ಶಿವಮೊಗ್ಗ: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ (Former CM BS Yediyurappa) ಅವರ ಹುಟ್ಟುಹಬ್ಬದಂದು ಶಿವಮೊಗ್ಗದಲ್ಲಿ ನಿರ್ಮಾಣವಾಗಿರುವ (Shivamogga Airport) ಕುವೆಂಪು ವಿಮಾನ ನಿಲ್ದಾಣವನ್ನು (Kuvempu Airport) ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದರು. ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿಯೇ ಲ್ಯಾಂಡ್ ಆಗ ಪ್ರಧಾನಿಗಳು, ಏರ್ಪೋರ್ಟ್ ಪರಿಶೀಲನೆ ನಡೆಸಿದರು. ಇದೇ ವೇಳೆ ವಸ್ತು ಪ್ರದರ್ಶನ ವೀಕ್ಷಣೆ ಮಾಡಿದರು. ನಂತರ ಶಿವಮೊಗ್ಗ ವಿಮಾನ ನಿಲ್ದಾಣ ಲೋಕಾರ್ಪಣೆಗೊಳಿಸಲಾಯ್ತು. ವೇದಿಕೆ ಮೇಲೆ ಪ್ರಧಾನಿಗಳಿಗೆ ಸಾಗರದ ಕಲಾವಿದರು ಸಿದ್ಧಪಡಿಸಿರುವ ಶಿವಮೊಗ್ಗ ವಿಮಾನ ನಿಲ್ದಾಣ ಮಾದರಿಯ ಸ್ಮರಣಿಕೆಯನ್ನು ನೀಡಿದ ಗೌರವಿಸಲಾಯ್ತು. ಇದೇ ವೇಳೆ ವೇದಿಕೆ ಮೇಲೆ ಬಿ.ಎಸ್.ಯಡಿಯೂರಪ್ಪ ಅವರಿಗೆ ಪೇಟ ತೊಡಿಸಿ, ಹಸಿರು ಶಾಲು ಹಾಕಿ, ನೇಗಿಲು ಮಾದರಿಯನ್ನು ನೀಡಿ ಪ್ರಧಾನಿಗಳು ಸನ್ಮಾನಿಸಿದರು.
ಈ ವೇಳೆ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai), ಇಂದಿನ ದಿನವನ್ನು ಸುವರ್ಣಾಕ್ಷರದಲ್ಲಿ ಬರೆದಿಡಬೇಕು. ಶಿವಮೊಗ್ಗ ವಿಮಾನ ನಿಲ್ದಾಣ ಮಲೆನಾಡಿನ ಹೆಬ್ಬಾಗಿಲು ಆಗಲಿದೆ. ಕೇವಲ ಬೆಂಗಳೂರಿಗೆ ಮಾತ್ರ ಅಲ್ಲ, ದೇಶದ ಪ್ರಮುಖ ನಗರಗಳಿಗೆ ಶಿವಮೊಗ್ಗ ವಿಮಾನ ನಿಲ್ದಾಣ ಸಂಪರ್ಕ ಕಲ್ಪಿಸಲಿದೆ. ಕೆಲವೇ ವರ್ಷಗಳಲ್ಲಿಯೇ ಇದು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಆಗಲಿದೆ ಎಂದು ಹೇಳಿದರು.
ಈ ಎಲ್ಲಾ ಅಭಿವೃದ್ಧಿಗೆ ಮೋದಿ ಕಾರಣ
2014ರ ಬಳಿಕ ದೇಶದಲ್ಲಿ ವಿಮಾನ ನಿಲ್ದಾಣಗಳ ನಿರ್ಮಾಣ, ಮೆಡಿಕಲ್ ಕಾಲೇಜು ಸ್ಥಾಪನೆ, ಸ್ವಚ್ಛ ಭಾರತ ಅಭಿಯಾನದಡಿ ಶೌಚಾಲಯ ನಿರ್ಮಾಣ, ಮನೆಗಳ ನಿರ್ಮಾಣ ಆಗುತ್ತಿವೆ. ಇದಕ್ಕೆಲ್ಲಾ ಕಾರಣ ನಮ್ಮ ಪ್ರಧಾನಿ ನರೇಂದ್ರ ಮೋದಿ ಕಾರಣ ಎಂದರು.
ಕರ್ನಾಟಕ ಭಾರತ ನಿರ್ಮಾಣದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಕರ್ನಾಟಕಕ್ಕೆ ಅತಿ ಹೆಚ್ಚು ವಿದೇಶಿ ಬಂಡವಾಳ ಹರಿದು ಬರುತ್ತಿದೆ. ಮಂಗಳೂರು ಮತ್ತು ಉತ್ತರ ಕನ್ನಡ ಬಂದರು ಅಭಿವೃದ್ಧಿಗೆ ಅನುದಾನ ಬಿಡುಗಡೆ ಆಗಿದೆ. ಮಾರ್ಚ್ 11ರಂದು ಬೆಂಗಳೂರು-ಮೈಸೂರು ಹೆದ್ದಾರಿ ಆಗಲಿದೆ. ಈ ಎಲ್ಲಾ ಅಭಿವೃದ್ಧಿಗೂ ನಮ್ಮ ಡಬಲ್ ಎಂಜಿನ್ ಸರ್ಕಾರ ಕಾರಣ ಎಂದು ಪ್ರಧಾನಿಗಳನ್ನು ಸಿಎಂ ಬೊಮ್ಮಾಯಿ ಹಾಡಿ ಹೊಗಳಿದರು.
ಬಿಎಸ್ವೈಗೆ ಶುಭಾಶಯ ತಿಳಿಸಿದ ಸಿಎಂ
ಇದೇ ವೇಳೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಹೊಗಳಿದ ಬಸವರಾಜ್ ಬೊಮ್ಮಾಯಿ, ಸೂರ್ಯ-ಚಂದ್ರ ಇರೋವರೆಗೂ ಅವರ ಯೋಜನೆಗಳು ಇರಲಿದೆ ಎಂದು ಯಡಿಯೂರಪ್ಪ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದರು.
ಸಂತಸ ವ್ಯಕ್ತಪಡಿಸಿದ ಬಿಎಸ್ವೈ
ಸಿಎಂ ಬೊಮ್ಮಾಯಿ ಬಳಿಕ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಗೆ ಪ್ರಧಾನಿಗಳು ಬಂದಿದ್ದು ಸಂತೋಷವಾಗಿದೆ. ಈ ಹಿಂದೆಯೇ ನನ್ನ ಬರ್ತ್ ಡೇ ದಿನ ವಿಮಾನ ನಿಲ್ದಾಣ ಉದ್ಘಾಟನೆ ಮಾಡೋಣ ಅಂತ ಹೇಳಿದ್ದರು. ಅಂದು ಕೊಟ್ಟ ಮಾತಿನಂತೆ ಪ್ರಧಾನಿಗಳಿಂದು ಬಂದಿರೋದು ಸಂತಸವನ್ನುಂಟು ಮಾಡಿದೆ.
ಇದೊಂದು ವಿಮಾನ ನಿಲ್ದಾಣ ಅಲ್ಲ. ಇಡೀ ಮಲೆನಾಡಿನ ಹಲವಾರು ಕನಸುಗಳು ನನಸು ಆಗುತ್ತಿರುವ ಶುಭ ಸೂಚನೆಯಾಗಿದೆ. ಶಿಕಾರಿಪುರ ಜನರ ನನಗೆ ಧೈರ್ಯ ತುಂಬಿ, ನನ್ನನ್ನು ಶಾಸಕನಾಗಿ ಮಾಡಿ ಕನ್ನಡ ನಾಡಿನ ಜನರ ಸೇವೆ ಮಾಡಲು ಅವಕಾಶ ಕಲ್ಪಿಸಿದರು. ಸಂಸದ ರಾಘವೇಂದ್ರ ಅವರ ಸತತ ಪರಿಶ್ರಮದಿಂದ ವಿಮಾನ ನಿಲ್ದಾಣ ಆಗಿದೆ ಎಂದು ಪುತ್ರನನ್ನು ಹೊಗಳಿದರು.
ಇದನ್ನೂ ಓದಿ: PM Narendra Modi: ಇಂದು ಬೆಳಗಾವಿಯಲ್ಲಿ ದೇಶದ ರೈತರಿಗೆ ಗುಡ್ ನ್ಯೂಸ್ ಕೊಡಲಿದ್ದಾರೆ ಪ್ರಧಾನಿ ಮೋದಿ
ಈ ಅಭಿವೃದ್ಧಿಗೆ ಮೋದಿ ಅವರ ಆಶೀರ್ವಾದ
55 ವರ್ಷದ ರಾಜಕಾರಣದಲ್ಲಿ ನಾನು ಅಧಿಕಾರದಲ್ಲಿದ್ದು ಕೇವಲ ಏಳು ವರ್ಷ ಮಾತ್ರ. ಈ ಕಡಿಮೆ ಅವಧಿಯಲ್ಲಿ ರಾಜ್ಯಾದ್ಯಂತ ಅಭಿವೃದ್ಧಿ ಕೆಲಸಗಳನ್ನು ಮಾಡಲು ಪ್ರಧಾನಿ ಮೋದಿ ಅವರ ಆಶೀರ್ವಾದ ಕಾರಣ ಎಂದರು. ಇದೇ ವೇಳೆ ಹಳೆಯ ಕೆಲವು ಘಟನೆಗಳನ್ನು ಯಡಿಯೂರಪ್ಪನವರು ಮೆಲುಕು ಹಾಕಿಕೊಂಡರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ