಾಡಿ ತೆಗೆಯೋದಿಲ್ಲ.  ಪ್ರಯಾಣಿಕರ ಜೀವ ನಮ್ಮ ಜವಾಬ್ದಾರಿ ಎಂದು ಹೇಳಿದರು.

ಸರ್ಕಾರ ನಮ್ಮ ಮೂಗಿನ ಮೇಲೆ ಬೆಣ್ಣೆ ಇಟ್ಟಿದೆ. ಅದರ ಅರಿವು ನಮಗೆ ಚೆನ್ನಾಗಿ ಗೊತ್ತಿದೆ.  ಹೀಗಾಗಿ ನಾವು ಸರ್ಕಾರವನ್ನು ನೆಚ್ಚಿಕೊಂಡು ಬಸ್ ರಸ್ತೆಗೆ ಇಳಿಸಿಲ್ಲ. ನಾವು ಇನ್ನೂ 2700 ಬಸ್ ಗಳನ್ನು ರಸ್ತೆಗೆ ಇಳಿಸಲು ಸಿದ್ಧರಿದ್ದೇವೆ ಎಂದು ನಟರಾಜ್ ಶರ್ಮಾ ತಿಳಿಸಿದರು.

ಇದನ್ನು ಓದಿ: ಮುಷ್ಕರ ನಿಲ್ಲಿಸದಿದ್ದರೆ ಹೊರ ರಾಜ್ಯಗಳಿಂದ ಬಸ್: ಸಾರಿಗೆ ಇಲಾಖೆ ಅಧಿಕಾರಿ ಅಂಜುಂ ಪರ್ವೇಜ್

ಆರನೇ ವೇತನ ಆಯೋಗ ಜಾರಿ ಮಾಡುವಂತೆ ಆಗ್ರಹಿಸಿ ಸಾರಿಗೆ ನೌಕರರು ಮತ್ತೊಮ್ಮೆ ನೆನ್ನೆಯಿಂದ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ. ಇದರಿಂದಾಗಿ ಬಸ್​ ಸೇವೆ ಸ್ಥಗಿತಗೊಂಡಿದ್ದು, ಸಾರ್ವಜನಿಕರು ಪರದಾಡುವಂತಾಗಿದೆ. ಜನರಿಗೆ ಅನಾನುಕೂಲ ಉಂಟಾಗದಂತೆ ನೋಡಿಕೊಳ್ಳಲು ಸರ್ಕಾರ ಖಾಸಗಿ ಬಸ್​ಗಳನ್ನು ಓಡಿಸಲು ಅವಕಾಶ ಮಾಡಿಕೊಟ್ಟಿದೆ. ನೆನ್ನೆಯಿಂದ ಖಾಸಗಿ ಬಸ್ಸುಗಳಿಗೆ ಕೆಲವು ವಿನಾಯಿತಿ ನೀಡಿ ಸಾರ್ವಜನಿಕರ ಪ್ರಯಾಣಿಕರ ಓಡಾಟಕ್ಕೆ ಅನುವು ಮಾಡಿದೆ.
Youtube Video
ಖಾಸಗಿ ಬಸ್ ಮಾಲೀಕರ ಸಹ ಕೆಲವು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದಾರೆ. ಅವುಗಳಲ್ಲಿ ಕೆಲವನ್ನು ಈಡೇರಿಸುವುದಾಗಿಯೂ ಸರ್ಕಾರ ಭರವಸೆ ನೀಡಿದೆ. ಜೊತೆಗೆ ಸರ್ಕಾರ ಹೆಚ್ಚುವರಿ ರೈಲುಗಳನ್ನು ಸಹ ನೆನ್ನೆಯಿಂದ ಆರಂಭಿಸಿದೆ. ಬೆಂಗಳೂರಿನಲ್ಲಿ ಮೆಟ್ರೋ ಸಂಚಾರವನ್ನು ಹೆಚ್ಚಳ ಮಾಡಿದೆ. ಆದಾಗ್ಯೂ ಸಾರಿಗೆ ಮುಷ್ಕರ ಹೀಗೆ ಮುಂದುವರೆದರೆ ಸರ್ಕಾರ ಮತ್ತಷ್ಟು ಸಂಕಟಕ್ಕೆ ಸಿಲುಕಲಿದೆ.
Published by: HR Ramesh
First published: April 8, 2021, 2:41 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories