Bengaluru: ನಾಳೆ ವಾಹನ ಸವಾರರು ರಸ್ತೆಗಿಳಿಯೋ ಮುನ್ನ ಎಚ್ಚರ; ನಗರದಲ್ಲಿ ಹಲವೆಡೆ ಸಂಚಾರ ಬಂದ್

ಬೆಂಗಳೂರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಭೇಟಿ ಹಿನ್ನಲೆ ನಗರದ ಹಲವು ರಸ್ತೆಗಳಲ್ಲಿ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದ್ದು, ಸವಾರರಿಗೆ ಬದಲಿ ವ್ಯವಸ್ಥೆ ಮಾಡಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನಾಳೆ ಬೆಂಗಳೂರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಭೇಟಿ ಹಿನ್ನಲೆ ನಗರದ ಹಲವು ರಸ್ತೆಗಳಲ್ಲಿ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದ್ದು, ವಾಹನ ಸವಾರರಿಗೆ (Motorists) ಬದಲಿ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ 12.30 ರಿಂದ 3.00 ಗಂಟೆಯವರೆಗೆ ಹಲವು ರಸ್ತೆಗಳಲ್ಲಿ ಸಂಚಾರ ನಿಷೇಧ  ಮಾಡಲಾಗಿದೆ. ಮೈಸೂರು ರಸ್ತೆ ಮತ್ತು ನೈಸ್ ಬ್ರಿಡ್ಜ್ ಕಡೆಯಿಂದ ಕೆಂಗೇರಿ, ಉತ್ತರಹಳ್ಳಿ ರಸ್ತೆ ಕಡೆಯಿಂದ ಕೆಂಗೇರಿ, ಮೈಸೂರು ಕಡೆಗೆ ಸಂಚಾರ ನಿಷೇಧ ಮಾಡಲಾಗಿದೆ. ನೈಸ್ ರಸ್ತೆ (Nice Road) ಮುಖಾಂತರ ನೈಸ್ ಕಚೇರಿ - ಸೋಂಪುರ ಟೋಲ್ ಉತ್ತರಹಳ್ಳಿ ಮುಖ್ಯ ರಸ್ತೆ - ಸೋಂಪುರ ಟೋಲ್ ಮುಖಾಂತರ ಕೆಂಗೇರಿ & ಮೈಸೂರು ಕಡೆಗೆ ಸಂಚರಿಸಲು ಅವಕಾಶ  ನೀಡಲಾಗಿದೆ. ಇತ್ತ ನಾಗರಬಾವಿ ಸರ್ಕಲ್ ನಿಂದ ಜ್ಞಾನಭಾರತಿ ಆಡ್ಮಿನ್ ಬ್ಲಾಕ್ ಜಂಕ್ಷನ್ ವರೆಗೆ ಸಂಚಾರ ನಿಷೇಧ ಮಾಡಲಾಗಿದೆ. ನಾಗರಬಾವಿ ಸರ್ಕಲ್- (Nagarabavi Circle) ನಮ್ಮೂರ ತಿಂಡಿ ಹೋಟೆಲ್- ಅಂಬೇಡ್ಕರ್ ಕಾಲೇಜ್ ಜಂಕ್ಷನ್‌- ಜ್ಞಾನಭಾರತಿ ಗೇಟ್ ಕಡೆಯಿಂದ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.

ಮೈಸೂರು ರಸ್ತೆ, ಜ್ಞಾನಭಾರತಿ ಜಂಕ್ಷನ್‌ ಕಡೆ ನಿಷೇಧ

ಮೈಸೂರು ರಸ್ತೆ, ಜ್ಞಾನಭಾರತಿ ಜಂಕ್ಷನ್‌ ನಿಂದ ಯುನಿವರ್ಸಿಟಿ ಕಡೆಗೆ ಹಳೇ ರಿಂಗ್ ರಸ್ತೆ ಉಲ್ಲಾಳ ಜಂಕ್ಷನ್ ನಿಂದ ಯುನಿವರ್ಸಿಟಿ ಕಡೆಗೆ ಸಂಚಾರ ನಿಷೇಧ ಮಾಡಲಾಗಿದೆ. ಈ ಕಡೆ ತೆರಳುವವರಿಗೆ ಆರ್‌ ಆರ್ ನಗರ ಆರ್ಚ್, ನಾಯಂಡಹಳ್ಳಿ ಜಂಕ್ಷನ್ - ನಾಗರಬಾವಿ ಕಡೆಗೆ ಅವಕಾಶ ನೀಡಲಾಗಿದೆ.

ವಾಹನ ಸವಾರರಿಗೆ ಪರ್ಯಾಯ ಮಾರ್ಗ

ಕೆಂಗುಂಟೆ ಜಂಕ್ಷನ್ - ನಮ್ಮೂರ ತಿಂಡಿ - ನಾಗರಬಾವಿ ರಿಂಗ್ ರಸ್ತೆ ಕಡೆಗೆ ಸಂಚಾರ ನಿಷೇಧ ಮಾಡಿದ್ದು,  ತುಮಕೂರು ರಸ್ತೆಯಿಂದ ನಗರದ ಒಳಭಾಗಕ್ಕೆ ಬರುವ ಎಲ್ಲಾ ರೀತಿಯ ಭಾರಿ ವಾಹನಗಳಿಗೆ ನಿಷೇಧ ಮಾಡಲಾಗಿದೆ. ತುಮಕೂರು ಕಡೆಯಿಂದ ಯಲಹಂಕ, ಕೋಲಾರ, ಹೈದರಬಾದ್ ಕಡೆಗೆ ಸಂಚರಿಸುವ ವಾಹನಗಳು ದಾಬಸ್‌ ಪೇಟೆಯಲ್ಲಿ ಎಡತಿರುವು ಪಡೆದು ದೊಡ್ಡಬಳ್ಳಾಪುರ ಮುಖ್ಯರಸ್ತೆ ಮುಖಾಂತರ ತೆರಳ ಬಹುದಾಗಿದೆ.

ಇದನ್ನೂ ಓದಿ: Mysuru: ನಾಳೆ ಅರಮನೆ ನಗರಿಗೆ ಮೋದಿ; ಚಾಮುಂಡಿ ಬೆಟ್ಟಕ್ಕೆ ಜನರಿಗಿಲ್ಲ ಎಂಟ್ರಿ; ಮಾಲ್ ಕ್ಲೋಸ್, ಎಲ್ಲೆಲ್ಲೂ ಪೊಲೀಸ್​

ವಾಹನಗಳ ಪಾರ್ಕಿಂಗ್ ನಿಷೇಧಿಸಿರುವ ಸ್ಥಳಗಳು

ಕೊಮ್ಮಘಟ್ಟ ಮುಖ್ಯ ರಸ್ತೆ (ಶಂಕರ್‌ನಾಗ್‌ ಸರ್ಕಲ್ ನಿಂದ ರಾಬಿನ್‌ ಥಿಯೇಟರ್ ವರೆಗೆ) ನಾಗರಬಾವಿ ಸರ್ಕಲ್ ನಿಂದ ಜ್ಞಾನಭಾರತಿ ಆಡೀನ್‌ ಬ್ಲಾಕ್ ಜಂಕ್ಷನ್ ವರೆಗೆ. ವಾಹನಗಳ ಪಾರ್ಕಿಂಗ್ ಸ್ಥಳವನ್ನು ನಿಷೇಧ ಮಾಡಲಾಗಿದೆ.

ಭಾರೀ ವಾಹನಗಳು ಓಡಾಡೋ ರಸ್ತೆಗಳಲ್ಲೂ ಬದಲಾವಣೆ

ನಾಗರಭಾವಿ ರಿಂಗ್ ರಸ್ತೆ ಚೌಡೇಶ್ವರಿ ಬಸ್‌ ನಿಲ್ದಾಣದಿಂದ ನಾಗರಭಾವಿ ಜಂಕ್ಷನ್ ವರೆಗೆ ಎರಡೂ ಕಡೆಗಳಲ್ಲಿ ಮೈಸೂರು ರಸ್ತೆ ಜ್ಞಾನಭಾರತಿ ಜಂಕ್ಷನ್‌ ನಿಂದ ಜೈರಾಮ್ ದಾಸ್ ಜಂಕ್ಷನ್ ವರೆಗೆ, ಹಳೇ ರಿಂಗ್ ರಸ್ತೆ ಕೆಂಗುಂಟೆ ಜಂಕ್ಷನ್ ನಿಂದ ಶಿರ್ಕೆ ಜಂಕ್ಷನ್ ವರೆಗೆ ಯುನಿವರ್ಸಿಟಿ ಒಳಭಾಗದ ಎಲ್ಲಾ ರಸ್ತೆಗಳು, ಮೈಸೂರು ರಸ್ತೆ ನೈಸ್ ರೋಡ್ ಬಳಿ ನಿಷೇಧಿಸಲಾದ ರಸ್ತೆಗೆ ಪರ್ಯಾಯ ಮಾರ್ಗ ನೀಡಲಾಗಿದೆ.

ಇದನ್ನೂ ಓದಿ: Mysuru: ಮೋದಿ ಕಾರ್ಯಕ್ರಮದಲ್ಲಿ ಭಾಗಿಯಾಗ್ತಿದ್ದೀರಾ? ವಾಟರ್‌ ಬಾಟಲ್‌, ವ್ಯಾನಿಟಿ ಬ್ಯಾಗ್ ತರಬೇಡಿ; ಬರೋ ಮುನ್ನ ಮೊಬೈಲ್ ಸ್ವಿಚ್ಛ್​ ಆಫ್ ಮಾಡಿ!

ನೈಸ್​ ರಸ್ತೆ ಮೂಲಕ ಪರ್ಯಾಯ ಮಾರ್ಗ

ಮಾಗಡಿ ಮುಖ್ಯರಸ್ತೆ ಮೂಲಕ ನೈಸ್‌ ರಸ್ತೆ (ಕ್ರ.ಸಂ 1 ರಿಂದ 4) ನೈಸ್ ರಸ್ತೆಯ ಮುಖಾಂತರ ಉತ್ತರಹಳ್ಳಿ ಮುಖ್ಯ ರಸ್ತೆ ಕಡೆಗೆ, ಬೆಂಗಳೂರು ನಗರದ ಕಡೆಗೆ ಅವಕಾಶ, ಹೊಸಕೋಟೆ ಟೋಲ್‌ ಗೇಟ್ ನಿಂದ ಬೂದಿಗೆರೆ ಕ್ರಾಸ್ ಮೂಲಕ ಅವಕಾಶ, ನೈಸ್ ರಸ್ತೆಯ ಮೂಲಕ ತುಮಕೂರು ರಸ್ತೆ ಹಾಗೂ ಮೈಸೂರು ರಸ್ತೆ ಕಡೆಗೆ ಹೋಗಲು ಅವಕಾಶ ಮಾಡಿಕೊಡಲಾಗಿದೆ. ನಿತ್ಯ ಟ್ರಾಫಿಕ್​ ಕಿರಿಕಿಯಿಂದ ಪರದಾಡೋ ಜನರಿಗೆ ಇದೀಗ ಮಾರ್ಗ ಬದಲಾವಣೆ ಕೂಡ ದೊಡ್ಡ ತಲೆನೋವಾಗಲಿದೆ.
Published by:Pavana HS
First published: