B.C Nagesh: ಮೇ 3ನೇ ವಾರ SSLC ರಿಸಲ್ಟ್​; ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆಗೆ ಟಫ್​ ರೂಲ್ಸ್​

ಮೇ 21, 22 ರಂದು ಶಿಕ್ಷಕ ನೇಮಕಾತಿ ಪರೀಕ್ಷೆ ನಡೆಯುತ್ತದೆ. ಯಾರು ರೂಮರ್ಸ್ ಗೆ ಕಿವಿಗೊಡಬೇಡಿ, ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚಾಗಿದ್ದು, 1,06,083 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. 435 ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗುವುದು ಎಂದು ಸಚಿವ ಬಿ.ಸಿ ನಾಗೇಶ್​ ಹೇಳಿದ್ದಾರೆ.

ಸಚಿವ ನಾಗೇಶ್​

ಸಚಿವ ನಾಗೇಶ್​

  • Share this:
ಬೆಂಗಳೂರು (ಮೇ 10):  SSLC ಪರೀಕ್ಷೆ ರಿಸಲ್ಟ್ ಮೇ 3ನೇ ವಾರ ಪ್ರಕಟವಾಗಲಿದ್ದು, ಈಗಾಗಲೇ ಮೌಲ್ಯಮಾಪನ ಕೂಡ ಮುಗಿದಿದೆ ಎಂದು ಸಚಿವ ನಾಗೇಶ್ ಹೇಳಿದ್ದಾರೆ. ಪಿಎಸ್‌ಐ ಹಾಗೂ ಸಹಾಯಕ ಪ್ರಾಧ್ಯಾಪಕ ಹುದ್ದೆಯ ನೇಮಕಾತಿ ಪರೀಕ್ಷೆ (Appointment of Assistant Professor) ಅಕ್ರಮ ರಾಜ್ಯದಲ್ಲಿ ಭಾರೀ ಸುದ್ದಿ ಮಾಡ್ತಿದೆ. ಇದೀಗ 15 ಸಾವಿರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ (School Teachers Recruitment)  ಪರೀಕ್ಷೆ ಮೇಲೆ ಶಿಕ್ಷಣ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಬಗ್ಗೆ ಶಿಕ್ಷಣ ಇಲಾಖೆ ತಲೆ ಕೆಡಿಸಿಕೊಂಡಿದೆ. ಶಿಕ್ಷಕರ ನೇಮಕಾತಿ ಕುರಿತು ಗೃಹ ಇಲಾಖೆಯ ಜೊತೆ ಶಿಕ್ಷಣ ಇಲಾಖೆ ಸಭೆ ನಡೆಯಿತು, ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಸಚಿವ ನಾಗೇಶ್ (Minister Nagesh)​, ಪರೀಕ್ಷೆ ದಿನಾಂಕದಲ್ಲಿ ಯಾವುದೇ ಬದಲಾವಣೆ ಮಾಡೋದಿಲ್ಲ ಎಂದು ಹೇಳಿದ್ದಾರೆ.

ದಿನಾಂಕದಲ್ಲಿ ಯಾವುದೇ ಬದಲಾವಣೆ ಇಲ್ಲ

ಮೇ 21, 22 ರಂದು ಶಿಕ್ಷಕ ನೇಮಕಾತಿ ಪರೀಕ್ಷೆ ನಡೆಯುತ್ತದೆ. ಯಾರು ರೂಮರ್ಸ್ ಗೆ ಕಿವಿಗೊಡಬೇಡಿ, ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚಾಗಿದ್ದು, 1,06,083 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. 435 ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗುವುದು, ಚಿಕ್ಕೋಡಿಯಲ್ಲಿ ಹೆಚ್ಚು ಕೇಂದ್ರಗಳು ಇರಲಿವೆ, ಸುಮಾರು 11 ಸಾವಿರ ಅಭ್ಯರ್ಥಿಗಳು ಎಕ್ಸಾಂ ಬರೆಯುತ್ತಿದ್ದಾರೆ. ಹೀಗಾಗಿ ಅಲ್ಲಿ ಕೇಂದ್ರ ಜಾಸ್ತಿ ಮಾಡಲಾಗಿದೆ ಎಂದ್ರು.

ಎಲೆಕ್ಟ್ರಾನಿಕ್​ ವಸ್ತುಗಳನ್ನು ತರುವಂತಿಲ್ಲ

ಇವತ್ತು ಉನ್ನತ ಅಧಿಕಾರಿಗಳ‌ ಜೊತೆಗೆ ಮೀಟಿಂಗ್ ಮಾಡಿ ಅವರ ಸಲಹೆಗಳನ್ನ ಪಡೆದುಕೊಂಡಿದ್ದೇವೆ. ಯಾವುದೇ ಕಾರಣಕ್ಕೂ ಎಲೆಕ್ಟ್ರಾನಿಕ್ ವಸ್ತುಗಳನ್ನ ಅಭ್ಯರ್ಥಿಗಳು ಕೊಠಡಿಗೆ ತರುವಂತಿಲ್ಲ, ಒಂದು ಗಂಟೆಯ ಒಳಗೆ ಅಭ್ಯರ್ಥಿಗಳು ಕೇಂದ್ರಗಳಿಗೆ ಬರ್ಬೇಕು, ಅರ್ಧ ಗಂಟೆಗೆ ಮುಂಚಿತವಾಗಿ ಕೊಠಡಿಗೆ ಬರಬೇಕು, ಒಂದು ರೂಮ್ ನಲ್ಲಿ 20 ಜನರು ಮಾತ್ರ ಇರ್ತಾರೆ ಎಂದು ಸಚಿವ ನಾಗೇಶ್​ ತಿಳಿಸಿದ್ದಾರೆ.

ಇದನ್ನೂ ಓದಿ: Ashwath Narayana: 'ಅದೊಂದು ಜೈಲು ಹಕ್ಕಿ ಸ್ವಾಮಿ; ಈಗ ಬೇಲ್ ಮೇಲೆ ಆಚೆ ಇದೆ, ಡಿಕೆಶಿ ಪರ್ಮನೆಂಟ್ ಜಾಗ ತಿಹಾರ್ ಸೆಲ್'

 ಪರೀಕ್ಷೆಗೆ ಕಟ್ಟುನಿಟ್ಟಿನ ಕ್ರಮ

ಮುಂದಿನ ವಾರ ಪ್ರಾಥಮಿಕ ಶಾಲಾ ಶಿಕ್ಷಕರ ಪರೀಕ್ಷೆ ನಡೆಯಲಿದೆ. ಮೇ 21-22 ರಂದು ಎರಡು ದಿನ ಶಿಕ್ಷಕರ ನೇಮಕಾತಿ ಪರೀಕ್ಷೆ ನಡೆಯಲಿದೆ. ಶಿಕ್ಷಣ ಇಲಾಖೆ ಪ್ರಶ್ನೆ ಪತ್ರಿಕೆ ಗೌಪ್ಯತೆ ಹಾಗೂ ಎರಡು ದಿನಗಳ ನಡೆಯುವ ಪರೀಕ್ಷೆಗೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ ಎಂದಿದ್ದಾರೆ.

ಅಭ್ಯರ್ಥಿಗಳು ವಾಚ್​ ಕೂಡ ಕಟ್ಟೋ ಆಗಿಲ್ಲ

ಡಿಜಿಟಲ್ ತಂತ್ರಜ್ಞಾನದ ವಸ್ತುಗಳು ವಾಚ್ ಸೇರಿದಂತೆ ಯಾವುದಕ್ಕೂ ಪರೀಕ್ಷಾ ಕೇಂದ್ರದೊಳಗೆ ಅವಕಾಶ ನೀಡದಿರಲು ಚಿಂತನೆ ನಡೆಸುತ್ತಿದ್ದೇವೆ. ಸಿಸಿಟಿವಿ ಭದ್ರತೆ ಸೇರಿದಂತೆ ನಾನಾ ಟಫ್ ರೂಲ್ಸ್ ಅಳವಡಿಸಿಕೊಳ್ಳಲು ಮುಂದಾಗಿದ್ದೇವೆ. ಶಿಕ್ಷಕರ ನೇಮಕಾತಿ ಪರೀಕ್ಷೆಗೆ ಕಠಿಣ ರೂಲ್ಸ್ ಜಾರಿ ಮಾಡಲು ಶಿಕ್ಷಣ ಇಲಾಖೆ ಚರ್ಚೆಗೆ ಮುಂದಾಗಿದೆ. ನೀಟ್ ಮಾದರಿಯಲ್ಲಿ ಪರೀಕ್ಷೆ ನಡೆಸಲು ಸಹ ಯೋಚಿಸುತ್ತಿದೆ ಎಂದು ಹೇಳಿದ್ದಾರೆ.'

ಮಕ್ಕಳಿಗಾಗಿ ಕಲಿಕಾ ಚೇತರಿಕೆ

ದೇಶದಲ್ಲೇ ಕಲಿತಾ ಚೇತರಿಕೆ ಬಗ್ಗೆ ಸ್ಥಾನಮಾನ ಸಿಕ್ಕಿದ್ದು, ಇದು ಒಂದು ವರ್ಷದ ಕಾರ್ಯಕ್ರಮವಾಗಿದೆ. ಒಟ್ಟು 9 ತಿಂಗಳು ಕಲಿಕಾ ಚೇತರಿಕೆ 1-10 ತರಗತಿ ಮಕ್ಕಳಿಗೆ ನಡೆಯುತ್ತದೆ.ಮೂರು ತಿಂಗಳು ವಿದ್ಯಾಪ್ರವೇಶ ಅಂತ ಮಾಡುತ್ತೇವೆ. ಕಲಿತಾ ಚೇತರಿಕೆ ಮೇಲೆ ವಿಶ್ವಾಸ ಇದೆ, ನಮ್ಮ ಶಾಲೆಗೆ ಬರುವ ಮಕ್ಕಳ ಬ್ಯಾಂಗ್ ರೌಂಡ್ ಬೇರೆ ಬೇರೆ ಇದೆ. ಅವರ ಗುಣಮಟ್ಟವನ್ನ ಅಭಿವೃದ್ಧಿ ಪಡಿಸಲು ಸರ್ಕಾರ ಯೋಚನೆ ಮಾಡಿದೆ ಎಂದು ಸಚಿವ ನಾಗೇಶ್ ಹೇಳಿದ್ದಾರೆ.

ಇದನ್ನೂ ಓದಿ: H.D Kumaraswamy: ಬಾದಾಮಿ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿ ಘೋಷಣೆ; ಸಿದ್ದು ಕಾಲೆಳೆದ ಕುಮಾರಸ್ವಾಮಿ

ಮೇ ಮೂರನೇ ವಾರ SSLC ರಿಸಲ್ಟ್​ ಪ್ರಕಟ

SSLC ಪರೀಕ್ಷೆ ರಿಸಲ್ಟ್ ಮೇ 3ನೇ ವಾರ ಪ್ರಕಟವಾಗಲಿದ್ದು, ಈಗಾಗಲೇ ಮೌಲ್ಯಮಾಪನ ಕೂಡ ಮುಗಿದಿದೆ. ಶೀಘ್ರವೇ ದಿನಾಂಕ ಪ್ರಕಟ ಮಾಡ್ತೀವಿ, ಮೇ ಮೂರನೇ ವಾರ ಫಲಿತಾಂಶ ಪ್ರಕಟ ಮಾಡ್ತೀವಿ ಎಂದು ಸಚಿವ ಬಿ.ಸಿ ನಾಗೇಶ್ ಹೇಳಿದ್ದಾರೆ.
Published by:Pavana HS
First published: