ಬೆಂಗಳೂರು(ಸೆ.04): ಸದ್ಯ ರಾಜ್ಯದಲ್ಲಿ ಕೊರೋನಾ ಪ್ರಕರಣಗಳು(Corona cases in Karnataka) ದಿನೇ ದಿನೇ ಇಳಿಕೆಯಾಗುತ್ತಿರುವುದರಿಂದ ಹಂತ-ಹಂತವಾಗಿ ಶಾಲೆಗಳನ್ನು(Schools Reopen) ಪ್ರಾರಂಭಿಸಲಾಗುತ್ತಿದೆ. ಮೊದಲು 9-12ನೇ ತರಗತಿವರೆಗೆ ಶಾಲೆಗಳನ್ನು ಶುರು ಮಾಡಲಾಯಿತು. ಈಗ 6,7 ಮತ್ತು 8ನೇ ತರಗತಿಗಳನ್ನು ಆರಂಭಿಸುವ ಚಿಂತನೆಯಲ್ಲಿ ರಾಜ್ಯ ಸರ್ಕಾರ(Karnataka Government) ಇದೆ. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(CM Basavaraj Bommai) ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಸದ್ಯ 6,7 ಮತ್ತು 8ನೇ ತರಗತಿಗಳನ್ನು ಆರಂಭ ಮಾಡುತ್ತಿದ್ದೇವೆ. ಇದರ ಫಲಿತಾಂಶ ನೋಡಿಕೊಂಡು 1 ರಿಂದ 5ನೇ ತರಗತಿಗಳನ್ನು ಆರಂಭಿಸುವ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ಸದ್ಯದವರೆಗೂ 1-5 ನೇ ತರಗತಿಗಳ ಬಗ್ಗೆ ಚರ್ಚೆ ಮಾಡಿಲ್ಲ ಎಂದು ಹೇಳಿದರು.
ಇನ್ನು, ಕೋವಿಡ್ ನಡುವೆಯೂ ರಾಜಕೀಯ ಸಭೆ,(Political Meetings, Programmes, Rally) ಸಮಾರಂಭ, ರ್ಯಾಲಿಗಳಿಗೆ ಅವಕಾಶ ನೀಡಿರುವ ವಿಚಾರವಾಗಿ, ಇದನ್ನೆಲ್ಲಾ ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಕೋವಿಡ್(COVID-19) ಇದ್ದರೂ ಕೆಲವು ಘಟನೆಗಳು ನಡೆದಿವೆ. ರಾಜಕೀಯ ಸಭೆ-ಸಮಾರಂಭಗಳಿಗೆ ನಿರ್ಬಂಧ ಹಾಕಲು ನಿಯಮ ತರುತ್ತೇವೆ. ಈ ಕುರಿತು ಪುನಃ ಮಾರ್ಗಸೂಚಿ ತರುತ್ತೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಮುಂದುವರೆದ ಅವರು, ರಾಜ್ಯದಲ್ಲಿ ಮಳೆಯಿಂದಾಗಿರುವ ಹಾನಿ ಬಗ್ಗೆ ಮಾತನಾಡಿದರು. ಕೇಂದ್ರ ಅಧ್ಯಯನ ತಂಡ, ಅಧಿಕಾರಿಗಳ ಜೊತೆ ಇವತ್ತು ಪ್ರಾಥಮಿಕ ಸಭೆ ಮಾಡುತ್ತೇನೆ. ಅಧ್ಯಯನ ತಂಡ ಪ್ರವಾಸ ಹೋಗಿ ಬಂದ ನಂತರವೂ ಸಭೆ ಮಾಡುತ್ತೇವೆ. ಕೇಂದ್ರದ ತಂಡದ ಜತೆ ನಮ್ಮ ಅಧಿಕಾರಿಗಳೂ ಪ್ರವಾಸ ಹೋಗುತ್ತಾರೆ. ನಮ್ಮಲ್ಲಿರುವ ವರದಿ, ಮಾಹಿತಿಗಳನ್ನು ಅವರಿಗೆ ಕೊಟ್ಟು ಹಾನಿ ಬಗ್ಗೆ ಮನವರಿಕೆ ಮಾಡಿಕೊಡುತ್ತೇವೆ. ಅತಿ ಹೆಚ್ಚು ಹಾನಿಯಾದ ಕಡೆ ಪ್ರವಾಸ ಹೋಗುತ್ತಾರೆ. ಎನ್ಡಿಆರ್ಎಫ್ ನಿಧಿಯಡಿ ನಮಗೆ ಸಿಗಬೇಕಾದ ಅನುದಾನ ಸಿಗುತ್ತೆ ಎಂದು ಭರವಸೆ ನೀಡಿದರು.
ಚಾಮರಾಜನಗರಕ್ಕೆ ಹೋಗಲು ಸಿಎಂ ಹಿಂದೇಟು
ಇನ್ನು, ಇದೇ ವೇಳೆ ಚಾಮರಾಜನಗರದಲ್ಲಿ(Chamarajanagar) ನಿರ್ಮಾಣವಾಗಿರುವ ಹೆರಿಗೆ ಆಸ್ಪತ್ರೆಯನ್ನ ಉದ್ಘಾಟನೆ ಮಾಡಲು ಹೋಗಲ್ಲ ಎಂದು ಸಿಎಂ ಬೊಮ್ಮಾಯಿ ಹೇಳಿದರು. ಈ ಕೂಡಲೇ ಆಸ್ಪತ್ರೆ ಕಾರ್ಯಾಂಭಕ್ಕೆ ಸೂಚನೆ ಕೊಡುತ್ತೇನೆ. ಸದ್ಯ ಅಧಿವೇಶನ ನಡೆಯುತ್ತಿರುವುದರಿಂದ ನಾನು ಹೋಗ್ತಿಲ್ಲ. ಆದರೆ ಕಾರ್ಯಾರಂಭ ಮಾಡೋಕೆ ಈ ಕೂಡಲೇ ಸೂಚನೆ ಕೊಡುತ್ತೇನೆ ಎಂದರು. ಆದರೆ ತಾವು ಹೋಗಿ ಉದ್ಘಾಟನೆ ಮಾಡಲ್ಲ ಎಂದು ಪರೋಕ್ಷವಾಗಿ ಹೇಳಿದರು. ಚಾಮರಾಜನಗರಕ್ಕೆ ತೆರಳಲು ಈಗಿನ ಸಿಎಂ ಬೊಮ್ಮಾಯಿ ಕೂಡ ಹಿಂದೇಟು ಹಾಕಿದರು.
ಇದನ್ನೂ ಓದಿ:Karnataka Cabinet Meeting: ಇಂದು ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ; ಈ ವಿಚಾರಗಳ ಬಗ್ಗೆ ಚರ್ಚೆ
ಚಾಮರಾಜನಗರಕ್ಕೆ ಹೋದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಮೂಢನಂಬಿಕೆ ಹಿಂದಿನಿಂದಲೂ ಇದೆ. ಹೀಗಾಗಿ ಸಿಎಂ ಬಸವರಾಜ ಬೊಮ್ಮಾಯಿ ಕೂಡ ಅಧಿಕಾರ ಕಳೆದುಕೊಳ್ಳುವ ಆತಂಕದಿಂದ ಚಾಮರಾಜನಗರಕ್ಕೆ ಹೀಗಿ ಹೆರಿಗೆ ಆಸ್ಪತ್ರೆ ಉದ್ಘಾಟನೆ ಮಾಡಲು ಹಿಂದೇಟು ಹಾಕಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದೆ ಸಿಎಂ ಆಗಿದ್ದ ಯಡಿಯೂರಪ್ಪ ಕೂಡ ಚಾಮರಾಜನಗರಕ್ಕೆ ಹೋಗಿರಲಿಲ್ಲ. ಈಗ ಸಿಎಂ ಬಸವರಾಜ ಬೊಮ್ಮಾಯಿ ಕೂಡ ಹೋಗುತ್ತಿಲ್ಲ. ಈ ಮೂಲಕ ಯಡಿಯೂರಪ್ಪ ನಡೆದ ಹಾದಿಯಲ್ಲೇ ಸಿಎಂ ಬೊಮ್ಮಾಯಿ ಕೂಡ ಹೆಜ್ಜೆ ಹಾಕಿದ್ದಾರೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ