ಪ್ರಧಾನಿ ನರೇಂದ್ರ ಮೋದಿ ಕಡಲನಗರಿ ಮಂಗಳೂರಿಗೆ ಆಗಮಿಸಿದ್ದು 3,700 ಕೋಟಿಯ ಯೋಜನೆಗಳಿಗೆ ಚಾಲನೆ ಕೊಟ್ಟಿದ್ದಾರೆ. ಹಲವು ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಿ ಪ್ರಧಾನಿ ಮೋದಿ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ್ರು. ಇಂದು ಭಾರತದ ಸಮುದ್ರ ಶಕ್ತಿಗೆ ದೊಡ್ಡ ದಿನ. ಸೇನೆ, ಆರ್ಥಿಕ ಸುರಕ್ಷತೆಯಲ್ಲಿ ಭಾರತ ದೊಡ್ಡ ಸಾಧನೆ ಮಾಡಿದೆ. ಕೆಲಹೊತ್ತಿನ ಹಿಂದೆ ಐಎನ್ಎಸ್ ವಿಕ್ರಾಂತ್ ಲೋಕಾರ್ಪಣೆ ಮಾಡಿದ್ದೇನೆ. ಮಂಗಳೂರಲ್ಲಿ 3,800 ಕೋಟಿ ಮೌಲ್ಯದ ಯೋಜನೆಗಳಿಗೆ ಚಾಲನೆ ನೀಡಿದೆ ಅಂತಾ ಹೇಳಿದ್ರು. ಮೇಕ್ ಇನ್ ಇಂಡಿಯಾ ಬಗ್ಗೆ ಉಲ್ಲೇಖಿಸಿದ್ರು. 8 ವರ್ಷಗಳಲ್ಲಿ ಕರ್ನಾಟಕಕ್ಕೆ 70 ಸಾವಿರ ಕೋಟಿಯ ಹೈವೇ ಸಿಕ್ಕಿದೆ. ಮಂಗಳೂರು-ಚೆನ್ನೈ ಎಕ್ಸ್ಪ್ರೇಸ್ ವೇ ಆಗ್ತಿದೆ. ಬೆಂಗಳೂರು-ಮೈಸೂರು ಹೈವೇ ಯೋಜನೆ ಆಗ್ತಿದೆ ಎಂದರು.
ಕರ್ನಾಟಕದ ಜನತೆಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ
ಮಂಗಳೂರು ಬಂದರು ವಿಸ್ತರಣೆ ಆಗಿದೆ. ಮಂಗಳೂರಿನ ಮೀನುಗಾರರ ಗಳಿಕೆ ಹೆಚ್ಚಿಸಲು ಯೋಜನೆ ತಂದಿದ್ದೇವೆ. ಕರ್ನಾಟಕದ ಜನತೆಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಈ ಯೋಜನೆಗಳಿಂದ ಕರ್ನಾಟಕದಲ್ಲಿ ವ್ಯಾಪಾರ ಹೆಚ್ಚಳವಾಗಲಿದೆ. ಕರ್ನಾಟಕದಲ್ಲಿ ಉದ್ಯೋಗ, ಉದ್ದಿಮೆ ಹೆಚ್ಚಾಗಲಿದೆ ಅಂತಾ ಮೋದಿ ಹೇಳಿದರು.
ಮೇಕ್ ಇನ್ ಇಂಡಿಯಾ ವಿಸ್ತರಣೆ ಅತ್ಯಂತ ಮುಖ್ಯವಾಗಿದೆ
ರೈತರು, ಮೀನುಗಾರರು ಅಂತಾರಾಷ್ಟ್ರೀಯ ಮಟ್ಟಕ್ಕೇರಲು ಈ ಯೋಜನೆಗಳು ಸಹಕಾರಿಯಾಗಲಿದೆ. ಮೇಕ್ ಇನ್ ಇಂಡಿಯಾ ವಿಸ್ತರಣೆ ಅತ್ಯಂತ ಮುಖ್ಯವಾಗಿದೆ.
ಅಭಿವೃದ್ಧಿ ಭಾರತಕ್ಕೆ ಜಗತ್ತಿನೆಲ್ಲೆಡೆ ನಮ್ಮ ವಸ್ತುಗಳು ಮಾರಾಟವಾಗ್ಬೇಕು. ಕಳೆದ 8 ವರ್ಷಗಳಿಂದ ಮೂಲಭೂತ ಸೌಕರ್ಯಗಳ ಮೇಲೆ ಹೆಚ್ಚು ಒತ್ತು ಕೊಡಲಾಗ್ತಿದೆ ಅಂತಾ ಹೇಳಿದ್ರು.
ದೊಡ್ಡ ಯೋಜನೆಗಳಿಗೆ ಮೂಲಭೂತ ಸೌಕರ್ಯ ಒದಗಿಸಲಾಗ್ತಿದೆ. ಭಾರತ್ ಮಾಲಾ, ಸಾಗರ್ ಮಾಲಾ ಯೋಜನೆಗಳ ಮೂಲಕ ಶಕ್ತಿ ಕೊಡಲಾಗ್ತಿದೆ. ಮಂಗಳೂರು ಬಂದರಿನಲ್ಲಿ ಹೊಸ ತಂತ್ರಜ್ಞಾನಗಳನ್ನ ಅಳವಡಿಸಲಾಗಿದೆ. ಇಂದು 4 ಯೋಜನೆಗಳ ಶಿಲಾನ್ಯಾಸ ಆಗಿದೆ. ಇದ್ರಿಂದ ಕರ್ನಾಟಕ, ದೇಶದ ಅಭಿವೃದ್ಧಿ ಆಗಲಿದೆ ಎಂದರು.
ಇದನ್ನೂ ಓದಿ: ಭಾರತಕ್ಕೆ ಇನ್ಮೇಲೆ ಹೊಸ ನೌಕಾಧ್ವಜ! ಸಮುದ್ರದೆಲ್ಲೆಡೆ ಹರಡಲಿದೆ ಕೀರ್ತಿ ಪತಾಕೆ
ಅಮೃತ ಕಾಲದಲ್ಲಿ ಭಾರತ ಹಸಿರು ಅಭಿವೃದ್ಧಿಯತ್ತ ಚಿತ್ತ ಹರಿಸಿದೆ. ಇಲ್ಲಿನ ರಿಫೈನರಿಯಲ್ಲಿ ಹೊಸ ಯೋಜನೆಗಳನ್ನು ಅಳವಡಿಸಲಾಗಿದೆ. ನಮ್ಮ ರಿಫೈನರಿ ನದಿ ನೀರಿನ ಮೇಲೆ ಅವಲಂಬಿತವಾಗಿದೆ. ಹೊಸ ಯೋಜನೆಯಿಂದ ನದಿ ನೀರಿನ ಮೇಲಿನ ಅವಲಂಬನೆ ಕಡಿಮೆಯಾಗಲಿದೆ ಅಂತಾ ಮೋದಿ ಹೇಳಿದ್ರು.
8 ವರ್ಷಗಳಲ್ಲಿ ಕರ್ನಾಟಕಕ್ಕೆ 70 ಸಾವಿರ ಕೋಟಿಯ ಹೈವೇ
8 ವರ್ಷಗಳಲ್ಲಿ ಕರ್ನಾಟಕಕ್ಕೆ 70 ಸಾವಿರ ಕೋಟಿಯ ಹೈವೇ ಸಿಕ್ಕಿದೆ. ಮಂಗಳೂರು-ಚೆನ್ನೈ ಎಕ್ಸ್ಪ್ರೇಸ್ ವೇ ಆಗ್ತಿದೆ. ಬೆಂಗಳೂರು-ಮೈಸೂರು ಹೈವೇ ಯೋಜನೆ ಆಗ್ತಿದೆ. ರೈಲ್ವೆ ವಿಭಾಗದಲ್ಲಿ 4 ಪಟ್ಟು ಹೆಚ್ಚಳವಾಗಿದೆ. ರೈಲ್ವೆ ಮಾರ್ಗಗಳ ಅಗಲೀಕರಣ ಹೆಚ್ಚಾಗಿದೆ ಅಂತಾ ಹೇಳಿದ್ರು.
ಡಬಲ್ ಇಂಜಿನ್ ಸರ್ಕಾರದಿಂದ ಲಾಭ
ಕರ್ನಾಟಕದಲ್ಲಿ ಡಬಲ್ ಇಂಜಿನ್ ಸರ್ಕಾರದಿಂದ ಲಾಭ ಆಗಿದೆ. ಜನರ ಆಶಯಗಳಿಗೆ ತಕ್ಕಂತೆ ಕೆಲಸ ಮಾಡುವ ವಿಶ್ವಾಸ ಇದೆ. ಕರಾವಳಿ, ಪಶ್ಚಿಮಘಟ್ಟ ಪ್ರವಾಸಿಗರನ್ನ ಸೆಳೆಯುತ್ತಿವೆ. ಭಾರತದಲ್ಲಿ ಮಧ್ಯಮ ವರ್ಗದ ಶಕ್ತಿ ಹೆಚ್ಚುತ್ತಿದೆ. ಕ್ರೂಸ್ ಟೂರಿಸಂ ಕೂಡ ಹೆಚ್ಚಳವಾಗ್ತಿದೆ ಅಂತ ಹೇಳಿದ್ರು.
3,700 ಕೋಟಿಯ ಯೋಜನೆಗಳಿಗೆ ಮೋದಿ ಚಾಲನೆ
ಮಂಗಳೂರಿನಲ್ಲಿ ವಿವಿಧ ಯೋಜನೆಗಳಿಗೆ ಮೋದಿ ಶಿಲಾನ್ಯಾಸ ನೆರವೇರಿಸಿದ್ರು. ಒಟ್ಟು 3,700 ಕೋಟಿ ವೆಚ್ಚದ ಯೋಜನೆಗಳಿಗೆ ಮೋದಿ ಚಾಲನೆ ನೀಡಿದ್ರು, ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿ ಹಲವು ಕಾರ್ಯಕ್ರಮಗಳಿಗೆ ಪ್ರಧಾನಿ ಮೋದಿ ಚಾಲನೆ ಕೊಟ್ರು.
ಇದನ್ನೂ ಓದಿ: ಮಂಗಳೂರಲ್ಲಿ ಪ್ರಧಾನಿ ಮೋದಿ; ಲೇಟೆಸ್ಟ್ ಅಪ್ಡೇಟ್ ಇಲ್ಲಿದೆ
ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದ ಯೋಜನೆಗಳ ಮಾಹಿತಿ
ಬಂದರಿನ 14ನೇ ಬರ್ತ್ ಯಾಂತ್ರೀಕರಣ ಲೋಕಾರ್ಪಣೆ: ₹281 ಕೋಟಿ
ಬಂದರು ಬಿಟುಮಿನ್ ಸಂಗ್ರಹಗಾರದ ಶಿಲಾನ್ಯಾಸ : ₹100 ಕೋಟಿ
ಪಿಎಂ ಗತಿಶಕ್ತಿ ಯೋಜನೆಯಡಿ ಹೆದ್ದಾರಿ ಅಭಿವೃದ್ಧಿಗೆ ಚಾಲನೆ
ಶೇಖರಣಾ ಟ್ಯಾಂಕ್, ತೈಲ ಸಂಗ್ರಹಗಾರದ ಶಿಲಾನ್ಯಾಸ: ₹100 ಕೋಟಿ
MRPLನ ಶುದ್ಧ ನೀರಿನ ಪ್ಲಾಂಟ್ ಉದ್ಘಾಟನೆ: ₹677 ಕೋಟಿ
MRPL 6ನೇ ಇಂಧನ ಸ್ಥಾವರ ಘಟಕ ಉದ್ಘಾಟನೆ:₹1,829 ಕೋಟಿ
MRPL ಎಲ್ಪಿಜಿ ಸ್ಟೋರೇಜ್ ಘಟಕ ಉದ್ಘಾಟನೆ: ₹500 ಕೋಟಿ
ಕುಳಾಯಿ ಮೀನುಗಾರಿಕಾ ಜೆಟ್ಟಿ ನಿರ್ಮಾಣ ಘಟಕ: ₹200 ಕೋಟಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ