• Home
  • »
  • News
  • »
  • state
  • »
  • Modi on Kannada: ಗುಜರಾತ್‌ನಲ್ಲೂ ಕನ್ನಡದ ಕಂಪು! ಕರ್ನಾಟಕದ ಸಂಸ್ಕತಿ, ನುಡಿ ಬಗ್ಗೆ ಮೋದಿ ಮೆಚ್ಚುಗೆಯ ಟ್ವೀಟ್!

Modi on Kannada: ಗುಜರಾತ್‌ನಲ್ಲೂ ಕನ್ನಡದ ಕಂಪು! ಕರ್ನಾಟಕದ ಸಂಸ್ಕತಿ, ನುಡಿ ಬಗ್ಗೆ ಮೋದಿ ಮೆಚ್ಚುಗೆಯ ಟ್ವೀಟ್!

ಕನ್ನಡದ ಬಗ್ಗೆ ಮೋದಿ ಮೆಚ್ಚುಗೆ

ಕನ್ನಡದ ಬಗ್ಗೆ ಮೋದಿ ಮೆಚ್ಚುಗೆ

ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಕನ್ನಡ ಭಾಷೆ (Kannada Language), ಕರ್ನಾಟಕದ ಸಂಸ್ಕೃತಿಯನ್ನು (Karnataka Culture) ಹಾಡಿ ಹೊಗಳಿದ್ದಾರೆ. ಈ ಬಗ್ಗೆ ಟ್ವೀಟ್ (Tweet) ಮಾಡಿರುವ ಅವರು, “ಕರ್ನಾಟಕದ ಸಂಸ್ಕೃತಿ ಮತ್ತು ಕನ್ನಡ ಭಾಷೆಯನ್ನು ಭಾರತದಾದ್ಯಂತ ವ್ಯಾಪಕವಾಗಿ ಗೌರವಿಸಲಾಗುತ್ತಿದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮುಂದೆ ಓದಿ ...
  • Share this:

ಅಹಮದಾಬಾದ್, ಗುಜರಾತ್: ಒಂದೆಡೆ ಹಿಂದಿ (Hindi) ರಾಷ್ಟ್ರಭಾಷೆ (National Language) ಹೌದೋ ಅಲ್ಲವೋ ಎಂಬ ವಿಚಾರಕ್ಕೆ ದೇಶಾದ್ಯಂತ ಚರ್ಚೆ ನಡೆಯುತ್ತಿದೆ. ಮತ್ತೊಂದೆಡೆ ದಕ್ಷಿಣದ ರಾಜ್ಯಗಳಲ್ಲಿ (South States) ಹಿಂದಿ ಹೇರಿಕೆ (Imposition of Hindi) ಹುನ್ನಾರ ನಡೆಯುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಮತ್ತೊಂದೆಡೆ ರಾಜ್ಯದಲ್ಲಿ ನಡೆಯುವ ಕೇಂದ್ರ ಸರ್ಕಾರದ ಕಾರ್ಯಕ್ರಮಗಳಲ್ಲಿ (Central Govt. Programs) ಕನ್ನಡವನ್ನು (Kannada) ಕಡೆಗಣಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಈ ನಡುವೆಯೇ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಕನ್ನಡ ಭಾಷೆ (Kannada Language), ಕರ್ನಾಟಕದ ಸಂಸ್ಕೃತಿಯನ್ನು (Karnataka Culture) ಹಾಡಿ ಹೊಗಳಿದ್ದಾರೆ. ಈ ಬಗ್ಗೆ ಟ್ವೀಟ್ (Tweet) ಮಾಡಿರುವ ಅವರು, “ಕರ್ನಾಟಕದ ಸಂಸ್ಕೃತಿ ಮತ್ತು ಕನ್ನಡ ಭಾಷೆಯನ್ನು ಭಾರತದಾದ್ಯಂತ ವ್ಯಾಪಕವಾಗಿ ಗೌರವಿಸಲಾಗುತ್ತಿದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ಅಹಮದಾಬಾದ್ ಕನ್ನಡ ಸಂಘದ 75ನೇ ವಾರ್ಷಿಕೋತ್ಸವ


ಗುಜರಾತ್‌ನ ಅಹಮದಾಬಾದ್‌ನಲ್ಲಿ ಕನ್ನಡ ಸಂಘ ಬಹಳ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದೆ. ಗುಜರಾತ್ ನೆಲದಲ್ಲೂ ಕನ್ನಡದ ಕಂಪು ಪಸರಿಸುತ್ತಿರುವ ಕನ್ನಡ ಸಂಘಕ್ಕೆ ಇದೀಗ 75 ವರ್ಷಗಳ ಅಮೃತ ಮಹೋತ್ಸವದ ಸಂದರ್ಭ. ಈ ಹಿನ್ನೆಲೆಯಲ್ಲಿ 75ನೇ ವಾರ್ಷಿಕೋತ್ಸವ ಆಚರಿಸಲಾಯ್ತು.ಟ್ವಿಟರ್‌ನಲ್ಲಿ ಕನ್ನಡದ ಬಗ್ಗೆ ಪ್ರಧಾನಿ ಮೋದಿ ಮೆಚ್ಚುಗೆ


ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಶುಭ ಕೋರಿದ್ದಾರೆ. ಕನ್ನಡ ಸಂಘದ 75ನೇ ವಾರ್ಷಿಕೋತ್ಸವದ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಕಿರುವ ಟ್ವೀಟ್ ರೀ ಟ್ವೀಟ್ ಮಾಡಿರುವ ಪ್ರಧಾನಿ, ಏಕ ಭಾರತ್, ಶ್ರೇಷ್ಠ ಭಾರತ್ ಎಂದಿದ್ದಾರೆ.


ಇದನ್ನೂ ಓದಿ: Nirmala Sitharaman: ಟೊಮೇಟೋ, ಸೊಪ್ಪು ತಾಜಾ ಇದ್ಯಾ? ಹಾಗಲಕಾಯಿ ಎಷ್ಟಮ್ಮ? ಬೀದಿಬದಿ ತರಕಾರಿ ಖರೀದಿಸಿದ ಸಚಿವೆ!


ಕನ್ನಡ ನಾಡು-ನುಡಿ ಬಗ್ಗೆ ಪ್ರಧಾನಿ ಗುಣಗಾನ


ಇಂತಹ ಸಾಂಸ್ಕೃತಿಕ ವಿನಿಮಯಗಳು ಉತ್ತೇಜನಕಾರಿ. ಕರ್ನಾಟಕದ ಸಂಸ್ಕೃತಿ ಮತ್ತು ಕನ್ನಡ ಭಾಷೆಯನ್ನು ಭಾರತದಾದ್ಯಂತ ವ್ಯಾಪಕವಾಗಿ ಗೌರವಿಸಲಾಗುತ್ತಿದೆ! ಅಂತ ಪ್ರಧಾನಿ ನರೇಂದ್ರ ಮೋದಿ ಕನ್ನಡ ನಾಡು ನುಡಿಯ ಬಗ್ಗೆ ಟ್ವಿಟರ್‌ನಲ್ಲಿ ಮೆಚ್ಚುಗೆಯ ಮಾತನ್ನಾಡಿದ್ದಾರೆ.


ಕನ್ನಡ-ಗುಜರಾತ್ ಬಾಂಧವ್ಯದ ಬಗ್ಗೆ ಜೋಶಿ ಮಾತು


ಕನ್ನಡ ಸಂಘದ 75ನೇ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಕೇಂದ್ರ ಸಂಸದೀಯ ಮತ್ತು ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿಯವರು, ಗುಜರಾತ್ ನ ಕನ್ನಡಿಗರೊಂದಿಗೆ ಎರಡು ರಾಜ್ಯಗಳು ಹೊಂದಿರುವ ವಿಶೇಷ ಬಾಂಧವ್ಯದ ಕುರಿತ ಹಲವು ವಿಚಾರಗಳನ್ನು ಹಂಚಿಕೊಂಡರು. ಒಂದೆಡೆ ದೇಶದ ಆಜಾದಿ ಕಾ ಅಮೃತ ಮಹೋತ್ಸವ ನಡೆಯುತ್ತಿದೆ. ಗುಜರಾತ್ ನಲ್ಲಿ ಕನ್ನಡ ಸಂಘದ 75ನೇ ವರ್ಷದ ಸಂಭ್ರಮ ನಡೆಯುತ್ತಿದೆ. ಅಂದಿನ ದಿನಗಳಲ್ಲಿಯೇ ಕನ್ನಡಿಗರು ಗುಜರಾತ್ ರಾಜ್ಯಕ್ಕೆ ಬಂದು, ಇಲ್ಲಿನ ಜನರೊಂದಿಗೆ ಬೆರೆತು, ವ್ಯಾಪಾರ-ವಹಿವಾಟು ನಡೆಸಿ ಗುಜರಾತನ ಏಳಿಗೆಗೆ ಕೊಡುಗೆಗಳನ್ನು ನೀಡಿದ್ದಾರೆ. ಇದು ಶ್ಲಾಘನೀಯ ಕಾರ್ಯ ಅಂತ ಹೇಳಿದ್ರು.


ಇದನ್ನೂ ಓದಿ: PFI: ಮೋದಿ, ಮಥುರಾ, ಅಯೋಧ್ಯೆಯೇ ನಮ್ಮ ಟಾರ್ಗೆಟ್! ಪಿಎಫ್‌ಐನಿಂದ ಶಾಸಕರಿಗೆ ಬೆದರಿಕೆ ಪತ್ರ


ಆರ್ಥಿಕ ನೆರವು ಹಾಗೂ ಭೂಮಿ ನೀಡುವ ಬಗ್ಗೆ ಸಿಎಂ ಭರವಸೆ


ಅಹಮದಾಬಾದ್‌ನ  ಕರ್ನಾಟಕ ಸಂಘ ನಿರ್ಮಿಸಲು ಉದ್ದೇಶಿಸಿರುವ ಕನ್ನಡ ಭವನಕ್ಕೆ ಜಾಗ ಹಾಗೂ ಆರ್ಥಿಕ ನೆರವು ನೀಡುವುದಾಗಿ ಗುಜರಾತಿನ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್‌ ಭರವಸೆ ನೀಡಿದ್ದಾರೆ. ಅಹಮದಾಬಾದ್ ವಿಶ್ವವಿದ್ಯಾಲಯದ ಪ್ರದರ್ಶನ ಮತ್ತು ಸಮ್ಮೇಳನ ಕೇಂದ್ರದಲ್ಲಿ ಅಹಮದಾಬಾದ್‌ ಕರ್ನಾಟಕ ಸಂಘವು ಆಯೋಜಿಸಿರುವ ಎರಡು ದಿನಗಳ ಅಮೃತ ಮಹೋತ್ಸವ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಮನವಿಗೆ ಪಟೇಲ್ ಸ್ಪಂದಿಸಿದರು. ಸಭಾಂಗಣದಲ್ಲಿದ್ದ ಕನ್ನಡಿಗರು ಜೋರಾಗಿ ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತಪಡಿಸಿದರು.

Published by:Annappa Achari
First published: