Narendra Modi: ಮಕ್ಕಳೊಂದಿಗೆ ಮಗುವಾದ ನರೇಂದ್ರ ಮೋದಿ! ಪ್ರಧಾನಿ ಜೊತೆ ಚಿಣ್ಣರ ಆಟ!

ಮಕ್ಕಳೊಂದಿಗೆ ಸಮಯ ಕಳೆದ ಮೋದಿ

ಮಕ್ಕಳೊಂದಿಗೆ ಸಮಯ ಕಳೆದ ಮೋದಿ

ಎಲೆಕ್ಷನ್ ಪ್ರಚಾರದ ಮಧ್ಯೆಯೇ ಬಿಡುವು ಮಾಡಿಕೊಂಡ ಮೋದಿ, ಮಕ್ಕಳ ಜೊತೆ ಕೆಲ ಹೊತ್ತು ಕಳೆದಿದ್ದಾರೆ. ಮಕ್ಕಳಿಗೆ ಪ್ರಶ್ನೆ ಕೇಳುತ್ತಾ, ಅವರಿಂದ ಉತ್ತರ ಪಡೆಯುತ್ತಾ, ಸಮಯ ಕಳೆದಿದ್ದಾರೆ.

  • News18 Kannada
  • 3-MIN READ
  • Last Updated :
  • Karnataka, India
  • Share this:

ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಕರ್ನಾಟಕ ವಿಧಾನಸಭಾ ಚುನಾವಣಾ (Karnataka assembly election) ಪ್ರಚಾರದಲ್ಲಿ ಬ್ಯುಸಿಯಿದ್ದಾರೆ. ಕಳೆದ ಕೆಲ ದಿನಗಳಿಂದ ರಾಜ್ಯದ ಹಲವೆಡೆ ಪ್ರಚಾರ ಕೈಗೊಂಡ ನರೇಂದ್ರ ಮೋದಿ, ಬಿಜೆಪಿ ಅಭ್ಯರ್ಥಿಗಳ (BJP candidates) ಪರ ಮತಯಾಚಿಸಿದ್ದಾರೆ. ಇಂದೂ ಕೂಡ ವಿಜಯಪುರ (Vijaypur), ಕಲಬುರಗಿ (Kalaburagi) ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮೋದಿ ಅಬ್ಬರದ ಪ್ರಚಾರ ನಡೆಸಿದ್ದರು. ಇದರ ಮಧ್ಯೆಯೇ ಬಿಡುವು ಮಾಡಿಕೊಂಡ ಮೋದಿ, ಮಕ್ಕಳ ಜೊತೆ ಕೆಲ ಹೊತ್ತು ಕಳೆದಿದ್ದಾರೆ. ಮಕ್ಕಳಿಗೆ ಪ್ರಶ್ನೆ ಕೇಳುತ್ತಾ, ಅವರಿಂದ ಉತ್ತರ ಪಡೆಯುತ್ತಾ, ಸಮಯ ಕಳೆದಿದ್ದಾರೆ. ಇಂಥದ್ದೊಂದು ಅದ್ಭುತ ಕ್ಷಣಕ್ಕೆ ಇಂದು ಕಲಬುರಗಿ ಸಾಕ್ಷಿಯಾಯ್ತು.


ಮಕ್ಕಳೊಂದಿಗೆ ಸಮಯ ಕಳೆದ ನರೇಂದ್ರ ಮೋದಿ


ಚುನಾವಣಾ ಪ್ರಚಾರಕ್ಕಾಗಿ ಕಲಬುರಗಿಗೆ ಬಂದಿದ್ದ ಪ್ರಧಾನಿ ನರೇಂದ್ರ ಮೋದಿ ಮಕ್ಕಳೊಂದಿಗೆ ಕೆಲ ಸಮಯ ಕಳೆದಿದ್ದಾರೆ. ಮೋದಿ ಹೋಗುವ ದಾರಿಯಲ್ಲಿ ಮಕ್ಕಳ ಗುಂಪೊಂದು ನಿಂತಿದ್ದು, ಅವರನ್ನು ನೋಡಿದ ಪ್ರಧಾನಿ ಮಕ್ಕಳತ್ತವೇ ಬಂದಿದ್ದಾರೆ. ಬಳಿಕ ಮಕ್ಕಳ ಜೊತೆ ಮಾತುಕತೆ ನಡೆಸಿದ್ದಾರೆ.



ಮಕ್ಕಳೊಂದಿಗೆ ಮೋದಿ ಆಟ!
ಈ ವೇಳೆ ಶಾಲೆಗೆ ಹೋಗುತ್ತೀರಾ ಅಂತ ಮಕ್ಕಳನ್ನು ಪ್ರಶ್ನಿಸಿದ ಮೋದಿ, ತಮ್ಮ ಕೈ ಬೆರಳಿನ ಮೂಲಕ ಮಕ್ಕಳಿಗೆ ಕೆಲವೊಂದು ಆಟವನ್ನು ಹೇಳಿಕೊಟ್ಟಿದ್ದಾರೆ. ಅವರು ಹೇಳಿದಂತೆ ಮಾಡಿದ ಮಕ್ಕಳು ಖುಷಿಪಟ್ಟಿದ್ದಾರೆ. ಈ ವೇಳೆ ಮಕ್ಕಳೆಲ್ಲ ಸರ್ ಸರ್ ಅಂತ ಕೂಗಿದ್ದಾರೆ. ಕೆಲವು ಮಕ್ಕಳು ಮೋದಿ ಮೋದಿ ಅಂತ ಜೈಕಾರ ಹಾಕಿದ್ದಾರೆ.


ಇದನ್ನೂ ಓದಿ: Modi-Amit Shah: ಖರ್ಗೆ ಕೋಟೆಯಲ್ಲಿ ಮೋದಿ ಘರ್ಜನೆ, ಬೆಂಗಳೂರಲ್ಲಿ ಅಮಿತ್ ಶಾ ಮತಯಾಚನೆ


ಟ್ವಿಟರ್‌ನಲ್ಲಿ ವಿಡಿಯೋ ಶೇರ್ ಮಾಡಿದ ಬೊಮ್ಮಾಯಿ


ಮಕ್ಕಳೊಂದಿಗೆ ಮೋದಿ ಸಮಯ ಕಳೆದ ವಿಡಿಯೋವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಟ್ವಿಟರ್‌ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಬಿಡುವಿಲ್ಲದ ಚುನಾವಣೆಯ ಪ್ರಚಾರದ ಕರ್ತವ್ಯದ ನಡುವೆಯೂ ದೇಶದ ಭವಿಷ್ಯದ ಪ್ರಜೆಗಳಿಗೆ ಚೇತೋಹಾರಿ ಪ್ರಶ್ನೆಗಳನ್ನು ಕೇಳಿ ಅವರನ್ನು ಹುರಿದುಂಬಿಸಿದ ವಿಶ್ವನಾಯಕ, ಭಾರತದ ಪ್ರಧಾನ ಸೇವಕ ಸನ್ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿ. ಕರ್ನಾಟಕದ ಕಲಬುರಗಿ ಇಂದು ಈ ಅಪರೂಪದ ಘಳಿಗೆಗೆ ಸಾಕ್ಷಿಯಾಯಿತು ಅಂತ ಬೊಮ್ಮಾಯಿ ವಿಡಿಯೋ ಟ್ವೀಟ್ ಮಾಡಿದ್ದಾರೆ.


ಖರ್ಗೆ ಕೋಟೆಯಲ್ಲಿ ಮೋದಿ ಘರ್ಜನೆ


ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಅಭ್ಯರ್ಥಿಗಳ ಪರ ಭರ್ಜರಿ ರೋಡ್ ಶೋ ನಡೆಸಿದರು. ಹುಮ್ನಾಬಾದ್ ರಸ್ತೆಯಲ್ಲಿರುವ ಕೆಎಂಎಫ್ ಡೈರಿ ಸರ್ಕಲ್​ನಿಂದ ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತದವರೆಗೆ ಸುಮಾರು 5 ಕಿಲೋ ಮೀಟರ್‌ಗಳಷ್ಟು ದೂರ ರೋಡ್ ಶೋ ನಡೆಸಿದ್ರು, ಈ ವೇಳೆ ದಾರಿಯುದ್ಧಕ್ಕೂ ನೆರೆದ ಬಿಜೆಪಿ ಕಾರ್ಯಕರ್ತರು, ಮೋದಿ ಅಭಿಮಾನಿಗಳು ನಮೋ ಪರ ಜೈಕಾರ ಮೊಳಗಿಸಿದರು.


ಇದನ್ನೂ ಓದಿ: Narendra Modi: 'ವಿಷ ಸರ್ಪ'ವನ್ನು 'ಕೈ'ನತ್ತಲೇ ತಿರುಗಿಸಿದ ನಮೋ! ವಿಪಕ್ಷಗಳಿಗೆ ಮೋದಿ ತ್ರಿಸೂತ್ರದ ಪಂಚ್!

top videos


    ಕೆಸರಿನಲ್ಲಿ ಸಿಲುಕಿದ ಮೋದಿ ಬೆಂಗಾವಲು ಹೆಲಿಕಾಪ್ಟರ್
    ಇದಕ್ಕೂ ಮುನ್ನ ರಾಯಚೂರಿನಲ್ಲಿ ಭಾರೀ ಮಳೆಯಿಂದಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಹೆಲಿಕಾಪ್ಟರ್‌ನೊಂದಿಗೆ ತೆರಳುತ್ತಿದ್ದ ಬೆಂಗಾವಲು ಹೆಲಿಕಾಪ್ಟರ್ ಕೆಲಕಾಲ ಕೆಸರಿನಲ್ಲಿ ಸಿಲುಕಿಕೊಂಡ ಘಟನೆ ನಡೆಯಿತು. ಸಿಂಧನೂರಿನಲ್ಲಿ ಸಭೆಯನ್ನುದ್ದೇಶಿಸಿ ಪ್ರಧಾನಿ ತಮ್ಮ ಹೆಲಿಕಾಪ್ಟರ್‌ನಲ್ಲಿ ತೆರಳುತ್ತಿದ್ದಾಗ ಅದರೊಂದಿಗೆ ಬರುತ್ತಿದ್ದ ಹೆಲಿಕಾಪ್ಟರ್ ಟೇಕಾಫ್ ಮಾಡಲು ಪ್ರಾರಂಭಿಸಿದಾಗ ಕೆಸರಿನಲ್ಲಿ ಸಿಲುಕಿತು.

    First published: