ನವದೆಹಲಿ (ಅ.19): ಮೈಸೂರು ವಿಶ್ವವಿದ್ಯಾಲಯದ 100ನೇ ಘಟಿಕೋತ್ಸವದಲ್ಲಿ ವರ್ಚುವಲ್ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಯುವ ಜನರಿಗೆ ಉದ್ಯೋಗ ಸ್ವರೂಪ ಬದಲಾವಣೆಗೆ ಹೊಂದಿಕೊಳ್ಳುವಂತೆ ಕರೆ ನೀಡಿದ್ದಾರೆ. ಯುವ ಜನತೆ ಬದಲಾಗುತ್ತಿರುವ ಸ್ವರೂಪಕ್ಕೆ ಹೊಂದಿಕೊಳ್ಳುವಂತಹ ಉದ್ಯೋಗಗಳತ್ತ ಗಮನಹರಿಸಬೇಕು ಎಂದು ಸಲಹೆ ನೀಡಿದರು. ಇಂದಿನ ಜಗತ್ತಿನಲ್ಲಿ ಉದ್ಯೋಗದ ಕೌಶಲ್ಯ, ಮರು ಕೌಶಲ್ಯ, ಕೌಶಲ್ಯವೃದ್ಧಿಗೆಗೆ ಮಹತ್ವ ನೀಡಲಾಗಿದೆ, ಇದನ್ನೇ ಸರ್ಕಾರವು ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ(ಎನ್ಇಪಿ) ಕೂಡ ತಿಳಿಸಿದೆ. ಎನ್ಇಪಿ ಶಿಕ್ಷಣದ ಆಯಾಮವನ್ನು ಖಾತ್ರಿಗೊಳಿಸುವುದರ ಜೊತೆಗೆ ಮೂಲಭೂತ ಬದಲಾವಣೆ ತರುತ್ತದೆ. ಇದು ಯುವಜನತೆಯನ್ನು ಇನ್ನಷ್ಟು ಸ್ಪರ್ಧಾತ್ಮಕರನ್ನಾಗಿ ಮಾಡುತ್ತದೆ ಎಂದರು.
ಇದೇ ವೇಳೆ ಮೈಸೂರು ವಿಶ್ವವಿದ್ಯಾಲಯ ಎನ್ಇಪಿ ಅಡಿ ಬಹು ಸ್ತರದ ಕಾರ್ಯಕ್ರಮಗಳನ್ನು ಪ್ರಾರಂಭಿಸುವ ಯೋಜನೆಗೆ ಹರ್ಷ ವ್ಯಕ್ತಪಡಿಸಿದರು. ಈ ಯೋಜನೆ ಅಡಿ ವಿದ್ಯಾರ್ಥಿಗಳು ಏಕಕಾಲದಲ್ಲಿ ಜಾಗತಿಕ ತಂತ್ರಜ್ಞಾಮ ಮತ್ತು ಸ್ಥಳೀಯ ಸಂಸ್ಕೃತಿಗಳ ಅಧ್ಯಯನ ಮಾಡಬಹುದು ಎಂದು ತಿಳಿಸಿದರು. ಈ ಜಾಗತಿಕ ತಂತ್ರಜ್ಞಾನದಿಂದಾಗಿ ಸ್ಥಳೀಯ ವ್ಯವಹಾರವನ್ನು ಉತ್ತೇಜಿಸಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
Addressing the Centenary Convocation of the University of Mysore. https://t.co/xDblOs4u6E
— Narendra Modi (@narendramodi) October 19, 2020
ಮೈಸೂರು ವಿಶ್ವವಿದ್ಯಾಲಯ ಸಮಕಾಲೀನ ಜಾಗತಿಕ ವಿಷಯಗಳ ಜೊತೆಗೆ ಸ್ಥಳೀಯ ಸಂಸ್ಕೃತಿ, ಕಲೆಗಳನ್ನು ಪ್ರೋತ್ಸಾಹಿಸಬೇಕು ಎಂದರು.
ಇದನ್ನು ಓದಿ: ನನಸಾಗಲಿದೆ ಕನಸು; 2021ಕ್ಕೆ ಶಿವಮೊಗ್ಗದಲ್ಲಿ ವಿಮಾನ ಹಾರಾಟಕ್ಕೆ ಸಜ್ಜು: ಬಿಎಸ್ ಯಡಿಯೂರಪ್ಪ
ಯುವ ಜನತೆ ವೈಯಕ್ತಿಕ ಸಾಮರ್ಥ್ಯ ಮತ್ತು ಶಕ್ತಿ ಆಧಾರದ ಮೇಲೆ ಶ್ರಮಿಸಬೇಕು. ಒಂದು ಕ್ಷೇತ್ರಕ್ಕೆ ಸೀಮಿತವಾಗಬಾರು. ನೀವು ಆಯ್ಕೆ ಮಾಡಿಕೊಂಡ ಕ್ಷೇತ್ರಕ್ಕೆ ನೀವು ಸರಿಹೊಂದದೆ ಇರಬಹುದು. ಆ ಕಾರಣ ಎಲ್ಲಾ ಕ್ಷೇತ್ರಗಳಲ್ಲಿಯೂ ಆಸಕ್ತಿ ಹೊಂದುವುದು ಅನಿವಾರ್ಯ. ಇದಕ್ಕಾಗಿ ಸಮಯ ತೆಗೆದುಕೊಳ್ಳಿ. ಈ ಮೂಲಕ ನಿಮ್ಮ ಶಕ್ತಿಯನ್ನು ಅರ್ಥ ಮಾಡಿಕೊಳ್ಳಿ. ಇದು ನಿಮಗೆ ಭವಿಷ್ಯದ ದಾರಿ ರೂಪಿಸುತ್ತದೆ. ಈ ರೀತಿಯ ವಿಪುಲ ಅವಕಾಶಗಳು ಭಾರತದಲ್ಲಿದೆ ಎಂದರು.
ಕೊರೋನಾ ಸೋಂಕಿನ ಸಂದರ್ಭದಲ್ಲಿ ದೇಶದಲ್ಲಿ ಅನೇಕ ಯುವಕರು ಸ್ಟಾರ್ಟ್ಅಪ್ ಪ್ರಾರಂಭಿಸುವತ್ತ ಹೊಸ ಹೆಜ್ಜೆ ಇಟ್ಟಿದ್ದಾರೆ. ಇದರಿಂದಾಗಿ ದೇಶವನ್ನು ಬಲಗೊಳಿಸಲು ಸಹಾಯಕವಾಗುತ್ತದೆ. ನಿಮ್ಮ ಅಭ್ಯುದ್ಯಯ ದೇಶದ ಅಭ್ಯುದ್ಯಯ ಕೂಡ ಆಗಿದೆ, ನೀವು ಆತ್ಮ ನಿರ್ಭರವಾದಲ್ಲಿ ಮಾತ್ರ ದೇಶ ಆತ್ಮನಿರ್ಭರವಾಗಲು ಸಾಧ್ಯ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ