• Home
  • »
  • News
  • »
  • state
  • »
  • Mysuru Dasara: ಚಾಮುಂಡೇಶ್ವರಿಗೆ ನಮೋ ಎಂದ ಪ್ರಧಾನಿ, ಮೈಸೂರು ದಸರಾ ಬಗ್ಗೆ ಮೋದಿ ಮೆಚ್ಚುಗೆ

Mysuru Dasara: ಚಾಮುಂಡೇಶ್ವರಿಗೆ ನಮೋ ಎಂದ ಪ್ರಧಾನಿ, ಮೈಸೂರು ದಸರಾ ಬಗ್ಗೆ ಮೋದಿ ಮೆಚ್ಚುಗೆ

ಮೈಸೂರು ದಸರಾ ಬಗ್ಗೆ ಮೋದಿ ಮೆಚ್ಚುಗೆ

ಮೈಸೂರು ದಸರಾ ಬಗ್ಗೆ ಮೋದಿ ಮೆಚ್ಚುಗೆ

“ಮೈಸೂರು ದಸರಾ, ಎಷ್ಟೊಂದು ಸುಂದರ” ಎನ್ನುವುದು ಕವಿವಾಣಿ. ಮೈಸೂರು ದಸರಾವನ್ನು ಕಣ್ತುಂಬಿಕೊಂಡವರಿಗೆ ಈ ಮಾತು ಅಕ್ಷರಶಃ ಸತ್ಯ ಎನ್ನುವುದು ಮನದಟ್ಟಾಗಿರುತ್ತದೆ. ಇದೀಗ ಪ್ರಧಾನಿ ನರೇಂದ್ರ ಮೋದಿಯವರೂ ಕೂಡ ಇದೇ ಮಾತನ್ನು ಹೇಳಿದ್ದಾರೆ.

  • Share this:

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ (Mysuru Dasara) ಮುಗಿದಿದೆ. 10 ದಿನಗಳ  ಕಾಲ ‘ನ ಭೂತೋ, ನ ಭವಿಷ್ಯತಿ‘ ಎನ್ನುವಂತೆ ಅದ್ಧೂರಿಯಾಗಿ ಮೈಸೂರು ದಸರಾ ಮಹೋತ್ಸವ ನಡೆದಿತ್ತು. ಮೊನ್ನೆ ವಿಜಯ ದಶಮಿ (Vijaya Dashami) ದಿನ ಅಧಿದೇವತೆ ಚಾಮುಂಡೇಶ್ವರಿಯ (Chamundeshwari) ವಿಗ್ರಹ ಸಮೇತ ಚಿನ್ನದ ಅಂಬಾರಿಯ (Ambari) ಮೆರವಣಿಗೆ ನಡೆದು, 2022ರ 10 ದಿನಗಳ ದಸರಾ ಮಹೋತ್ಸವಕ್ಕೆ ಮುಕ್ತಾಯ ಹಾಡಲಾಗಿತ್ತು. “ಮೈಸೂರು ದಸರಾ, ಎಷ್ಟೊಂದು ಸುಂದರ” ಎನ್ನುವುದು ಕವಿವಾಣಿ. ಮೈಸೂರು ದಸರಾವನ್ನು ಕಣ್ತುಂಬಿಕೊಂಡವರಿಗೆ ಈ ಮಾತು ಅಕ್ಷರಶಃ ಸತ್ಯ ಎನ್ನುವುದು ಮನದಟ್ಟಾಗಿರುತ್ತದೆ. ಇದೀಗ ಪ್ರಧಾನಿ ನರೇಂದ್ರ ಮೋದಿಯವರೂ (PM Narendra Modi) ಕೂಡ ಇದೇ ಮಾತನ್ನು ಹೇಳಿದ್ದಾರೆ. ವಿಶ್ವ ವಿಖ್ಯಾತ ಮೈಸೂರು ದಸರಾ ಬಗ್ಗೆ, ಇಲ್ಲಿನ ಸಾಂಸ್ಕೃತಿಕ, ಧಾರ್ಮಿಕ ಉತ್ಸವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಪ್ರಧಾನಿ ಮೋದಿ, ಟ್ವೀಟ್ (Tweet) ಮಾಡಿ ಮೈಸೂರಿನ ಜನತೆಗೆ ಅಭಿನಂದನೆ ಸಲ್ಲಿಸಿದ್ದಾರೆ.


ಮೈಸೂರು ದಸರಾ ಬಗ್ಗೆ ಪ್ರಧಾನಿ ಮೆಚ್ಚುಗೆ ಮಾತು


ವಿಶ್ವ ವಿಖ್ಯಾತ ಮೈಸೂರು ದಸರಾ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿ ಪ್ರಧಾನಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸಾಂಸ್ಕೃತಿಕ ವೈಭವವನ್ನು ಕಾಪಾಡಿಕೊಂಡು ಬಂದ ಮೈಸೂರಿನ ಜನತೆಗೂ ನರೇಂದ್ರ ಮೋದಿ ಧನ್ಯವಾದ ಅರ್ಪಿಸಿದ್ದಾರೆ.
ಟ್ವೀಟ್‌ನಲ್ಲಿ ಪ್ರಧಾನಿ ಮೋದಿ ಹೇಳಿದ್ದೇನು?


 ಟ್ವಿಟರ್‌ನಲ್ಲಿ ಮೈಸೂರು ದಸರಾ ಬಗ್ಗೆ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದಸರಾ ಅಂಬಾರಿ ಮೆರವಣಿಗೆಯ ಫೋಟೋವನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ಶೇರ್ ಮಾಡಿದ ಅವರು, ಮೈಸೂರಿನ ಜನತೆ ತಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಕಾಪಾಡಿಕೊಂಡು ಬಂದಿರುವುದಕ್ಕೆ ಮೆಚ್ಚುಗೆಯಾಗಿದೆ. ತುಂಬಾ ಸುಂದರವಾದ ಪರಂಪರೆಯನ್ನು ಅದು ಒಳಗೊಂಡಿದೆ ಅಂತ ಶ್ಲಾಘಿಸಿದ್ದಾರೆ.


ಇದನ್ನೂ ಓದಿ: Mysuru Dasara Lighting: ಇನ್ನೂ 10 ದಿನಗಳ ಕಾಲ ಮೈಸೂರು ದಸರಾ ದೀಪಾಲಂಕಾರ ನೋಡಬಹುದು!


prime minister narendra modi tweeted praises for mysuru dasara
ಮೈಸೂರಿನಲ್ಲಿ ಯೋಗಾ ದಿನಾಚರಣೆಯಲ್ಲಿ ಭಾಗಿಯಾಗಿದ್ದ ಪ್ರಧಾನಿ


 ಮೈಸೂರಿನ ಭೇಟಿಯನ್ನು ಸ್ಮರಿಸಿಕೊಂಡ ನರೇಂದ್ರ ಮೋದಿ


ಇನ್ನು ಕಳೆದ ಜೂನ್ 21ರಂದು ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಪ್ರಧಾನಿ ನರೇಂದ್ರ ಮೋದಿ ಮೈಸೂರಿನಲ್ಲಿ ಆಚರಿಸಿದ್ದರು. ಅಂದು 2 ದಿನ ಕರ್ನಾಟಕ ರಾಜ್ಯ ಪ್ರವಾಸ ಮಾಡಿದ್ದ ಪ್ರಧಾನಿ, ಮೈಸೂರು ಅರಮನೆ ಆವರಣದಲ್ಲಿ ಏರ್ಪಡಿಸಲಾಗಿದ್ದ ಅಂತರಾಷ್ಟ್ರೀಯ ಯೋಗ ದಿನದಲ್ಲಿ ಭಾಗಿಯಾಗಿ, ವಿವಿಧ ಆಸನಗಳನ್ನು ಪ್ರದರ್ಶಿಸಿದ್ದರು. ಆ ದಿನದ ಸ್ಮರಣೆ ಮಾಡಿಕೊಂಡ ಪ್ರಧಾನಿ, 2022ರ ಯೋಗ ದಿನದಂದು ನನ್ನ ಮೈಸೂರು ಭೇಟಿಗಳ ಬಗ್ಗೆ ನನ್ನಲ್ಲಿ ಅಚ್ಚುಮೆಚ್ಚಿನ ನೆನಪುಗಳಿವೆ ಅಂತ ಟ್ವೀಟ್ ಮಾಡಿದ್ದಾರೆ.ದಸರಾ ಮಹೋತ್ಸವ ಉದ್ಘಾಟಿಸಿದ್ದ ರಾಷ್ಟ್ರಪತಿ


ಈ ಬಾರಿಯ ದಸರಾವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಉದ್ಘಾಟಿಸಿದ್ದರು. ಇದೇ ಮೊದಲ ಬಾರಿಗೆ ರಾಷ್ಟ್ರಪತಿಯೊಬ್ಬರು ದಸರಾ ಉದ್ಘಾಟಿಸಿದ ದಾಖಲೆಯನ್ನು ದ್ರೌಪದಿ ಮುರ್ಮು ಬರೆದರು. ಮೈಸೂರು ರೇಷ್ಮೆ ಸೀರೆ, ಮೈಸೂರು ಪೇಟ ತೊಟ್ಟು ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಿದ್ದ ರಾಷ್ಟ್ರಪತಿಗಳು, ರಾಜ್ಯದ ಜನರಿಗೆ ಧನ್ಯವಾದ ಅರ್ಪಿಸಿದ್ದರು. 


prime minister narendra modi tweeted praises for mysuru dasara
ದಸರಾ ಉದ್ಘಾಟಿಸಿದ್ದ ರಾಷ್ಟ್ರಪತಿ


 ಇದನ್ನೂ ಓದಿ: Economy: ಚೀನಾದ ಕೈಗಾರಿಕಾ ಯೋಜನೆ ತನ್ನೆಡೆ ಸೆಳೆಯಲು ಭಾರತದ ಬಿಗ್ ಪ್ಲಾನ್!


 ಇನ್ನೂ 10 ದಿನ ಝಗಮಗಿಸಲಿದೆ ಮೈಸೂರು


 ವಿಶ್ವವಿಖ್ಯಾತ ಮೈಸೂರು ದಸರಾ ನಿಮಿತ್ತ ಮಾಡಲಾಗಿದ್ದ ದೀಪಾಲಂಕಾರವನ್ನು ಇನ್ನೂ 10 ದಿನಗಳ ಕಾಲ ಪ್ರವಾಸಿಗರ ವೀಕ್ಷಣೆಗೆ ಅವಕಾಶ ನೀಡಲಾಗಿದೆ. ದೀಪಾಲಂಕಾರ ನೋಡಲು ಜನಸಾಗರವೇ ಹರಿದು ಬಂದಿತ್ತು. ಮೈಸೂರು ನಗರದ ಸುತ್ತಮುತ್ತಲು ಸುಮಾರು 124 ಕಿ.ಮೀ ಸುತ್ತ, 96 ವೃತ್ತಗಳಲ್ಲಿ ವಿಶೇಷ ದೀಪಾಲಂಕಾರ ಮಾಡಲಾಗಿದೆ. ಮೈಸೂರಿನ ಪ್ರಮುಖ ವೃತ್ತಗಳಲ್ಲಿ 28 ವಿವಿಧ ಬಗೆಯ ಪ್ರತಿಕೃತಿಗಳನ್ನು ದೀಪಾಲಂಕರದಲ್ಲಿ ನಿರ್ಮಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌ಟಿ ಸೋಮಶೇಖರ್ ತಿಳಿಸಿದ್ದಾರೆ.

Published by:Annappa Achari
First published: