• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Bengaluru-Mysuru Expressway: ದಶಪಥ ಹೆದ್ದಾರಿ ಲೋಕಾರ್ಪಣೆಗೊಳಿಸಿದ ಮೋದಿ; ಡಬಲ್ ಇಂಜಿನ್ ಸಾಧನೆ ಜಪಿಸಿದ ಪ್ರಧಾನಿ

Bengaluru-Mysuru Expressway: ದಶಪಥ ಹೆದ್ದಾರಿ ಲೋಕಾರ್ಪಣೆಗೊಳಿಸಿದ ಮೋದಿ; ಡಬಲ್ ಇಂಜಿನ್ ಸಾಧನೆ ಜಪಿಸಿದ ಪ್ರಧಾನಿ

ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ

ಹನಕೆರೆಗೆ ತಲುಪಿದ ಬಳಿಕ ಬೆಂಗಳೂರು-ಮೈಸೂರು ದಶಪಥ (Bengaluru-Mysuru Expresswa) ಉದ್ಘಾಟನೆ ಮಾಡಿದರು. ದಶಪಥ ಲೋಕಾರ್ಪಣೆ ಬಳಿಕ ಮಂಡ್ಯ ಜನತೆಯನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು.

 • News18 Kannada
 • 3-MIN READ
 • Last Updated :
 • Mandya, India
 • Share this:

ಮಂಡ್ಯ: ದೆಹಲಿಯಿಂದ ನೇರವಾಗಿ ಮೈಸೂರಿಗೆ (Delhi To Mysuru) ಬಂದಿಳಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರು ಹೆಲಿಕಾಪ್ಟರ್​​ ಮೂಲಕ ಮಂಡ್ಯ (Mandya) ತಲುಪಿದರು. ಮಂಡ್ಯದಲ್ಲಿ ಐಬಿ ಸರ್ಕಲ್​ನಿಂದ ನಂದಾ ವೃತ್ತದವರೆಗೆ 1.8 ಕಿಲೋಮೀಟರ್​ ರೋಡ್ ಶೋ (Road Show) ನಡೆಸಿದ ಪ್ರಧಾನಿಗಳಿಗೆ ಅಭಿಮಾನಿಗಳು ಹೂಮಳೆಯ (Flowers) ಸ್ವಾಗತ ನೀಡಿದರು. ರಸ್ತೆಯ ಇಕ್ಕೆಲಗಳಲ್ಲಿಯೂ ನಿಂತಿದ್ದ ಅಭಿಮಾನಿಗಳು ಮೋದಿ ಅವರ ಪರ ಜೈಕಾರ, ಜೈಶ್ರೀರಾಮ ಘೋಷಣೆ ಕೂಗಿದರು. ಪ್ರಧಾನಿಗಳು ಸಹ ಇಡೀ ರೋಡ್ ಶೋವರೆಗೂ ಜನರತ್ತ ಕೈ ಬೀಸುತ್ತಾ ತೆರಳಿದರು. ಅಲ್ಲಿಂದ ಹನಕೆರೆಗೆ ತಲುಪಿದರು. ಹನಕೆರೆಗೆ ತಲುಪಿದ ಬಳಿಕ ಬೆಂಗಳೂರು-ಮೈಸೂರು ದಶಪಥ (Bengaluru-Mysuru Expresswa) ಉದ್ಘಾಟನೆ ಮಾಡಿದರು.  ದಶಪಥ ಲೋಕಾರ್ಪಣೆ ಬಳಿಕ ಮಂಡ್ಯ ಜನತೆಯನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು.


ಕನ್ನಡದಲ್ಲಿ ಭಾಷಣ ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ, ಮಂಡ್ಯ ಜನರ ಪ್ರೀತಿ ಸತ್ಕಾರಕ್ಕೆ ಧನ್ಯವಾದಗಳು. ಮಂಡ್ಯ ಜನರ ಆಶೀರ್ವಾದದಲ್ಲಿಯೂ ಸಿಹಿ ಇದೆ. ಡಬನ್ ಇಂಜಿನ್ ಸರ್ಕಾರದ ನಿರಂತರ ಪ್ರಯತ್ನದಿಂದ ನಿಮ್ಮ ಪ್ರೀತಿಯ ಋಣವನ್ನು ಅಭಿವೃದ್ಧಿ ಕೆಲಸಗಳಿಂದ ತೀರಿಸುತ್ತಿದ್ದೇವೆ. ಇಂದು ಸಾವಿರಾರು ಕೋಟಿಯ ಯೋಜನೆಯನ್ನು ಲೋಕಾರ್ಪಣೆಗೊಳಿಸಿದ್ದೇವೆ.


ಕಳೆದ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್​ ಹೆದ್ದಾರಿ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಪ್ರತಿ ಭಾರತೀಯರಿಗೂ ಈ ದೇಶದ ರಸ್ತೆಗಳು ಆಧುನೀಕರಣ ಆಗಬೇಕೆಂಬ ಆಸೆ ಇತ್ತು. ಇಂದು ನನಸು ಆಗಿದೆ. ಇಂದು ಮೈಸೂರು-ಕುಶಾಲನಗರ ರಸ್ತೆಯ ಶಿಲಾನ್ಯಾಸ ಆಗಿದೆ. ಇಂದು ಹೊಸ ರಸ್ತೆಗಳು ನಿಮಗೆ ಸಿಗುತ್ತಿರೋದಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.


ಭಾರತದಲ್ಲಿ ಮೂಲಭೂತ ಸೌಕರ್ಯಗಳ ಬಗ್ಗೆ ಚರ್ಚೆ ನಡೆದಾಗ ಇಬ್ಬರು ಮಹಾನ್ ಪುರುಷರ ಹೆಸರು ಬರುತ್ತದೆ. ಅದು ಕೃಷ್ಣರಾಜ ಒಡೆಯರ್ ಮತ್ತು ಸರ್ ಎಂ.ವಿಶ್ವೇಶರಯ್ಯ. ಈ ಇಬ್ಬರು ಈ ಭೂಮಿಯ ಮಕ್ಕಳು. ಅಂದು ಅವರು ಕೈಗೊಂಡ ಕೆಲಸಗಳ ಮಾರ್ಗದಲ್ಲಿ ಇಂದು ನಮ್ಮ ಯೋಜನೆಗಳು ಸಾಗುತ್ತಿವೆ ಎಂದು ಹೇಳಿದರು.


ಮೂಲಭೂತ ಸೌಕರ್ಯಗಳ ಅನುದಾನ ಹೆಚ್ಚಳ


ಇಂತಹ ಮಹಾನ್ ಪುರುಷರ ಮಾರ್ಗದರ್ಶನದಲ್ಲಿ ದೇಶದ ಮೂಲಭೂತ ಸೌಕರ್ಯದ ಕೆಲಸಗಳು ನಡೆಯುತ್ತಿವೆ. ಭಾರತ್ ಮಾಲಾ, ಸಾಗಾರ್ ಮಾಲಾ ಯೋಜನೆಗಳು ಭಾರತ ಬದಲಾಗುತ್ತಿರೋದಕ್ಕೆ ಉದಾಹರಣೆ ಆಗಿದೆ. ಕೋವಿಡ್ ಸಂಕಷ್ಟ ಸಮಯದಲ್ಲಿಯೂ ಕೇಂದ್ರ ಸರ್ಕಾರ ಮೂಲಭೂತ ಸೌಕರ್ಯಗಳ ಯೋಜನೆಗಳಿಗೆ ನೀಡುವ ಹಣದಲ್ಲಿ ಯಾವುದೇ ಕಡಿತಗೊಳಿಸಿಲ್ಲ. ಈ ವರ್ಷವೂ ಮೂಲಭೂತ ಸೌಕರ್ಯಗಳ ಮೊತ್ತವನ್ನು ಹೆಚ್ಚಿಸಲಾಗಿತ್ತು.


ಬೆಂಗಳೂರು ಮತ್ತು ಮೈಸೂರು ಕರ್ನಾಟಕದ ಎರಡು ಪ್ರಮುಖ ನಗರಗಳು. ಬೆಂಗಳೂರು ತಂತ್ರಜ್ಷಾನ ಮತ್ತು ಮೈಸೂರು ತನ್ನ ಪರಂಪರೆಗೆ ಹೆಸರುವಾಸಿ. ಇಂದು ಈ ಎರಡು ನಗರಗಳನ್ನು ಆಧುನೀಕರಣ ಮೂಲಕ ಒಂದು ಮಾಡಿದ್ದೇವೆ.


ಈ ಮಾರ್ಗದಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಿತ್ತು. ಇಂದು ಸಮಸ್ಯೆ ನಿವಾರಣೆ ಆಗಿದ್ದು, ಕೇವಲ ಒಂದೂವರೆ ಗಂಟೆಯಲ್ಲಿ ಬೆಂಗಳೂರಿನಿಂದ ಮೈಸೂರಿಗೆ ತೆರಳಬಹುದು.


ಈ ಎಕ್ಸ್​ಪ್ರೆಸ್ ವೇ ಮಂಡ್ಯ ಮತ್ತು ರಾಮನಗರದ ಮೂಲಕ ಸಾಗಲಿದೆ. ಈ ಎರಡು ಜಿಲ್ಲೆಗಳಲ್ಲಿ ಹಲವು ಪ್ರವಾಸಿ ಸ್ಥಾನಗಳನ್ನು ಹೊಂದಿದೆ. ಇದರಿಂದ ಈ ಭಾಗದಲ್ಲಿ ಪ್ರವಾಸೋದ್ಯಮ ಹೆಚ್ಚಾಗಲಿದೆ. ಇದೇ ಮಾರ್ಗದ ಮೂಲಕ ಕಾವೇರಯ ಉಗಮ ಸ್ಥಾನ ಕೊಡಗು ತಲುಪದಾಗಿದೆ.


ಮೈಸೂರು-ಕುಶಾಲನಗರ ರಸ್ತೆಯ ಅಗಲೀಕರಣ


ಮಳೆಗಾಲದ ವೇಳೆ ಬೆಂಗಳೂರು-ಮಂಗಳೂರು ರಸ್ತೆ ಬಂದ್ ಆಗುತ್ತಿರುತ್ತದೆ. ಮೈಸೂರು-ಕುಶಾಲನಗರ ರಸ್ತೆಯ ಅಗಲೀಕರಣ ದಿಂದ ಈ ಸಮಸ್ಯೆ ನಿವಾರಣೆ ಆಗಲಿದೆ. ಇದರಿಂದ ಕೈಗಾರಿಕೆ ಉದ್ಯಮಗಳಿಗೆ ಉತ್ತೇಜನ ಸಿಗಲಿದೆ.


2014ರ ಮೊದಲಿನ ಕಾಂಗ್ರೆಸ್ ಸರ್ಕಾರ ಬಡವರ ಸಂವೇದನೆಯನ್ನು ಕೇಳಲಿಲ್ಲ. ಬಡವರ ಕಷ್ಟಗಳು ಬಗ್ಗೆ ಅವರಿಗೆ ಗೊತ್ತಿರಲಿಲ್ಲ. ಅಂದಿನ ಕಾಂಗ್ರೆಸ್ ಸರ್ಕಾರ ಬಡವರ ಯೋಜನೆಯ ಸಾವಿರಾರು ಕೋಟಿ ಹಣವನ್ನು ನುಂಗಿವೆ.
2014ರ ನಂತರ ನೀವು ನನಗೆ ಮತ ನೀಡುವ ಮೂಲಕ ನಿಮ್ಮೆಲ್ಲರ ಸೇವೆ ಮಾಡುವ ಅವಕಾಶ ನೀಡಿದ್ದಿರಿ. ಅಂದಿನಿಂದ ನಿಮ್ಮ ಸೇವೆಯಲ್ಲಿ ತೊಡಗಿಕೊಂಡಿದ್ದೇವೆ. ಬಿಜೆಪಿ ಸರ್ಕಾರ ಬಡವರ ಕಷ್ಟಗಳನ್ನು ದೂರ ಮಾಡುತ್ತಿದೆ. ಮನೆ, ವಿದ್ಯುತ್, ಕುಡಿಯುವ ನೀರು, ಉತ್ತಮ ಚಿಕಿತ್ಸೆ, ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಬಿಜೆಪಿ ಸರ್ಕಾರ ಒದಗಿಸುತ್ತದೆ.


ಇದನ್ನೂ ಓದಿ: Bengaluru Mysuru Expressway: ಬೆಂಗಳೂರು-ಮೈಸೂರು ದಶಪಥದಿಂದ ಜನರಿಗೆ ಏನೇನು ಲಾಭ? ಇಲ್ಲಿದೆ ನೋಡಿ


ಈ ಹಿಂದೆ ಸರ್ಕಾರದ ಯೋಜನೆಗಳಿಗೆ ಕಚೇರಿಗೆ ತಿರುಗಬೇಕಿತ್ತು. ಆದ್ರೆ ಇಂದು ಬಡವರ ಮನೆಗೆ ಸರ್ಕಾರದ ಯೋಜನೆಗಳು ತಲುಪಿಸುವ ಕೆಲಸ ಮಾಡಲಾಗುತ್ತಿದೆ. ಕಳೆದ 9 ವರ್ಷಗಳಲ್ಲಿ 9 ಕೋಟಿಗೂ ಅಧಿಕ ಬಡವರಿಗೆ ಮನೆಗಳಾಗಿವೆ. ಜಲ್ ಜೀವನ್ ಮಿಷನ್ ಮೂಲಕ 40 ಲಕ್ಷ ಕುಟುಂಬಗಳಿಗೆ ಕುಡಿಯುವ ನೀರು ತಲುಪಿಸಿದ್ದೇವೆ. ರೈತರ ಸಣ್ಣ ಸಣ್ಣ ಸಮಸ್ಯೆಗಳಿಗೆ ಬಿಜೆಪಿ ಸರ್ಕಾರ ಸ್ಪಂದಿಸುತ್ತಿದೆ. ಪಿಎಂ ಕಿಸಾನ್ ಯೋಜನೆಗಳ ಮೂಲಕ ರೈತರ ಖಾತೆಗಳಿಗೆ ಹಣ ವರ್ಗಾವಣೆ ಮಾಡಲಾಗುತ್ತಿದೆ.


ಈ ಬಾರಿ ಭದ್ರಾ ಮೇಲ್ದಂಡೆ ಯೋಜನೆಗೆ ಹೆಚ್ಚಿನ ಅನುದಾನ ಮೀಸಲಿರಿಸಿದ್ದೇವೆ. ರೈತರಿಗೆ ಕೇಂದ್ರದಿಂದ 6 ಸಾವಿರ ಮತ್ತು ರಾಜ್ಯದಿಂದ 4 ಸಾವಿರ ರೂಪಾಯಿ ಸಿಗ್ತಿದೆ. ಡಬಲ್ ಇಂಜಿನ್ ಸರ್ಕಾರ ಅಂದ್ರೆ ಡಬಲ್ ಲಾಭ ಎಂದರ್ಥ ಎಂದರು.


ಕಬ್ಬು ಬೆಳೆಗಾರರಿಗೆ 1000 ಕೋಟಿ ಮೀಸಲು ಇರಿಸಲಾಗಿದೆ. ಇದೇ ರೀತಿ ಕೇಂದ್ರ ಸರ್ಕಾರದ ಹಲವು ಯೋಜನೆಗಳ ಮಾಹಿತಿಯನ್ನು ನೀಡಿದರು.


ಜನರ ಆಶೀರ್ವಾದವೇ ಮೋದಿಯ ರಕ್ಷಾ ಕವಚ


ಕಾಂಗ್ರೆಸ್ ಮೋದಿಯ ಸಮಾಧಿ ಮಾಡಲು ಬ್ಯುಸಿಯಾಗಿದೆ. ಆದ್ರೆ ಮೋದಿ ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್​ ಮಾಡುವ ದಿಕ್ಕಿನಲ್ಲಿ ಬ್ಯುಸಿಯಾಗಿದ್ದಾರೆ. ಮೋದಿ ಬಡವರ ಜೀವನ ಸುಧಾರಣೆ ಮಾಡೋದರಲ್ಲಿ ಬ್ಯುಸಿಯಾಗಿದ್ದಾರೆ. ಮೋದಿ ಸಮಾಧಿ ಮಾಡಲು ಕನಸು ಕಾಣುತ್ತಿರುವ ಕಾಂಗ್ರೆಸ್​ಗೆ ದೇಶದ ತಾಯಂದಿರ ಜನರ ಆಶೀರ್ವಾದವೇ ಮೋದಿಯ ರಕ್ಷಾ ಕವಚ ಎಂದು ಗೊತ್ತಿಲ್ಲ. ಕರ್ನಾಟಕದ ಅಭಿವೃದ್ಧಿಗೆ ಡಬನ್ ಇಂಜಿನ್ ಸರ್ಕಾರ ಅಗತ್ಯವಿದೆ ಎಂದು ಹೇಳಿದರು.

Published by:Mahmadrafik K
First published: