ಬೆಂಗಳೂರು: ಇಂದು ಪ್ರಧಾನಿ ಮೋದಿ (PM Modi) ಮಂಡ್ಯಗೆ (Mandya) ಆಗಮಿಸಲಿದ್ದಾರೆ. ದಶಪಥ ಉದ್ಘಾಟನೆ ಜೊತೆ ಹತ್ತು ಹಲವು ಅಭಿವೃದ್ಧಿ ಕಾರ್ಯಕ್ರಮಗಳಿವೆ. ಮಂಡ್ಯ ಬಳಿಕ ಧಾರವಾಡ ಐಐಟಿ (IIT) ಉದ್ಘಾಟಿಸಲಿದ್ದಾರೆ. ಆದರೆ ಅರ್ಧಬರ್ಧ ಕೆಲಸ ಮಾಡಿರುವುದನ್ನು ಉದ್ಘಾಟಿಸಬೇಕಾ ಎಂಬ ವಿರೋಧಿ ಪಕ್ಷಗಳು ಪ್ರಶ್ನೆ ಮಾಡುತ್ತಿವೆ. ಬೆಳಗ್ಗೆ 11 ಗಂಟೆ 10 ನಿಮಿಷಕ್ಕೆ ದೆಹಲಿಯಿಂದ (Delhi) ಸೀದಾ ಮೈಸೂರಿಗೆ (Mysuru) ಬರಲಿರುವ ಮೋದಿ, ಮೈಸೂರು ಏರ್ಪೋರ್ಟ್ನಿಂದ ಹೆಲಿಕಾಪ್ಟರ್ನಲ್ಲಿ ಮಂಡ್ಯ PES ಕಾಲೇಜು ಮೈದಾನಕ್ಕೆ ಆಗಮಿಸಲಿದ್ದಾರೆ. ಬೆಳಗ್ಗೆ 11:35ಕ್ಕೆ ಮಂಡ್ಯಗೆ ಬರಲಿರುವ ಮೋದಿ, 11:40ಕ್ಕೆ ಪಿಇಎಸ್ ಕಾಲೇಜು (PES College) ಬಳಿಯಿಂದ ಐಬಿ ವೃತ್ತದವರೆಗೂ 2 ಕಿಲೋಮೀಟರ್ ರೋಡ್ ಶೋ ನಡೆಸಲಿದ್ದಾರೆ. ಅಮರಾವತಿ ಹೋಟೆಲ್ ಬಳಿ ಬರಲಿರುವ ಪ್ರಧಾನಿ, ಹೋಟೆಲ್ ಮುಂಭಾಗದಿಂದ ಗೆಜ್ಜಲಗೆರೆವರೆಗೆ ಹೆದ್ದಾರಿ ವೀಕ್ಷಣೆ ಮಾಡಲಿದ್ದಾರೆ. ಈ ವೇಳೆ 500ಕ್ಕೂ ಹೆಚ್ಚು ಕಲಾವಿದರಿಂದ ಕಲಾ ಪ್ರದರ್ಶನ ನಡೆಯಲಿದೆ. ನಂತರ ಗೆಜ್ಜಲಗೆರೆ ಕಾಲೋನಿಯಲ್ಲಿ ನಿರ್ಮಾಣ ಆಗಿರುವ ಬೃಹತ್ ಸಮಾವೇಶದಲ್ಲಿ ಮೋದಿ ಭಾಗವಹಿಸಲಿದ್ದಾರೆ.
2 ತಿಂಗಳಲ್ಲಿ 7ನೇ ಸಲ ರಾಜ್ಯಕ್ಕೆ ಪ್ರಧಾನಿ
ಪ್ರಧಾನಿ ಮೋದಿ ಇಂದು ಮಂಡ್ಯ ಜಿಲ್ಲೆ ಸಮಾವೇಶದಲ್ಲಿ ಭಾಗಿಯಾಗಲಿದ್ದು, ಬೆಂಗಳೂರು-ಮೈಸೂರು ರಾಷ್ಟ್ರೀಯ ದಶಪಥ ರಸ್ತೆ ಉದ್ಘಾಟನೆ ಸೇರಿ ಹಲವು ಯೋಜನೆಗಳನ್ನು ಉದ್ಘಾಟನೆ ಮಾಡಲಿದ್ದಾರೆ. ಸಮಾವೇಶದಲ್ಲಿ ಮೈಸೂರು-ಬೆಂಗಳೂರು ದಶಪಥ ರಸ್ತೆ, ಜಯದೇವ ಹೊಸ ಆಸ್ಪತ್ರೆಗೆ ಶಂಕುಸ್ಥಾಪನೆ ಮಾಡಲಿದ್ದಾರೆ.
ಇದನ್ನೂ ಓದಿ: Shivanagouda Nayak: 'ಕುಮಾರಸ್ವಾಮಿಗೆ ಒಬ್ಬರಲ್ಲ 7 ಮಂದಿ ಹೆಂಡತಿಯರು'! ಬಿಜೆಪಿ ಶಾಸಕನಿಂದ ಹೊಸ 'ಬಾಂಬ್'!
ಧಾರವಾಡದಲ್ಲೂ ಮೋದಿ ಹವಾ
ಮಂಡ್ಯ ಕಾರ್ಯಕ್ರಮದ ಬಳಿಕ ಪ್ರಧಾನಿ ಮೋದಿ ಧಾರವಾಡಕ್ಕೆ ಭೇಟಿ ಕೊಡಲಿದ್ದಾರೆ. ಮಧ್ಯಾಹ್ನ 3 ಗಂಟೆಯಿಂದ ಸಂಜೆ 5:30 ನಿಮಿಷದವರೆಗೆ ಧಾರವಾಡದಲ್ಲಿ ಉದ್ಘಾಟನೆ ಜೊತೆ ಹಲವು ಅಭಿವೃದ್ಧಿ ಕಾರ್ಯಗಳಿಗೆ ಶಂಕುಸ್ಥಾಪನೆ ಮಾಡಲಿದ್ದಾರೆ.
2019ರಲ್ಲಿ 850 ಕೋಟಿ ರೂಪಾಯಿ ವೆಚ್ಚದ ಐಐಟಿಗೆ ಶಂಕುಸ್ಥಾಪನೆ ಮಾಡಿದ್ದರು. ಇಂದು ಅದೇ ಧಾರವಾಡ ಐಐಟಿ ಮೊದಲ ಘಟಕ ಉದ್ಘಾಟನೆ ಆಗಲಿದೆ. 20 ಕೋಟಿ ರೂಪಾಯಿ ವೆಚ್ಚದ 1.5 ಕಿ.ಮೀ ಉದ್ದದ ಸಿದ್ಧಾರೂಢ ರೈಲು ನಿಲ್ದಾಣದ ವಿಶ್ವದ ಅತೀಉದ್ಧದ ರೈಲ್ವೆ ಫ್ಲಾಟ್ಫಾರ್ಮ್ ಲೋಕಾರ್ಪಣೆ ಮಾಡಲಿದ್ದಾರೆ.
ಹೊಸಪೇಟೆ-ಹುಬ್ಬಳ್ಳಿ-ತಿನೈಘಾಟ್ ವಿದ್ಯುದ್ದೀಕರಣ ಘಟಕ, ಮೇಲ್ದರ್ಜೆಗೆ ಏರಿಸಿರುವ ಹೊಸಪೇಟೆ ನಿಲ್ದಾಣವನ್ನೂ ಉದ್ಘಾಟಿಸುತ್ತಾರೆ. ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ ಸಿಟಿ ಯೋಜನೆಗೆ ಶಂಕುಸ್ಥಾಪನೆ, 520 ಕೋಟಿ ರೂಪಾಯಿ ವೆಚ್ಚದ ಹುಬ್ಬಳ್ಳಿ ಜಯದೇವ ಆಸ್ಪತ್ರೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಮೋದಿಗೆ 200 ವರ್ಷಗಳ ಇತಿಹಾಸ ಇರುವ ಕೈಕಸೂರಿಯಲ್ಲಿ ಮಾಡುವ ಕಲಘಟಗಿಯ ತೊಟ್ಟಿಲನ್ನ ಉಡುಗೊರೆಯಾಗಿ ನೀಡಲು ಸಿದ್ಧತೆಗಳಾಗಿವೆ.
Tomorrow new works will be launched that will boost ‘Ease of Living’ for the people of Hubballi-Dharwad. https://t.co/M8tDz3TdX5
— Narendra Modi (@narendramodi) March 11, 2023
ಪ್ರಧಾನಿ ಮೋದಿ ಆಗಮಿಸುತ್ತಿರುವುದರಿಂದ ಮಂಡ್ಯ ಮತ್ತು ಧಾರವಾಡದಲ್ಲಿ ಬಿಗಿ ಭದ್ರತೆ ಹಾಕಲಾಗಿದೆ. ರಸ್ತೆ ಮಾರ್ಗವನ್ನೂ ಬದಲಿಸಲಾಗಿದೆ. ಇಂದು ಭಾನುವಾರ ಆಗಿರುವುದರಿಂದ ಆದಷ್ಟು ಮಂಡ್ಯ, ಮೈಸೂರು ಕಡೆ ಹೋಗುವವರು ಬದಲಿಸಿದರೆ ಉತ್ತಮ.
ಇನ್ನು, ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳಗ್ಗೆ 7 ಗಂಟೆಯಿಂದಲೇ ಯಾವುದೇ ಸಾರ್ವಜನಿಕ ವಾಹನ ಸಂಚಾರಕ್ಕೆ ಅವಕಾಶವಿಲ್ಲ. ಅಗತ್ಯ ಸೇವೆ ಮತ್ತು ಹಾಲಿನ ವಾಹನಗಳಿಗೆ ಮಾತ್ರ ಬೆಳಗ್ಗೆ 9 ಗಂಟೆಯವರೆಗೂ ಸರ್ವೀಸ್ ರಸ್ತೆಯಲ್ಲಿ ತೆರಳಲು ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ