ಜೈಲು ಆಡಳಿತದಲ್ಲಿ ಸುಧಾರಣೆ ತರುವ ಉದ್ದೇಶದಿಂದ ರಾಜ್ಯ ಸರ್ಕಾರ (State Government) ಮಹತ್ವದ ತೀರ್ಮಾನ ತೆಗೆದುಕೊಂಡಿದೆ. ರಾಜ್ಯಾದ್ಯಂತ ಜೈಲುಗಳಲ್ಲಿ ಕೈದಿಗಳ ಸಂಬಳವನ್ನು (Prisoners Salary) ಸರ್ಕಾರ ಏರಿಕೆ ಮಾಡಿ ಆದೇಶ ಹೊರಡಿಸಿದೆ. ಗೃಹ ಇಲಾಖೆ (Home Department) ಆದೇಶದ ಪ್ರಕಾರ, ಪರಿಷ್ಕೃತ ಸಂಬಳ ಮುಂದಿನ ಮೂರು ವರ್ಷಗಳವರೆಗೆ ಮಾನ್ಯವಾಗಿರುತ್ತದೆ. ಮುಂದಿನ ಆದೇಶದವರೆಗೂ ಇದೇ ಸಂಬಳ ಮುಂದುವರಿಯಲಿದೆ. ಕೈದಿಗಳ ವೇತನ ಅವರ ಕೆಲಸದ ಕೌಶಲ್ಯ ಮತ್ತು ಅನುಭವದ (Skills And Experience) ಆಧಾರದ ಮೇಲೆ ಶೇ.165 ರಿಂದ ಶೇ.200 ಗಳೊಳಗೆ ಏರಿಕೆ ಮಾಡಲಾಗಿದೆ. ಕಾರಾಗೃಹ ಆಡಳಿತದಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೆಲ ತಿಂಗಳ ಹಿಂದೆ ಆರು ಸದಸ್ಯರನ್ನು ಒಳಗೊಂಡ ಕರ್ನಾಟಕ ಕಾರಾಗೃಹಗಳ ಅಭಿವೃದ್ಧಿ ಮಂಡಳಿಯನ್ನು ಸ್ಥಾಪಿಸಿತ್ತು. ಈ ಸಮಿತಿಯ ಮೊದಲ ಸಭೆ ಜುಲೈನಲ್ಲಿ ನಡೆದಿತ್ತು. ಸಮಿತಿಯು ಸಭೆ ಬಳಿಕ ಜೈಲಿನಲ್ಲಿರುವ ಕೈದಿಗಳ ಸಂಬಳವನ್ನು ಹೆಚ್ಚಿಸುವ ಕುರಿತು ಗೃಹ ಸಚಿವ ಆರಗ ಜ್ಞಾನೇಂದ್ರ (Home Minister Araga Jnanendra) ಪ್ರಸ್ತಾವಣೆಯನ್ನು ಸಲ್ಲಿಸಿತ್ತು. ಸಚಿವರು ಈ ಪ್ರಸ್ತಾವನೆಯನ್ನು ಹಣಕಾಸು ಇಲಾಖೆಗೆ ಸಲ್ಲಿಸಿದ್ದರು.
ಸರ್ಕಾರದ ನಿಯಮಗಳ ಪ್ರಕಾರ ಕನಿಷ್ಠ ವೇತನ ಅಡಿಯಲ್ಲಿ ಹೆಚ್ಚುವರಿಯಾಗಿ 7 ಕೋಟಿ ರೂಪಾಯಿಗೆ ಹಣಕಾಸು ಇಲಾಖೆ ಅನುಮೋದನೆಯನ್ನು ನೀಡಿದೆ. ಇದರ ಜೊತೆಗೆ ಕೈದಿಗಳ ಸಂಬಳದಿಂದ ಯಾವುದೇ ಮೊತ್ತವನ್ನು ಕಡಿತಗೊಳಿಸದಂತೆ ಸೂಚನೆ ನೀಡಲಾಗಿದೆ. ಈ ಮೊದಲು ಕೈದಿಗಳ ವೇತನದಿಂದಲೇ ಅವರ ಆಹಾರ ಮತ್ತು ಬಟ್ಟೆಯ ಮೊತ್ತವನ್ನು ಕಡಿತ ಮಾಡಲಾಗುತ್ತಿತ್ತು.
1948ರ ಕನಿಷ್ಠ ವೇತನ ಕಾಯಿದೆ
ಕೆಲಸಗಾರನಾಗಿರಲಿ ಅಥವಾ ಕೈದಿಯಾಗಿರಲಿ. ಎಲ್ಲರ ಕೆಲಸದ ಸ್ವರೂಪವು ಒಂದೇ ಆಗಿರುತ್ತದೆ. ಆದ್ದರಿಂದ 1948ರ ಕನಿಷ್ಠ ವೇತನ ಕಾಯಿದೆಯ ಪ್ರಕಾರ ಕೈದಿಗಳಿಗೆ ಪಾವತಿಸುವುದು ಅತ್ಯಗತ್ಯ ಎಂದು ಸಮಿತಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದೆ. ನುರಿತ, ಅರೆ-ಕೌಶಲ್ಯ ಅಥವಾ ಹೆಚ್ಚು ನುರಿತ ಎಂದು ವಿಂಗಡಿಸಿ ಸಂಬಳ ವರ್ಗಿಕರಿಸಲಾಗುತ್ತಿದೆ ಎಂದು ವರದಿಯಾಗಿದೆ.
ಜೈಲಿನಲ್ಲಿರುವ ಕೈದಿಗಳು ಮರಗೆಲಸ, ತರಕಾರಿ ಮತ್ತು ಹಣ್ಣು ಬೆಳೆಯುವಿಕೆ, ಕರಕುಶಲ ವಸ್ತುಗಳು, ಸಾಬೂನುಗಳು ಮತ್ತು ಮಾರ್ಜಕಗಳು, ಜವಳಿ ಇತ್ಯಾದಿಗಳಲ್ಲಿ ಕೆಲಸ ಮಾಡುತ್ತಾರೆ. 2018ರಲ್ಲಿ ಕೊನೆಯ ಬಾರಿ ಸಂಬಳ ಪರಿಷ್ಕರಣೆ ಮಾಡಲಾಗಿತ್ತು.
ಪರಿಷ್ಕೃತ ವೇತನ ಹೀಗಿದೆ
ಜೈಲು ಕೈದಿಗಳ ಸಂಬಳ | ಈ ಮೊದಲಿದ್ದ ಸಂಬಳ | ಪರಿಷ್ಕೃತ ವೇತನ | |||
ವಿಭಾಗ |
| ರೂಪಾಯಿಗಳಲ್ಲಿ | |||
ನುರಿತರು |
| 663 | |||
ಅರೆ ಕೌಶಲ್ಯ |
| 615 | |||
ತರಬೇತಿ ಪಡೆದವರು |
| 548 | |||
ಕೌಶಲ್ಯ ರಹಿತ |
| 524 |
ಸಂಬಳ ಪರಿಷ್ಕರಣೆ ಮಾಡುವ ಕುರಿತು ಹಲವು ಅರ್ಜಿಗಳು ಬಂದಿವೆ, ಕಾರ್ಪೋರೇಟ್ ಕಂಪನಿಗಳ ಮಾದರಿಯಲ್ಲಿ ಕೈದಿಗಳಿಂದ ಸಿದ್ಧವಾದ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ ಎಂದು ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಇದನ್ನೂ ಓದಿ: BJP: ಸೈಲೆಂಟ್ ಸುನೀಲ್ಗಿಲ್ಲ ಬಿಜೆಪಿಗೆ ಎಂಟ್ರಿ; ಫೈಟರ್ ರವಿ ಬಗ್ಗೆ ಮೌನ ಮುರಿಯದ ಕಟೀಲ್
ಇಲ್ಲಿಂದ ಬಂದ ಲಾಭವನ್ನು ಕಲ್ಯಾಣ ಕಾರ್ಯಕ್ರಮಗಳಲ್ಲಿ ಬಳಕೆ ಮಾಡಲಾಗುತ್ತದೆ. ಕೈದಿಗಳು ಸಂಬಳದ ಶೇ.50ರಷ್ಟು ಮೊತ್ತವನ್ನು ತಮ್ಮ ಖರ್ಚುಗಳಿಗೆ ಬಳಸಿಕೊಳ್ಳಬಹುದು. ಇನ್ನುಳಿದ ಶೇ.50ರಷ್ಟು ಮೊತ್ತವನ್ನು ಬಿಡುಗಡೆ ಸಂದರ್ಭದಲ್ಲಿ ನೀಡಲಾಗುತ್ತದೆ.
ವೇತನ ವರ್ಗೀಕರಣ
ಹೊಸ ನಿಯಮಗಳ ಪ್ರಕಾರ ಒಂದು ವರ್ಷದ ಅವಧಿಗೆ ಖೈದಿಯನ್ನು ಕೌಶಲ್ಯರಹಿತ ಎಂದು ಪರಿಗಣಿಸಲಾಗುತ್ತದೆ. ಒಂದು ವರ್ಷದ ತರಬೇತಿ ಮತ್ತು ಶಿಷ್ಯವೃತ್ತಿಯ ನಂತರ, ಅವರನ್ನು ಅರೆ ಕೌಶಲ್ಯದ ಮಟ್ಟಕ್ಕೆ ಏರಿಸಲಾಗುತ್ತದೆ. ಇನ್ನೂ ಎರಡು ವರ್ಷಗಳ ಅನುಭವದ ನಂತರ ಅವರನ್ನು ನುರಿತ ವರ್ಗಕ್ಕೆ ಬಡ್ತಿ ನೀಡಲಾಗುವುದು.
ಇದನ್ನೂ ಓದಿ: Marriage: ಅನಾಥೆಯ ಬಾಳಿಗೆ ಆಸರೆ; ಧಾರೆ ಎರೆದು ಸಾರ್ಥಕತೆ ಮೆರೆದ ಸೇವಾ ಭಾರತಿ ಟ್ರಸ್ಟ್
ಮೂರು ವರ್ಷಗಳ ಅನುಭವದ ನಂತರ, ಖೈದಿಗಳನ್ನು ಅವರ ತಾಂತ್ರಿಕ ಅರ್ಹತೆಗಳು, ಅನುಭವ ಮತ್ತು ನಡವಳಿಕೆಯನ್ನು ಪರಿಗಣಿಸಿ ಹೆಚ್ಚು ನುರಿತ ಎಂದು ವರ್ಗೀಕರಿಸಲಾಗುತ್ತದೆ. ಪುರುಷ ಮತ್ತು ಮಹಿಳೆಯರಿಗೂ ಒಂದೇ ರೀತಿಯ ಸಂಬಳ ನೀಡಲಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ