HOME » NEWS » State » PRIME MINISTER NARENDRA MODI SPEAK WITH CM BS YEDIYURAPPA FLOOD SITUATION IN KARNATAKA SESR KGV

ಸಿಎಂ ಬಿಎಸ್​ವೈರಿಂದ ನೆರೆ ಹಾವಳಿ ವಿವರ ಪಡೆದ ಪ್ರಧಾನಿ ಮೋದಿ; ಅಗತ್ಯ ನೆರವಿನ ಭರವಸೆ

ಸಂತ್ರಸ್ತರ ನೆರವಿಗೆ ಸೂಕ್ತ ರಕ್ಷಣಾ ಹಾಗೂ ಅಗತ್ಯ ಪರಿಹಾರಕೊಳ್ಳಲು ಕೇಂದ್ರದಿಂದ ಎಲ್ಲಾ ರೀತಿಯ ಸಹಾಯ ಮಾಡುವ ಭರವಸೆ ನೀಡಿದ್ದಾರೆ.

news18-kannada
Updated:October 16, 2020, 9:27 PM IST
ಸಿಎಂ ಬಿಎಸ್​ವೈರಿಂದ ನೆರೆ ಹಾವಳಿ ವಿವರ ಪಡೆದ ಪ್ರಧಾನಿ ಮೋದಿ; ಅಗತ್ಯ ನೆರವಿನ ಭರವಸೆ
ಸಿಎಂ ಬಿಎಸ್​ ಯಡಿಯೂರಪ್ಪ-ಪ್ರಧಾನಿ ಮೋದಿ
  • Share this:
ಬೆಂಗಳೂರು (ಅ.16): ಭಾರೀ ಮಳೆ , ಪ್ರವಾಹಕ್ಕೆ ತತ್ತಾರಿಸುವ ಕಲ್ಯಾಣ ಕರ್ನಾಟಕದ ನೆರೆ ಹಾವಳಿ ಕುರಿತು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ವಿವರ ಪಡೆದಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಅವರಿಗೆ ಕರೆ ಮಾಡಿ ಚರ್ಚೆ ಮಾಡಿರುವ ಅವರು, ರಾಜ್ಯದಲ್ಲಿ ಸುರಿದ ಭೀಕರ ಮಳೆ ಮತ್ತು ಪ್ರವಾಹದಿಂದ ಉಂಟಾಗಿರುವ ಹಾನಿ ಕುರಿತು ಚರ್ಚೆ ನಡೆಸಿದ್ದಾರೆ. ಈ ವೇಳೆ ಸಂತ್ರಸ್ತರ ನೆರವಿಗೆ ಸೂಕ್ತ ರಕ್ಷಣಾ ಹಾಗೂ ಅಗತ್ಯ ಪರಿಹಾರಕೊಳ್ಳಲು ಕೇಂದ್ರದಿಂದ ಎಲ್ಲಾ ರೀತಿಯ ಸಹಾಯ ಮಾಡುವ ಭರವಸೆ ನೀಡಿದ್ದಾರೆ.  ಯಡಿಯೂರಪ್ಪ ಅವರೊಂದಿಗೆ ಮಾತನಾಡಿರುವ ಕುರಿತು ಟ್ವೀಟ್​ ಮಾಡಿರುವ ಅವರು, ಸಂತ್ರಸ್ತ ಅಣ್ಣ-ಅಕ್ಕಂದಿರೊಂದಿಗೆ ಒಗ್ಗಟ್ಟಿನಿಂದ ನಿಲ್ಲುವುದಾಗಿ ತಿಳಿಸಿದ್ದಾರೆ.ಕಲಬುರ್ಗಿ, ಯಾದಗಿರಿ, ರಾಯಚೂರು, ಬೀದರ್​, ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳು ಭೀಕರ ಮಳೆ ಪ್ರವಾಹಕ್ಕೆ ತುತ್ತಾಗಿದೆ. ಮಹಾರಾಷ್ಟ್ರ ಹಾಗೂ ತೆಲಂಗಾಣದ ಅಣೆಕಟ್ಟುಗಳಿಂದ ಅಧಿಕ ಪ್ರಮಾಣದ ನೀರು ಹೊರ ಬಿಟ್ಟಿರುವ ಪರಿಣಾಮ ನದಿಗಳು ಅಪಾಯ ಮಟ್ಟ ಮೀರಿ ಉಕ್ಕಿಹರಿಯುತ್ತಿದೆ. ಇದರಿಂದ ಪ್ರವಾಹ ನಿರ್ಮಾಣವಾಗಿದ್ದು, ಗ್ರಾಮಗಳು ಮುಳುಗಡೆಯಾವಿದೆ.ಮನೆ ಮಠ ಕಳೆದುಕೊಂಡು ಈಗಾಗಲೇ ಜನರು ನಿರಾಶ್ರಿತ ಶಿಬಿರಗಳನ್ನು ಸೇರಿದ್ದಾರೆ. ಅವರಿಗೆ ಅಗತ್ಯ ಪರಿಹಾರದ ಕಾರ್ಯ ಅಗತ್ಯವಿದೆ. ಈ ಹಿನ್ನಲೆ ಅಗತ್ಯ ಸಂಪನ್ಮೂಲ ಒದಗಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಜಿಲ್ಲಾಧಿಕಾರಿಗಳಿಗೆ ಪರಿಸ್ಥಿತಿ ಎದುರಿಸಲು ಸನ್ನದ್ಧರಾಗುವಂತೆ ಈಗಾಗಲೇ ಸಿಎಂ ಬಿಎಸ್​ ಯಡಿಯೂರಪ್ಪ ಸೂಚನೆ ನೀಡಿದ್ದಾರೆ.

ಇಂದು ಪ್ರವಾಹ ಪೀಡಿತ ಪ್ರದೇಶಗಳ ಜಿಲ್ಲಾಧಿಕಾರಿಗಳು, ಪೊಲೀಸ್​ ವರಿಷ್ಠಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್​ ಮುಖ್ಯ ಕಾರ್ಯನಿರ್ವಹಕಾಧಿಕಾರಿಗಳೊಂದಿಗೆ ಮುಖ್ಯಮಂತ್ರಿಗಳು ಇಂದು ವಿಡಿಯೋ ಕಾನ್ಫರೆನ್ಸ್​ ಮೂಲಕ ಸಭೆ ನಡೆಸಿ ನಡೆಸಿ ಪರಿಸ್ಥಿತಿ ಅವಲೋಕಿಸಿದರು. ಈ ವೇಳೆ ಅವರು ತುರ್ತು ಪ್ರವಾಹ ನಿರ್ವಹಣೆಗೆ 85.49 ಕೋಟಿ ರೂ ಹಣ ಬಿಡುಗಡೆ ಮಾಡಿದ್ದಾರೆ.

ಪ್ರವಾಹ ಸಂತ್ರಸ್ತರ ರಕ್ಷಣೆಗೆ ಈಗಾಗಲೇ 12 ಎನ್​ಡಿಆರ್​ಎಫ್​ ತಂಡಗಳು ಕಾರ್ಯನಿರ್ವಹಿಸುತ್ತಿದೆ. ಪ್ರವಾಹದಿಂದ ಅತಿ ಹೆಚ್ಚು ಹಾನಿಗೊಂಡಿರುವ ಕಲಬುರಗಿಗೆ ಇಂದು ಕಂದಾಯ ಸಚಿವ ಆರ್​ ಅಶೋಕ್​ ಭೇಟಿ ನೀಡಿ ಸಂತ್ರಸ್ತರ ಸಮಸ್ಯೆ ಆಲಿಸಿದರು.

ಸಿಎಂ ಕೂಡ ಶೀಘ್ರದಲ್ಲಿಯೇ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಎರಡು ಮೂರು ದಿನಗಳ ಕಾಲ ಪ್ರವಾಸ ಕೈಗೊಳ್ಳುವುದಾಗಿ ಮೈಸೂರಿನಲ್ಲಿ ಇಂದು ತಿಳಿಸಿದ್ದಾರೆ. ಅಲ್ಲದೇ, ಸಂತ್ರಸ್ತರಿಂದ ಯಾವುದೇ ದೂರು ಬಾರದಂತೆ ಸಮರ್ಥವಾಗಿ ಕ್ರಮಕ್ಕೆ ಸೂಚನೆ ನೀಡಲಾಗಿದ್ದು, ಅವರಿಗೆ ಉತ್ತಮ ಆಹಾರ ಸೌಲಭ್ಯ ಒದಗಿಸುವಂತಎ ಸೂಚನೆ ನೀಡಿದ್ದಾರೆ.
Published by: Seema R
First published: October 16, 2020, 9:27 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories