• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • IIT Dharwad: ರಾಜ್ಯದ ಮೊದಲ ಐಐಟಿ ಲೋಕಾರ್ಪಣೆ, ವಿಶ್ವದ ಅತಿದೊಡ್ಡ ರೈಲ್ವೆ ಪ್ಲಾಟ್ ಫಾರಂಗೂ ಮೋದಿ ಚಾಲನೆ

IIT Dharwad: ರಾಜ್ಯದ ಮೊದಲ ಐಐಟಿ ಲೋಕಾರ್ಪಣೆ, ವಿಶ್ವದ ಅತಿದೊಡ್ಡ ರೈಲ್ವೆ ಪ್ಲಾಟ್ ಫಾರಂಗೂ ಮೋದಿ ಚಾಲನೆ

ಧಾರವಾಡ ಐಐಟಿ ಉದ್ಘಾಟಿಸಿದ ಪ್ರಧಾನಿ

ಧಾರವಾಡ ಐಐಟಿ ಉದ್ಘಾಟಿಸಿದ ಪ್ರಧಾನಿ

ಧಾರವಾಡದಲ್ಲಿ ನಿರ್ಮಿಸಲಾಗಿದ್ದ ಭಾರತೀಯ ತಂತ್ರಜ್ಞಾನ ಸಂಸ್ಥೆಯ (Indian Institutes of Technology) ಕಟ್ಟಡವನ್ನು ಪ್ರಧಾನಿ ನರೇಂದ್ರ ಮೋದಿ (PM Narendra Modi) ಲೋಕಾರ್ಪಣೆ ಮಾಡಿದ್ದಾರೆ. ಈ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರೇ 2019ರಲ್ಲಿ ಈ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. ಇದೀಗ ಅವರೇ ಇದನ್ನು ಲೋಕಾರ್ಪಣೆ ಮಾಡಿದ್ದಾರೆ.

ಮುಂದೆ ಓದಿ ...
 • News18 Kannada
 • 5-MIN READ
 • Last Updated :
 • Dharwad, India
 • Share this:

ಧಾರವಾಡ: ಕರ್ನಾಟಕ ರಾಜ್ಯದ (Karnataka) ಮೊದಲ ಐಐಟಿ ಎಂಬ ಹೆಗ್ಗಳಿಕೆಗೆ ಪಾತ್ರವಾದ ಧಾರವಾಡ ಐಐಟಿ (IIT Dharwad) ಇದೀಗ ಲೋಕಾರ್ಪಣೆಗೊಂಡಿದೆ. ಧಾರವಾಡದಲ್ಲಿ ನಿರ್ಮಿಸಲಾಗಿದ್ದ ಭಾರತೀಯ ತಂತ್ರಜ್ಞಾನ ಸಂಸ್ಥೆಯ (Indian Institutes of Technology) ಕಟ್ಟಡವನ್ನು ಪ್ರಧಾನಿ ನರೇಂದ್ರ ಮೋದಿ (PM Narendra Modi) ಲೋಕಾರ್ಪಣೆ ಮಾಡಿದ್ದಾರೆ. ಈ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರೇ 2019ರಲ್ಲಿ ಈ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. ಇದೀಗ ಅವರೇ ಇದನ್ನು ಲೋಕಾರ್ಪಣೆ ಮಾಡಿದ್ದಾರೆ. ಬರೋಬ್ಬರಿ 850 ಕೋಟಿ ರೂಪಾಯಿಗೂ ಅಧಿಕ ವೆಚ್ಚದಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿದೆ. ಸದ್ಯ ಐಐಟಿ ಧಾರವಾಡದಲ್ಲಿ 4 ವರ್ಷಗಳ ಬಿ.ಟೆಕ್., ಇಂಟರ್ ಡಿಸಿಪ್ಲಿನರಿ, 5 ವರ್ಷಗಳ BS-MS ಪ್ರೋಗ್ರಾಂ, ಪಿಎಚ್‌ಡಿ ಮತ್ತು ಎಂಟೆಕ್ ಕೋರ್ಸ್ಗಳು ಇವೆ.


ಧಾರವಾಡ ಐಐಟಿ ವಿಶೇಷತೆಗಳೇನು?


ಧಾರವಾಡ ಐಐಟಿ ಕ್ಯಾಂಪಸ್ ಬರೋಬ್ಬರಿ 850 ಕೋಟಿ ರೂಪಾಯಿಗಳಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ಕ್ಯಾಂಪಸ್ ದೇಶದ ಮೊದಲ ಸ್ಮಾರ್ಟ್ ಮತ್ತು ಹಸಿರು ಐಐಟಿ ಕ್ಯಾಂಪಸ್ ಎಂಬ ಖ್ಯಾತಿ ಪಡೆದಿದೆ. ವಿದ್ಯುತ್ ಮತ್ತು ನೀರಿನ ವಿಚಾರದಲ್ಲಿ ಈ ಕ್ಯಾಂಪಸ್ ಸ್ವಾವಲಂಬಿಯಾಗಿದೆ ಅಂತ ಹೇಳಲಾಗುತ್ತಿದೆ. ಐಐಟಿ ಕ್ಯಾಂಪಸ್ ಮಾಲಿನ್ಯ ಮುಕ್ತವಾಗಿ ಇರಲಿದೆ. ಇದಕ್ಕಾಗಿ ಕ್ಯಾಂಪಸ್‌ನಲ್ಲಿ ಸೈಕಲ್‌ಗಳು ಮತ್ತು ಇ-ವಾಹನಗಳನ್ನು ಮಾತ್ರ ಬಳಸಲಾಗುತ್ತದೆ. ಹಂಪಿಯ ವಿಜಯ ವಿಠ್ಠಲ ದೇವಸ್ಥಾನದ ಪ್ರತಿರೂಪವಾದ ಕಲ್ಲಿನ ರಥದ ಪ್ರತಿಕೃತಿಯು ಆವರಣದ ಪ್ರವೇಶದ್ವಾರದಲ್ಲಿರೋದು ಮತ್ತೊಂದು ವಿಶೇಷ.

“ಇದು ಡಬಲ್ ಎಂಜಿನ್ ಸರ್ಕಾರದ ಫಲಶೃತಿ”


“ಇದು ಡಬಲ್ ಎಂಜಿನ್ ಸರ್ಕಾರದ ಫಲಶೃತಿ”


ಧಾರವಾಡ ಐಐಟಿ ಉದ್ಘಾಟನೆಯಾಗಿದೆ, ಕರ್ನಾಟಕದ ವಿಕಾಸ ಯಾತ್ರೆಯಲ್ಲಿ ಹೊಸ ಅಧ್ಯಾಯ ಆರಂಭಗೊಂಡಿದೆ ಅಂತ ಪ್ರಧಾನಿ ನರೇಂದ್ರ ಮೋದಿ ಭರವಸೆಯ ಮಾತುಗಳನ್ನಾಡಿದ್ದಾರೆ. ವಿಶ್ವ ದರ್ಜೆಯ ಮಟ್ಟಕ್ಕೆ ಐಐಟಿ ಒಯ್ಯಲಾಗುತ್ತೆ. ಐಐಟಿ ನಾಲ್ಕು ವರ್ಷದಲ್ಲಿ ಭವಿಷ್ಯದ ಸಂಸ್ಥೆಯಾಗಿ ರೂಪುಗೊಂಡಿದೆ. ಇದು ಡಬಲ್ ಎಂಜಿನ್ ಸರ್ಕಾರದ ಫಲಶೃತಿಯಾಗಿದೆ ಅಂತ ಹೇಳಿದ್ದಾರೆ.


ಇದನ್ನೂ ಓದಿ: Bengaluru-Mysuru Expressway: ದಶಪಥ ಹೆದ್ದಾರಿ ಲೋಕಾರ್ಪಣೆಗೊಳಿಸಿದ ಮೋದಿ; ಡಬಲ್ ಇಂಜಿನ್ ಸಾಧನೆ ಜಪಿಸಿದ ಪ್ರಧಾನಿ


“ಅಡಿಗಲ್ಲು ಹಾಕಿ ಬಿಡುವ ಜಾಯಮಾನ ನನ್ನದಲ್ಲ”


“ಅವಳಿ ನಗರದಲ್ಲಿ ವಿವಿಧ ಕಾಮಗಾರಿ”


ಸ್ಮಾರ್ಟ್ ಸಿಟಿ ಯೋಜನೆ ಅಡಿ ಅವಳಿ ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ಇಡೀ ಕರ್ನಾಟಕದಲ್ಲಿ‌ ಜಯದೇವ ಹೃದ್ರೋಗ ಸಂಸ್ಥೆ ಮೇಲೆ ನಂಬಿಕೆ ಇಡಲಾಗಿದೆ. ಇದರ ಸೇವೆ ಹುಬ್ಬಳ್ಳಿಗೂ ಸಿಗಲಿ ಅಂತ ಅದಕ್ಕೆ ಶಿಲನ್ಯಾಸ ಹಾಕಿದ್ದೇನೆ. ಜಲಜೀವನ್ ಮಿಷನ್ ಯೋಜನೆ ಮೂಲಕ ಮನೆ ಮನೆಗೆ ನೀರು ಪೂರೈಕೆ ಮಾಡುತ್ತಿದ್ದೇವೆ. ಮಹಾದಾಯಿ ನೀರನ್ನು ಧಾರವಾಡ ಜಿಲ್ಲೆಯ ಹಳ್ಳಿಗಳಿಗೆ ಪೂರೈಕೆ ಮಾಡಲಿದ್ದೇವೆ ಅಂತ ಪ್ರಧಾನಿ ಮೋದಿ ಹೇಳಿದ್ರು.


ವಿಶ್ವದ ಅತಿದೊಡ್ಡ ರೈಲ್ವೆ ಪ್ಲಾಟ್ ಫಾರಂ ಬಗ್ಗೆ ಮೋದಿ‌‌ ಮೆಚ್ಚುಗೆ

ಇನ್ನು ರೈಲ್ವೆ ಮೂಲಭೂತ ಸೌಕರ್ಯಗಳಿಗೆ ಎಷ್ಟ ಆದ್ಯತೆ ಕೊಡ್ತೇವೆ ಅನ್ನೋದಕ್ಕೆ ಇದು ಸಾಕ್ಷಿ ಅಂತ ಮೋದಿ ಹೇಳಿದ್ರು. ವಿವಿಧ ರೈಲ್ವೆ ಯೋಜನೆಗಳನ್ನೂ ಇಂದು ಉದ್ಘಾಟಿಸಿದ್ದೇನೆ. ಕನಸುಗಳನ್ನು ನನಸಾಗಿಸೋ ಕೆಲಸ ಮಾಡ್ತಿದ್ದೇವೆ. ಶಿಕ್ಷಣ, ಕೃಷಿ ಎಲ್ಲ ಕ್ಷೇತ್ರಗಳಲ್ಲಿಯೂ ಆಧುನಿಕತೆ ಅಳವಡಿಸಲಾಗ್ತಿದೆ. ರೈಲು, ರಸ್ತೆ ಇತ್ಯಾದಿ ಮೂಲಭೂತ ಸೌಕರ್ಯಗಳಿಗೆ ಆದ್ಯತೆ ನೀಡಲಾಗ್ತಿದೆ ಅಂದರು.
ಬಸವಣ್ಣನ ಗುಣಗಾನ, ರಾಹುಲ್‌ ಗಾಂಧಿಗೆ ಟಾಂಗ್


ಬಸವೇಶ್ವರರು ಅನುಭವ ಮಂಟಪ ಸ್ಥಾಪಿಸಿದ್ದರು. ಭಾರತ ಪ್ರಜಾಪ್ರಭುತ್ವದ ತಾಯಿ ಅನ್ನೋದಕ್ಕೆ ಅನುಭವ ಮಂಟಪ ಸಾಕ್ಷಿ. ಲಂಡನ್ ನಲ್ಲಿ ಬಸವಣ್ಣನವರ ಮೂರ್ತಿ ಪ್ರತಿಷ್ಠಾಪಿಸಿ ಗೌರವಿಸಲಾಗಿದೆ ಅಂತ ಮೋದಿ ಹೇಳಿದ್ರು. ಆದರೆ ಅದೇ ಲಂಡನ್ ನಲ್ಲಿಯೇ ಭಾರತಕ್ಕೆ ಅಪಮಾನ ಮಾಡೋ ಕೆಲಸ ನಡೆಯಿತು. ಜಗತ್ತಿನ ಯಾವುದೆ ಶಕ್ತಿ ಭಾರತದ ಪ್ರಜಾಪ್ರಭುತ್ವಕ್ಕೆ ಧಕ್ಕೆ ತರೋಕೆ ಸಾಧ್ಯವಿಲ್ಲ. ಅವರು ಭಾರತದ ಪ್ರಜಾಪ್ರಭುತ್ವ ಅಪಮಾನಿಸಿ, ಬಸವೆರಶ್ವರರ ಅಪಮಾನ ಮಾಡ್ತಿದಾರೆ. ದೇಶದ 130 ಕೋಟಿ ಜನರನ್ನೂ ಅಪಮಾನಿಸ್ತಿದಾರೆ. ಇಂತಹ ಜನರ ಬಗ್ಗೆ ಕರ್ನಾಟಕದ ಜನರೂ ಎಚ್ಚರದಿಂದಿರಬೇಕು ಅಂತ ಪರೋಕ್ಷವಾಗಿ ರಾಹುಲ್ ಗಾಂಧಿ ವಿರುದ್ಧ ಮೋದಿ ವಾಗ್ದಾಳಿ ನಡೆಸಿದ್ರು.

Published by:Annappa Achari
First published: